Delia platura
ಕೀಟ
ಮಗ್ಗೋಟ್, ಮಣ್ಣಿನಲ್ಲಿರುವ ಸಾವಯವ ಪದಾರ್ಥ ಮತ್ತು ಮೊಳಕೆಯೊಡೆದ ಸಸಿಗಳನ್ನು ತಿನ್ನುತ್ತವೆ. ಅವು ಬೀಜಗಳನ್ನು ಕೊರೆದು ಬೆಳೆಯುತ್ತಿರುವ ಅಂಗಾಂಶಗಳನ್ನು ನಾಶಮಾಡುತ್ತವೆ ಮತ್ತು ಮೊಳಕೆಯೊಡೆಯುವುದನ್ನು ತಪ್ಪಿಸುತ್ತವೆ. ಅವುಗಳು ಬೆಳೆದರೂ, ಎಳೆಯ ಎಲೆಗಳ ಮೇಲೆ ಮಗ್ಗೋಟ್ ನಿಂದ ಆದ ಸ್ಪಷ್ಟ ಹಾನಿ ಗೋಚರಿಸುತ್ತದೆ. ಅಂಗಾಂಶಗಳ ಕೊಳೆತ ಉಂಟಾಗಬಹುದು. ಸಸಿಗಳು ಸುರುಟಿಕೊಂಡಿರುವ, ಕುಂಠಿತಗೊಂಡ, ವಿರೂಪಗೊಂಡ ಸಸ್ಯಗಳಾಗಿ ಬೆಳೆಯಬಹುದು. ಅವು ಕಡಿಮೆ ಗುಣಮಟ್ಟದ, ಕೆಲವು ಬೀಜಗಳನ್ನು ಮತ್ತು ಮುಂದೆ ಕಡಿಮೆ ಇಳುವರಿಯನ್ನು ನೀಡುತ್ತವೆ. ಮಣ್ಣು ತೇವವಾಗಿದ್ದರೆ ಮತ್ತು ತಂಪಾದ ಹವಾಮಾನ ಮತ್ತು ಅಧಿಕ ಆರ್ದ್ರತೆ ದೀರ್ಘಕಾಲದವರೆಗೆ ಇದ್ದರೆ, ಹಾನಿ ಹೆಚ್ಚಾಗಿರುತ್ತದೆ.
ಅವುಗಳ ಭೂಗತ ಜೀವನದಿಂದಾಗಿ, ಸೀಡ್ ಕಾರ್ನ್ ಮಗ್ಗೋಟ್ ಗಳು ಹೆಚ್ಚಿನ ಸಂಖ್ಯೆಯ ನೈಸರ್ಗಿಕ ಶತ್ರುಗಳನ್ನು ಹೊಂದಿರುವುದಿಲ್ಲ. ಆದಾಗ್ಯೂ, ವಯಸ್ಕ ಕೀಟಗಳಿಗೆ ನೆಲದ ಜೀರುಂಡೆಗಳು, ಜೇಡಗಳು ಮತ್ತು ಪಕ್ಷಿಗಳ ಮುಂತಾದವು ಪರಭಕ್ಷಕವಾಗಿವೆ. ಮರಿಹುಳುಗಳು ಶಿಲೀಂಧ್ರ ರೋಗಗಳಿಗೆ ಒಳಗಾಗಬಹುದು, ಆದರೂ, ಪರಭಕ್ಷಕ ಮತ್ತು ಶಿಲೀಂಧ್ರ ರೋಗಗಳು ಸಾಕಷ್ಟು ನಿಯಂತ್ರಣವನ್ನು ಒದಗಿಸುವುದಿಲ್ಲ. ಈ ನೊಣಗಳು ಸಹಜವಾಗಿ ಪ್ರಕಾಶಮಾನವಾದ ಬಣ್ಣಗಳಿಂದ ಆಕರ್ಷಿಸಲ್ಪಡುತ್ತವೆ. ಆದ್ದರಿಂದ ಅವುಗಳನ್ನು ಬಣ್ಣದ ಬಕೆಟ್ ನಲ್ಲಿ ಸಾಬೂನಿನ ನೀರು ಇಟ್ಟು ಹಿಡಿಯಬಹುದು.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮಗ್ಗೋಟ್ ಗಳನ್ನು ಹೊರಹಾಕಲು ಬೀಜಗಳಿಗೆ ಕೀಟನಾಶಕದಿಂದ ಚಿಕಿತ್ಸೆ ನೀಡಬಹುದು. ಕೀಟನಾಶಕಗಳನ್ನು ಬಳಸಬಹುದು, ಆದರೆ ನಿಮ್ಮ ದೇಶದಲ್ಲಿರುವ ನಿರ್ಬಂಧಗಳನ್ನು ತಿಳಿಯಿರಿ. ಮಣ್ಣಿಗೆ-ಹಾಕುವ ಕೀಟನಾಶಕಗಳನ್ನು ಸಹ ಬಳಸಬಹುದು.
ಫ್ಲೈಸ್ ಡೇಲಿಯಾ ಪ್ಲಾಟುರಾ ಮತ್ತು ಡಿ. ಆಂಟಿಕಾದ ಮಗ್ಗೋಟ್ ಗಳಿಂದ ರೋಗಲಕ್ಷಣಗಳು ಉಂಟಾಗುತ್ತವೆ. ವಯಸ್ಕ ಕೀಟಗಳು ಸಾಮಾನ್ಯ ನೊಣಗಳನ್ನು ಬಣ್ಣದಲ್ಲಿ ಹೋಲುತ್ತವೆ. ಆದರೆ ಇವು ಚಿಕ್ಕದಾಗಿದ್ದು ಹೆಚ್ಚು ತೆಳ್ಳಗಿರುತ್ತವೆ. ಅವು ಹಳೆಯ ಬೇರುಗಳು ಮತ್ತು ಸಸ್ಯ ಅವಶೇಷಗಳಿಗೆ ಹತ್ತಿರವಿರುವ ಮಣ್ಣಿನಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಬೀಜಗಳನ್ನು ನೆಡುವಾಗಲೇ ವಯಸ್ಕ ಕೀಟಗಳು ವಸಂತಕಾಲದಲ್ಲಿ ಹೊರಹೊಮ್ಮುತ್ತವೆ. ಕೊಳೆಯುತ್ತಿರುವ ವಸ್ತು ಅಥವಾ ಗೊಬ್ಬರವನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ತೇವವಾದ ಮಣ್ಣಿನಲ್ಲಿ ಹೆಣ್ಣುಗಳು ಮೊಟ್ಟೆಗಳನ್ನು ಇಡುತ್ತವೆ. ಸುಮಾರು ಒಂದು ವಾರದ ನಂತರ ಹಳದಿ-ಬಿಳಿ ಬಣ್ಣದ, ಕಾಲುಗಳಿಲ್ಲದ ಲಾರ್ವಾ ಗಳು ಹೊರಬಂದು ಸಾವಯವ ವಸ್ತು ಮತ್ತು ಸಸಿಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಕೀಟಗಳ ಜೀವನ ಚಕ್ರ ಮತ್ತು ಅದರ ಆಹಾರ ಚಟುವಟಿಕೆಯನ್ನು ಬೆಂಬಲಿಸುವ ತಂಪಾದ, ಆರ್ದ್ರ ವಾತಾವರಣದಲ್ಲಿ ಹಾನಿ ಹೆಚ್ಚಾಗಿರುತ್ತದೆ. ಬೆಚ್ಚಗಿನ ಮತ್ತು ಬಿಸಿಲಿನ ವಾತಾವರಣವು ಮೊಟ್ಟೆಗಳನ್ನು ಇಡುವುದನ್ನು ತಡೆಗಟ್ಟುತ್ತದೆ ಮತ್ತು ಸಸ್ಯಗಳು ವೇಗವಾಗಿ ಮತ್ತು ಗಟ್ಟಿಯಾಗಿ ಬೆಳೆಯುವಂತೆ ಮಾಡುತ್ತದೆ.