ಮೆಕ್ಕೆ ಜೋಳ

ಮೆಕ್ಕೆಜೋಳದ ಇಯರ್ವರ್ಮ್

Helicoverpa zea

ಕೀಟ

ಸಂಕ್ಷಿಪ್ತವಾಗಿ

  • ಮರಿಹುಳುಗಳು ರೇಷ್ಮೆಯ ಎಳೆಗಳನ್ನು ತಿಂದ ನಂತರ ಜೊಂಡಿನೊಳಗೆ ಕೊರೆದುಕೊಂಡು ಹೋಗುತ್ತವೆ.
  • ಜೊಂಡಿನ ತುದಿಯಲ್ಲಿ ಅಥವಾ ಸುತ್ತಲೂ ಕೊರೆತದ ತೂತುಗಳು ಮತ್ತು ಹುಳುಗಳ ಹಿಕ್ಕೆಯ ಉದ್ದವಾದ ಗೆರೆಯನ್ನು ಕಾಣಬಹುದು.
  • ಸಾಮಾನ್ಯವಾಗಿ ಒಂದು ಜೊಂಡಿನಲ್ಲಿ ಒಂದಕ್ಕಿಂತ ಹೆಚ್ಚು ಲಾರ್ವಾ ಕಂಡುಬರುವುದಿಲ್ಲ.
  • ಎಲೆಗಳಿಗೂ ಸಹ ಸೋಂಕಾಗಬಹುದು, ಇದು ಇತರ ರೋಗಗಳ ಸೋಂಕು ತಗುಲುವ ಒಂದು ಉತ್ತಮ ಪರಿಸರವನ್ನು ಸೃಷ್ಟಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಮೆಕ್ಕೆ ಜೋಳ

