ಇತರೆ

ಬ್ರೈಟ್ ಲೈನ್ ಬ್ರೌನ್ ಐ

Lacanobia oleracea

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡಗಳು ಮತ್ತು ಹಣ್ಣುಗಳನ್ನು ತಿನ್ನುವ ಮೂಲಕ ಅವಕ್ಕೆ ಹಾನಿ ಉಂಟಾಗುತ್ತದೆ.
  • ಕೊರೆತಗಳು, ರಂಧ್ರಗಳು, ಮೇಲ್ಮೈಯನ್ನು ಕೆರೆಯುವಿಕೆ.
  • ಅವಕಾಶವಾದಿ ರೋಗಕಾರಕಗಳಿಂದ ವಸಾಹತು.
  • ಪತಂಗಕ್ಕೆ ತಿಳಿ ಕಂದು ಬಣ್ಣದ ದೇಹ, ಗಾಢ ಬಣ್ನದ ಜೊತೆ ತಿಳಿ ಕಿತ್ತಳೆ ಬಣ್ಣದ ಮುಂದಿನ ರೆಕ್ಕೆಗಳು, ಕಿಡ್ನಿ ರೀತಿಯ ಮಚ್ಚೆಗಳಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

6 ಬೆಳೆಗಳು
ಎಲೆಕೋಸು
ಕರ್ರಂಟ್
ಲೆಟಿಸ್
ಬಟಾಣಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಎಳೆಯ ಎಲೆಗಳು, ಕಾಂಡಗಳು, ಹೂವುಗಳು ಮತ್ತು ಹಣ್ಣುಗಳ ಮೇಲೆ ತಿಂದು ಹಾನಿಯಾಗಿರುವುದು ಗೋಚರಿಸುತ್ತದೆ. ಎಳೆಯ ಲಾರ್ವೇಗಳು ಎಲೆಯ ಕೆಳಭಾಗಗಳನ್ನು ತಿಂದು ಅಲ್ಲಿ ಸಣ್ಣ ಕೊರೆತದ ರಂಧ್ರಗಳನ್ನು ಮಾಡುತ್ತವೆ. ಲಾರ್ವೇಗಳು ಬೆಳೆದಂತೆ, ಇಡೀ ಎಲೆಗಳು, ತೊಟ್ಟುಗಳು ಮತ್ತು ಹೂವುಗಳು ಹಾಗು ಹಣ್ಣುಗಳೂ ಸಹ ಅತಿಯಾಗಿ ಹಾನಿಗೊಳಗಾಗಬಹುದು. ಹಣ್ಣಿನ ಮೇಲ್ಮೈ ಮೇಲೆ ಒಂದೇ ಸಮನೆ ರಂಧ್ರಗಳು ಮೈಲ್ಮೈನ ಕೊರೆತ ಮತ್ತು ತೋಡುವಿಕೆಗಳು ಕಾಣುತ್ತವೆ. ಹಾನಿಗೊಂಡ ಅಂಗಾಂಶಗಳು ಮತ್ತು ಹಿಕ್ಕೆಗಳು ಕೊಳೆತವನ್ನು ಪ್ರೋತ್ಸಾಹಿಸುವ ಅವಕಾಶವಾದಿ ರೋಗಕಾರಕಗಳಿಂದ ವಸಾಹತುಗೊಳಿಸಲ್ಪಡುತ್ತವೆ. ಹೀಗಾಗಿ ಪ್ರೌಢ ಲಾರ್ವೇಯ ಸ್ವಲ್ಪ ಮಟ್ಟಿನ ಸೋಂಕು ಸಹ ಬೆಳೆಗೆ ಅಪಾಯಕಾರಿಯಾಗಬಹುದು. ಇವುಗಳಿಗೆ ಅನೇಕ ರೀತಿಯ ಹೋಸ್ಟ್ ಸಸ್ಯಗಳಿವೆ. ಇದರಲ್ಲಿ ಟೊಮೇಟೋ, ಮೆಣಸು, ಆಲೂಗೆಡ್ಡೆ, ಲೆಟ್ಟುಸ್, ಸೌತೆ, ಈರುಳ್ಳಿ, ಎಲೆ ಕೋಸು ಮತ್ತು ಹೂಕೋಸುಗಳು ಸೇರಿವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕೆಲವು ಸಂದರ್ಭಗಳಲ್ಲಿ, ಟ್ರೈಕೊಗ್ರಾಮ ಪ್ಯಾರಾಸಿಟಾಯ್ಡ್ ಕಣಜಗಳನ್ನು ಅಥವಾ ಪರಭಕ್ಷಕ ಹುಳುವಾದ ಪೋಡಿಯಸ್ ಮಾಕುಲಿವೆಂಟ್ರಿಸ್ ಅನ್ನು ಬಿಡುವುದರಿಂದ ಕ್ಯಾಟರ್ಪಿಲ್ಲರ್ ಹುಳುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಪರಿಸರದಲ್ಲಿ ಉಳಿಯದ ಸ್ಪೈನೋಸಾಡ್ ಅಥವಾ ಬ್ಯಾಸಿಲಸ್ ಥುರಿಂಜಿಯೆನ್ಸಿಸ್ (ಬಿಟಿ) ಹೊಂದಿರುವ ಕೀಟನಾಶಕಗಳನ್ನು ಬಳಸಿ. ಈ ಲಾರ್ವೇಗಳ ರಾಸಾಯನಿಕ ನಿಯಂತ್ರಣಕ್ಕೆ ಒಳ್ಳೆಯ ಪರ್ಯಾಯವೆಂದರೆ, 1% ನಷ್ಟು ಸಿಂಪರಣೆಯನ್ನು ಲಾರ್ವಾಗಳು ಕಂಡ ಕೂಡಲೇ ಸಿಂಪಡಿಸುವುದು ಮತ್ತು ಇದನ್ನು ಎರಡು ಬಾರಿ ಮಾಡುವುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಈ ಪತಂಗದ ಸಂದರ್ಭದಲ್ಲಿ ಪರ್ಯಾಯ ಉತ್ಪನ್ನಗಳಾದ ಸ್ಪೈನೋಸಾಡ್ ಮತ್ತು ಬಿಟಿ ಗಳ ಸಾಮರ್ಥ್ಯವು ಸಾಮಾನ್ಯವಾಗಿ ರಾಸಾಯನಿಕ ಚಿಕಿತ್ಸೆಗಳ ಬಳಕೆಯ ತುಲನೆಯಲ್ಲಿ ಸಮವಾಗಿರುವುದಿಲ್ಲ. ಸೂಕ್ತವಾಗುವುದಾದರೆ, ಆಲ್ಫಾ- ಸೈಪರ್ಮೆಥ್ರಿನ್, ಬೀಟ- ಸೈಫ್ಲುತ್ರಿನ್, ಬೈಫೆನ್ತ್ರಿನ್, ಸೈಪರ್ಮೆಥ್ರಿನ್, ಡೆಲ್ಟಾಮೆಥ್ರಿನ್,ಡೈಫ್ಲುಬೆನ್ಜುರೋನ್, ಫೆನ್ಪ್ರೋಪಥ್ರಿನ್, ಲ್ಯಾಮ್ಡ- ಸೈಹಾಲೋಥ್ರಿನ್, ಟೆಫ್ಲುಬೆನ್ಜುರೋನ್ ಇವುಗಳನ್ನಾಧಿರಿಸಿದ ಉತ್ಪನ್ನಗಳನ್ನು ಬಳಸಬಹುದು. ಉಪಯೋಗಕಾರಿ ಕೀಟಗಳಿಗೆ ಹಾನಿಕಾರಕ ಪರಿಣಾಮಗಳನ್ನು ತಪ್ಪಿಸಲು ಕೀಟನಾಶಕಗಳನ್ನು ಚೆನ್ನಾಗಿ ಯೋಜಿಸಲ್ಪಟ್ಟ ಸಮಗ್ರ ನಿರ್ವಹಣಾ ತಂತ್ರಗಳ ಪ್ರಕಾರ ಬಳಸುವುದು ಅತೀ ಮುಖ್ಯವಾಗಿದೆ.

