ಇತರೆ

ಓರಿಯಂಟಲ್ ಆರ್ಮಿವರ್ಮ್

Mythimna separata

ಕೀಟ

ಸಂಕ್ಷಿಪ್ತವಾಗಿ

  • ಸಸಿಗಳು, ಎಲೆಗಳು ಮತ್ತು ಜೊಂಡುಗಳಲ್ಲಿ ಕೀಟ ತಿಂದಿರುವುದರಿಂದ ಹಾನಿ.
  • ಎಲೆಗಳ ಮೇಲೆ ಗರಗಸದ ರೀತಿಯ ನೋಟ.
  • ತಿಂದು ಬಿಟ್ಟಿರುವ ಹಾನಿಯ ಹತ್ತಿರ ತೇವ, ಕಂದು ಬಣ್ಣದ ಹಿಕ್ಕೆಗಳ ಗೆರೆಗಳು.
  • ಎಲೆಗಳು ಅಕಾಲಿಕವಾಗಿ ಉದುರುವುದು.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು

ಇತರೆ

ರೋಗಲಕ್ಷಣಗಳು

ಮರಿಹುಳುಗಳು ಎಳೆಯ ಸಸಿ ಅಥವಾ ಎಲೆಗಳನ್ನು ತಿನ್ನುತ್ತವೆ. ನಂತರದ ಹಂತಗಳಲ್ಲಿ ಅವು ಎಳೆಯ ಜೊಂಡುಗಳನ್ನು ಸಹ ಆಕ್ರಮಿಸಬಹುದು. ಅವು ಸಾಮಾನ್ಯವಾಗಿ ಎಲೆಯ ತುದಿಗಳನ್ನು ಮತ್ತು ಅಂಚುಗಳನ್ನು ತಿಂದು, ನಂತರ ಮಧ್ಯಭಾಗದ ಕಡೆಗೆ ಹೋಗುತ್ತವೆ ಮತ್ತು ಎಲೆಗಳು ಗರಗಸದ ರೀತಿ ಕಾಣುತ್ತವೆ. ತಿನ್ನುವುದರಿಂದಾದ ಹಾನಿಯ ಜಾಗಗಳಲ್ಲಿ ತೇವವಾದ, ಕಂದುಬಣ್ಣದ ಹಿಕ್ಕೆಯ ಸಾಲುಗಳನ್ನು ಗಮನಿಸಬಹುದು. ಸಂಖ್ಯೆಯು ಅಧಿಕವಾಗಿದ್ದಾಗ ವಿಪರ್ಣನವು ಆಗಬಹುದು. ಜೊಂಡುಗಳಿಗೆ ನೇರ ಹಾನಿಯಾಗುವುದು ಸಾಮಾನ್ಯವಾಗಿ ಕಡಿಮೆ ಏಕೆಂದರೆ ಕೀಟವು ಸಾಮಾನ್ಯವಾಗಿ ಕೆಳಗಿನ ಎಲೆಗಳಿಗೆ ಸಂಪೂರ್ಣವಾಗಿ ಹಾನಿಯಾದಾಗ ಮಾತ್ರ ಮೇಲಿನ ಸಸ್ಯ ಭಾಗಗಳನ್ನು ಆಕ್ರಮಿಸುತ್ತವೆ. ಒಂದು ಬೆಳೆಯ ಎಲೆಗಳನ್ನು ಸಂಪೂರ್ಣವಾಗಿ ಉದುರಿಸಿದ ನಂತರ ಅವು ಇತರ ಹೊಲಗಳಿಗೆ ದೊಡ್ಡ ಗುಂಪುಗಳಲ್ಲಿ ವಲಸೆ ಹೋಗುತ್ತವೆ, ಈ ಕಾರಣದಿಂದಲೇ ಅವುಗಳಿಗೆ ಈ ಹೆಸರು ಬಂದಿರುವುದು. ಮರಿಹುಳುಗಳು ಎಳೆಯ ಸಸಿ ಅಥವಾ ಎಲೆಗಳನ್ನು