Sesamia inferens
ಕೀಟ
ಮರಿಹುಳುಗಳ ಆಹಾರ ಚಟುವಟಿಕೆಯಿಂದಾಗಿ ಬೆಳೆಗಳಿಗೆ ಮುಖ್ಯವಾಗಿ ಹಾನಿಯಾಗುತ್ತದೆ. ಅವು ಕಾಂಡಗಳ ಅಥವಾ ಹೂ ಗೊಂಚಲುಗಳ ತಳವನ್ನು ಕೊರೆದು, ಒಳಗಿನ ಪದಾರ್ಥಗಳನ್ನು ತಿನ್ನುತ್ತವೆ. ಇದರಿಂದ, ಪೋಷಕಾಂಶಗಳು ಮತ್ತು ನೀರಿನ ಸಾಗಾಣಿಕೆಗೆ ತಡೆಯುಂಟಾಗುತ್ತದೆ. ಪತಂಗಗಳ ನಿರ್ಗಮ ರಂಧ್ರಗಳನ್ನು ಸಹ ಕಾಂಡಗಳು ಮತ್ತು ಹೂಗೊಂಚಲುಗಳ ಮೇಲೆ ಗಮನಿಸಬಹುದು. ಸರಬರಾಜು ಕೊರತೆ ಪೀಡಿತ ಅಂಗಾಂಶಗಳ ಬಾಡುವಿಕೆಗೆ ಕಾರಣವಾಗುತ್ತದೆ. ಉದ್ದವಾಗಿ ಸೀಳಿ ನೋಡಿದಾಗ, ಒಳಗೆ ಲಾರ್ವಾ ಮತ್ತು ಅವುಗಳ ವಿಸರ್ಜನೆಯ ಜೊತೆಗೆ, ಕಾಂಡಗಳು ಡೆಡ್ ಹಾರ್ಟ್ಸ್ ಲಕ್ಷಣವನ್ನು ತೋರಿಸುತ್ತವೆ..
ಟೆಲಿನೋಮಿಯಸ್ ಮತ್ತು ಟ್ರೈಕೋಗ್ರಾಮಾ ಗುಂಪಿಗೆ ಸೇರಿದ ಹಲವಾರು ಪ್ಯಾರಾಸಿಟಾಯಿಡ್ ಕಣಜಗಳು ಸೆಸಾಮಿಯಾ ಇನ್ಫರೆನ್ಸ್ ಮೊಟ್ಟೆಗಳ ಒಳಗೆ ತಮ್ಮ ಮೊಟ್ಟೆಗಳನ್ನು ಇರಿಸುವ ಮೂಲಕ ಕೀಟಗಳ ಸಂಖ್ಯೆ ನಿಯಂತ್ರಿಸಲು ಸಹಾಯ ಮಾಡುತ್ತವೆ. ಉದಾಹರಣೆಗೆ, ಮೊಳಕೆಯೊಡೆದ 12 ಮತ್ತು 22 ದಿನಗಳ ನಂತರ ಮೊಟ್ಟೆ ಪ್ಯಾರಾಸಿಟಾಯಿಡ್, ಟ್ರೈಕೊಗ್ರಾಮ ಚಿಲೋನಿಸ್ (ಹೆಕ್ಟೇರಿಗೆ 8 ಕಾರ್ಡುಗಳು)ಗಳನ್ನು ಬಿಡುಗಡೆ ಮಾಡುವುದು. ಕಣಜಗಳಾದ ಅಪಾಂಟೆಲೀಸ್ ಫ್ಲಾವಿಪೆಸ್, ಬ್ರಕಾನ್ ಚೈನೆನ್ಸಿಸ್ ಮತ್ತು ಸ್ಟರ್ಮಿಯೋಪ್ಸಿಸ್ ಇನ್ಫರೆನ್ಸ್ ಗಳು ಸಹಾ ಈ ಲಾರ್ವಾಗಳ ಪರಾವಲಂಬಿಗಳಾಗಿವೆ. ಅಂತಿಮವಾಗಿ, ಕ್ಸ್ಯಾಂಥೋಪಿಂಪ್ಲಾ ಮತ್ತು ಟೆಟ್ರಾಸ್ಟಿಕಸ್ ಜಾತಿಗಳು ಕೋಶಗಳನ್ನು ಆಕ್ರಮಣ ಮಾಡುತ್ತವೆ. ಶಿಲೀಂಧ್ರ ಬೆವೆರಿಯ ಬಸಿಯಾನಾ ಮತ್ತು ಬ್ಯಾಕ್ಟೀರಿಯಾ ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಗಳ ಸಾರಗಳನ್ನು ಆಧರಿಸಿದ ಜೈವಿಕ ಕೀಟನಾಶಕಗಳು ನೇರಳೆ ಕಾಂಡ ಕೊರಕವನ್ನು ಎದುರಿಸುವಲ್ಲಿ ಪರಿಣಾಮಕಾರಿಯಾಗಿವೆ.
