ಹತ್ತಿ

ಫಾಲ್ ಸೈನಿಕ ಹುಳು (ಫಾಲ್ ಆರ್ಮಿ ವರ್ಮ್)

Spodoptera frugiperda

ಕೀಟ

ಸಂಕ್ಷಿಪ್ತವಾಗಿ

  • ಸಸ್ಯದ ಎಲ್ಲಾ ಭಾಗಗಳಲ್ಲೂ ಕೀಟ ತಿಂದು ಬಿಟ್ಟಿರುವ ಹಾನಿ.
  • ಎಲೆಗಳ ಮೇಲೆ ಕೀಟದ ಹಿಕ್ಕೆಗಳನ್ನು ನೋಡಬಹುದು.
  • ಕ್ಯಾಟರ್ಪಿಲ್ಲರ್ ಹಣೆಯ ಮೇಲೆ ವೈ ಆಕಾರದ ಮಾದರಿಯನ್ನು ಮತ್ತು ಹಿಂಭಾಗದಲ್ಲಿ 4 ಚುಕ್ಕೆಗಳನ್ನು ನೋಡಬಹುದು.

ಇವುಗಳಲ್ಲಿ ಸಹ ಕಾಣಬಹುದು

25 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಫಾಲ್ ಆರ್ಮಿ ವರ್ಮ್ ನ ಲಾರ್ವಾಗಳು ಸಸ್ಯದ ಎಲ್ಲಾ ಭಾಗಗಳಲ್ಲೂ ತಿಂದು ಹಾನಿ ಮಾಡುತ್ತವೆ. ಎಳೆಯ ಲಾರ್ವಾಗಳು ಆರಂಭದಲ್ಲಿ ಎಲೆಯ ಅಂಗಾಂಶಗಳ ಮೇಲ್ಮೈಯ ಒಂದು ಬದಿಯನ್ನು ತಿನ್ನುತ್ತವೆ ಮತ್ತು ಎದುರಿನ ಎಪಿಡೆರ್ಮಲ್ ಪದರವನ್ನು (ವಿಂಡೋ ಫೀಡಿಂಗ್) ಹಾಗೆಯೇ ಬಿಟ್ಟುಬಿಡುತ್ತವೆ. ಮೊಗ್ಗುಗಳು ಮತ್ತು ಬೆಳೆಯುವ ತುದಿಗಳು ನಾಶವಾಗುವ ತನಕ ಸಸಿಗಳನ್ನು ಅವು ತಿನ್ನಬಹುದು. ದೊಡ್ಡ ಲಾರ್ವಾಗಳು ರಂಧ್ರಗಳ ವಿಶಿಷ್ಟ ಮಾದರಿಯನ್ನು ಮತ್ತು ಹರಿದ ಅಂಚುಗಳನ್ನು ಎಲೆಗಳಲ್ಲಿ ಉಳಿಸುತ್ತವೆ. ಹಾಗೆಯೇ ಲಾರ್ವಾದ ವಿಸರ್ಜನೆಯಿಂದಾದ ಸಾಲುಗಳನ್ನು ಎಲೆಗಳ ಮೇಲೆ ಬಿಡುತ್ತವೆ. ಅವು ಸಸ್ಯದ ಕೆಳಭಾಗವನ್ನು ಕತ್ತರಿಸಬಹುದು ಅಥವಾ ಸಂತಾನೋತ್ಪತ್ತಿಯ ರಚನೆಗಳು ಮತ್ತು ಎಳೆಯ ಹಣ್ಣುಗಳನ್ನು ಸಹ ಆಕ್ರಮಿಸಬಹುದು. ಭಾರೀ ರೋಗ ಮುತ್ತುವಿಕೆ ಸಂದರ್ಭದಲ್ಲಿ ಫಾಲ್ ಆರ್ಮಿ ವರ್ಮ್ ನ ಲಾರ್ವಾಗಳು, ವ್ಯಾಪಕ ಎಲೆ ಉದುರುವಿಕೆಯನ್ನು ಉಂಟುಮಾಡುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕೋಟೇಸಿಯ ಮ್ಯಾರ್ಜಿನಿವೆಂಟ್ರಿಸ್, ಚೆಲೋನಸ್ ಟೆಕ್ಸಾನಸ್ ಮತ್ತು ಸಿ. ರಾಮುಸ್ ಪರಾವಲಂಬಿ ಕಣಜಗಳಲ್ಲಿ ಸೇರಿವೆ. ಸಾಮಾನ್ಯವಾಗಿ ಬಳಸುವ ಪರಾವಲಂಬಿ ನೊಣವೆಂದರೆ ಆರ್ಕಿಟಾಸ್ ಮಾರ್ಮೊರಾಟಸ್. ನೆಲದ ಜೀರುಂಡೆಗಳು, ಸ್ಪೈನ್ಡ್ ಸೋಲ್ಜರ್ ಬಗ್, ಹೂವಿನ ತಿಗಣೆ, ಪಕ್ಷಿಗಳು ಅಥವಾ ದಂಶಕಗಳು ಪರಭಕ್ಷಕಗಳಲ್ಲಿ ಸೇರಿವೆ. ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಅಥವಾ ಬಾಕುಲೋವೈರಸ್ ಸ್ಪೊಡೊಪ್ಟೆರಾವನ್ನು ಹೊಂದಿರುವ ಜೊತೆಗೆ ಸ್ಪಿನೋಸ್ಯಾಡ್ ಜೈವಿಕ-ಕೀಟನಾಶಕಗಳನ್ನು ಸಿಂಪಡಿಸಬಹುದಾಗಿದೆ. ಮೆಕ್ಕೆಜೋಳದಲ್ಲಿ, ರೆಡ್ ಸ್ಯಾಂಡ್, ರಾಕ್ ಸಾಲ್ಟ್, ಇದ್ದಿಲು ಪುಡಿ ಅಥವಾ ಬೂದಿಯನ್ನು ತೆನೆ ಸುರುಳಿಯಲ್ಲಿ ಹಾಕುವ ಮೂಲಕ ಮರಿಹುಳುಗಳು ಅವನ್ನು ತಿನ್ನದಂತೆ ಮತ್ತು ಅವುಗಳನ್ನು ಕೊಲ್ಲದಂತೆ (ಅನುಕ್ರಮವಾಗಿ 100%, 98%, 90 ಮತ್ತು 80% ಪರಿಣಾಮಕಾರಿತ್ವವನ್ನು) ತಡೆಯಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಮೊದಲು ಪರಿಗಣಿಸಿ. ಎಸ್ಫೆನ್ವಾಲರೇಟ್, ಕ್ಲೋರೋಪಿರಿಪ್ಫೋಸ್, ಮ್ಯಾಲಥಿಯಾನ್ ಮತ್ತು ಲ್ಯಾಂಬ್ಡ-ಸೈಹಲೋಥ್ರಿನ್ ಗಳನ್ನು ಕೀಟನಾಶಕಗಳಾಗಿ ಶಿಫಾರಸ್ಸು ಮಾಡಲಾಗುತ್ತದೆ. ಬೆಳೆದ ಲಾರ್ವಾಗಳಿಗಾಗಿ ಈ ಕೀಟನಾಶಕಗಳನ್ನು ಆಧರಿಸಿದ ವಿಷಯುಕ್ತ ಬೈಟ್ ಬಳಸುವಂತೆಯೂ ರೈತರಿಗೆ ಸಲಹೆ ನೀಡಲಾಗುತ್ತದೆ.

