ಬದನೆ

ಟುಟ ಆಬ್ಸೊಲುಟಾ

Tuta Absoluta

ಕೀಟ

ಸಂಕ್ಷಿಪ್ತವಾಗಿ

  • ಲಾರ್ವಾವು ಅನಿಯಮಿತ ಬೂದು ಅಥವಾ ಬಿಳಿ ಬಣ್ಣದ ರಂಧ್ರಗಳನ್ನು ಎಲೆಯ ಮೇಲೆ ರಚಿಸುತ್ತದೆ, ಅದು ನಂತರ ನೆಕ್ರೋಟಿಕ್ ಆಗಬಹುದು.
  • ಹಣ್ಣಿನಲ್ಲಿ ಮೆಟ್ಟಿಲು ಮಣೆ ರೀತಿಯ ಆಕಾರ ಮತ್ತು ದೊಡ್ಡ ಬಿಲಗಳು ಇರುತ್ತವೆ.
  • ಈ ಪ್ರವೇಶದ್ವಾರಗಳನ್ನು ದ್ವಿತೀಯ ರೋಗಕಾರಕಗಳು ಬಳಸುತ್ತವೆ.
  • ಇದು ಹಣ್ಣು ಕೊಳೆತಕ್ಕೆ ಕಾರಣವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಬದನೆ

ರೋಗಲಕ್ಷಣಗಳು

ಬೆಳೆ ಚಕ್ರದಾದ್ಯಂತ ಸೋಂಕು ಸಂಭವಿಸುತ್ತದೆ ಮತ್ತು ಯಾವುದೇ ಬೆಳೆ ಭಾಗಕ್ಕೆ ಪರಿಣಾಮ ಬೀರಬಹುದು. ತುದಿಯಲ್ಲಿರುವ ಮೊಗ್ಗುಗಳು, ಎಳೆಯ ಮೃದು ಎಲೆಗಳು ಮತ್ತು ಹೂವುಗಳಿಗೆ ಮರಿಹುಳುಗಳು ಆದ್ಯತೆ ನೀಡುತ್ತವೆ. ಎಲೆಗಳ ಮೇಲೆ, ಮರಿಹುಳುಗಳು ಅನಿಯಮಿತ, ಬೂದು ಅಥವಾ ಬಿಳಿ ಬಣ್ಣದ ರಂಧ್ರಗಳನ್ನು ರಚಿಸುತ್ತದೆ. ನಂತರ ಅದು ನೆಕ್ರೋಟಿಕ್ ಆಗಬಹುದು. ಲಾರ್ವಾಗಳು ಸಸ್ಯಗಳ ಬೆಳವಣಿಗೆಗೆ ಪರಿಣಾಮ ಬೀರುವಂತೆ ಕಾಂಡಗಳೊಳಗೆ ಕೊರೆದುಕೊಂಡು ಹೋಗುತ್ತವೆ. ಹಣ್ಣುಗಳ ಮೇಲೆ, ಲಾರ್ವಗಳ ಪ್ರವೇಶ ಅಥವಾ ನಿರ್ಗಮನ ತೂತುಗಳಲ್ಲಿ ಕಪ್ಪು ಗುರುತುಗಳನ್ನು ಕಾಣಬಹುದು. ಈ ತೂತುಗಳು ದ್ವಿತೀಯ ರೋಗಕಾರಕಗಳ ಪ್ರವೇಶ ಬಿಂದುಗಳಾಗಿ ಕಾರ್ಯನಿರ್ವಹಿಸುತ್ತದೆ. ಇದು ಹಣ್ಣಿನ ಕೊಳೆತಕ್ಕೆ ಕಾರಣವಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಟಿ. ಅಬ್ಸೋಲ್ಯೂಟಾವನ್ನು ಆಹಾರವಾಗಿ ಸೇವಿಸುವ ಅನೇಕ ಪರಭಕ್ಷಕಗಳು ಕಂಡುಬಂದಿವೆ: ಇತರ ಜಾತಿಗಳ ಪೈಕಿ ಪ್ಯಾರಾಸಿಟಾಯ್ಡ್ ಕಣಜ ಟ್ರೈಕೊಗ್ರಾಮ ಪ್ರಿಟಿಯೊಸಮ್, ಮತ್ತು ಕೀಟಗಳಾದ ನೆಸ್ಸಿಯಾಕೊರಿಸ್ ಟೆನುಯಿಸ್ ಮತ್ತು ಮೆಕ್ರೊಲೋಫಸ್ ಪಿಗ್ಮೆಯಸ್. ಮೆಟಾಹಾರ್ಜಿಯಾಮ್ ಅನಿಸೊಪ್ಲಿಯಾ ಮತ್ತು ಬುವೇರಿಯಾ ಬಾಸ್ಸಿನಾ ಸೇರಿದಂತೆ ಹಲವು ಶಿಲೀಂಧ್ರಗಳ ಜಾತಿಗಳು ಮೊಟ್ಟೆ, ಮರಿಗಳು ಮತ್ತು ವಯಸ್ಕ ಕೀಟದಗಳ ಮೇಲೆ ಆಕ್ರಮಣ ಮಾಡುತ್ತವೆ. ಬೆಸಿಲಸ್ ತುರಿಂಜಿಯೆನ್ಸಿಸ್ ಅಥವಾ ಸ್ಪಿನೋಸಡ್ ಅನ್ನು ಹೊಂದಿರುವ ಕೀಟನಾಶಕಗಳು ಮತ್ತು ಬೇವಿನ ಬೀಜದ ಸಾರ ಕೂಡ ಕೆಲಸ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಟುಟಾ ಅಬ್ಸೋಲ್ಯೂಟಾ ಕೀಟ ನಿರ್ವಹಣೆಗೆ ಶಿಫಾರಸ್ಸು ಮಾಡುತ್ತಿರುವ ಕೀಟನಾಶಕಗಳು ಲಾರ್ವಾಗಳ ರಹಸ್ಯ ಸ್ವರೂಪದಿಂದಾಗಿ ಮತ್ತು ಕೀಟದ ಹೆಚ್ಚಿನ ಸಂತಾನೋತ್ಪತ್ತಿ ಸಾಮರ್ಥ್ಯ ಮತ್ತು ಪ್ರತಿರೋಧದ ಬೆಳವಣಿಗೆಯ ಕಾರಣದಿಂದಾಗಿ ಕೆಲಸ ಮಾಡದಿರಬಹುದು. ಪ್ರತಿರೋಧಕತೆ ಬೆಳೆಯುವುದನ್ನು ತಪ್ಪಿಸಲು, ಇಂಡೊಕ್ಸಕಾರ್ಬ್, ಅಬಮೆಕ್ಟಿನ್, ಅಜಡಿರಾಕ್ಟಿನ್, ಫೆನೊಕ್ಸಿಕಾರ್ಬೆ + ಲುಫೆನುರಾನ್ ಗಳಂತಹ ಹಲವಾರು ರೀತಿಯ ಕೀಟನಾಶಕಗಳನ್ನು ಸರದಿಯಲ್ಲಿ ಳಸಿ.

