ಸೋಯಾಬೀನ್

ಸದರ್ನ್ ಆರ್ಮಿವರ್ಮ್

Spodoptera eridania

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಹಸಿರು ಬಣ್ಣದ ಮೊಟ್ಟೆಗಳನ್ನು ಸಮೂಹಗಳಲ್ಲಿ ಇಡಲಾಗಿರುತ್ತದೆ ಮತ್ತು ಅದರ ಮೇಲೆ ಬಿಳಿ ಬಣ್ಣದ ಪೊರೆಯಿರುತ್ತದೆ.
  • ಆಹಾರ ಹಾನಿಯ ಕಾರಣದಿಂದ ಅಸ್ಥಿಪಂಜರಣೀಕರಣವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಎಳೆಯ ಲಾರ್ವಾಗಳು ನಿಶಾಚರಗಳಾಗಿದ್ದು, ಎಲೆಗಳ ಕೆಳಭಾಗವನ್ನು ಗುಂಪುಗಳಲ್ಲಿ ತಿನ್ನುತ್ತವೆ ಇದರಿಂದ ಸಾಮಾನ್ಯವಾಗಿ ಎಲೆಗಳ ಅಸ್ತಿಪಂಜೀಕರಣವಾಗುತ್ತದೆ. ಅವು ಪ್ರೌಢವಾದಂತೆ ಏಕಾಂಗಿಯಾಗುತ್ತವೆ ಮತ್ತು ಬೀಜಕೋಶಗಳ ಒಳಗೂ ಸಹ ತಕ್ಷಣವೇ ಕೊರೆಯುತ್ತವೆ. ಆಹಾರ ದೊರೆಯದೆ ಒತ್ತಡಕ್ಕೆ ಒಳಗಾದಾಗ ಅವು ಶಾಖೆಗಳ ಮೇಲ್ಭಾಗಗಳನ್ನು ತಿನ್ನುತ್ತವೆ ಮತ್ತು ಕಾಂಡಗಳ ಅಂಗಾಂಶಗಳ ಒಳಗೂ ಕೊರೆಯುತ್ತವೆ. ಸೋಯಾಬೀನಿನ ಏಕಬೇಸಾಯ ಇರುವ ಪ್ರದೇಶಗಳಲ್ಲಿ ಅವು ವೇಗವಾಗಿ ವೃದ್ಧಿಗೊಳ್ಳಬಹುದು ಮತ್ತು ಹೆಚ್ಚಿನ ಮಟ್ಟದ ವಿಪರ್ಣನೆಗೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಬಹುದು ಆದ್ದರಿಂದ ಅವು ಸೋಯಾಬೀನಿಗೆ, ಹಾನಿಯನ್ನುಂಟು ಮಾಡಿ ಮತ್ತು ಆರ್ಥಿಕ ನಷ್ಟವನ್ನುಂಟು ಮಾಡುವ ಅತ್ಯಂತ ಪ್ರಮುಖ ಹಾನಿಕಾರಕಗಳಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೋಂಕನ್ನು ಕಡಿಮೆ ಮಾಡಲು, ನೈಸರ್ಗಿಕ ವಿರೋಧಿಗಳನ್ನು ಪ್ರೋತ್ಸಾಹಿಸಿ. ಉದಾಹರಣೆಗೆ ಪ್ಯಾರಾಸಿಟಾಯ್ಡ್ ಕಣಜಗಳಾದ ಕೋಟೆಸಿಯ ಮಾರ್ಜಿನೆಂಟ್ರಿಸ್, ಚೆಲೊನಸ್ ಇಸುಲಾರಿಸ್, ಮೆಟಿಯೊರಸ್ ಆಟೋಗ್ರಾಫೇ, ಎಮ್. ಲ್ಯಾಫಿಗ್ಮೆ ಅಥವಾ ಕ್ಯಾಂಪೊಲೆಟಿಸ್ ಫ್ಲಾವಿಸ್ಟಿಕಾ. ಇತರ ಪ್ರಯೋಜನಕಾರಿಯಾದ ಕೀಟಗಳಲ್ಲಿ ಲೇಸ್ವಿಂಗ್ಸ್ ಮತ್ತು ಜೇರುಂಡೆಗಳು ಸೇರಿವೆ. ಕೆಲವು ಹಕ್ಕಿಗಳು ದೊಡ್ಡ ಪತಂಗಗಳನ್ನು ಸಹ ತಿನ್ನುತ್ತವೆ. ಬೆವೇರಿಯಾ ಬಾಸ್ಸಿನಾ ಎಂಬ ಶಿಲೀಂಧ್ರದೊಂದಿಗೆ ಲಾರ್ವಾಗಳಿಗೆ ಸೋಂಕಾಗಿಸುವುದನ್ನೂ ಸಹ ನೀವು ಪ್ರಯತ್ನಿಸಬಹುದು. ಲಾರ್ವಾಗಳು ತಿನ್ನದಂತೆ ಮಾಡಲು ಬೇವಿನ ಎಣ್ಣೆಯನ್ನೂ ಸಹ ಬಳಸಲಾಗಿದೆ ಆದರೆ ಸಸ್ಯಜನಕ ಕೀಟನಾಶಕಗಳಿಂದ ಲಾರ್ವಾಗಳನ್ನು ನಿಯಂತ್ರಿಸುವುದು ಬಹಳ ಕಷ್ಟಕರ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸದೆರ್ನ್ ಆರ್ಮಿವರ್ಮನ್ನು ನಿಯಂತ್ರಿಸಲು ಅವುಗಳ ಬೆಳವಣಿಗೆ ಆರಂಭಿಕ ಹಂತದಲ್ಲಿರುವಾಗಲೇ ಎಲೆಗಳ ಮೇಲೆ ಕೀಟನಾಶಕಗಳನ್ನು ಬಳಸಿ. ಕೀಟನಾಶಕಗಳ ವಿಷತ್ವವು ಲಾರ್ವಾಗಳಿಗೆ ಗಣನೀಯವಾಗಿ ಬದಲಾಗುತ್ತದೆ. ಈ ಕೀಟದ ವಿರುದ್ಧ ಎಸೆಲೆಪ್ರಿನ್ ಮತ್ತು ಸಿಂಥೆಟಿಕ್ ಪೈರೆಥ್ರಾಯ್ಡ್ಗಳ ಗುಂಪಿನ ರಾಸಾಯನಿಕಗಳನ್ನು ಬಳಸಲಾಗಿದೆ.