ರೋಗಲಕ್ಷಣಗಳು

ಕಾರ್ನ್ ಇಯರ್ವರ್ಮ್ ಹೋಸ್ಟ್ ನ ಹಣ್ಣುಬಿಡುವ ಹಂತವನ್ನು ಆರಿಸುತ್ತದೆ ಆದರೆ ಎಲೆಗೊಂಚಲುಗಳನ್ನೂ ಸಹ ಆಕ್ರಮಿಸುತ್ತದೆ. ಮರಿಹುಳುಗಳು ರೇಷ್ಮೆಯ ಎಳೆಗಳನ್ನು ತಿಂದ ನಂತರ ಜೊಂಡಿನೊಳಗೆ ಕೊರೆದುಕೊಂಡು ಹೋಗುತ್ತವೆ, ಅಲ್ಲಿ ಅವು ಕಾಳುಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಜೊಂಡಿನ ಸುತ್ತ ಅಥವಾ ಕೆಳಗೆ ಅವುಗಳು ತಿಂದಿರುವ ಹಾನಿಗೊಳಗಾದ ಕಾಳುಗಳನ್ನು ಮತ್ತು ಅವುಗಳು ಬಿಟ್ಟಿರುವ ಕಂದು ಬಣ್ಣದ ಹಿಕ್ಕೆಯನ್ನು ಕಾಣಬಹುದು. ಅವು ಇನ್ನೊಂದು ಹುಳುವನ್ನು ತಿನ್ನುವ ಪ್ರವೃತ್ತಿಯವು, ಆದ್ದರಿಂದ ಸಾಮಾನ್ಯವಾಗಿ ಒಂದು ಜೊಂಡಿನಲ್ಲಿ ಕೇವಲ ಒಂದು ಕೀಟ ಮಾತ್ರ ಇರುತ್ತದೆ. ಜೊಂಡಿನ ತುದಿಗಳಲ್ಲಿ ಮತ್ತು ಬೆಳೆಯುತ್ತಿರುವ ಎಲೆಯ ಅಂಚುಗಳಲ್ಲಿ ಹಲವಾರು ಕೊರೆತದ ತೂತುಗಳು ಕಂಡುಬರುತ್ತವೆ. ಅವು ಹೂವುಗಳು ಮತ್ತು ಕಾಳುಗಳನ್ನು ತಿಂದು ಪರಾಗಸ್ಪರ್ಶ ಮತ್ತು ಕಾಳಿನ ಬೆಳವಣಿಗೆಗೆ ಅಡ್ಡಿತರುವುದರಿಂದ, ಇಳುವರಿಯಲ್ಲಿ ತೀವ್ರವಾದ ಕಡಿತವುಂಟಾಗಬಹುದು. ಹಾನಿಯು ಇತರ ರೋಗಗಳ ಸೋಂಕು ತಗುಲುವ ಒಂದು ಉತ್ತಮ ಪರಿಸರವನ್ನು ಸೃಷ್ಟಿಸುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪ್ಯಾರಾಸಿಟೊಯಿಡ್ ಟ್ರೈಕೊಗ್ರಾಮ ಮತ್ತು ಟೆಲಿನೋಮಸ್ ಕಣಜಗಳು ಹೆಲಿಕೋವರ್ಪಾ ಜೀಯ ಮೊಟ್ಟೆಗಳನ್ನು ಮುತ್ತಿಕೊಳ್ಳುವ ಮೂಲಕ ಅವುಗಳ ಸಂಖ್ಯೆಯನ್ನು ನಿರ್ದಿಷ್ಟ ಮಟ್ಟಕ್ಕೆ ನಿಯಂತ್ರಿಸಲು ಸಹಾಯ ಮಾಡುತ್ತವೆ. ಲಾರ್ವಾ ಪ್ಯಾರಾಸಿಟೈಡ್ ಗಳೂ ಸಹ ಲಭ್ಯವಿದೆ. ಗ್ರೀನ್ ಲೇಸ್ವಿಂಗ್ಸ್, ಬಿಗ್-ಐಡ್ ಬಗ್ ಅಥವಾ ಡಾಮ್ಸೆಲ್ ಬಗ್ ಗಳಂತಹ ಇತರ ಪ್ರಯೋಜನಕಾರಿ ಕೀಟಗಳು ಮೊಟ್ಟೆ ಮತ್ತು ಸಣ್ಣ ಲಾರ್ವಾಗಳ ಪರಭಕ್ಷಕಗಳಾಗಿವೆ. ಕೆಲವು ಪ್ರಯೋಜನಕಾರಿ ನೆಮಟೋಡ್ಗಳು ಸಹ ಜೊಂಡಿನ ತುದಿಗೆ ಸೇರಿಸಿದಾಗ ಕೆಲಸ ಮಾಡುತ್ತವೆ. ಶಿಲೀಂಧ್ರ ರೋಗಕಾರಕ ನೋಮುರಿಯಾ ರಿಲೀ ಮತ್ತು ಪರಮಾಣು ಪಾಲಿಹೆಡ್ರೋಸಿಸ್ ವೈರಸ್ಗಳು ಸಹ ಹೆಲಿಕೋವರ್ಪಾ ಜೀಯದ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ. ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಅಥವಾ ಸ್ಪಿನೋಸಾಡ್ ಗಳನ್ನು ಒಳಗೊಂಡಿರುವ ಜೈವಿಕ ಕೀಟನಾಶಕಗಳನ್ನು ಸಕಾಲಿಕ ವಿಧಾನದಲ್ಲಿ ಹಾಕಿದರೆ ಅವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ. ಪ್ರತಿ ಜೊಂಡಿನ ರೇಷ್ಮೆಗೆ ಖನಿಜ ತೈಲವನ್ನು ಹಾಕಿದರೆ ಅದು ಕಾರ್ನ್ ಇಯರ್ವರ್ಮ್ ನ ಸೋಂಕನ್ನು ತಡೆಗಟ್ಟುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಬಳಸಿ. ಹೊಲದಲ್ಲಿ, ಕೀಟನಾಶಕಗಳ ಬಳಕೆಯನ್ನು ಸಾಮಾನ್ಯವಾಗಿ ಸೂಚಿಸಲಾಗುವುದಿಲ್ಲ ಏಕೆಂದರೆ ಲಾರ್ವಾಗಳು ಜೊಂಡಿನೊಳಗೆ ಅಡಗುತ್ತವೆ ಮತ್ತು ಚಿಕಿತ್ಸೆಗೆ ಒಳಪಡುವುದಿಲ್ಲ. ಸಕಾಲಿಕ ವಿಧಾನದಲ್ಲಿ ಹಾಕಿದಾಗ, ಪಿರೆಥ್ರಾಯ್ಡ್, ಸ್ಪಿನೆಟೋರಮ್, ಮೆಥೊಮೈಲ್, ಎಸ್ಫೆನ್ವಾಲೆರೇಟ್ ಅಥವಾ ಕ್ಲೋರಪೈರಿಫೊಸ್ ಅನ್ನು ಹೊಂದಿರುವ ಕೀಟನಾಶಕಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ಕಾರ್ನ್ ಇಯರ್ವರ್ಮ್ ಗಳು 5 ರಿಂದ 10 ಸೆಂಮೀ ಆಳದ ಮಣ್ಣಿನೊಳಗೆ, ಗೂಡು ಹುಳುಗಳ ರೀತಿಯಲ್ಲಿ ಚಳಿಗಾಲವನ್ನು ಕಳೆಯುತ್ತವೆ. ದಷ್ಟಪುಷ್ಟವಾದ ಪ್ರೌಢ ಪತಂಗಗಳು ವಸಂತಕಾಲದ ಆರಂಭದಲ್ಲಿ ಹೊರಹೊಮ್ಮುತ್ತವೆ ಮತ್ತು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಹೆಚ್ಚಾಗಿ ಸಕ್ರಿಯವಾಗಿರುತ್ತವೆ, ಸಾಮಾನ್ಯವಾಗಿ ತಾಪಮಾನವು ಹೆಚ್ಚಿದ್ದಾಗ. ಅವುಗಳ ಮುಂದಿನ ರೆಕ್ಕೆಗಳು ತೆಳು-ಕಂದು ಬಣ್ಣದ್ದಾಗಿದ್ದು, ಕೆಲವೊಮ್ಮೆ ಆಲಿವ್ ಬಣ್ಣದ ಮಿಶ್ರಣವಿರುತ್ತದೆ. ರೆಕ್ಕೆಗಳ ಅಂಚಿನಿಂದ ಕೆಲವು ಮಿಲಿಲೀಟರ್ಗಳಷ್ಟು ಉದ್ದದ ಅಲೆಗಳ ರೀತಿಯ ಗಾಢ-ಕಂದುಬಣ್ಣದ ಪಟ್ಟೆಗಳಿರುತ್ತದೆ. ಹಿಂದಿನ ರೆಕ್ಕೆಗಳು ಬಿಳಿ-ಬೂದು ಬಣ್ಣದ್ದಾಗಿರುತ್ತವೆ ಮತ್ತು ಅದರ ಮೇಲೆ ಅಗಲವಾದ ಕಪ್ಪು ಪಟ್ಟೆಯೊಂದು ಇರುತ್ತದೆ, ಪಟ್ಟೆಯ ಅಂಚಿನಲ್ಲಿ ಒಂದು ಹಳದಿ ಬಣ್ಣದ ಗುರುತು ಇರುತ್ತದೆ. ಹೆಣ್ಣು ಕೀಟಗಳು ಬಿಳಿ ಗುಮ್ಮಟ-ಆಕಾರದ ಮೊಟ್ಟೆಗಳನ್ನು ತಾಜಾ ರೇಷ್ಮೆ ಎಳೆ ಅಥವಾ ಎಲೆಗಳ ಮೇಲೆ ಪ್ರತ್ಯೇಕವಾಗಿ ಇಡುತ್ತವೆ. ಮರಿಹುಳುಗಳ ಬಣ್ಣ ಬದಲಾಗುತ್ತದೆ (ತಿಳಿ ಹಸಿರು ಅಥವಾ ಕೆಂಪು ಅಥವಾ ಕಂದು ಬಣ್ಣ), ಸ್ವಲ್ಪ ಕೂದಲು ಇರುತ್ತದೆ ಮತ್ತು ಅದು ಸುಮಾರು 3.7 ಮಿಮೀ ಉದ್ದವಿರುತ್ತವೆ. ಅವುಗಳಿಗೆ ಹಳದಿ ಕಂದು ಅಥವಾ ಕಿತ್ತಳೆ ಬಣ್ಣದ ತಲೆಗಳಿರುತ್ತವೆ ಮತ್ತು ದೇಹದ ಮೇಲೆ ಬಹಳ ಚಿಕ್ಕದಾದ ಬೆನ್ನೆಲುಬುಗಳಿರುವ ಜಾಗದಲ್ಲಿ ಸಣ್ಣ ಕಪ್ಪು ಚುಕ್ಕೆಗಳಿರುತ್ತವೆ. ಅವು ಬೆಳೆದಂತೆ, ಅವುಗಳ ಪಕ್ಕೆಯ ಮೇಲೆ ಎರಡು ಹಳದಿ ಪಟ್ಟೆಗಳು ಬೆಳೆಯುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಅಥವಾ ಸಹಿಷ್ಣು ಸಸ್ಯಗಳನ್ನು ನೆಡಿ.
  • ಪತಂಗಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ತಡೆಗಟ್ಟಲು ಋತುವಿಗಿಂತ ಮೊದಲೇ ನಾಟಿ ಮಾಡಿ.
  • ಪತಂಗಗಳು ಕಂಡುಬಂದಲ್ಲಿ, ಅವುಗಳನ್ನು ಒಟ್ಟಾಗಿ ಹಿಡಿಯಲು ಬೆಳಕು ಅಥವಾ ಫೆರೋಮೋನ್ ಬಲೆಗಳನ್ನು ಹಾಕಿ.
  • ಪ್ರಯೋಜನಕಾರಿ ಕೀಟಗಳ ಸಂಖ್ಯೆಯನ್ನು ಸಂರಕ್ಷಿಸುವ ಸಲುವಾಗಿ ಕಡಿಮೆ ಕೀಟನಾಶಕಗಳನ್ನು ಬಳಸಿ.
  • ಪತಂಗಗಳನ್ನು ಆಕರ್ಷಿಸುವ ಸಸ್ಯಗಳೊಂದಿಗೆ ಕಂಪ್ಯಾನಿಯನ್ ಕ್ರಾಪಿಂಗ್ ಮಾಡಿದರೆ ಸಹಾಯವಾಗಬಹುದು.
  • ಹೊಲದ ಸುತ್ತ ಮುತ್ತ ಇರುವ ಕಳೆಗಳನ್ನು ನಿಯಂತ್ರಿಸಿ.
  • ಗೂಡುಹುಳುಗಳನ್ನು ಹವಾಮಾನ, ಹಕ್ಕಿಗಳು ಮತ್ತು ಇತರ ಪರಭಕ್ಷಕಗಳಿಗೆ ಒಡ್ಡಲು ಋತುಗಳ ನಡುವೆ ಉಳುಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