ತಿನ್ನುತ್ತವೆ. ನಂತರದ ಹಂತಗಳಲ್ಲಿ ಅವು ಎಳೆಯ ಜೊಂಡುಗಳನ್ನು ಸಹ ಆಕ್ರಮಿಸಬಹುದು. ಹುಲ್ಲುಗಳಂತಹ ಪರ್ಯಾಯ ಹೋಸ್ಟ್ ಗಳೂ ಸಹ ಅವುಗಳು ಹರಡಲು ಸಹಾಯ ಮಾಡುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಅಪಾನ್ಟೆಲೆಸ್ ರುಫಿಕ್ರಸ್ ಎಂಬ ಬ್ರಕೊನಿಡ್ ಕಣಜ ಮತ್ತು ಎಕ್ಸೊರಿಸ್ಟ ಸಿವಿಲ್ಸ್ ಎಂಬ ಟ್ಯಾಚಿನ್ಡಿಡ್ ನೊಣಗಳು ಲಾರ್ವಾಗಳ ಮೇಲೆ ಪರಾವಲಂಬಿಯಾಗುತ್ತವೆ ಮತ್ತು ಕೀಟ ಸಂಖ್ಯೆಯನ್ನು ಮತ್ತು ರೋಗದ ಸಂಭವನೀಯತೆಯನ್ನು ಯಶಸ್ವಿಯಾಗಿ ಕಡಿಮೆ ಮಾಡುತ್ತವೆ. ದೊಡ್ಡ ಕೀಟಗಳನ್ನು ಕೊಲ್ಲಲು ಸ್ಪೈನೊಸಡ್ ಅನ್ನು ಸಹ ಗಾಳಗಳಾಗಿ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಮತ್ತೊಂದು ಜೈವಿಕ ನಿಯಂತ್ರಣ ಮಾರ್ಗವೆಂದರೆ ರೋಗಕಾರಕ ಶಿಲೀಂಧ್ರಗಳು ಬೆವೆರಿಯಾ ಬಾಸ್ಸಿನಾ ಮತ್ತು ಇಶೇರಿ ಫ್ಯೂಮೊರೊಸೊಸ. ಅವು ಲಾರ್ವಾಗಳನ್ನು ಸುತ್ತುವರಿದು ಕೊಲ್ಲುತ್ತವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸೋಂಕು ತೀವ್ರವಾಗಿದ್ದರೆ ಮಾತ್ರ ಕೀಟನಾಶಕಗಳನ್ನು ಹಾಕಬೇಕು. ಸಿಪರ್ಮೆಥರಿನ್ ಅನ್ನು ಲಾರ್ವಾಗಳ ವಿರುದ್ಧ ಸಿಂಪಡಿಸಬಹುದಾಗಿದೆ, ಆದರೆ ದಿನದ ಕೊನೆಯಲ್ಲಿ. ಬೀಜಗಳು ಮೊಳಕೆಯೊಡೆದ 25-30 ದಿನಗಳ ನಂತರ ವೋರಲ್ಗಳಿಗೆ ಕೆಲವು ಕೀಟನಾಶಕಗಳನ್ನು ಹಾಕಿದರೂ ಸಹ ಅದು ಆರ್ಮ್ವರ್ಮ್ ಸಂಖ್ಯೆಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಕ್ಲೋರಿಪೆರಿಫೋಸ್ ಒಳಗೊಂಡಿರುವ ವಿಷಯುಕ್ತ ಗಾಳಗಳನ್ನು ಸಹ ಬಳಸಬಹುದು.

