Chloridea virescens
ಕೀಟ
ರೋಗಲಕ್ಷಣಗಳು ಬೆಳೆಯನ್ನು ಅವಲಂಬಿಸಿ ವ್ಯಾಪಕವಾಗಿ ಬದಲಾಗುತ್ತವೆ. ಲಾರ್ವಾಗಳು ಮೊಗ್ಗುಗಳು, ಹೂವುಗಳು ಮತ್ತು ಕೋಮಲವಾದ ತುದಿಯಲ್ಲಿರುವ ಎಲೆಗಳ ಒಳಗೆ ಕೊರೆದುಕೊಂಡು ಹೋಗಿ ಅಲ್ಲಿ ಆಹಾರವನ್ನು ತಿನ್ನುತ್ತವೆ, ಇದು ಬೆಳೆಯುತ್ತಿರುವ ಅಂಗಾಂಶಗಳಿಗೆ ಹಾನಿಯನ್ನುಂಟುಮಾಡುತ್ತದೆ. ಮರುತ್ಪತ್ತಿಯ ಅಂಗಾಂಶ ಲಭ್ಯವಿಲ್ಲದಿದ್ದರೆ ಎಲೆಗಳು, ತೊಟ್ಟುಗಳು ಮತ್ತು ಕಾಂಡಗಳಂತಹ ಇತರ ಸಸ್ಯ ಅಂಗಗಳು ದಾಳಿಗೆ ಒಳಗಾಗಬಹುದು. ದಾಳಿಗೊಳಗಾದ ಮೊಗ್ಗುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಸಸ್ಯದಿಂದ ಉದುರಿ ಬೀಳಬಹುದು. ಹತ್ತಿ ಮತ್ತು ದ್ವಿದಳ ಧಾನ್ಯಗಳಲ್ಲಿ, ಬೀಜಗಳು ಮತ್ತು ಕಾಯಿಗಳ ತಳದಲ್ಲಿ ರಂಧ್ರಗಳು ಮತ್ತು ತೇವಾಂಶವುಳ್ಳ ಹಿಕ್ಕೆಗಳನ್ನು ಕಾಣಬಹುದು. ಮರಿಹುಳುಗಳು ಬಾಹ್ಯ ಭಾಗಗಳನ್ನು ತಿನ್ನುವುದರಿಂದ ಅಲ್ಲಿ ತೂತುಗಳು ಸಹ ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವು ಸಂದರ್ಭಗಳಲ್ಲಿ, 'ಹಣ್ಣುಗಳು' ಒಳಗಿನಿಂದ ಖಾಲಿಯಾಗುತ್ತವೆ ಮತ್ತು ಅವುಗಳು ಕೊಳೆಯಲು ಆರಂಭಿಸಬಹುದು. ಹತ್ತಿಯಲ್ಲಿ, ಹಾನಿಯ ಮಾದರಿ ಮತ್ತು ಹಾನಿಯ ಮಟ್ಟವು ಜೋಳದ ಜೊಂಡು ಹುಳುಗಳಿಂದ ಉಂಟಾಗುವ ಹಾನಿಯನ್ನು ಹೋಲುತ್ತದೆ.
ನೈಸರ್ಗಿಕ ಶತ್ರುಗಳಾದ ಕಣಜಗಳು (ಪೋಲಿಸ್ಟೆಸ್ ಜಾತಿ), ಬಿಗ್ ಐ ತಿಗಣೆಗಳು, ಡ್ಯಾಮ್ಸೆಲ್ ತಿಗಣೆಗಳು, ಮಿನಿಟ್ ಪೈರೇಟ್ ತಿಗಣೆಗಳು (ಒರಿಯಸ್ ಜಾತಿ) ಮತ್ತು ಜೇಡಗಳನ್ನು ಉತ್ತೇಜಿಸಬೇಕು. ಪ್ಯಾರಾಸಿಟೊಯಿಡ್ ಗಳೆಂದರೆ ತರಕಾರಿಗಳಲ್ಲಿ ಟ್ರೈಕೊಗ್ರಾಮ ಪ್ರಿಟಿಯೊಸಮ್ ಮತ್ತು ಕಾರ್ಡಿಯೋಚೈಲ್ಸ್ ನೈಗ್ರಿಸೆಪ್ಸ್ ಮತ್ತು ಇತರ ಬೆಳೆ ಗುಂಪುಗಳಲ್ಲಿ ಕೋಟೆಸಿಯ ಮಾರ್ಜಿನ್ವೆಂಟ್ರಿಸ್ ಸೇರಿವೆ. ಬಳಸಬಹುದಾದ ಇತರ ಪ್ಯಾರಾಸಿಟೊಯಿಡ್ ಗಳೆಂದರೆ: ಆರ್ಚೈಟಾಸ್ ಮಾರ್ಮೊರಾಟಸ್, ಮೆಟಿಯೊರಸ್ ಆಟೋಗ್ರಾಫೇ, ನೆಟೆಲಿಯ ಸಯಿ, ಪ್ರಿಸ್ಟೋಮೆರಸ್ ಸ್ಪೆಟೈನರ್ ಮತ್ತು ಕ್ಯಾಂಪೊಲೆಟಿಸ್ ಜಾತಿಯ ಹಲವಾರು ಕೀಟಗಳು. ರೋಗಕಾರಕಗಳ ಮೇಲೆ ಆಧಾರಿತವಾದ ಉತ್ಪನ್ನಗಳಾದ ಬ್ಯಾಸಿಲಸ್ ತುರಿಂಜಿಯೆನ್ಸಿಸ್, ನೊಸೆಮಾ ಜಾತಿ, ಸ್ಪಿಕರಿಯಾ ರಿಲೀ ಅಥವಾ ಪರಮಾಣು