ಎಲೆಕೋಸು

ಸಣ್ಣ ಮತ್ತು ದೊಡ್ಡ ಕ್ಯಾಬೇಜ್ ವೈಟ್

Pieris brassicae

ಕೀಟ

ಸಂಕ್ಷಿಪ್ತವಾಗಿ

  • ಸಸ್ಯಗಳ ಎಲೆಗಳ ಕೆಳಭಾಗದಲ್ಲಿ ಮತ್ತು ಹಸಿರು-ಹಳದಿ ಮೊಟ್ಟೆಗಳ ಸುತ್ತ ಮಿನುಗುತ್ತಿರುವ ಬಿಳಿ ಚಿಟ್ಟೆಗಳು ಕಾಣುವವು.
  • ಮದ್ಯ ಕತ್ತರಿಸಿದಾಗ ಹೊರ ಎಲೆಗಳು ಮತ್ತು ಎಲೆಕೋಸು ಮೇಲ್ಭಾಗದಲ್ಲಿ ಹಾನಿ ಕಾಣುತ್ತದೆ.
  • ಮರಿಹುಳುಗಳು ಮತ್ತು ಅವುಗಳ ಹಿಕ್ಕೆಗಳೂ ಸಹ ಸಸ್ಯಗಳ ಮೇಲೆ ಕಂಡುಬರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಎಲೆಕೋಸು

ರೋಗಲಕ್ಷಣಗಳು

ಈ ಚಿಟ್ಟೆಗಳು ಬಹಳ ವಿಶಿಷ್ಟವಾಗಿದ್ದು, ಅವುಗಳ ಮೊಟ್ಟೆಗಳನ್ನು ಇಡಲು ಸರಿಯಾದ ಪ್ರದೇಶವನ್ನು ನೋಡಲು ಅವು ಸಸ್ಯಗಳ ಸುತ್ತಲೂ ಹಾರಾಡುತ್ತವೆ. ಪ್ರದೇಶದ ಸಂಪೂರ್ಣ ಮೇಲ್ವಿಚಾರಣೆಯು ಎಲೆಗಳ ಕೆಳಭಾಗದಲ್ಲಿ ಹಸಿರು-ಹಳದಿ ಮೊಟ್ಟೆಗಳ ಉಪಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಹೊರಗಿನ ಎಲೆಗಳಿಗೆ ಹಾನಿಯಾಗುವುದು ಅವುಗಳ ಉಪಸ್ಥಿತಿಯ ಸ್ಪಷ್ಟ ಸಂಕೇತವಾಗಿದೆ. ಹೊರ ಎಲೆಗಳಲ್ಲಿನ ರಂಧ್ರಗಳ ಪಕ್ಕದಲ್ಲಿ, ಮಧ್ಯ ಕತ್ತರಿಸಿದಾಗ ಎಲೆಕೋಸು ತಲೆಯ ಹಾನಿ ಒಳಗಿನ ಎಲೆಗಳಲ್ಲಿ ಕಂಡುಬರುತ್ತದೆ. ಮರಿಹುಳುಗಳು ಮತ್ತು ಅವುಗಳ ಹಿಕ್ಕೆಗಳೂ ಸಹ ಸಸ್ಯಗಳ ಮೇಲೆ ಕಂಡುಬರುತ್ತದೆ. ಎಲ್ಲಾ ವಿಧದ ಬ್ರಾಸ್ಸಿಕಾ ಬೆಳೆಗಳಿಗೆ ಪರಿಣಾಮ ಬೀರುತ್ತವೆ, ಅವುಗಳೆಂದರೆ ಎಲೆಕೋಸುಗಳು, ಹೂಕೋಸು, ಬ್ರಸಲ್ಸ್ ಮೊಗ್ಗುಗಳು, ಸ್ವೀಡ್ ಮತ್ತು ಟರ್ನಿಪ್ಗಳು. ಕೆಲವು ಕಳೆಗಳಿಗೂ ಸಹ ಪರಿಣಾಮ ಬೀರಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ನೈಸರ್ಗಿಕವಾಗಿ ಉಂಟಾಗುವ ಬ್ಯಾಕ್ಟೀರಿಯಾವನ್ನು ಆಧರಿಸಿರುವ ಉತ್ಪನ್ನಗಳು, ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಅಥವಾ ಸಕರೊಪೊಲಿಸ್ಪೊರಾ ಸ್ಪಿನೋಸಾ (ಸ್ಪಿನೊಸಾಡ್), ಎರಡೂ ಜಾತಿಗಳ ಮರಿಹುಳುಗಳನ್ನು ಕೊಲ್ಲುತ್ತವೆ ಮತ್ತು ಮೇಲಿನ ಮತ್ತು ಕೆಳಗಿನ ಎಲೆ ಮೇಲ್ಮೈಗಳಲ್ಲಿ ಸಂಪೂರ್ಣವಾಗಿ ಸಿಂಪಡಿಸಿದಾಗ ಇದು ಬಹಳ ಪರಿಣಾಮಕಾರಿಯಾಗಿದೆ. ಈ ಕೀಟನಾಶಕಗಳು ವಾತಾವರಣದಲ್ಲಿ ಉಳಿಯುವುದಿಲ್ಲ. ರೋಗಕಾರಕ ನೆಮಟೋಡ್, ಸ್ಟೈನೆರ್ನೆಮಾ ಕಾರ್ಪೋಕಸೇ, ಕ್ಯಾಟರ್ಪಿಲ್ಲರ್ಗಳಿಗೆ ಸಹ ಲಭ್ಯವಿರುತ್ತದೆ ಮತ್ತು ಎಲೆಗಳು ಆರ್ದ್ರವಾಗಿದ್ದಾಗ ಬಳಸಬೇಕು, ಉದಾಹರಣೆಗೆ ತಂಪು ಮಂದ ಹವಾಮಾನದಲ್ಲಿ ಬಳಸಬೇಕು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳು ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸಕ್ರಿಯ ಪದಾರ್ಥ ಹೊಂದಿರುವ ಪೈರೆಥ್ರಮ್, ಲ್ಯಾಮ್ಡಾ -ಸೈಹಲೋಥ್ರಿನ್ ಅಥವಾ ಡೆಲ್ಟಾಮೆಥ್ರೈನ್ಗಳನ್ನು ಆಧರಿಸಿದ ಉತ್ಪನ್ನಗಳನ್ನು ಹುಳುಗಳಿಗೆ ವಿರುದ್ಧವಾಗಿ ಬಳಸಬಹುದು. ಪೈರೆಥ್ರಮ್ನ ಸಾರವನ್ನು ಹಲವು ಬಾರಿ ಮತ್ತು ಸುಗ್ಗಿಯ ಮೊದಲು ಒಂದು ದಿನದವರೆಗೆ ಹಾಕಬಹುದು. ಲ್ಯಾಮ್ಡಾ -ಸೈಹಲೋಥರಿನ್ ಮತ್ತು ಡೆಲ್ಟಾಮೆಥ್ರಿನ್ಗೆ ಗರಿಷ್ಠ 2 ಅನ್ವಯಿಕೆಗಳನ್ನು ಶಿಫಾರಸು ಮಾಡಲಾಗಿದೆ ಮತ್ತು ಏಳು ದಿನಗಳ ಸುಗ್ಗಿಯ ಮಧ್ಯಂತರವಿರಬೇಕು.

