Pentatomidae
ಕೀಟ
ಸ್ಟಿಂಕ್ ಬಗ್ ಗಳಿಂದಾಗುವ ಸೋಂಕನ್ನು ಕೊಯ್ಲಿಗಿಂತ ಮೊದಲು ಗುರುತಿಸುವುದು ಕಷ್ಟವಾಗುತ್ತದೆ. ದೊಡ್ಡ ಹುಳುಗಳು ಮತ್ತು ಸಣ್ಣ ಹುಳುಗಳೆರಡೂ ಸೋಯಾಬೀನ್ಗಳ ಬೀಜ ಕೋಶಗಳು ಮತ್ತು ಬೀಜಗಳನ್ನು ಆಕ್ರಮಿಸುತ್ತವೆ ಮತ್ತು ಎಲೆಗಳು ಅಥವಾ ಕಾಂಡಗಳ ಮೇಲೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ಕೊಯ್ಲಿನ ಸಮಯದಲ್ಲಿ, ವಿರೂಪಗೊಂಡ, ಅಲ್ಪಬೆಳೆದಿರುವ ಅಥವಾ ಬೆಳವಣಿಗೆ ಸ್ಥಗಿತಗೊಂಡ ಎಳೆ ಬೀಜಗಳನ್ನು ಕಾಣಬಹುದು. ಹಳೆಯ ಬೀಜಗಳು ಬಣ್ಣವನ್ನು ಕಳೆದುಕೊಂಡಿರುತ್ತವೆ ಮತ್ತು ಸೊರಗಿರುತ್ತವೆ. ಸ್ಟಿಂಕ್ ಬಗ್ ಗಳು ಸಸ್ಯದ ಇತರ ಭಾಗಗಳನ್ನೂ ಸಹ ತಿನ್ನುತ್ತವೆ. ಈ ಕೀಟದಿಂದ ಹಾನಿಯಾದ ಅಂಗಾಂಶಗಳಲ್ಲಿ ಸಣ್ಣ ಕಂದು ಬಣ್ಣದ ಅಥವಾ ಕಪ್ಪು ಕಲೆಗಳು ಕಂಡುಬರುತ್ತವೆ. ಹಣ್ಣು ಮತ್ತು ಬೀಜ ಪಕ್ವತೆಯು ಕುಗ್ಗುತ್ತದೆ, ಮತ್ತು ಸಸ್ಯಗಳಲ್ಲಿ ಕೆಲವೇ ಕೆಲವು ಸಣ್ಣ ಬೀಜ ಕೋಶಗಳು ಇರಬಹುದು.
ಸ್ಟಿಂಕ್ ಬಗ್ ಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ಯಾರಾಸಿಟಾಯ್ಡ್ ನೊಣಗಳು ಅಥವಾ ಕಣಜಗಳಿಗೆ ಉತ್ತೇಜನ ನೀಡಿ. ಅವು ಸ್ಟಿಂಕ್ ಬಗ್ ಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಪರಾವಲಂಬಿ ಮೊಟ್ಟೆಗಳು ಸಾಮಾನ್ಯವಾಗಿ ಗಾಢ ಬಣ್ಣದ್ದಾಗಿರುತ್ತವೆ. ಈ ಕೀಟಗಳ ಲಾರ್ವಾಗಳು ಹೊರಬಂದ ಮರಿಹುಳುಗಳು ಮತ್ತು ದೊಡ್ಡ ಹುಳುಗಳನ್ನು ತಿನ್ನುತ್ತವೆ. ಪಕ್ಷಿಗಳು ಮತ್ತು ಜೇಡಗಳಂತಹ ಪರಭಕ್ಷಕಗಳೂ ಸಹ ಸೋಂಕನ್ನು ಕಡಿಮೆ ಮಾಡಬಹುದು. ನೀವು ಯೂಕಲಿಪ್ಟಸ್ ಅರೋಗ್ರಾಂಡಿಸ್ ನ ತೈಲವನ್ನು ಸಹ ಬಳಸಬಹುದು. ಇದು ಸ್ಟಿಂಕ್ ಬಗ್ ಗಳು ಮತ್ತು ಅವುಗಳ ಮರಿ ಹುಳುಗಳಿಗೆ ವಿಷಕಾರಿಯಾಗಿದೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಯಾವುದೇ ಕೀಟನಾಶಕವನ್ನು ಹಾಕುವ ಮೊದಲು, ಕೀಟಗಳ ಸಂಖ್ಯೆ ಮತ್ತು ಜಾತಿಗಳು ತೀವ್ರವಾಗಿದೆಯೇ ಎಂದು ಕಂಡುಹಿಡಿಯುವ ಸಲುವಾಗಿ ನಿಮ್ಮ ಹೊಲವನ್ನು ಆಗಾಗ್ಗೆ ಪರಿಶೀಲಿಸಿ. ಅಗತ್ಯವಿದ್ದಲ್ಲಿ, ಸ್ಟಿಂಕ್ ಬಗ್ ಗಳ ಸಂಖ್ಯೆಯನ್ನು ನಿಯಂತ್ರಿಸಲು ಪೈರೆಥ್ರಾಯ್ಡ್ ಒಳಗೊಂಡಿರುವ ಉತ್ಪನ್ನಗಳನ್ನು ಬಳಸಿಕೊಳ್ಳಿ.