ಪಾಲಿಹೆಡ್ರೋಸಿಸ್ ವೈರಸ್ ಅನ್ನು ತಂಬಾಕು ಮೊಗ್ಗಿನ ಹುಳುವನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಸಿಂಪಡಿಸಬಹುದಾಗಿದೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಹಲವಾರು ಅಂಶಗಳಿಂದಾಗಿ ಈ ಕೀಟದ ನಿಯಂತ್ರಣವು ವಿಶೇಷವಾಗಿ ಕಷ್ಟಕರ ಎಂದು ಸಾಬೀತಾಗಿದೆ. ಕ್ಲೋರಂಟ್ರಾನಿಲಿಪೊರೆಲ್, ಫ್ಬುಬೆನ್ಡಿಯಮೈಡ್ ಅಥವಾ ಎಸ್ಫೆನ್ವಾಲೆರೇಟ್ ಹೊಂದಿರುವ ಕೀಟನಾಶಕಗಳನ್ನು ಬಳಸಿ ಮೊಗ್ಗಿನ ಹುಳುವನ್ನು ನಿಯಂತ್ರಿಸಬಹುದು. ಕೆಲವು ಪ್ರಮುಖ ಕೀಟನಾಶಕಗಳಿಗೆ ಪ್ರತಿರೋಧವು ಸಾಮಾನ್ಯವಾಗಿರುತ್ತದೆ, ಅದರಲ್ಲೂ ಪೈರೆಥ್ರಾಯ್ಡ್ ಚಿಕಿತ್ಸೆಗಳಿಗೆ. ವಿಶಾಲ-ಪ್ರಮಾಣದ ಕೀಟನಾಶಕಗಳು ಪ್ರಯೋಜನಕಾರಿಯಾದ ಕೀಟಗಳನ್ನು ಕೊಲ್ಲುವ ಕಾರಣದಿಂದಾಗಿ ಅವುಗಳನ್ನು ಬಳಸಬಾರದು.
ಕ್ಲೋರೈಡೀ ವೈರ್ಸ್ಸೆನ್ಸ್ ಎಂಬ ತಂಬಾಕು ಮೊಗ್ಗಿನ ಹುಳುವಿನಿಂದ ಈ ಹಾನಿ ಉಂಟಾಗುತ್ತದೆ. ಇದು ಹಲವಾರು ಬೆಳೆಗಳಲ್ಲಿ ಪ್ರಮುಖ ಕೀಟವಾಗಿರುತ್ತದೆ, ಇತರವುಗಳಲ್ಲಿ ಸೋಯಾಬೀನ್ ಮತ್ತು ಹತ್ತಿ (ಸಾಮಾನ್ಯವಾಗಿ ಮರುಭೂಮಿ ಪ್ರದೇಶಗಳಲ್ಲಿ) ಮುಖ್ಯವಾದವು. ಪತಂಗಗಳು ಕಂದು ಬಣ್ಣದಲ್ಲಿರುತ್ತವೆ (ರೆಕ್ಕೆಗಳು ಸೇರಿವೆ), ಕೆಲವೊಮ್ಮೆ ಲಘುವಾಗಿ ಹಸಿರು ಬಣ್ಣದಲ್ಲಿರುತ್ತವೆ. ಮುಂಭಾಗದ ರೆಕ್ಕೆಗಳ ಮೇಲೆ ಮೂರು ಕಂದುಬಣ್ಣದ ಅಡ್ಡ ಪಟ್ಟೆಗಳಿರುತ್ತವೆ, ಕೆಲವೊಮ್ಮೆ ಬಿಳಿ ಅಥವಾ ಕೆನೆ-ಬಣ್ಣದ ಗಡಿಗಳಿರುತ್ತದೆ. ಹಿಂದಿನ ರೆಕ್ಕೆಗಳ ತುದಿಯ ಉದ್ದಕ್ಕೂ ಕಪ್ಪು ಪಟ್ಟೆಗಳೊಂದಿಗೆ ಅವು ಬಿಳಿ ಬಣ್ಣದ್ದಾಗಿರುತ್ತವೆ. ಹೆಣ್ಣು ಕೀಟಗಳು ಹೂವುಗಳು, ಹಣ್ಣುಗಳು ಮತ್ತು ತುದಿಯಲ್ಲಿರುವ ಬೆಳವಣಿಗೆಯ ಮೇಲೆ ಗೋಳಾಕಾರದ, ಚಪ್ಪಟೆಯಾದ ಮೊಟ್ಟೆಗಳನ್ನು ಇಡುತ್ತವೆ. ಪ್ರೌಢ ಮರಿಗಳು ಹೆಚ್ಚು ವಿನಾಶಕಾರಿ ಏಕೆಂದರೆ ಅವುಗಳು ಹೆಚ್ಚು ಹೂವುಗಳು ಮತ್ತು ಹಣ್ಣುಗಳನ್ನು ಹಾನಿಗೊಳಿಸುತ್ತವೆ ಮತ್ತು ಋತುವಿನ ನಂತರದ ಸಮಯದ ತನಕ ಅವುಗಳನ್ನು ಹಾನಿಗೊಳಿಸಬಹುದು (ಸಸ್ಯಗಳು ಇದನ್ನು ಬದಲಿಸುವುದು ಕಷ್ಟವಾಗುತ್ತದೆ). ಸುಮಾರು 20 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಪತಂಗಗಳು 25 ದಿನಗಳವರೆಗೆ ಬದುಕಬಲ್ಲವು.