ಅದಕ್ಕೆ ಏನು ಕಾರಣ

ಟುಟಾ ಅಬ್ಸೋಲ್ಯೂಟಾ ಎಂಬುದು ವಿನಾಶಕಾರಿ ಟೊಮೆಟೊ ಕೀಟವಾಗಿದ್ದು, ಅದರ ಸಂತಾನೋತ್ಪತ್ತಿಯ ಸಾಮರ್ಥ್ಯದಿಂದ ಅದು ವರ್ಷಕ್ಕೆ 12 ತಲೆಮಾರುಗಳವರೆಗೆ ಇರುತ್ತದೆ. ಹೆಣ್ಣುಗಳು ಎಲೆಗಳ ಕೆಳಭಾಗದಲ್ಲಿ 300 ಕೆನೆ ಬಣ್ಣದ ಮೊಟ್ಟೆಗಳನ್ನು ಇಡಬಹುದು. 26-30ºC ಮತ್ತು 60-75% RH ಯಲ್ಲಿ ಕೀಟಗಳು ಹೊರಬರುತ್ತವೆ. ಲಾರ್ವಾಗಳ ತಲೆಯ ಹಿಂಭಾಗದಲ್ಲಿ ಒಂದು ವಿಶಿಷ್ಟ ಕಪ್ಪು ಪಟ್ಟೆಯೊಂದಿಗೆ ತಿಳಿ ಹಸಿರು ಬಣ್ಣವಿರುತ್ತವೆ. ಅನುಕೂಲಕರ ಪರಿಸ್ಥಿತಿಗಳಲ್ಲಿ (ಉಷ್ಣಾಂಶ, ಆರ್ದ್ರತೆ), ಅವುಗಳ ಅಭಿವೃದ್ಧಿ ಸುಮಾರು 20 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಪ್ರೌಢ ಕೀಟಗಳು ಬೆಳ್ಳಿ ಅಥವಾ ಕಂದು ಬಣ್ಣವಾಗಿದ್ದು, 5 - 7 ಮಿಮೀ ಉದ್ದವಾಗಿರುತ್ತವೆ ಮತ್ತು ಹಗಲಿನ ಸಮಯದಲ್ಲಿ ಎಲೆಗಳ ನಡುವೆ ಅಡಗಿರುತ್ತದೆ. ಟುಟಾ ಅಬ್ಸೋಲ್ಯೂಟಾವು ಎಲೆಗಳ ಮೇಲೆ ಅಥವಾ ಮಣ್ಣಿನಲ್ಲಿ ಮೊಟ್ಟೆಗಳು, ಲಾರ್ವಾಗಳು ಅಥವಾ ಪ್ರೌಢ ಕೀಟದ ರೂಪದಲ್ಲಿ ಚಳಿಗಾಲವನ್ನು ಕಳೆಯಬಲ್ಲದು.


ಮುಂಜಾಗ್ರತಾ ಕ್ರಮಗಳು

  • ಕೀಟ ಮುಕ್ತ ಕಸಿಯನ್ನು ಬಳಸಿ.
  • ನಿಮ್ಮ ಗದ್ದೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರೌಢ ಕೀಟಗಳನ್ನು ಸೆರೆಹಿಡಿಯಲು ಜಿಗುಟಾದ ಬಲೆಗಳು ಅಥವಾ ಫೆರೋಮೋನ್ ಬಲೆಗಳನ್ನು ಬಳಸಿ.
  • ಹಾನಿಗೊಳಗಾದ ಸಸ್ಯಗಳು ಮತ್ತು ಸಸ್ಯದ ಭಾಗಗಳನ್ನು ತೆಗೆದು ನಾಶಮಾಡಿ.
  • ಗದ್ದೆ ಮತ್ತು ಸುತ್ತಲಿನಲ್ಲಿರುವ ರೋಗ ಬೇಗ ಬರುವ ಪರ್ಯಾಯ ಸಸ್ಯಗಳನ್ನು ನಿಯಂತ್ರಿಸಿ.
  • ಮಣ್ಣನ್ನು ಉಳುಮೆ ಮಾಡಿ ಅದನ್ನು ಪ್ಲ್ಯಾಸ್ಟಿಕ್ ಅಥವಾ ಹಸಿಗೊಬ್ಬರದಿಂದ ಮುಚ್ಚಿ ಅಥವಾ ಸೌರೀಕರಣವನ್ನು ಮಾಡಿ.
  • ಕೊಯ್ಲಿನ ನಂತರ ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ. ಹಿಂದಿನ ಬೆಳೆಗಳಿಂದ ತಗುಲಬಹುದಾದ ಸೋಂಕನ್ನು ತಪ್ಪಿಸಲು, ಮುಂದಿನ ಬೆಳೆಯನ್ನು ನೆಡುವ ಮೊದಲು ಕನಿಷ್ಠ 6 ವಾರಗಳವರೆಗೆ ಕಾಯಿರಿ.
  • ವ್ಯಾಪಕವಾದ ಬೆಳೆ ಸರದಿ ವ್ಯವಸ್ಥೆಯನ್ನು ಅಳವಡಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