ಅದಕ್ಕೆ ಏನು ಕಾರಣ

ಎರಡು ಜಾತಿಯ ಚಿಟ್ಟೆಗಳು, ಪಿಯರಿಸ್ ರಾಪ್ ಮತ್ತು ಪಿ. ಬ್ರಾಸ್ಸಿಕಾ (ಅನುಕ್ರಮವಾಗಿ ಸಣ್ಣ ಮತ್ತು ದೊಡ್ಡ ಕ್ಯಾಬೇಜ್ ವೈಟ್) ಮರಿಹುಳುಗಳು ಈ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ. ಅವುಗಳ ಜೀವನ ಚಕ್ರವು ಸ್ವಲ್ಪಮಟ್ಟಿಗೆ ಬದಲಾಗುತ್ತದೆ ಆದರೆ ಒಟ್ಟಾರೆಯಾಗಿ ಹೋಲುತ್ತದೆ. ಚಿಟ್ಟೆಗಳು ಕಪ್ಪು ಬಣ್ಣದ ದೇಹವನ್ನು ಮತ್ತು ಮಿನುಗುವ ಬಿಳಿ ರೆಕ್ಕೆಗಳನ್ನು ಮುಂದಿನ ರೆಕ್ಕೆಗಳಲ್ಲಿನ ಸ್ಪಷ್ಟವಾದ ಕಪ್ಪು ತುದಿಯೊಂದಿಗೆ ಹೊಂದಿರುತ್ತದೆ(ಮತ್ತು ಹೆಣ್ಣು ಚಿಟ್ಟೆಳಲ್ಲಿ ಎರಡು ಕಪ್ಪು ಚುಕ್ಕೆಗಳು). ಕೆಲವು ವಾರಗಳ ನಂತರ ಪುಪಲ್ ಹಂತದಿಂದ ಹೊರಹೊಮ್ಮುವವು, ಹೆಣ್ಣುಗಳು ಎಲೆಗಳ ಕೆಳಭಾಗದಲ್ಲಿ ಹಳದಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯೊಡೆದು ಹೊರಬಂದ ನಂತರ, ಮರಿಹುಳುಗಳು ಸಸ್ಯ ಅಂಗಾಂಶಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಅವುಗಳ ಸಣ್ಣ ಬಿಳಿ ಚಿಟ್ಟೆ ಮರಿಹುಳುಗಳು ಎಲೆಕೋಸುಗಳ ಮದ್ಯದಲ್ಲಿ ತೂತು ಮಾಡಿ ಹೆಚ್ಚು ಹಾನಿಮಾಡುತ್ತವೆ. ಅವುಗಳು ತಿಳಿ ಹಸಿರು ಬಣ್ಣದವಾಗಿದ್ದು ಮತ್ತು ವೆಲ್ವೆಟ್ ತರಹದ ಕೂದಲಿನಿಂದ ಅವುಗಳ ದೇಹ ಮುಚ್ಚಿರುತ್ತವೆ. ಅವುಗಳಲ್ಲಿ ಪ್ರೌಢ ಕೀಟಗಳು ಅವುಗಳ ದೇಹದಲ್ಲಿ ಸ್ಪಷ್ಟ ಕೂದಲಿನೊಂದಿಗೆ ಹಳದಿ ಮತ್ತು ಕಪ್ಪು ಬಣ್ಣದಲ್ಲಿರುತ್ತವೆ ಮತ್ತು ಅವುಗಳು ಹೊರ ಎಲೆಗಳ ಮೇಲೆ ಹೆಚ್ಚಾಗಿ ಉಳಿಯುತ್ತವೆ ಮತ್ತು ಅದನ್ನು ಆಹಾರವಾಗಿ ತಿನ್ನುತ್ತವೆ.


ಮುಂಜಾಗ್ರತಾ ಕ್ರಮಗಳು

  • ರೋಗದ ಚಿಹ್ನೆಗಳಿಗೆ, ವಿಶೇಷವಾಗಿ ಎಲೆಗಳ ಕೆಳಭಾಗದ ಪ್ರದೇಶವನ್ನು ನಿಯಮಿತವಾಗಿ ಪರಿಶೀಲಿಸಿ.
  • ಮೊಟ್ಟೆ ಗುಂಪು ಹೊಂದಿರುವ ಯಾವುದೇ ಎಲೆಯನ್ನೂ ತೆಗೆದುಹಾಕಿ.
  • ಕೈಗಳಿಂದ ಎಲೆಗಳ ಮರಿಹುಳುಗಳನ್ನು ಆರಿಸಿ ಮತ್ತು ತೆಗೆದುಹಾಕಿ.
  • ಕೀಟ-ನಿರೋಧಕ ಜಾಲರಿಯೊಂದಿಗೆ ಸಸ್ಯಗಳನ್ನು ಮುಚ್ಚುವ ಮೂಲಕ ಹೆಣ್ಣು ಮೊಟ್ಟೆಗಳು ಇಡುವುದನ್ನು ತಡೆಯಿರಿ.
  • ಪ್ರಯೋಜನಕಾರಿ ಕೀಟಗಳು ಮತ್ತು ಪಕ್ಷಿಗಳ ಮೇಲೆ ಪರಿಣಾಮ ಬೀರುವ ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ.
  • ಎಲೆಕೋಸು ಹೊಲಗಳ ಬಳಿ ರೋಗಕ್ಕೆ ಒಳಗಾಗುವ ಸಸ್ಯಗಳ ನಾಟಿ ತಪ್ಪಿಸಿ.
  • ಪರ್ಯಾಯ ಹೋಸ್ಟುಗಳಾಗಿ ಕೆಲಸ ಮಾಡುವುದರಿಂದ ಕಳೆಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