ಲಭ್ಯವಿದ್ದಲ್ಲಿ ಜೈವಿಕ ನಿಯಂತ್ರಣ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಹರಳುಗಳು ಅಥವಾ ದ್ರವೌಷಧಗಳ ರೂಪದಲ್ಲಿ ಕೀಟನಾಶಕಗಳನ್ನು (ಕ್ಲೊರಾಂತ್ರಿನಿಲಿಪ್ರೋಲ್ ಉದಾಹರಣೆಗೆ) ಕೀಟ ಸಂಖ್ಯೆ ನಿಯಂತ್ರಿಸಲು ಒಂದು ರೋಗನಿರೋಧಕ ಚಿಕಿತ್ಸೆಯಾಗಿ ಎಲೆಗಳಿಗೆ ಹಾಕಬಹುದು.
ರೋಗಲಕ್ಷಣಗಳು ನೇರಳೆ ಕಾಂಡ ಕೊರಕ ಸೆಸಮಿಯಾ ಇನ್ಫರೆನ್ಸ್ ನ ಕೊರೆಯುವಿಕೆಯಿಂದ ಉಂಟಾಗುತ್ತವೆ. ಕಾಂಡಗಳ ಒಳಗೆ ಅಥವಾ ಮಣ್ಣಿನಲ್ಲಿರುವ ಸಸ್ಯಗಳ ಅವಶೇಷಗಳಲ್ಲಿ, ಕೋಶದ ರೂಪದಲ್ಲಿ ಇವು ಚಳಿಗಾಲವನ್ನು ಕಳೆಯುತ್ತವೆ. ವಸಂತ ಕಾಲದಲ್ಲಿ ಹವಾಮಾನದ ಪರಿಸ್ಥಿತಿಗಳು ಹಾನಿಕರವಲ್ಲದ ಸಂದರ್ಭದಲ್ಲಿ ಬೆಳೆದ ಕೀಟಗಳಾಗಿ ಹೊರಹೊಮ್ಮುತ್ತವೆ. ಪತಂಗಗಳು ತಲೆ ಮತ್ತು ದೇಹದಲ್ಲಿ ಕೂದಲುಳ್ಳ, ಸಣ್ಣ, ದಪ್ಪ ಮತ್ತು ತೆಳು ಕಂದು ಬಣ್ಣದಲ್ಲಿರುತ್ತವೆ. ಮುಂದಿನ ರೆಕ್ಕೆಗಳು ಬಂಗಾರದ ಅಂಚಿನೊಂದಿಗೆ ಒಣ ಹುಲ್ಲಿನ ಬಣ್ಣದಲ್ಲಿರುತ್ತವೆ. ಹಿಂದಿನ ರೆಕ್ಕೆಗಳು ಹಳದಿ ನಾಳಗಳ ಜೊತೆ ಅರೆಪಾರದರ್ಶಕ ಬಿಳಿ ಬಣ್ಣದಲ್ಲಿರುತ್ತವೆ. ಹೆಣ್ಣು ಕೀಟಗಳು ದುಂಡಾದ, ತೆಳು ಮತ್ತು ಹಳದಿ ಹಸಿರು ಬಣ್ಣದ ಮೊಟ್ಟೆಗಳನ್ನು ಪರಭಕ್ಷಕಗಳಿಂದ ರಕ್ಷಿಸಲು ಗುಂಪಿನಲ್ಲಿ ಹಲವು ಸಾಲುಗಳಲ್ಲಿ ಎಲೆ ಕವಚಗಳ ಹಿಂದೆ ಇಡುತ್ತವೆ. ಮರಿಹುಳುಗಳು ಸುಮಾರು 20 ರಿಂದ 25 ಮಿಮೀ ಉದ್ದವಿರುತ್ತವೆ. ಗುಲಾಬಿ ಬಣ್ಣದಲ್ಲಿರುತ್ತವೆ. ಕೆಂಪು-ಕಂದು ಬಣ್ಣದ ತಲೆಗಳಿರುತ್ತವೆ ಮತ್ತು ಯಾವುದೇ ಪಟ್ಟೆಗಳಿರುವುದಿಲ್ಲ. ಅವು ಕಾಂಡವನ್ನು ಕೊರೆದು, ಒಳಗಿನ ಅಂಗಾಂಶಗಳನ್ನು ತಿನ್ನುತ್ತವೆ.