ಅದಕ್ಕೆ ಏನು ಕಾರಣ

ಎಲೆಗಳ ಕೆಳಭಾಗದಲ್ಲಿ, 100-300 ಮೊಟ್ಟೆಗಳನ್ನು. ಗಟ್ಟಿಯಾಗಿ ಬಂಧಿಸಲ್ಪಟ್ಟ ಗುಂಪುಗಳಲ್ಲಿ ಇಡುತ್ತವೆ. ಇವು ಸಾಮಾನ್ಯವಾಗಿ ಒಂದು ಪದರದಿಂದ ಆವರಿಸಲ್ಪಟ್ಟಿರುತ್ತವೆ. ಮರಿಹುಳುಗಳು ತೆಳು ಕಂದು, ಹಸಿರು ಅಥವಾ ಕಪ್ಪಾಗಿರುತ್ತವೆ. ಹಳದಿ ಬಣ್ಣದ ಪಟ್ಟೆಗಳನ್ನು ಹೊಂದಿದ್ದು ಅವು ಪಕ್ಕದಲ್ಲಿ ಉದ್ದಕ್ಕೂ ಸಾಗಿರುತ್ತವೆ. ಪತಂಗವು ಬಿಳಿ ಪಾರದರ್ಶಕವಾದ ಹಿಂದಿನ ರೆಕ್ಕೆಗಳನ್ನು ಮತ್ತು ತೆಳು ಮತ್ತು ಗಾಢವಾದ ಗುರುತುಗಳಿಂದ ಕೂಡಿದ, ಕಂದು ಬಣ್ಣದ ಮುಂಭಾಗದ ರೆಕ್ಕೆಗಳನ್ನು ಹೊಂದಿರುತ್ತದೆ. ಪ್ರತಿ ಮುಂದಿನ ರೆಕ್ಕಗಳ ತುದಿಯ ಸಮೀಪ ಒಂದು ಸ್ಪಷ್ಟವಾದ ಬಿಳಿಯ ಕಲೆ ಇರುತ್ತದೆ. ಆಹಾರ ಮತ್ತು ಉಷ್ಣತೆ ಇದರ ಜೀವನಚಕ್ರದ ವಿವಿಧ ಹಂತಗಳ ಅವಧಿಯನ್ನು ನಿರ್ಧರಿಸುತ್ತದೆ. ತಂಪಾದ, ಆರ್ದ್ರ ವಸಂತದ ನಂತರ ಬೆಚ್ಚಗಿನ, ಆರ್ದ್ರ ವಾತಾವರಣವಿದ್ದರೆ ಕೀಟಗಳ ಜೀವನ ಚಕ್ರಕ್ಕೆ ಅದು ಅನುಕೂಲಕರವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಬೇಗ ಚೇತರಿಸಿಕೊಳ್ಳಬಲ್ಲ ಪ್ರಭೇದಗಳನ್ನು ನೆಡಿ.
  • ಪತಂಗಗಳ ಉಪಸ್ಥಿತಿಯನ್ನು ಪರಿಶೀಲಿಸಿ ಮತ್ತು ಅವುಗಳನ್ನು ಬೆಳಕು ಅಥವಾ ಫೆರೋಮೋನ್ ಬಲೆಗಳಿಂದ (10 / ಹೆ) ಗುಂಪಾಗಿ ಹಿಡಿಯಿರಿ.
  • ಅಧಿಕ ಸಂಖ್ಯೆಯನ್ನು ತಪ್ಪಿಸಲು ಬೇಗ ನಾಟಿ ಮಾಡಿ.
  • ಕಳೆ ನಿಯಂತ್ರಣವನ್ನು ಶಿಫಾರಸು ಮಾಡಲಾಗಿದೆ.
  • ಸ್ಥಿರ ಹಾನಿ ತಪ್ಪಿಸಲು ಬೇಗ ಕೊಯ್ಲು ಮಾಡಿ.
  • ಭೂಮಿಯನ್ನು ಉಳುಮೆ ಮಾಡುವ ಮೂಲಕ ಲಾರ್ವಾ ಮತ್ತು ಕೋಶವನ್ನು ಹೆಚ್ಚಿನ ತಾಪಮಾನಕ್ಕೆ ಒಡ್ಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