ಬಾಳೆಹಣ್ಣು

ಸ್ಯೂಡೋಸ್ಟೆಮ್ ವೀವಿಲ್

Odoiporus longicollis

ಕೀಟ

ಸಂಕ್ಷಿಪ್ತವಾಗಿ

  • ಎಲೆಯ ಪೊರೆಗಳ ತಳದಲ್ಲಿ ಅಥವಾ ಎಳೆಯ ಸಸ್ಯಗಳ ಕಾಂಡದ ಮೇಲೆ ಸಣ್ಣ ರಂಧ್ರಗಳು ಮತ್ತು ಜೆಲ್ಲಿ ಅಂಟು ರಸಸ್ರಾವಗಳು ಕಂಡುಬರುತ್ತವೆ.
  • ಮರಿಹುಳುಗಳು ಕಾಂಡಗಳ ಉದ್ದಕ್ಕೂ ಸುರಂಗ ಕೊರೆದುಕೊಂಡು ಹೋಗಿ, ಅಧಿಕವಾದ ಹಿಕ್ಕೆಯನ್ನು ಬಿಡುತ್ತವೆ.
  • ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳಬಹುದು.
  • ಕಾಂಡಗಳು ದುರ್ಬಲಗೊಳ್ಳುವುದರಿಂದ ಬಿರುಗಾಳಿ ಬೀಸಿದರೆ ಸಸ್ಯಗಳು ಮುರಿದು ಬೀಳುತ್ತವೆ.
  • ಗೊಂಚಲುಗಳು ಅಥವಾ ಹಣ್ಣುಗಳು ಸರಿಯಾಗಿ ಬೆಳೆಯುವುದಿಲ್ಲ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಸೋಂಕಿನ ಮೊದಲ ಚಿಹ್ನೆಗಳೆಂದರೆ ಎಲೆಗಳ ಪೊರೆಗಳ ತಳದಲ್ಲಿ ಅಥವಾ ಎಳೆಯ ಸಸ್ಯಗಳ ಕಾಂಡದಲ್ಲಿ ಸಣ್ಣ ರಂಧ್ರಗಳು ಮತ್ತು ಜೆಲ್ಲಿ ಅಂಟು ರಸಸ್ರಾವಗಳು. ಈ ರಂಧ್ರಗಳ ಸುತ್ತಲೂ ಕಂದು ಬಣ್ಣದ ಲಾರ್ವಾ ಹಿಕ್ಕೆಗಳನ್ನೂ ಕಾಣಬಹುದು. ಲಾರ್ವಾಗಳು ಕಾಂಡಗಳ ಉದ್ದಕ್ಕೂ ಸುರಂಗ ಕೊರೆದುಕೊಂಡು ಹೋಗಿ, ಗಂಭೀರ ಹಾನಿಯುಂಟುಮಾಡುತ್ತವೆ ಮತ್ತು ಇದರಿಂದ ಅಂಗಾಂಶಗಳಿಗೆ ನೀರು ಮತ್ತು ಪೋಷಕಾಂಶಗಳ ಹರಿವು ಕಡಿಮೆಯಾಗುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳಬಹುದು. ಗಂಭೀರವಾಗಿ ಸೋಂಕಾದಾಗ, ಕಾಂಡಗಳು ದುರ್ಬಲಗೊಳ್ಳುವುದರಿಂದ ಮಿಂಚು ಹೊಡೆದಾಗ ಅಥವಾ ಬಿರುಗಾಳಿ ಬೀಸಿದರೆ ಸಸ್ಯಗಳು ಮುರಿದು ಬೀಳುತ್ತವೆ. ಗಾಯಗಳಲ್ಲಿ ಅವಕಾಶವಾದಿ ರೋಗಕಾರಕಗಳು ಇರುವುದರಿಂದ ಅಂಗಾಂಶಗಳು ಬೇಗ ಬಣ್ಣ ಕಳೆದುಕೊಳ್ಳುತ್ತವೆ ಮತ್ತು ಕೆಟ್ಟ ವಾಸನೆಯನ್ನು ಹೊರಹಾಕುತ್ತವೆ. ಸೋಂಕಿತ ಸಸ್ಯಗಳಲ್ಲಿ ವೀವಿಲ್ ಗಳ ಎಲ್ಲಾ ಜೀವ ಹಂತಗಳು ವರ್ಷದುದ್ದಕ್ಕೂ ಇರುತ್ತವೆ. ಗೊಂಚಲುಗಳು ಅಥವಾ ಹಣ್ಣುಗಳು ಸರಿಯಾಗಿ ಬೆಳೆಯುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹಿಂದೆ, ಸ್ಟೆನೆರ್ನೆಮಾ ಕಾರ್ಪೋಕಪ್ಸೇ ಜಾತಿಗಳ ನೆಮಟೋಡ್ ಗಳನ್ನು ಅಥವಾ ಕೆಲವು ಜಾತಿಯ ಸಂಧಿಪದಿಗಳನ್ನು ವೀವಿಲ್ಗಳ ವಿರುದ್ಧ ಬಳಸಿ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆಯಲಾಗಿದೆ. ಮತ್ತೊಂದು ತಂತ್ರವೆಂದರೆ ಜೀರುಂಡೆಗಳಿಗೆ ರೋಗಕಾರಕಗಳ ಸೋಂಕನ್ನು ತಗುಲಿಸುವುದು, ಉದಾಹರಣೆಗೆ ಶಿಲೀಂಧ್ರ ರೋಗಕಾರಕ ಮೆಟಾಹಾರ್ಜಿಯಾಮ್ ಅನಿಸೊಪ್ಲಿಯಾದಿಂದ ಸೋಂಕು ತಗುಲಿಸುವುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ರೋಗನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಲಾರ್ವಾವನ್ನು ಕೊಲ್ಲಲು ಆರ್ಗನೋಫಾಸ್ಫರಸ್ ಸಂಯುಕ್ತಗಳನ್ನು ಹೊಂದಿರುವ ಕೀಟನಾಶಕಗಳನ್ನು ಕಾಂಡದೊಳಗೆ ತುಂಬಲಾಗುತ್ತದೆ. ಕೊಯ್ಲಿನ ನಂತರ, ಸೋಂಕಿತ ಕಾಂಡಗಳನ್ನು ತೆಗೆದುಹಾಕಿ ಮತ್ತು ಅಲ್ಲಿ ಉಳಿದಿರುವ ಮೊಟ್ಟೆಯಿಡಬಹುದಾದ ವೀವಿಲ್ಗಳನ್ನು ಕೊಲ್ಲಲು ಕೀಟನಾಶಕಗಳ (2 ಗ್ರಾಂ / ಲೀ) ಸಂಸ್ಕರಣೆ ಮಾಡಿ.

