ಹುಲ್ಲುಜೋಳ

ಹುಲ್ಲುಜೋಳದ ಸಣ್ಣ ಕೀಟ (ಸೋರ್ಗಮ್ ಮಿಡ್ಜ್)

Stenodiplosis sorghicola

ಕೀಟ

ಸಂಕ್ಷಿಪ್ತವಾಗಿ

  • ಅವುಗಳ ತುದಿಯಲ್ಲಿ ಸಣ್ಣ, ಪಾರದರ್ಶಕ ಸಣ್ಣ ಪೊರೆಹುಳು ಕೋಶಗಳೊಂದಿಗೆ ಖಾಲಿ ಅಥವಾ ಅಸ್ಪಷ್ಟ ಸ್ಪೈಕಲೆಟ್ಟುಗಳೊಂದಿಗೆ ಇರುತ್ತವೆ.ರೋಗಗ್ರಸ್ತ ಅಥವಾ ಸ್ಫೋಟಿತ ರೂಪದಲ್ಲಿ ಕಾಣುವ ಹೂಗೊಂಚಲು.
  • ಹಿಸುಕಿದಾಗ, ಮಿಡ್ಜ್ ಲಾರ್ವಾ ಅಥವಾ ಪೊರೆಹುಳು ದೇಹದ ಅಂಶಗಳಿಂದ ಬರುವ ಕೆಂಪು ಸ್ರಾವ ಕಾಣಿಸಿಕೊಳ್ಳುತ್ತದೆ .

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹುಲ್ಲುಜೋಳ

ರೋಗಲಕ್ಷಣಗಳು

ಲಾರ್ವಾಗಳು ಕಾಳಿನ ಹೊಟ್ಟಿನೊಳಗೆ ಬೆಳೆಯುತ್ತಿರುವ ಧಾನ್ಯಗಳನ್ನು ತಿನ್ನುತ್ತವೆ ಮತ್ತು ಅವುಗಳ ಬೆಳವಣಿಗೆಯನ್ನು ನಿಲ್ಲಿಸುತ್ತವೆ. ಇದರಿಂದಾಗಿ ಬೀಜಗಳು ಕುಗ್ಗುತ್ತವೆ ಮತ್ತು ವಿರೂಪಗೊಳ್ಳುತ್ತವೆ, ಖಾಲಿಯಾಗುತ್ತವೆ, ದುರ್ಬಲವಾಗುತ್ತವೆ ಮತ್ತು ನಿರರ್ಥಕವಾಗುತ್ತವೆ . ಪ್ರಬುದ್ಧ ಬೆಳೆಗಳಲ್ಲಿ, ಪೀಡಿತ ಹೂಗೊಂಚಲುಗಳು ಹಾಳಾದ ಅಥವಾ ಸ್ಫೋಟಗೊಂಡಂತೆ ಕಾಣುತ್ತದೆ. ಹಾನಿಗೊಳಗಾದ ಸ್ಪೈಕಲೆಟ್ಟುಗಳ ತುದಿಗೆ ಜೋಡಿಸಲಾದ ಸಣ್ಣ ಪಾರದರ್ಶಕ ಪೊರೆಹುಳು ಕೋಶಗಳನ್ನು ಅವು ಹೊಂದಿವೆ. ಹಿಸುಕಿದಾಗ, ಮಿಡ್ಜ್ ಲಾರ್ವಾ ಅಥವಾ ಪೊಪಿಯ ದೇಹ ಅಂಶಗಳಿಂದ ಹೊರಸೂಸುವ ಕೆಂಪು ಸ್ರಾವ ಕಾಣಿಸಿಕೊಳ್ಳುತ್ತದೆ. ಭಾರೀ ಸೋಂಕಿನಲ್ಲಿ ಇಡೀ ಮೇಲ್ಭಾಗವು ಸಹಜವಾದ ಧಾನ್ಯಗಳಿಲ್ಲದೆ ಖಾಲಿಯಾಗಿರಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಯುಪಿಲ್ಮಸ್, ಯೂಪೆಲ್ಮಿಡೇ, ಟೆಟ್ರಾಸ್ಟಿಕಸ್ ಮತ್ತು ಅಪ್ರೊಸ್ಟೋಸೆಟಸ್ (ಎ. ಡಿಪ್ಲೊಸಿಡಿಸ್, ಎ. ಕೊಮಿಹೋರ್ರೆನ್ಸಿಸ್, ಎ. ಗಾಲಾ) ಕುಟುಂಬದ ಸಣ್ಣ ಕಪ್ಪು ಪರಾವಲಂಬಿ ಕಣಜಗಳು ಎಸ್. ಸೊರ್ಗಿಕೋಲಾನ ಲಾರ್ವಾಗಳನ್ನು ತಿನ್ನುತ್ತವೆ ಮತ್ತು ಅದರ ಜನಸಂಖ್ಯೆಯನ್ನು ಕಡಿಮೆ ಮಾಡಲು ಇವುಗಳನ್ನು ಗದ್ದೆಗಳಲ್ಲಿ ಪರಿಚಯಿಸಬಹುದು.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಯಾವಾಗಲೂ ಸಮಗ್ರ ವಿಧಾನವನ್ನು ಪರಿಗಣಿಸಿ. ಹೊಲದಲ್ಲಿ ಮಿಡ್ಜಿನ ರಾಸಾಯನಿಕ ನಿಯಂತ್ರಣ ಕಷ್ಟವಾಗಬಹುದು, ಏಕೆಂದರೆ ಲಾರ್ವಾ, ಮರಿಹುಳು ಮತ್ತು ಮೊಟ್ಟೆಗಳನ್ನು ಸ್ಪೈಕಲೆಟ್ಟುಗಳ ಒಳಗೆ ರಕ್ಷಿಸಸಲ್ಪಟ್ಟಿರುತ್ತವೆ. ಬೆಳಿಗ್ಗೆ ಹೂಬಿಡುವ ಸಮಯದಲ್ಲಿ ಪ್ರೌಢ ಹುಳುವು ಹೊರಹೊಮ್ಮಿದಾಗ ಕೀಟನಾಶಕಗಳ ಬಳಕೆ ಮಾಡುವಂತೆ ಸರಿಯಾಗಿ ಸಮಯವನ್ನು ಯೋಜಿಸಬೇಕು. ಇತರ ಪರಿಸ್ಥಿತಿಗಳಲ್ಲಿ, ಚಿಕಿತ್ಸೆಯು ನಿಷ್ಪರಿಣಾಮಕಾರಿಯಾಗಿರುತ್ತದೆ. ಕ್ಲೋರಿಪಿರಿಫೊಸ್, ಸೈಫ್ಲಾಥರಿನ್, ಸಿಥಲೋಥರಿನ್, ಎಸ್ಫೆನ್ವಾಲೆರೇಟ್, ಮ್ಯಾಲಾಥಿಯಾನ್ ಅಥವಾ ಮೆಥೊಮೈಲ್ ಅನ್ನು ಹೊಂದಿರುವ ಫಾರ್ಮ್ಯುಲೇಶನ್ಸ್ ಅನ್ನು ಬಳಸಬಹುದು. ಸುಗ್ಗಿಯ ನಂತರ, ಹುಲ್ಲುಜೋಳದ (ಸೋರ್ಗಮ್) ಧಾನ್ಯಗಳನ್ನು ಸ್ಪೈಕಲೆಟ್ಟುಗಳಲ್ಲಿನ ಲಾರ್ವಾವನ್ನು ಕೊಲ್ಲಲು ಫಾಸ್ಫೈನ್ನೊಂದಿಗೆ ಫ್ಯೂಮಿಗೇಟ್ ಮಾಡಬಹುದು. ಇದು ಕೀಟಗಳು ಹೊಸ ಪ್ರದೇಶಗಳಿಗೆ ಹರಡುವ ಸಂದರ್ಭಗಳನ್ನು ಕಡಿಮೆ ಮಾಡುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಮುಖ್ಯವಾಗಿ ಸ್ಟೆನೋಡಿಪ್ಲೋಸಿಸ್ ಸೊರ್ಗಿಕೋಲಾ ಎಂಬ ಹುಲ್ಲುಜೋಳ (ಸೋರ್ಗಮ್) ಮಿಡ್ಜಿನ ಲಾರ್ವಾದಿಂದ ಉಂಟಾಗುತ್ತವೆ . ಪ್ರೌಢ ಕೀಟಗಳು ಸೊಳ್ಳೆ-ತರಹ ಇದ್ದು ಪ್ರಕಾಶಮಾನವಾದ ಕಿತ್ತಳೆ ಬಣ್ಣದ ದೇಹ, ಪಾರದರ್ಶಕ ರೆಕ್ಕೆಗಳು ಮತ್ತು ಉದ್ದನೆಯ ಆಂಟೆನಾಗಳನ್ನು ಹೊಂದಿರುತ್ತವೆ. ಉಷ್ಣತೆ ಮತ್ತು ಆರ್ದ್ರತೆಯು ಹೆಚ್ಚಿದಾಗ, ಅವು ಧಾನ್ಯದಲ್ಲಿನ ತಮ್ಮ ಸುಪ್ತಾವಸ್ಥೆಯಿಂದ (ಡೈಪಾಸ್) ಹೊರಬಂದು ಒಂದು ಗಂಟೆಯೊಳಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತವೆ. ಸ್ವಲ್ಪ ನಂತರ, ಹೆಣ್ಣು ಪ್ರತಿ ಸ್ಪೈಕಲೆಟ್ಟಿನಲ್ಲಿ 1 ರಿಂದ 5 ಸಣ್ಣ, ಸಿಲಿಂಡರ್ ಆಕಾರದ ಮತ್ತು ಪಾರದರ್ಶಕವಾದ ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು 2 ರಿಂದ 3 ದಿನಗಳಲ್ಲಿ ಮೊಟ್ಟೆಯೊಡೆಯುತ್ತವೆ ಮತ್ತು ಎಳೆಯ ವರ್ಣರಹಿತ ಮರಿಹುಳುಗಳು ಬೆಳೆಯುತ್ತಿರುವ ಧಾನ್ಯದ ಮೃದುವಾದ ಅಂಗಾಂಶಗಳನ್ನು ತಿನ್ನುತ್ತವೆ. 10-15 ದಿನಗಳ ಸತತ ಆಹಾರ ಸೇವನೆಯ ನಂತರ ಪ್ರೌಢ, ಗಾಢ-ಕಿತ್ತಳೆ ಬಣ್ಣದ ಮರಿಹುಳುಗಳು ಪ್ರಬುದ್ಧವಾಗಿ ಹೊರಹೊಮ್ಮುವ ಮತ್ತು ಮತ್ತೆ ಚಕ್ರವನ್ನು ಪ್ರಾರಂಭಿಸುಸುವ ಮೊದಲು , 3 ರಿಂದ 5 ದಿನಗಳ ಕಾಲ ಧಾನ್ಯದೊಳಗೆ ಪೊರೆಕಟ್ಟುತ್ತವೆ (ಪ್ಯೂಪೇಟ್) . ಸುಗ್ಗಿಯ ನಂತರ, ಧಾನ್ಯದಲ್ಲಿ ಇನ್ನೂ ಉಳಿದಿರುವ ಮರಿಗಳು ಸುಪ್ತಾವಸ್ಥೆಯನ್ನು (ಡೈಪಾಸ್) ಪ್ರವೇಶಿಸುತ್ತವೆ, ಅಲ್ಲಿ ಅವು 3 ವರ್ಷಗಳವರೆಗೆ ವಿಶ್ರಾಂತಿ ಪಡೆಯಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ಸಸ್ಯ ನಿರೋಧಕ ಅಥವಾ ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ಒಂದೇ ಸಮಯದಲ್ಲಿ ಮತ್ತು ಆಳದಲ್ಲಿ ಹುಲ್ಲುಜೋಳ (ಸೋರ್ಗಮ್ ) ನೆಡಿ.
  • ಋತುವಿನ ಆರಂಭದಲ್ಲಿ ನೆಡಿ.
  • ಕಾಡಿನ ಹುಲ್ಲುಜೋಳ (ಸೋರ್ಗಮ್) , ಜಾನ್ಸನ್ ಹುಲ್ಲು ಮತ್ತು ಪ್ರದೇಶದ ಸುತ್ತಲಿನ ಸುಡಾನ್ ಹುಲ್ಲು ಮೊದಲಾದ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ತೆಗೆದುಹಾಕಿ.
  • ಹೊಲದ ನೈರ್ಮಲ್ಯವನ್ನು ಕಾಪಾಡಿ.
  • ರೋಗ ಮತ್ತಷ್ಟು ಹರಡುವುದನ್ನು ತಪ್ಪಿಸಲು ಸೋಂಕು ಮುತ್ತಿಕೊಂಡಿರುವ ಸ್ಪೈಕಲೆಟ್ಟುಗಳನ್ನು ತೆಗೆದುಹಾಕಿ.
  • ಸುಗ್ಗಿಯ ನಂತರ ಯಾವುದೇ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಅಥವಾ ಉರಿಸಿ.
  • ಉತ್ತಮ ಬೆಳೆ ಸರದಿ (ಹತ್ತಿ, ನೆಲಕಡಲೆ, ಸೂರ್ಯಕಾಂತಿ ಅಥವಾ ಕಬ್ಬು) ಅಳವಡಿಸಿ.
  • ಪಾರಿವಾಳದ ಬಟಾಣಿ, ಹತ್ತಿ, ಸೋಯಾಬೀನ್, ಅಲಸಂದೆ, ಸ್ಯಾಫ್ಲವರ್ (ಕಾರ್ತಮಸ್ ಟಿಂಕ್ಟೋರಿಯಸ್) ಅಥವಾ ಇತರ ದ್ವಿದಳ ಧಾನ್ಯಗಳೊಂದಿಗೆ ಹುಲ್ಲುಜೋಳವನ್ನು ಮಧ್ಯಂತರವಾಗಿ ಬೆಳೆಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