Leptinotarsa decemlineata
ಕೀಟ
ಕೊಲೊರೆಡೊ ಆಲೂಗೆಡ್ಡೆ ಜೀರುಂಡೆಯ ಪ್ರೌಢ ಮತ್ತು ಮರಿಗಳು ಎಲೆಗಳ ಅಂಚನ್ನು ತಿನ್ನುತ್ತವೆ ಮತ್ತು ಅಂತಿಮವಾಗಿ ಕಾಂಡಗಳು ಉದುರಿ ಬೀಳಬಹುದು. ಕಪ್ಪು ವಿಸರ್ಜನೆಗಳನ್ನು ಕೆಲವೊಮ್ಮೆ ಕಾಣಬಹುದು. ಈ ಅಂಶಗಳಿಗೆ ಒಡ್ಡಿದ ಆಲೂಗೆಡ್ಡೆ ಗೆಡ್ಡೆಗಳನ್ನೂ ಸಹ ಕೆಲವೊಮ್ಮೆ ತಿನ್ನಲಾಗುತ್ತದೆ. ಪ್ರೌಢ ಕೀಟಗಳು ಹಳದಿ-ಕಿತ್ತಳೆ ಬಣ್ಣ ಮತ್ತು ಅಂಡಾಕಾರದಲ್ಲಿರುತ್ತದೆ. ಅವುಗಳ ಅತ್ಯಂತ ವಿಶಿಷ್ಟ ವೈಶಿಷ್ಟ್ಯವೆಂದರೆ ಅವುಗಳ ಬಿಳಿ-ಕಂದು ಬೆನ್ನಿನ ಮೇಲೆ ಹತ್ತು ಕಪ್ಪು ಪಟ್ಟೆಗಳು ಇರುವುದು. ತಲೆಯ ಮೇಲೆ ತ್ರಿಕೋನದ ಕಪ್ಪು ಚುಕ್ಕೆ ಇರುತ್ತದೆ ಮತ್ತು ಎದೆಗೂಡಿನ ಮೇಲೆ ಅನಿಯಮಿತ ಕಪ್ಪು ಗುರುತುಗಳಿರುತ್ತವೆ. ಮರಿಹುಳುಗಳು ಜೀರುಂಡೆ-ತರಹವೇ ಕಾಣುತ್ತವೆ, ಅವುಗಳ ಕೆಂಪು ಬಣ್ಣದ "ಚರ್ಮ" ಮತ್ತು ಅವುಗಳ ಎರಡು ಪಾರ್ಶ್ವಗಳಲ್ಲಿ ಕಪ್ಪು ಬಣ್ಣದ ಚುಕ್ಕೆಗಳಿದ್ದು, ಈ ಲಕ್ಷಣವೇ ಅವನ್ನು ಗುರುತಿಸುವ ಒಂದು ವಿಧಾನ.
ಬ್ಯಾಕ್ಟೀರಿಯಾ ಕೀಟನಾಶಕವಾದ ಸ್ಪಿನೋಸಾಡ್ ಆಧರಿಸಿದ ಚಿಕಿತ್ಸೆಯನ್ನು ಮಾಡಿ. ಬ್ಯಾಕ್ಟೀರಿಯಮ್ ಬ್ಯಾಸಿಲಸ್ ತುರಿಂಗಿಯೆನ್ಸಿಸ್ ಕೆಲವು ಮರಿಹುಳದ ಹಂತಗಳ ವಿರುದ್ಧ ಪರಿಣಾಮಕಾರಿಯಾಗಿದೆ. ಪೆರಿಲಸ್ ಬಯೋಕ್ಯೂಲಾಟಸ್ ಮತ್ತು ನೆಮಟೋಡ್ ಪ್ರಿಸೆಚಸ್ ಯೂನಿಫಾರ್ಮಿಸ್ನ ಬೀಜಕಣಗಳೂ ಸಹ ಜೀರುಂಡೆಯನ್ನು ತಿನ್ನುತ್ತವೆ. ಪ್ಯಾರಾಸಿಟಾಯಿಡ್ ಕಣಜ ಎಡೋವಮ್ ಪುಟ್ಲರ್ ಮತ್ತು ಪ್ಯಾರಾಸಿಟಾಯ್ಡ್ ಫ್ಲೈ ಮೈಯೋಫರಸ್ ಡೊರಿಫೋರಾ ಸಹ ಕೊಲೊರೆಡೊ ಆಲೂಗೆಡ್ಡೆ ಜೀರುಂಡೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಅನೇಕ ಜೈವಿಕ ಚಿಕಿತ್ಸೆಗಳು ಸಾಧ್ಯವಿವೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕೀಟನಾಶಕಗಳನ್ನು ಸಾಮಾನ್ಯವಾಗಿ ಆಲೂಗೆಡ್ಡೆ ಜೀರುಂಡೆ ವಿರುದ್ಧ ಬಳಸಲಾಗುತ್ತದೆ ಆದರೆ ಕೀಟಗಳ ಜೀವನ ಚಕ್ರದ ಕಾರಣದಿಂದ ಇದಕ್ಕೆ ಪ್ರತಿರೋಧವು ವೇಗವಾಗಿ ಬೆಳೆಯಬಹುದು. ಇಮಿಡಾಕ್ಲೋಪ್ರಿಡ್ ಮತ್ತು ನಿಯೋನಿಕೊನಾಯ್ಡ್ಸ್ ಅನ್ನು ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಬಳಸಲಾಗುತ್ತದೆ.
ಪ್ರೌಢ ಆಲೂಗೆಡ್ಡೆ ಜೀರುಂಡೆಗಳು ಸೂರ್ಯನಿಂದ ರಕ್ಷಿಸಲ್ಪಟ್ಟ ಮಣ್ಣಿನ ಆಳದಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಅವು ತಮ್ಮ ಪೊರೆಯಿಂದ ವಸಂತಕಾಲದಲ್ಲಿ ಹೊರಹೊಮ್ಮುತ್ತವೆ ಮತ್ತು ಎಳೆ ಸಸ್ಯಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಹೆಣ್ಣು ಕೀಟಗಳು ಕಿತ್ತಳೆ, ಉದ್ದವಾದ ಅಂಡಾಕಾರದ ಮೊಟ್ಟೆಗಳನ್ನು ಎಲೆಯ ಕೆಳಭಾಗದಲ್ಲಿ 20 ರಿಂದ 60 ರವರೆಗಿನ ಗುಂಪುಗಳಲ್ಲಿ ಇಡುತ್ತವೆ. ಮರಿ ಮಾಡುವ ಸಮಯದಲ್ಲಿ, ಮರಿಹುಳುಗಳು ಎಲೆಗಳ ಮೇಲೆ ನಿರಂತರವಾಗಿ ಆಹಾರವನ್ನು ತಿನ್ನುತ್ತವೆ. ತಮ್ಮ ಬೆಳವಣಿಗೆಯ ಕೊನೆಯಲ್ಲಿ, ಅವು ಎಲೆಗಳಿಂದ ಇಳಿದು ಮಣ್ಣಿನಲ್ಲಿ ಬಿಲ ಕೊರೆದು ಗೋಳಾಕಾರದ ಕೋಶವನ್ನು ನಿರ್ಮಿಸಿ ಹಳದಿ ಬಣ್ಣದ ಪೊರೆಹುಳುಗಳಾಗಿ ಮಾರ್ಪಡುತ್ತವೆ.