Cosmopolites sordidus
ಕೀಟ
ಸೋಂಕಿಗೊಳಗಾದ ಬಾಳೆಹಣ್ಣು ಸಸ್ಯಗಳಲ್ಲಿ ಮೊದಲ ರೋಗಲಕ್ಷಣಗಳೆಂದರೆ ತಿಳಿ ಹಸಿರು ಬಣ್ಣದ, ಸೊರಗಿದ ಮತ್ತು ಜೋತಾಡುವ ಎಲೆಗಳು. ಹಳೆಯ ಎಲೆಯ ಪೊರೆಗಳು ಅಥವಾ ಕಾಂಡದ ತಳದಲ್ಲಿ ತಿಂದು ಬಿಟ್ಟಿರುವ ತೂತುಗಳು ಅಥವಾ ಹಿಕ್ಕೆಯನ್ನು ಕಾಣಬಹುದು. ಕಾಂಡಗಳು ಮತ್ತು ಬೇರುಗಳ ಒಳಗೆ ಲಾರ್ವಾಗಳು ಕೊರೆದುಕೊಂಡು ಹೋಗುತ್ತವೆ, ಕೆಲವೊಮ್ಮೆ ಸಂಪೂರ್ಣ ಸಸ್ಯ ಭಾಗಗಳೊಳಗೆ ಹೋಗುತ್ತವೆ. ತೀವ್ರವಾಗಿ ಸೋಂಕಾದ ಅಂಗಾಂಶಗಳಲ್ಲಿ, ಶಿಲೀಂಧ್ರಗಳಿಂದ ಕೊಳೆತವುಂಟಾಗುತ್ತದೆ ಮತು ಇದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆಹಾರ ಸೇವನೆಯ ಹಾನಿ ಮತ್ತು ಅವಕಾಶವಾದಿ ರೋಗಾಣುಗಳಿಂದಾದ ವಸಾಹತುವಿನಿಂದ ನೀರು ಮತ್ತು ಪೌಷ್ಟಿಕಾಂಶದ ಸಾಗಣೆಯಲ್ಲಿ ತೊಂದರೆಯುಂಟಾಗುತ್ತದೆ ಮತ್ತು ಈ ಕಾರಣದಿಂದ ಎಲೆಗಳು ಒಣಗಿ ಅಕಾಲಿಕವಾಗಿ ಸಾಯುತ್ತವೆ. ಚಿಕ್ಕ ಸಸ್ಯಗಳು ಬೆಳೆಯುವುದಿಲ್ಲ ಮತ್ತು ದೊಡ್ಡ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸೋಂಕು ತೀವ್ರವಾದ ಸಂದರ್ಭಗಳಲ್ಲಿ, ಸೋಂಕಿಗೊಳಗಾದ ಸಸ್ಯಗಳು ಪ್ರತಿಕೂಲ ವಾತಾವರಣದಲ್ಲಿ ಗಾಳಿಗೆ ಹಾರಿಹೋಗುತ್ತವೆ. ಗೊಂಚಲುಗಳ ಗಾತ್ರ ಮತ್ತು ಸಂಖ್ಯೆಯಲ್ಲಿ ಗಣನೀಯವಾದ ಕಡಿತವುಂಟಾಗುತ್ತದೆ.
ಹಿಂದೆ, ಅಸಂಖ್ಯಾತ ಪರಭಕ್ಷಕಗಳನ್ನು ಕೀಟವನ್ನು ನಿಯಂತ್ರಿಸುವುದಕ್ಕೆ ಬಳಸಲಾಗುತ್ತಿತ್ತು, ಅವುಗಳಲ್ಲಿ ಕೆಲವು ಇರುವೆಗಳು ಮತ್ತು ಜೀರುಂಡೆಗಳು ಸೇರಿವೆ. ಈ ಪರಭಕ್ಷಕಗಳಲ್ಲಿ ಅತ್ಯಂತ ಯಶಸ್ವಿಯಾಗಿರುವ ಜೀರುಂಡೆಗಳೆಂದರೆ ಪ್ಲಾಸಿಯಸ್ ಜಾವನಸ್ ಮತ್ತು ಡಕ್ಟಿಲೋಸ್ಟೆರಸ್ ಹೈಡ್ರೋಫಿಲೋಯಿಡ್ಸ್. ನಾಟಿಗೆ ಮೊದಲು ಬೇರು ಮೊಳಕೆಗಳಿಗೆ ಬಿಸಿ ನೀರಿನ ಸಂಸ್ಕರಣೆ (43 °C ನಲ್ಲಿ 3 ಗಂಟೆ ಅಥವಾ 54 °C ನಲ್ಲಿ 20 ನಿಮಿಷ) ಮಾಡಿದರೆ ಅದೂ ಸಹ ಪರಿಣಾಮಕಾರಿಯಾಗಿರುತ್ತದೆ. ಬೇರು ಮೊಳಕೆಗಳನ್ನು ನಂತರ ಸಾಧ್ಯವಾದಷ್ಟು ಬೇಗ ಹೊಸ ತೋಟದಲ್ಲಿ ನಾಟಿ ಮಾಡಬೇಕು. ನಾಟಿ ಮಾಡುವ ಸಮಯದಲ್ಲಿ ಬೇರು ಮೊಳಕೆಗಳನ್ನು ನೀಮ್ ಬೀಜದ ದ್ರಾವಣದಲ್ಲಿ (ಆಜಾಡಿರಾಚ್ಟ ಇಂಡಿಕಾ) ನೆನೆಸಿದರೆ ಅದು ಕೂಡಾ ಈ ಸಸ್ಯಗಳನ್ನು ರೋಗದ ವಿರುದ್ಧ ರಕ್ಷಿಸುತ್ತದೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಸ್ಯದ ತಳದಲ್ಲಿ ಕೀಟನಾಶಕಗಳನ್ನು ಬಳಸುವ ಮೂಲಕ ಬೇರು ಕೊರಕಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಆರ್ಗನೋಫಾಸ್ಫೇಟ್ (ಕ್ಲೋರಿಫೊಸ್, ಮ್ಯಾಲಾಥಿಯಾನ್) ಗುಂಪಿನ ಕೀಟನಾಶಕಗಳು ಸಹ ಲಭ್ಯವಿವೆ ಆದರೆ ಅವುಗಳು ದುಬಾರಿ ಮತ್ತು ಅವು ಹ್ಯಾಂಡ್ಲರ್ ಮತ್ತು ಪರಿಸರಕ್ಕೆ ವಿಷಕಾರಿಯಾಗಬಹುದು.
