Chilo partellus
ಕೀಟ
ಸಸ್ಯಗಳ ಕೋಮಲ ಅಂಗಾಂಶಗಳನ್ನು ಚುಕ್ಕೆಕಾಂಡ ಕೊರಕಗಳ ಎಳೆಯ ಮರಿಹುಳಗಳು ತಿನ್ನುತ್ತವೆ. ಅವು ಎಲೆಗಳು ಮತ್ತು ಎಲೆಸುರುಳಿಗಳ ಒಳಗೆ ಸುರಂಗಗಳನ್ನು ಕೊರೆದು, ಅನಿಯಮಿತ ಕಲೆ, ರಂಧ್ರಗಳು ಮತ್ತು ಕಿಂಡಿಗಳನ್ನು ಉಂಟುಮಾಡುತ್ತವೆ. ಬೆಳೆದ ಲಾರ್ವಾಗಳು ಕಾಂಡ ಕೊರೆದು ಆಂತರಿಕ ಅಂಗಾಂಶಗಳನ್ನು ತಿನ್ನುತ್ತವೆ. ಇದರಿಂದ, ನೀರು ಮತ್ತು ಪೌಷ್ಟಿಕಾಂಶಗಳ ಸಾಗಣೆಗೆ ಅಡ್ಡಿಯುಂಟಾಗುತ್ತದೆ. ಈ ಆಹಾರ ಚಟುವಟಿಕೆಯು 'ಡೆಡ್ ಹಾರ್ಟ್' ರೋಗಲಕ್ಷಣಕ್ಕೆ ಕಾರಣವಾಗುತ್ತದೆ. ಇಲ್ಲಿ ಕಾಂಡವು ಟೊಳ್ಳಾಗಿದ್ದು ಒಳಗೆ ಮರಿಹುಳುಗಳು ಮತ್ತು ಅವುಗಳ ವಿಸರ್ಜನೆಗಳು ಮಾತ್ರ ಇರುತ್ತವೆ. ಸಸ್ಯಗಳ ಮೇಲ್ಭಾಗವು ಭಾಗಶಃ ಅಥವಾ ಸಂಪೂರ್ಣವಾಗಿ ಒಣಗುತ್ತದೆ. ಬೇಗ ದಾಳಿಗೆ ಒಳಗಾದ ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತವೆ ಮತ್ತು ಅವು ಬಗ್ಗಿ ಹೋಗಬಹುದು. ಬೆಳೆದ ಮರಿಹುಳುಗಳು ಜೊಂಡುಗಳ ಮೇಲೂ ವ್ಯಾಪಕವಾಗಿ ಸುರಂಗ ಕೊರೆಯುತ್ತವೆ. ಒಟ್ಟಾರೆಯಾಗಿ, ಈ ಆಹಾರ ಚಟುವಟಿಕೆ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾ ರೋಗದ ಸಂಭವತೆಯನ್ನು ಮತ್ತು ತೀವ್ರತೆಯನ್ನು ಹೆಚ್ಚಿಸುತ್ತದೆ.
ಪರಭಕ್ಷಕ ಕಣಜಗಳಾದ ಕೋಟೆಸಿಯಾ ಸೀಸಮಿಯಾ ಮತ್ತು ಕೋಟೆಸಿಯ ಫ್ಲಾವೈಪ್ ಗಳು ಚುಕ್ಕೆ ಕಾಂಡಕೊರಕದ ಮರಿಹುಳುಗಳೊಳಗೆ ಮೊಟ್ಟೆಗಳನ್ನು ಇಡುತ್ತವೆ. ಮತ್ತೊಂದು ಕಣಜ, ಕ್ಸಾಂತೋಪಿಂಪ್ಲಾ ಸ್ಟೆಮ್ಮೆಟರ್, ಕೀಟ ಕೋಶಾವಸ್ಥೆಯಲ್ಲಿದ್ದಾಗ ಆಕ್ರಮಿಸುತ್ತದೆ. ಇರುವೆಗಳು ಮತ್ತು ಇಯರ್ವಿಗ್ಸ್ ನೈಸರ್ಗಿಕ ಪರಭಕ್ಷಕಗಳಾಗಿವೆ. ಇವು ಸಂಖ್ಯಾ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿವೆ. ಅಂತಿಮವಾಗಿ, ಮೊಲಾಸಸ್ ಹುಲ್ಲು (ಮೆಲಿನಿಸ್ ಮಿನಿಟಿಫ್ಲೋರಾ) ಅಥವಾ ಹಸಿರೆಲೆ ಡೆಸ್ಮೋಡಿಯಮ್ (ಡೆಸ್ಮೊಡಿಯಮ್ ಇಂಟಾರ್ಟಮ್) ಸಸ್ಯಗಳು ಪತಂಗಗಳನ್ನು ಹಿಮ್ಮೆಟ್ಟಿಸುವ ಬಾಷ್ಪಶೀಲ ಏಜೆಂಟ್ ಗಳನ್ನು ಉತ್ಪತ್ತಿ ಮಾಡುತ್ತವೆ. ಬಾಸಿಲಸ್ ತುರಿಂಜಿಯೆನ್ಸಿಸ್, ಬಿಯುವೇರಿಯ ಬಾಸ್ಸಿನಾ ಅಥವಾ ಬೇವಿನನೆಣ್ಣೆಗಳನ್ನು ಆಧರಿಸಿದ ಔಷಧಗಳನ್ನು ಕೂಡ ಕೀಟವನ್ನು ನಿಯಂತ್ರಿಸಲು ಬಳಸಲಾಗುತ್ತದೆ.
ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನ ಇದ್ದರೆ ಮೊದಲು ಅದನ್ನು ಪರಿಗಣಿಸಿ. ಸಂಭಾವ್ಯ ಇಳುವರಿ ನಷ್ಟ ಮತ್ತು ಪ್ರದೇಶದ ಜೀವವೈವಿಧ್ಯಕ್ಕೆ ಆಗುವ ಹಾನಿಯನ್ನು ಕೀಟನಾಶಕಗಳ ಬಳಕೆಯೊಂದಿಗೆ ತೂಗಿ ನೋಡಿ. ಡೆಲ್ಟಮೆಥ್ರಿನ್ ಆಧರಿಸಿದ ಹರಳಿನ ರೂಪದ ಕೀಟನಾಶಕವನ್ನು ಎಲೆಗಳ ಗೊಂಚಲಿಗೆ ಹಾಕುವ ಮೂಲಕ ಹುಲ್ಲು ಜೋಳದ ಚುಕ್ಕೆ ಕಾಂಡ ಕೊರಕದ ವಿರುದ್ಧ ನಿಯಂತ್ರಣ ಸಾಧಿಸಬಹುದು.
ವಯಸ್ಕ ಪತಂಗಗಳು ತಿಳಿ ಕಂದು ಬಣ್ಣದಲ್ಲಿದ್ದು 20 ರಿಂದ 25 ಮಿಮೀ ಉದ್ದದ ರೆಕ್ಕೆಗಳನ್ನು ಹೊಂದಿರುತ್ತವೆ. ಮುಂದಿನ ರೆಕ್ಕೆಗಳು ಕೆಲವು ಗಾಢ ಬಣ್ಣದ ಆಕೃತಿಗಳನ್ನು ಹೊಂದಿದ್ದು ತಿಳಿ ಕಂದು ಬಣ್ಣದಲ್ಲಿರುತ್ತವೆ. ಅದೇ ಹಿಂದಿನ ರೆಕ್ಕೆಗಳು ಬಿಳಿಯಾಗಿರುತ್ತವೆ. ವಯಸ್ಕ ಪತಂಗಗಳು ರಾತ್ರಿ ಸಕ್ರಿಯವಾಗಿರುತ್ತವೆ ಮತ್ತು ದಿನದಲ್ಲಿ ಸಸ್ಯ ಮತ್ತು ಸಸ್ಯ ಉಳಿಕೆಗಳಲ್ಲಿ ವಿರಮಿಸುತ್ತವೆ. ಹೆಣ್ಣು ಕೀಟಗಳು ಎಲೆಯ ಮೇಲ್ಮೈ ಮೇಲೆ ಕೆನೆ ಬಿಳಿ ಮೊಟ್ಟೆಗಳನ್ನು 10 ರಿಂದ 80ರ ತಂಡವಾಗಿ ಇಡುತ್ತವೆ. ಮರಿಹುಳುಗಳು ಕೆಂಪು-ಕಂದು ಬಣ್ಣದ ತಲೆ ಮತ್ತು ಕಂದು ಬಣ್ಣದ ದೇಹವನ್ನು ಹೊಂದಿರುತ್ತವೆ. ಅವುಗಳ ಮೇಲೆ ದಟ್ಟವಾದ ಪಟ್ಟೆಗಳು ಉದ್ದಕ್ಕೂ ಇದ್ದು, ಹಿಂಭಾಗದಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಇದರಿಂದಾಗಿಯೇ ಈ ಹೆಸರು ಬಂದಿದೆ. ಆಶ್ರಯದಾತ ಸಸ್ಯಗಳ ವ್ಯಾಪ್ತಿಯು ವಿಶಾಲವಾಗಿದೆ. ಮತ್ತು ಇದು ಹುಲ್ಲುಜೋಳ, ರಾಗಿ ಮತ್ತು ಮೆಕ್ಕೆ ಜೋಳವನ್ನು ಒಳಗೊಂಡಿದೆ. ಹವಾಮಾನ ಪರಿಸ್ಥಿತಿಗಳು ಪತಂಗಗಳ ಜೀವನ ಚಕ್ರವನ್ನು ಗಣನೀಯವಾಗಿ ಪ್ರಭಾವಿಸುತ್ತವೆ. ಬೆಚ್ಚಗಿನ ಮತ್ತು ಆರ್ದ್ರ ಪರಿಸ್ಥಿತಿಗಳು ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ಕೀಟವು ಸಾಮಾನ್ಯವಾಗಿ ಸೆಕೆಯಿರುವ ತಗ್ಗು ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು 1500 ಮೀಟರ್ ಕ್ಕಿಂತ ಎತ್ತರದಲ್ಲಿ ಕಂಡುಬರುವುದು ವಿರಳ.