ಅದಕ್ಕೆ ಏನು ಕಾರಣ

ಪ್ರೌಢ ವೀವಿಲ್ಗಳು ಕಪ್ಪು ಬಣ್ಣದ್ದಾಗಿದ್ದು, ಸುಮಾರು 30 ಮಿಮೀ ಉದ್ದವಿರುತ್ತವೆ, ಮತ್ತು ಅವಕ್ಕೆ ಒಂದು ಚೂಪಾದ ತಲೆ ಮತ್ತು ಹೊಳೆಯುವ ರಕ್ಷಾಕವಚವಿರುತ್ತದೆ. ಅವುಗಳು ಪ್ರಧಾನವಾಗಿ ರಾತ್ರಿಯಲ್ಲಿ ಓಡಾಡುವ ಕೀಟಗಳು ಆದರೆ ತಂಪಾಗಿರುವ ತಿಂಗಳುಗಳು ಅಥವಾ ಮೋಡವಿರುವ ದಿನಗಳಲ್ಲಿ ಹಗಲಿನ ಸಮಯದಲ್ಲಿ ಸಹ ಕಂಡುಬರುತ್ತವೆ. ಬಾಳೆಹಣ್ಣು ಸಸ್ಯಗಳು ಬಿಡುಗಡೆ ಮಾಡಿದ ಬಾಷ್ಪಶೀಲ ವಸ್ತುಗಳಿಂದ ಅವು ಆಕರ್ಷಿತಗೊಳ್ಳುತ್ತವೆ. ಹೆಣ್ಣು ಕೀಟಗಳು ಎಲೆ ಪೊರೆಗಳನ್ನು ತುಂಡಾಗಿ ಕತ್ತರಿಸಿ ಬಿಳಿ ಕೆನೆ ರೀತಿಯ, ಅಂಡಾಕಾರದ ಮೊಟ್ಟೆಗಳನ್ನು ಒಳಭಾಗದಲ್ಲಿ ಮೇಲ್ಮೈ ಮೇಲೆ ಇಡುತ್ತವೆ. 5-8 ದಿನಗಳ ನಂತರ, ದಪ್ಪದಾದ, ಕಾಲುಗಳಿಲ್ಲದ ಮತ್ತು ಹಳದಿ ಬಿಳಿ ಬಣ್ಣದ ಲಾರ್ವಾಗಳು ಮೊಟ್ಟೆಯೊಡೆಯುತ್ತವೆ ಮತ್ತು ಎಲೆಯ ಕೋಶಗಳ ಕೋಮಲ ಅಂಗಾಂಶಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಅವು 8 ರಿಂದ 10 ಸೆಂಟಿಮೀಟರ್ ಉದ್ದದ ಅಗಲವಾದ ಸುರಂಗಗಳನ್ನು ಕೊರೆದು, ಕಾಂಡ, ಬೇರುಗಳು ಅಥವಾ ಗೊಂಚಲುಗಳ ಕಾಂಡಗಳನ್ನು ತಲುಪುತ್ತವೆ. ಪ್ರೌಢ ಹುಳುಗಳು ಚೆನ್ನಾಗಿ ಹಾರಬಲ್ಲವು ಮತ್ತು ಸಸ್ಯದಿಂದ ಸಸ್ಯಕ್ಕೆ ಸುಲಭವಾಗಿ ಚಲಿಸಬಲ್ಲವು ಮತ್ತು ಈ ರೀತಿ ಕೀಟದ ಪ್ರಸರಣೆ ಆಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣಿತ ಮೂಲಗಳಿಂದ ಶುದ್ಧವಾದ ನಾಟಿ ವಸ್ತುಗಳನ್ನು ಬಳಸುವುದನ್ನು ಮರೆಯಬೇಡಿ.
  • ಲಭ್ಯವಿದ್ದರೆ, ಅಧಿಕವಾಗಿ ನಿರೋಧಕ ಪ್ರಭೇದಗಳನ್ನು ನೆಡಿ.
  • ಸಸ್ಯದ ಎಲ್ಲಾ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಮುರಿದುಹೋದ ಮತ್ತು ಕೊಳೆತ ಸಸ್ಯಗಳನ್ನು ತೆಗೆದುಹಾಕಿ ಇಲ್ಲದಿದ್ದರೆ ಅವು ಪ್ರೌಢ ಹುಳುಗಳು ಸಂತಾನೋತ್ಪತ್ತಿ ಮಾಡುವ ಸಲುವಾಗಿ ಒಳ್ಳೆಯ ವಾತಾವರಣವನ್ನು ಒದಗಿಸುತ್ತವೆ.
  • ಉದ್ದವಾಗಿ ಕತ್ತರಿಸಿದ ಕಾಂಡಗಳನ್ನು ಹುಸಿ-ಬಲೆಗಳ ರೀತಿ ನೆಲದ ಮೇಲೆ ಇರಿಸಿ.
  • ಈ ಕತ್ತರಿಸಿದ ತುಂಡುಗಳು ಪ್ರೌಢ ಹೆಣ್ಣು ವೀವಿಲ್ಗಳನ್ನು ಆಕರ್ಷಿಸುತ್ತವೆ ಮತ್ತು ಆ ತುಂಡುಗಳು ಅವುಗಳ ಆಹಾರವಾಗಿ ಮತ್ತು ಮೊಟ್ಟೆ ಇಡುವ ಸ್ಥಳವಾಗಿ ಕೆಲಸಮಾಡುತ್ತವೆ.
  • ಮರಿಹುಳುಗಳು ಹೊರಹೊಮ್ಮಿದ ತಕ್ಷಣವೇ, ಈ ತುಂಡುಗಳು ಒಣಗುತ್ತವೆ ಮತ್ತು ಅಂತಿಮವಾಗಿ ಲಾರ್ವಾಗಳು ನಿರ್ಜಲೀಕರಣದ ಕಾರಣದಿಂದ ಸಾಯುತ್ತವೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