ಇತರೆ

ಧಾನ್ಯಗಳ ಎಲೆ ಜೀರುಂಡೆ

Oulema melanopus

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲಿನ ಹೊರಚರ್ಮದ ಮೇಲೆ ತೆಳ್ಳಗಿನ, ಉದ್ದವಾದ, ಬಿಳಿ ಗೆರೆಗಳು ಇರುವುದು.
  • ದೂರದಿಂದ, ಪೀಡಿತ ಹೊಲವು ಹಳದಿ ಮತ್ತು ಹಳೆಯದಾಗಿ ಕಾಣುತ್ತದೆ, ಆದರೆ ಸಾಮಾನ್ಯವಾಗಿ ಹಾನಿ ತೀವ್ರವಾಗಿರುವುದಿಲ್ಲ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ಈ ಜೀರುಂಡೆಯು ಓಟ್ಸ್, ಬಾರ್ಲಿ ಮತ್ತು ರೈಗಳಂತಹ ಧಾನ್ಯಗಳಿಗೆ ಬಲವಾದ ಆಕರ್ಷಣೆಯನ್ನು ಹೊಂದಿದೆ, ಆದರೆ ಅದರ ನೆಚ್ಚಿನ ಆಶ್ರಯ ಸಸ್ಯವೆಂದರೆ ಗೋಧಿ. ಇದು ಕಾರ್ನ್, ಹುಲ್ಲು ಜೋಳ ಮತ್ತು ಹುಲ್ಲುಗಳಂತಹ ವಿವಿಧ ಪರ್ಯಾಯ ಆಶ್ರಯ ಗಿಡಗಳನ್ನು ಸಹ ಹೊಂದಿದೆ. ಲಾರ್ವಾಗಳು ಎಲೆಗಳ ಮೇಲಿನ ಹೊರಚರ್ಮವನ್ನು ತಿನ್ನುತ್ತವೆ ಮತ್ತು ಇದರಿಂದ ಇಡೀ ಜೀವನ ಚಕ್ರಕ್ಕೆ ಮುಖ್ಯ ಹಾನಿ ಉಂಟಾಗುತ್ತದೆ. ಅವುಗಳ ಆಹಾರದ ಅಭ್ಯಾಸದ ಗುರುತೇನೆಂದರೆ, ಇವು ಕೆಳಭಾಗದಲ್ಲಿರುವ ಹೊರಪೊರೆಯ ತನಕ ಎಲೆ ಅಂಗಾಂಶಗಳನ್ನು ತೆಗೆದುಹಾಕುತ್ತವೆ ಮತ್ತು ಈ ಮೂಲಕ ಇದು ತೆಳುವಾದ, ಉದ್ದವಾದ, ಬಿಳಿ ಕಲೆಗಳು ಅಥವಾ ಗೆರೆಗಳನ್ನು ಉಂಟುಮಾಡುತ್ತವೆ. ಸೋಂಕಾದರೆ ಇವು ಅತೀ ಹೆಚ್ಚಿರುತ್ತವೆ. ಆದಾಗ್ಯೂ, ಸಾಮಾನ್ಯವಾಗಿ ವಯಸ್ಕ ಜೀರುಂಡೆಗಳು ತಿನ್ನುತ್ತಾ ತಿನ್ನುತ್ತಾ ಇತರ ಸಸ್ಯಗಳು ಅಥವಾ ಹೊಲಗಳಿಗೆ ವಲಸೆ ಹೋಗುತ್ತವೆ, ಅಂದರೆ ಒಂದೇ ಹೊಲಕ್ಕೆ ತೀವ್ರ ಹಾನಿ ಆಗುವುದು ಅಪರೂಪ. ದೂರದಿಂದ, ಪೀಡಿತ ಹೊಲವು ಹಳದಿ ಮತ್ತು ಹಳೆಯದಾಗಿ ಕಾಣುತ್ತದೆ, ಆದರೆ ಸಾಮಾನ್ಯವಾಗಿ ಹಾನಿ ಒಟ್ಟು ಪ್ರದೇಶದ 40% ನಷ್ಟು ಮೀರುವುದಿಲ್ಲ. ಕೆಲವು ಧಾನ್ಯ-ಬೆಳೆಯುವ ಪ್ರದೇಶಗಳಲ್ಲಿ ಜೀರುಂಡೆಯು ಗಮನಾರ್ಹ ಮತ್ತು ದೀರ್ಘಕಾಲಿಕ ಬೆಳೆ ಕೀಟ ಆಗಿರಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸ್ಟೆನೆರ್ನೆಮಾ ವಂಶದ ಕೆಲವು ಜಾತಿಗಳ ನೆಮಟೋಡ್ಗಳು ಪ್ರೌಢ ಕೀಟಗಳ ಮೇಲೆ ದಾಳಿ ಮಾಡುತ್ತವೆ ಎಂಬುದನ್ನು ತೋರಿಸಲಾಗಿದೆ, ಅದು ಸಹ ಮಣ್ಣಿನಲ್ಲಿ ಚಳಿಗಾಲವನ್ನು ಕಳೆಯುತ್ತವೆ ಮತ್ತು ಅವು ಸಂತಾನೋತ್ಪತ್ತಿ ಮಾಡುವುದನ್ನು ತಡೆಗಟ್ಟುತ್ತವೆ. ಆದಾಗ್ಯೂ, ಅವುಗಳ ಸಾಮರ್ಥ್ಯವು ತಾಪಮಾನವನ್ನು ಅವಲಂಬಿಸಿ ಬದಲಾಗಬಹುದು. ಕೆಲವು ಜೀರು೦ಡೆ(ಲೇಡಿ ಬಗ್) ಗಳು ಮೊಟ್ಟೆ ಮತ್ತು ಮರಿಹುಳುಗಳ ಮೇಲೆ ಸಹ ಪ್ರಭಕ್ಷಕಗಳಾಗುತ್ತವೆ. ಟ್ಯಾಸಿನ್ಡಿಡ್ ನೊಣವಾದ ಹೈಲಮೈಯೋಡ್ಸ್ ಟ್ರೈಯಾಂಗುಲರ್ ಗಳು ಪ್ರೌಢ ಕೀಟಗಳನ್ನು ಪರಾವಲಂಬಿಗೊಳಿಸುತ್ತವೆ ಮತ್ತು ಅವು ಓ. ಮೆಲನೊಪಸ್ನ ಸಂಖ್ಯೆಯನ್ನು ನಿಯಂತ್ರಿಸಲು ವಾಣಿಜ್ಯಿಕವಾಗಿ ಲಭ್ಯವಿವೆ. ಪ್ರತಿಯಾಗಿ, ಲಾರ್ವಾಗಳನ್ನು, ಪ್ಯಾರಾಸಿಟಾಯ್ಡ್ ಕಣಜಗಳಾದ ಡಿಯಾಪಾರ್ಸಿಸ್ ಕಾರ್ನಿಫರ್, ಲೆಮೊಫಾಗಸ್ ಕರ್ಟಿಸ್, ಮತ್ತು ಟೆಟ್ರಾಸ್ಟಿಕಸ್ ಜೂಲಿಸ್ಗಳಿಂದ ನಿಯಂತ್ರಿಸಬಹುದು. ಅಂತಿಮವಾಗಿ ಕಣಜವಾದ ಅನಫೆಸ್ ಫ್ಲಾವಿಪೆಸ್ ಮೊಟ್ಟೆಗಳನ್ನು ಪರಾವಲಂಬಿಗೊಳಿಸುತ್ತವೆ ಮತ್ತು ಅದು ಸಹ ಉತ್ತಮ ನಿಯಂತ್ರಣ ಏಜೆಂಟ್ ಆಗಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಕ್ರಿಯ ಘಟಕಾಂಶವಾದ ಗಾಮಾ-ಸೈಹಲೋಥ್ರಿನ್ ಹೊಂದಿರುವ ಕೀಟನಾಶಕಗಳು ಈ ಕೀಟದ ವಿರುದ್ಧ ಹೆಚ್ಚು ಸಮರ್ಥವಾಗಿವೆ ಏಕೆಂದರೆ ಇದು ಮೊಟ್ಟೆಗಳು ಮತ್ತು ಲಾರ್ವಾಗಳ ಮೇಲೆ ಪರಿಣಾಮ ಬೀರುತ್ತದೆ. ವಯಸ್ಕ ಕೀಟಗಳು ತಮ್ಮ ಮೊಟ್ಟೆಗಳನ್ನು ಇಡುವಾಗ ಅಥವಾ 50% ಮೊಟ್ಟೆಗಳು ಒಡೆದಾಗ ಸಿಂಪಡಿಸಬೇಕು. ದುರ್ಬಳಕೆಯು ವಾಸ್ತವವಾಗಿ ಓ. ಮೆಲನೋಪಸ್ ಸಂಖ್ಯೆಯನ್ನು ಹೆಚ್ಚಿಸಬಹುದು ಏಕೆಂದರೆ ಪರಭಕ್ಷಕಗಳೂ ಸಹ ಸಾಯುತ್ತವೆ. ಆರ್ಗನೋಫಾಸ್ಫೇಟ್ಗಳ (ಮ್ಯಾಲಥಿಯಾನ್) ಮತ್ತು ಪೈರೆಥ್ರಾಯ್ಡ್ಗಳಂತಹ ಇತರ ಕೀಟನಾಶಕಗಳನ್ನು ಸಹ ಓ. ಮೆಲನೋಪಸ್ ವಿರುದ್ಧ ಬಳಸಲಾಗಿದೆ.

ಅದಕ್ಕೆ ಏನು ಕಾರಣ

ಈ ಹಾನಿಯು ಮುಖ್ಯವಾಗಿ ಓಲೆಮಾ ಮೆಲನೊಪಸ್ ಎಂಬ ಜೀರುಂಡೆಯ ಲಾರ್ವಾಗಳಿಂದ ಉಂಟಾಗುತ್ತದೆ. ವಯಸ್ಕ ಕೀಡೆಯು ಸುಮಾರು 5 ಮಿಮೀ ಉದ್ದ ಮತ್ತು ಕೆಂಪು ತಲೆ ಮತ್ತು ಕಾಲುಗಳ ಜೊತೆ ಕಪ್ಪು-ನೀಲಿ ರೆಕ್ಕೆ ಕವಚಗಳನ್ನು ಹೊಂದಿರುತ್ತವೆ. ಅವು ಹೊಲದ ಹೊರಭಾಗಕ್ಕೆ ಹರಡುತ್ತವೆ ಮತ್ತು ಗಾಳಿ ಸಾಲುಗಳು, ಬೆಳೆಯ ಕೂಳೆ ಮತ್ತು ಮರದ ತೊಗಟೆಯ ಬಿರುಕುಗಳು ಮುಂತಾದ ಸಂರಕ್ಷಿತ ಪ್ರದೇಶಗಳಲ್ಲಿ ತಮ್ಮ ಚಳಿಗಾಲವನ್ನು ಕಳೆಯುತ್ತವೆ. ವಸಂತಕಾಲದಲ್ಲಿ ವಾತಾವರಣದ ಪರಿಸ್ಥಿತಿಗಳು ಸುಧಾರಿಸಿದಾಗ ಅಂದರೆ 10 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಅವು ಹೊರಹೊಮ್ಮುತ್ತವೆ. ಬೆಚ್ಚಗಿನ ವಸಂತಕಾಲಗಳು ಅದರ ಜೀವನ ಚಕ್ರಕ್ಕೆ ಅನುಕೂಲಕರವಾಗಿದ್ದು, ಶೀತ ಅವಧಿಗಳು ಅದನ್ನು ತಡೆಗಟ್ಟುತ್ತವೆ. ಸಂಯೋಗದ ನಂತರ, ಹೆಣ್ಣುಗಳು ಪ್ರಕಾಶಮಾನವಾದ ಹಳದಿ, ಸಿಲಿಂಡರಾಕಾರದ ಮೊಟ್ಟೆಗಳನ್ನು ಎಲೆಗಳ ಕೆಳಭಾಗದಲ್ಲಿ ಸಾಮಾನ್ಯವಾಗಿ ನಡುದಿಂಡಿನ ಉದ್ದಕ್ಕೂ ಇಡುತ್ತವೆ ಮತ್ತು ಇನ್ನೂ ಹೆಚ್ಚಿನ ಅವಧಿಯವರೆಗೆ (45-60 ದಿನಗಳು) ಅದನ್ನು ಮುಂದುವರೆಸುತ್ತವೆ. 7-15 ದಿನಗಳ ನಂತರ ಲಾರ್ವಾ ಮೊಟ್ಟೆಯೊಡೆದು ಹೊರಬರುತ್ತದೆ ಮತ್ತು ಎಲೆಗಳ ಮೇಲ್ಭಾಗದ ಹೊರಚರ್ಮವನ್ನು ತಿನ್ನಲು ಪ್ರಾರಂಭಿಸಿ, ಕೆಟ್ಟ ಹಾನಿಯನ್ನು ಉಂಟುಮಾಡುತ್ತದೆ. ಅವು ಬಿಳಿ ಅಥವಾ ಹಳದಿ, ಗೂನು ಬೆನ್ನಿನ ದೇಹ ಮತ್ತು ಕಪ್ಪು ತಲೆ ಹೊಂದಿದ್ದು ಆರು ಸಣ್ಣ ಕಾಲುಗಳನ್ನು ಹೊಂದಿರುತ್ತವೆ. 2-3 ವಾರಗಳ ಆಹಾರ ಸೇವನೆಯ ನಂತರ ಅವು ಪೂರ್ತಿ ಬೆಳೆದಾಗ. ಕೋಶಾವಸ್ಥೆ ತಲುಪುತ್ತವೆ ಮತ್ತು 20-25 ದಿನಗಳಲ್ಲಿ ವಯಸ್ಕ ಜೀರುಂಡೆಗಳನ್ನು ಹುಟ್ಟುಹಾಕುತ್ತವೆ ಮತ್ತು ಮತ್ತೆ ಚಕ್ರವನ್ನು ಪ್ರಾರಂಭಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ಬಳಸಿ.
  • ನಿಮ್ಮ ಪ್ರದೇಶದಲ್ಲಿ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕತಡೆ ನಿಯಂತ್ರಣ ಕ್ರಮಗಳ ಬಗ್ಗೆ ತಿಳಿಯಿರಿ.
  • ತಾಪಮಾನವು ಬೆಚ್ಚಗಾದಂತೆ, ವಸಂತಕಾಲದ ಆರಂಭದಲ್ಲಿ ಹೊಲಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