ಕಾಸ್ಮೋಪಾಲೈಟ್ಸ್ ಸಾರ್ಡಿಡಸ್ ಎಂಬ ಕೀಟ ಮತ್ತು ಅದರ ಲಾರ್ವಾಗಳಿಂದ ಬೆಳೆಗೆ ಈ ಹಾನಿ ಉಂಟಾಗುತ್ತದೆ. ಪ್ರೌಢ ಹುಳುಗಳ ಬಣ್ಣ ಗಾಢ ಕಂದು ಅಥವಾ ಬೂದು ಕಪ್ಪಾಗಿರುತ್ತದೆ ಮತ್ತು ಅದಕ್ಕೊಂದು ಹೊಳೆಯುವ ರಕ್ಷಾಕವಚವಿರುತ್ತದೆ. ಅವು ಸಾಮಾನ್ಯವಾಗಿ ಸಸ್ಯದ ತಳದಲ್ಲಿ ಬೆಳೆ ಉಳಿಕೆಗಳು ಅಥವಾ ಎಲೆ ಕೋಶಗಳಲ್ಲಿ ಕಂಡುಬರುತ್ತವೆ. ಅವು ರಾತ್ರಿಯವೇಳೆ ಓಡಾಡುವ ಕೀಟಗಳಾಗಿದ್ದು ಹಲವು ತಿಂಗಳುಗಳ ಕಾಲ ಆಹಾರವಿಲ್ಲದೆ ಬದುಕಬಲ್ಲವು. ಹೆಣ್ಣು ಹುಳುಗಳು ಮಣ್ಣಿನಲ್ಲಿ ಬೆಳೆಗಳ ಉಳಿಕೆಗಳ ಮೇಲೆ ರಂಧ್ರಗಳಲ್ಲಿ ಬಿಳಿ, ಅಂಡಾಕಾರದ ಮೊಟ್ಟೆಗಳನ್ನು ಇಡುತ್ತವೆ ಅಥವಾ ಅವುಗಳನ್ನು ಎಲೆ ಪೊರೆಗಳಲ್ಲಿ ಹುದುಗಿಡುತ್ತವೆ. ತಾಪಮಾನ 12 °C ಗಿಂತಲೂ ಕಡಿಮೆಯಿದ್ದಾಗ ಮೊಟ್ಟೆಗಳ ಬೆಳವಣಿಗೆ ಆಗುವುದಿಲ್ಲ. ಮೊಟ್ಟೆಯೊಡೆದ ನಂತರ, ಸಣ್ಣ ಲಾರ್ವಾಗಳು ಬೇರುಗಳು ಅಥವಾ ಕಾಂಡದ ಅಂಗಾಂಶಗಳ ಒಳಗೆ ಕೊರೆದುಕೊಂಡು ಹೋಗಿ, ಸಸ್ಯಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಕೆಲವೊಮ್ಮೆ ಅವುಗಳು ಉದುರಿಹೋಗುತ್ತವೆ. ಅವಕಾಶವಾದಿ ರೋಗಕಾರಕಗಳು ಬೇರು ಕೊರಕಗಳಿಂದ ಸಸ್ಯಗಳಿಗಾದ ಗಾಯಗಳನ್ನು ಬಳಸಿಕೊಂಡು ಸೋಂಕುಂಟುಮಾಡುತ್ತವೆ. ಒಂದು ತೋಟದಿಂದ ಮತ್ತೊಂದಕ್ಕೆ ಮುಖ್ಯವಾಗಿ ಸೋಂಕಿತ ನಾಟಿ ವಸ್ತುಗಳ ಮೂಲಕ ಕೀಟ ಹರಡುತ್ತದೆ.