ಅದಕ್ಕೆ ಏನು ಕಾರಣ

ದೊಡ್ಡ ಕೀಟಗಳು ಕಂದು ಕೆಂಪು ಬಣ್ಣದ್ದಾಗಿದ್ದು ಅವುಗಳ ರೆಕ್ಕೆಗಳು 4-5 ಸೆಂಮೀ ಅಗಲ ಮತ್ತು ಥೊರಾಸಿಕ್ ಕೂದಲನ್ನು ಹೊಂದಿರುತ್ತವೆ. ಅವುಗಳ ಮುಂದಿನ ರೆಕ್ಕೆಗಳು ಬೂದು ಬಣ್ಣದಿಂದ ಹಳದಿ ಬಣ್ಣದ್ದಾಗಿರುತ್ತವೆ ಮತ್ತು ಅವುಗಳ ಮೇಲೆ ಕಪ್ಪು ಕಲೆಗಳು ಹರಡಿರುತ್ತವೆ. ಅವುಗಳಿಗೆ ಎರಡು ಸಣ್ಣ ಸ್ಪಷ್ಟ ಕಲೆಗಳು ಮತ್ತು ಅದರ ಮಧ್ಯದಲ್ಲಿ ಅಸ್ಪಷ್ಟವಾದ ಅಂಚು ಇರುತ್ತದೆ. ಅವುಗಳ ಹಿಂದಿನ ರೆಕ್ಕೆಗಳು ನೀಲಿ ಬೂದು ಬಣ್ಣದ್ದಾಗಿದ್ದು ಗಾಢವಾದ ಸಿರೆಗಳು ಮತ್ತು ಬಾಹ್ಯ ಅಂಚುಗಳನ್ನು ಕಾಣಬಹುದು. ಪ್ರೌಢ ಹುಳುಗಳು ರಾತ್ರಿ ಚಲಿಸುವಂಥವು ಮತ್ತು ಅವು ಬೆಳಕಿಗೆ ಬೇಗ ಆಕರ್ಷಿತವಾಗುತ್ತವೆ. ಹೆಣ್ಣು ಕೀಟಗಳು ತೆಳುವಾದ, ಕೆನೆ ರೀತಿಯ ಮೊಟ್ಟೆಗಳನ್ನು ಎಲೆಗಳ ಅಡಿಯಲ್ಲಿ ಇಡುತ್ತವೆ. ತಾಪಮಾನವು 15 °C ಗಿಂತ ಅಧಿಕವಾಗಿದ್ದಾಗ ಅವುಗಳು ಉತ್ತಮವಾಗಿ ಬದುಕುತ್ತವೆ ಮತ್ತು ಹೆಚ್ಚಿನ ಮೊಟ್ಟೆಗಳನ್ನು ಉತ್ಪತ್ತಿ ಮಾಡುತ್ತವೆ. ಮರಿಹುಳುಗಳು ಗಟ್ಟಿಯಾಗಿರುತ್ತವೆ ಮತ್ತು ಸಾಮಾನ್ಯವಾಗಿ ಹಸಿರು ಬಣ್ಣದಿಂದ ಕಂದು ಬಣ್ಣದ್ದಾಗಿರುತ್ತವೆ. ಅವುಗಳ ದೇಹದಲ್ಲಿ ಎಲ್ಲೆಡೆ ಉದ್ದನೆಯ ಪಟ್ಟೆಗಳು ಇರುತ್ತವೆ ಮತ್ತು ಪಕ್ಕೆಗಳಲ್ಲಿ ಆ ಪಟ್ಟೆಗಳು ಕಪ್ಪು ಬಣ್ಣದ ಚುಕ್ಕೆಗಳಾಗಿ ವಿಭಜಿಸಲಾಗಿರುತ್ತವೆ. ಅವು ಫಲವತ್ತಾದ ಭೂಮಿಗಳಲ್ಲಿ ರಾತ್ರಿಯ ವೇಳೆ ಓಡಾಡುತ್ತವೆ ಮತ್ತು ಹುಲುಸಾಗಿ ಬೆಳೆಯುತ್ತವೆ. ಅವುಗಳ ಸಂಖ್ಯೆ ಹೆಚ್ಚಾಗಲು ಸೂಕ್ತ ಸ್ಥಿತಿಗಳೆಂದರೆ, ದೀರ್ಘಕಾಲದ ಶುಷ್ಕ ಸಮಯದ ನಂತರ ಬರುವ ಭಾರೀ ಮಳೆ.


ಮುಂಜಾಗ್ರತಾ ಕ್ರಮಗಳು

  • ಕೀಟದ ಸಂಖ್ಯೆಯು ಹೆಚ್ಚಾಗುವುದನ್ನು ತಪ್ಪಿಸಲು ಬಿತ್ತನೆ ಮಾಡುವ ಸಮಯವನ್ನು ಸರಿಯಾಗಿ ನೋಡಿಕೊಳ್ಳಿ.
  • ಕೀಟದ ಯಾವುದೇ ಚಿಹ್ನೆಯನ್ನು ಕಂಡುಹಿಡಿಯಲು ನಿಮ್ಮ ಸಸ್ಯಗಳನ್ನು ನಿಯಮಿತವಾಗಿ ಪರಿಶೀಲಿಸಿ.
  • ಸಸ್ಯಗಳಲ್ಲಿ ಕಂಡುಬರುವ ಲಾರ್ವಾಗಳನ್ನು ಕೈಯಿಂದ ತೆಗೆದುಹಾಕಿ.
  • ಸೋಂಕಾಗದಂತೆ ನೋಡಿಕೊಳ್ಳಲು ಬೆಳಕಿನ ಅಥವಾ ಫೆರೋಮೋನ್ ಬಲೆಗಳನ್ನು ಬಳಸಿ.
  • ಹೊಲದ ಸುತ್ತ ಮುತ್ತವಿರುವ ಕಳೆಗಳನ್ನು ನಿಯಂತ್ರಿಸಿ.
  • ಮರಿಹುಳುಗಳು ಓಡಾಡುವುದನ್ನು ನಿಯಂತ್ರಿಸಲು ಸೋಂಕಿತ ಪ್ಲಾಟ್ ಗಳ ಸುತ್ತ ಕಾಲುವೆಗಳನ್ನು ತೋಡಿ.
  • ಮರಿಹುಳುಗಳನ್ನು ಮಣ್ಣಲ್ಲಿ ಮುಳುಗಿಸಲು ಬೀಜದ ಬೆಡ್ ಗಳ ಸುತ್ತ ನೀರು ಹರಿಸಿ.
  • ಹೊಲದಿಂದ ಬೆಳೆ ಉಳಿಕೆಗಳನ್ನು ತೆಗೆದುಹಾಕಿದ ನಂತರ ಸುಟ್ಟು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