ಅದಕ್ಕೆ ಏನು ಕಾರಣ

ಹಾನಿಯು ಬ್ರೈಟ್ ಲೈನ್ ಬ್ರೌನ್ ಐ ಪತಂಗದ ಕ್ಯಾಟರ್ಪಿಲ್ಲರ್, ಲಕನೋಬಿಯ ಒಲೆರೇಸಿಯಾದಿಂದ ಉಂಟಾಗುತ್ತದೆ. ಇದು ಆರ್ದ್ರ ಮತ್ತು ಪೋಷಕಾಂಶ-ಭರಿತ ಪ್ರದೇಶಗಳಲ್ಲಿ ಬೆಳೆಯುತ್ತದೆ ಮತ್ತು ಅನೇಕ ವಾಸಸ್ಥಾನಗಳಾದ ಹಸಿರುಮನೆಗಳು, ಹೊಲಗಳು, ನದಿಯುದ್ದಕ್ಕೂ ಅಥವಾ ಕಾಡಿನ ಅಂಚಿನಲ್ಲಿ ಕಾಣಸಿಗುತ್ತದೆ. ಪ್ರೌಢ ಪತಂಗವು 35-45 ಎಂ ಎಂ ಉದ್ದದ ರೆಕ್ಕೆಯನ್ನು ಹೊಂದಿರುತ್ತದೆ ಮತ್ತು ಗಾಢವಾದ ಬಣ್ಣವುಳ್ಳ ಕೀಟಗಳಲ್ಲಿ ಅವುಗಳ ದೇಹವು ತಿಳಿ ಕಂದು ಬಣ್ಣದ್ದಾಗಿರುತ್ತದೆ. ಮುಂಭಾಗದ ರೆಕ್ಕೆಗಳು ಕಿಡ್ನಿ ರೀತಿಯ, ಸ್ಪಷ್ಟವಾದ ತಿಳಿ ಕಿತ್ತಳೆ ಬಣ್ಣದ ಕಲೆ ಹೊಂದಿರುವ ಕೆಂಪು-ಕಂದು ಬಣ್ಣದ್ದವಾಗಿರುತ್ತವೆ. ಡಬ್ಲ್ಯೂ ನಂತಹ ಚೆಹ್ನೆ ಹೊಂದಿರುವ ಒಂದು ಬಿಳಿ ರೇಖೆ ರೆಕ್ಕೆಯ ಅಂಚಿನ ಬಳಿ ಇರುವುದು ಇನ್ನೊಂದು ಲಕ್ಷಣವಾಗಿದೆ. ಹಿಂಬದಿಯ ರೆಕ್ಕೆಗಳು ಬೂದು ಬಣ್ಣದವು ಮತ್ತು ಅವು ಅಂಚಿನ ಕಡೆ ಗಾಢ ಬಣ್ಣದ್ದಾಗಿರುತ್ತವೆ. ಹೆಣ್ಣುಗಳು 150 ಸಂಖ್ಯಗಳಷ್ಟು ಮೊಟ್ಟೆಗಳನ್ನು ಗುಂಪುಗಳಲ್ಲಿ ಇಡುತ್ತವೆ ಮತ್ತು ಇವು ಅವುಗಳ ಹೋಸ್ಟ್ ಸಸ್ಯದ ಎಲೆಗಳ ಕೆಳಭಾಗದಲ್ಲಿ ಕಂಡುಬರುತ್ತವೆ. ಕ್ಯಾಟರ್ಪಿಲ್ಲರುಗಳು 5 ಸೆಮೀ ನಷ್ಟು ಬೆಳೆಯುತ್ತವೆ. ಅವುಗಳ ಬಣ್ಣವು ಹಸಿರಿನಿಂದ ಗಾಢ ಕಂದು ಬಣ್ಣದವರೆಗೆ ಇರಬಹುದು ಮತ್ತು ಪ್ರತಿ ಪಾರ್ಶ್ವದಲ್ಲಿ ಅವುಗಳ ದೇಹದ ಮೇಲೆ ಹಳದಿ ಪಟ್ಟಿಯೊಂದೆಗೆ ಬಿಳಿ ಹಾಗು ಕಪ್ಪು ಬಣ್ಣದ ಚುಕ್ಕೆಗಳು ಇರುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಗದ್ದೆಯನ್ನು ಪರಿಶೀಲಿಸಿ ಮತ್ತು ಮೊಟ್ಟೆಗಳನ್ನು , ಸೋಂಕಿತ ಸಸ್ಯದ ಭಾಗಗಳು ಅಥವಾ ಮರಿಹುಳುಗಳನ್ನು ತೆಗೆದುಹಾಕಿ.
  • ಹಸಿರುಮನೆಗೆ ಪತಂಗಗಳು ಬರದಂತೆ ಮೆಶ್ಶಿನ ತಡೆಗಳನ್ನು ಬಳಸಿ.
  • ಎಲೆಗಳ ಕೆಳಭಾಗದಿಂದ ಮೊಟ್ಟೆಗಳ ಸಮೂಹವನ್ನು ಕೆರೆದುಹಾಕಿ ಮತ್ತು ಕ್ಯಾಟರ್ಪಿಲ್ಲರುಗಳನ್ನು ತೆಗೆದುಹಾಕಿ.
  • ಸೋಂಕಿತ ಸಸ್ಯಗಳನ್ನು ತೆಗೆಯಿರಿ ಮತ್ತು ಅವನ್ನು ನಾಶಮಾಡಿ.
  • ಸುಗ್ಗಿಯ ನಂತರ ಮಣ್ಣಿನ್ನು ಪರಿಶೀಲಿಸಿ ಮತ್ತು ಉಳಿದ ಪ್ಯೂಪೆಗಳನ್ನು ತೆಗೆಯಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