ಅದಕ್ಕೆ ಏನು ಕಾರಣ

ಸದರ್ನ್ ಆರ್ಮಿವರ್ಮಿನ ಲಾರ್ವೇಗಳಾದ ಸ್ಪೋಡೊಪ್ಟೆರ ಯೆರಿಡಾನಿಯದಿಂದ ಹಾನಿ ಉಂಟಾಗುತ್ತದೆ. ದೊಡ್ಡ ಪತಂಗಗಳು ಬೂದು-ಕಂದು ಬಣ್ಣದ ದೇಹವನ್ನು ಹೊಂದಿದ್ದು, ಅವುಗಳ ಮುಂದಿನ ರೆಕ್ಕೆಗಳ ಮೇಲೆ ಕಂದು ಬಣ್ಣದ ಗುರುತು ಇರುತ್ತದೆ ಮತ್ತು ಹಿಂದಿನ ರೆಕ್ಕೆಗಳು ಬಿಳಿ ಬಣ್ಣ ಮತ್ತು ಅರೆಪಾರದರ್ಶಕವಾಗಿರುತ್ತವೆ. ರೆಕ್ಕೆಯ ಮಧ್ಯಭಾಗದಲ್ಲಿ ಬೀನ್-ಆಕಾರದ ಕಲೆ ಇರಬಹುದು. ಹೆಣ್ಣುಗಳು ಎಲೆಗಳ ಕೆಳಭಾಗದಲ್ಲಿ ಹಸಿರು ಬಣ್ಣದ ಮೊಟ್ಟೆಗಳನ್ನು ಸಮೂಹದಲ್ಲಿ ಇಡುತ್ತವೆ, ಇವು ಅವುಗಳ ದೇಹದ ಬಿಳಿ ಸ್ಕೇಲ್ಗಳಿಂದ ಮುಚ್ಚಲ್ಪಟ್ಟಿರುತ್ತವೆ. ಮರಿಹುಳುಗಳು ಕಪ್ಪು ಹಸಿರು ಬಣ್ಣದ್ದಾಗಿರುತ್ತವೆ ಮತ್ತು ದೇಹದ ಮೇಲೆ ಕಪ್ಪು ಕಲೆಗಳು ಹರಡಿರುತ್ತವೆ ಮತ್ತು ಏಕರೂಪದ ಕೆಂಪು-ಕಂದು ಬಣ್ಣದ ತಲೆಯಿರುತ್ತದೆ. ಅವುಗಳ ಮೇಲೆ ಬಿಳಿ ಬಣ್ಣದ ರೇಖೆಯೊಂದು ಇರುತ್ತದೆ ಮತ್ತು ಪಾರ್ಶ್ವಗಳಲ್ಲಿ ಬಿಳಿ ಪಟ್ಟೆಗಳಿರುತ್ತವೆ ಮತ್ತು ಅದು ಕಾಲಾನಂತರ ಗಾಢವಾಗುತ್ತವೆ. ನಂತರದ ಲಾರ್ವಾ ಹಂತಗಳಲ್ಲಿ, ಅವುಗಳ ಚರ್ಮವು ಗಾಢವಾಗುತ್ತದೆ, ಎರಡು ಸಾಲುಗಳ ಕಪ್ಪು ತ್ರಿಕೋನಗಳು ಅವುಗಳ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಮೊದಲ ವಿಭಾಗದಲ್ಲಿ ಕಪ್ಪು ಬಣ್ಣದ ವರ್ತುಲ ಕಾಣಿಸುತ್ತದೆ. 20-25 ಡಿಗ್ರಿ ಸೆಲ್ಸಿಯಸ್ ಉಷ್ಣತೆಯು ಅವುಗಳ ಬೆಳವಣಿಗೆಗೆ ಸೂಕ್ತವಾದುದು, 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನದಲ್ಲಿ ಅವುಗಳ ಜೀವನ ಚಕ್ರವು ಕುಂಠಿತವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಹಿಂದಿನ 3 ತಿಂಗಳಲ್ಲಿ ಕೀಟದಿಂದ ಮುಕ್ತವಾಗಿರುವ ಸ್ಥಳಗಳಿಂದ ಬೀಜಗಳನ್ನು ಬಳಸಿ.
  • ಪ್ರಮಾಣೀಕೃತ ರೋಗ-ಮುಕ್ತ ಬೀಜಗಳನ್ನು ಬಳಸಿ.
  • ಈ ಪತಂಗಗಳನ್ನು ಹಿಡಿಯಲು ಮತ್ತು ನಿಮ್ಮ ಹೊಲವನ್ನು ಪರಿಶೀಲಿಸಲು ಫೆರೋಮೋನ್ ಬಲೆಗಳನ್ನು ಬಳಸಿ.
  • ಮೊಟ್ಟೆಗಳು ಅಥವಾ ಕ್ಯಾಟರ್ಪಿಲ್ಲರ್ ಗಳಿಂದ ಸೋಂಕಿಗೊಳಗಾದ ಯಾವುದೇ ಸಸ್ಯದ ಭಾಗವನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