Euschistus spp.
ಕೀಟ
ಜೋಳದ ಬೆಳೆಯಲ್ಲಿ ಸಸಿ ಅಥವಾ ಸಸ್ಯದ ಆರಂಭಿಕ ಹಂತಗಳಲ್ಲಿ ಸ್ಚಿಂಕ್ ಬಗ್ ಧಾಳಿ ನಡೆಸುತ್ತದೆ. ಮುಖ್ಯ ಕಾಂಡದಲ್ಲಿನ ಹಾನಿಯನ್ನು ಸರಿದೂಗಿಸಲು ಸಸಿ ಹೆಚ್ಚುವರಿ ಶಾಖೆಗಳನ್ನು ( ಹೆಚ್ಚುವರಿ ಕವಲೊಡೆಯುವಿಕೆ) ಉತ್ಪಾದಿಸಬಹುದು. ಕೀಟಗಳು ಎಲೆಗಳನ್ನು ತಿನ್ನುವುದರಿಂದ ಒಂದೇ ಅಂತರದಲ್ಲಿರುವ ಪುನರಾವರ್ತಿತ ಮಾದರಿಯ ರಂಧ್ರಗಳನ್ನು ಅಥವಾ ಸಾಲುಗಳನ್ನು ಉಂಟು ಮಾಡುತ್ತವೆ. ರಂಧ್ರಗಳ ಗಾತ್ರದಲ್ಲಿ ವ್ಯತ್ಯಾಸವಿರಬಹುದು. ಆದರೆ ಅಂಡಾಕಾರವಾಗಿರುತ್ತವೆ ಅಥವಾ ಉದ್ದವಾಗಿರುತ್ತವೆ ಹಾಗು ಅವುಗಳ ಸುತ್ತಲೂ ಹಳದಿ ವರ್ತುಲ ಇರುತ್ತದೆ. ಕಾಂಡದಲ್ಲಿ ಕೀಟ ತಿಂದ ಜಾಗದಲ್ಲಿ ತೆಳುವಾದ, ಕೊಳೆತ ಪ್ರದೇಶವೊಂದು ಕಾಣಬಹುದು. ತೀವ್ರವಾಗಿ ಸೋಂಕಿತಗೊಂಡಿರುವ ಸಸ್ಯಗಳು ವಿರೂಪ ಆಕಾರ, ಕುಂಠಿತ ಬೆಳವಣಿಗೆ ಮತ್ತು ಕಳಪೆ ಇಳುವರಿಯನ್ನು ತೋರಿಸಬಹುದು. ತೆನೆಗಳಲ್ಲೂ ಕೂಡ ವಿರೂಪತೆ, ವಿಳಂಬ ಪಕ್ವತೆ ಕಂಡುಬರುತ್ತದೆ ಮತ್ತು ಸಾಮಾನ್ಯವಾಗಿ ಕಾಳುಗಳು ಕಳಪೆಯಾಗಿರಬಹುದು. ಸ್ಟಿಂಕ್ ಬಗ್ ಗಳು ಉತ್ತಮ ಹಾರಾಟಗಾರರಾಗಿದ್ದು, ಬೆಳೆಗಳ ನಡುವೆ ತ್ವರಿತವಾಗಿ ಹರಡುತ್ತವೆ. ಇದರ ಪರಿಣಾಮವಾಗಿ ಇಳುವರಿ ನಷ್ಟವಾಗುತ್ತದೆ.
ಪರಾವಲಂಬಿ ಟಾಶಿನಿಡ್ ನೊಣಗಳು ಮತ್ತು ಕಣಜಗಳು ಸ್ಟಿಂಕ್ ಬಗ್ ನ ಮೊಟ್ಟೆಗಳಲ್ಲಿ ಮೊಟ್ಟೆಯಿಡುತ್ತವೆ. ಮತ್ತು ಅವುಗಳ ಮರಿಹುಳುಗಳು ಮೊಟ್ಟೆ ಒಡೆದು ಬರುವ ಮರಿಗಳನ್ನು ತಿನ್ನುತ್ತವೆ. ಹಕ್ಕಿಗಳು ಮತ್ತು ಜೇಡಗಳು ಸೋಂಕು ಕಡಿಮೆ ಮಾಡಲು ಸಹಾಯ ಮಾಡಬಹುದು. ಯೂಕಲಿಪ್ಟಸ್ ಉರೋಗ್ರಾಂಡಿಸ್ ಎಣ್ಣೆ ಕೀಟಗಳಿಗೆ ಮತ್ತು ಅವುಗಳ ಮರಿಹುಳುಗಳಿಗೆ ವಿಷಕಾರಿಯಾಗಿದೆ.
ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಪೈರೆಥ್ರಾಯ್ಡ್ಸ್ ಗುಂಪಿನ ಕೀಟನಾಶಕಗಳಿಂದ ಬೀಜ ಚಿಕಿತ್ಸೆ ಮಾಡುವ ಮೂಲಕ ಸ್ವಲ್ಪಮಟ್ಟಿಗೆ ನಿಯಂತ್ರಣ ಮಾಡಬಹುದು ಮತ್ತು ಸಸಿಯಲ್ಲಿ ಹಾನಿ ತಪ್ಪಿಸಬಹುದು. ಬೈಫೆಂಥ್ರಿನ್ ಆಧರಿಸಿದ ಕೀಟನಾಶಕಗಳನ್ನು ಎಲೆಗಳ ಮೇಲೆ ಸಿಂಪಡಿಸುವುದು ಕೂಡ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
ಕೀಟಗಳ ರೂಪ ಅವುಗಳ ಪ್ರಭೇದಗಳನ್ನು ಅವಲಂಬಿಸಿ ಸ್ವಲ್ಪ ಬದಲಾಗುತ್ತದೆ. ಕಂದು ಬಣ್ಣದ ಸ್ಚಿಂಕ್ ಬಗ್ ನ ಪ್ರೌಢ ಕೀಟಗಳು ಕಂದು ಗುರಾಣಿಯ ಆಕಾರ ಹೊಂದಿರುತ್ತವೆ. ತೊಗಲಿನಂತಹ ರೆಕ್ಕೆಗಳಿರುತ್ತವೆ ಮತ್ತು ಅವುಗಳ ಹಿಂಭಾಗದಲ್ಲಿ ವಿಶಿಷ್ಟವಾದ ತ್ರಿಕೋನದ ಆಕಾರ ಇರುತ್ತದೆ. ಪೀಪಾಯಿ-ಆಕಾರದಲ್ಲಿರುವ ಮೊಟ್ಟೆಗಳ ಗುಂಪನ್ನು ಎಲೆಗಳ ಮೇಲೆ ಇಡುತ್ತವೆ. ಮರಿಹುಳುಗಳು ಬಹುತೇಕ ವೃತ್ತಾಕಾರದಲ್ಲಿದ್ದು ಕಪ್ಪು ಬಣ್ಣದಲ್ಲಿರುತ್ತವೆ. ಮತ್ತು ರೆಕ್ಕೆಗಳಿರುವುದಿಲ್ಲ. ವಯಸ್ಕ ಕೀಟಗಳು ಮತ್ತು ಮರಿಹುಳುಗಳು ಸಸ್ಯಗಳಿಗೆ ತಮ್ಮ ಹೀರುವ ಬಾಯಿಯ ಅಂಗಗಳಿಂದ ಹಾನಿ ಮಾಡುತ್ತವೆ. ಅಂಗಾಂಶಗಳಿಗೆ ಚುಚ್ಚಿ ಅಲ್ಲಿನ ಪದಾರ್ಥವನ್ನು ಕರಗಿಸಲು ವಸ್ತುವನ್ನು ಒಳಗೆ ಸೇರಿಸುತ್ತದೆ. ನಂತರ ಕರಗಿದ ಸಸ್ಯ ವಸ್ತುವನ್ನು ಮತ್ತೆ ಸೇವಿಸುತ್ತವೆ. ಇದು ದುರ್ಬಲತೆ ಅಥವಾ ಕುಂಠಿತ ಬೆಳವಣಿಗೆಯನ್ನು ಉಂಟುಮಾಡುತ್ತದೆ. ಕೀಟಗಳ ಸಂಖ್ಯೆ ದೊಡ್ಡದಾಗಿದ್ದರೆ ಈ ಹಾನಿ ಮತ್ತಷ್ಟು ಹೆಚ್ಚಾಗಿರುತ್ತದೆ. ಹಣ್ಣುಗಳು ಮತ್ತು ಬೀಜಗಳಲ್ಲಿ, ಕೀಟಗಳ ತಿನ್ನುವ ಅಭ್ಯಾಸದಿಂದ ಕಲೆಗಳು ಮತ್ತು ವಿರೂಪತೆ ಉಂಟಾಗುತ್ತದೆ. ಇದು ಉತ್ಪನ್ನದ ಗುಣಮಟ್ಟವನ್ನು ತಗ್ಗಿಸುತ್ತದೆ. ಸ್ಟಿಂಕ್ ಬಗ್ ಗಳಿಗೆ ಕಳೆಗಿಡಗಳು ಮತ್ತು ಸೋಯಾಬೀನ್, ತರಕಾರಿ ಹಾಗು ಅಲ್ಪಾಲ್ಫ ದಂತಹ ಅನೇಕ ಧಾನ್ಯಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪರ್ಯಾಯ ಆಶ್ರಯದಾತ ಸಸ್ಯಗಳಿವೆ.