ಸ್ಟಿಂಕ್ ಬಗ್ ಗಳ ಹಲವಾರು ಜಾತಿಗಳು ಸೋಯಾಬೀನ್ಗಳಿಗೆ ಸೋಂಕು ತಗುಲಿಸುತ್ತವೆ. ಆಕ್ರೋಸ್ಟಾರ್ನಮ್ ಹಿಲೇರ್ ಎಂಬುದು ಬಹಳ ನಾಶಕಾರಿ ಕೀಟ. ದೊಡ್ಡ ಹುಳುಗಳು ಸುಮಾರು 1.3 ಸೆಂ.ಮೀ. ಉದ್ದವಿದ್ದು, ಹಸಿರು ಬಣ್ಣದ್ದಾಗಿರುತ್ತವೆ ಮತ್ತು ಅವುಗಳ ಆಕಾರ ಒಂದು ಗುರಾಣಿಯನ್ನು ಹೋಲುತ್ತದೆ. ಪರಭಕ್ಷಕಗಳನ್ನು ಹಿಮ್ಮೆಟ್ಟಿಸಲು ಅವು ಉತ್ಪತ್ತಿಮಾಡುವ ಕೆಟ್ಟ ವಾಸನೆಯ ಕಾರಣದಿಂದ ಅವುಗಳನ್ನು ಸ್ಟಿಂಕ್ ಬಗ್ ಗಳು (ವಾಸನೆ ಕೀಟಗಳು) ಎಂದು ಕರೆಯಲಾಗುತ್ತದೆ. ಅವು ತೆಳುವಾದ ಬೀಜಕೋಶಗಳ ಒಳಗೆ ಕೊರೆದುಕೊಂಡು ಹೋಗಲು ತಮ್ಮ ಬಾಯಿಯ ಭಾಗಗಳನ್ನು ಉಪಯೋಗಿಸುತ್ತವೆ ಮತ್ತು ಅಲ್ಲಿ ಜೀರ್ಣಕಾರಿ ದ್ರವಗಳನ್ನು ಬಿಡುತ್ತವೆ ಮತ್ತು ಪರಿಣಾಮವಾಗಿ ಸಸ್ಯ ದ್ರವವನ್ನು ಹೀರಿಕೊಳ್ಳುತ್ತವೆ. ಸಣ್ಣ ಹುಳುಗಳು ಬಹುತೇಕ ಗುಂಡಾಕಾರದಲ್ಲಿರುತ್ತವೆ, ರೆಕ್ಕೆಗಳಿರುವುದಿಲ್ಲ ಮತ್ತು ಕಪ್ಪು ದೇಹದ ತಲೆಯ ಮೇಲೆ ಕೆಂಪು ಚುಕ್ಕೆಗಳಿರುತ್ತವೆ. ಮೊಟ್ಟೆಗಳು ಬ್ಯಾರೆಲ್-ಆಕಾರದಲ್ಲಿರುತ್ತವೆ ಮತ್ತು ಅವುಗಳನ್ನು ಗುಂಪುಗಳಲ್ಲಿ ಇಡಲಾಗಿರುತ್ತದೆ.