Agromyzidae
ಕೀಟ
ಮರಿಹುಳುಗಳು ತಿನ್ನತೊಡಗಿದಂತೆ ಎಲೆಯ ದಳದ ಎರಡೂ ಭಾಗಗಳಲ್ಲಿ ಅನಿಯಮಿತವಾದ ಅಥವಾ ಅಂಕುಡೊಂಕಾದ ತಿಳಿ ಬೂದುಬಣ್ಣದ ರೇಖೆಗಳು ಕಂಡುಬರುತ್ತವೆ. ಈ ಕೀಟಗಳು ಎಲೆಯ ಮೇಲೆ ಕೊರೆಯುವ ಮಾರ್ಗಗಳಿಗೆ ಸಾಮಾನ್ಯವಾಗಿ ಎಲೆಯ ನಾಳಗಳು ತಡೆಯಾಗಿರುತ್ತದೆ. ಈ ಕೊರೆತದ ಜಾಡಿನ ಒಳಭಾಗದಲ್ಲಿ ನುಸಿಯ ಮಲದಿಂದಾಗಿ ಕಪ್ಪು ಬಣ್ಣದ ತೆಳುಗೆರೆಯೊಂದು ಕಂಡುಬರುತ್ತದೆ. ಸಂಪೂರ್ಣ ಎಲೆಗಳೇ ತೂತುಗಳಿಂದ ಮುಚ್ಚಿಕೊಳ್ಳಬಹುದು. ಹಾನಿಗೊಳಗಾದ ಎಲೆಗಳು ಅಕಾಲಿಕವಾಗಿ (ಎಲೆಗಳಚುವಿಕೆ) ಉದುರಬಹುದು. ಎಲೆಗಳಚುವಿಕೆಯು ಇಳುವರಿ ಮತ್ತು ಹಣ್ಣಿನ ಗಾತ್ರವನ್ನು ಕಡಿಮೆ ಮಾಡುತ್ತದೆ ಮತ್ತು ಹಣ್ಣು ಸೂರ್ಯನ ಬೆಳಕಿಗೆ ಹಾನಿಯಾಗುತ್ತದೆ. ಟ್ಯೂಟಾ ಅಬ್ಸೊಲುಟಾ (ಟೊಮೆಟೊ ಲೀಫ್‌ಮೈನರ್) ನೊಂದಿಗೆ ಗೊಂದಲಕೊಳಗಾಗಬೇಡಿ, ಎಲೆಗಳ ಮೇಲೆ ಅವುಗಳ ಕೊರೆತವು ಅಗಲ ಮತ್ತು ಬಿಳಿ ಅಥವಾ ಪಾರದರ್ಶಕವಾಗಿರುತ್ತವೆ.
ಕೀಟಗಳನ್ನು ನಿಗ್ರಹಿಸುವ ನೇರ ವಿಧಾನವಾಗಿ ಅಂಟು ಬಲೆಗಳನ್ನು ಬಳಸಬಹುದು. ಲಾರ್ವಾಗಳ ವಿರುದ್ಧ ಬೇವಿನ ಎಣ್ಣೆ ಉತ್ಪನ್ನಗಳನ್ನು (ಆಜಾಡಿರಾಕ್ಟಿನ್) ಮುಂಜಾನೆ ಅಥವಾ ಸಂಜೆ ತಡವಾಗಿ ಎಲೆಗಳ ಮೇಲೆ ಸಿಂಪಡಿಸಿ. ಉದಾಹರಣೆಗೆ, ಬೇವಿನ ಎಣ್ಣೆಯನ್ನು (15000 ಪಿಪಿಎಂ) 5 ಎಂಎಲ್ / ಲೀ ಪ್ರಮಾಣದಲ್ಲಿ ಸಿಂಪಡಿಸಿ. ಉತ್ತಮವಾಗಿ ಎಲೆ ಆವರಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. ಬೇವು ಸ್ವಲ್ಪವಾಗಿ ಎಲೆಗಳಿಗೆ ಪ್ರವೇಶಿಸಿ ಸುರಂಗದೊಳಗಿನ ಕೆಲವು ಲಾರ್ವಾಗಳನ್ನು ತಲುಪುತ್ತದೆ. ಎಂಟೊಮೊಫಾಗಸ್ ನೆಮಟೋಡ್, ಸ್ಟೈನರ್ನೆಮಾ ಕಾರ್ಪೊಕ್ಯಾಪ್ಸೇನ ಎಲೆಗಳ ಅನ್ವಯಿಕೆಗಳು ಎಲೆಕೊರಕದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಎಲೆಕೊರಕದ ಇತರ ಜೈವಿಕ ನಿಯಂತ್ರಣಗಳಲ್ಲಿ ಪರಾವಲಂಬಿಗಳು (ಉದಾ. ಕ್ರೈಸೊನೋಟೊಮಿಯಾ ಪಂಕ್ಟಿಂಟ್ರಿಸ್ ಮತ್ತು ಗಣಸ್ಪಿಡಿಯಮ್ ಹಂಟೇರಿ) ಮತ್ತು ನೆಮಟೋಡ್ಗಳಿವೆ (ಉದಾ. ಸ್ಟೈನರ್ನೆಮಾ ಕಾರ್ಪೋಕ್ಯಾಪ್ಸೆ).
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಆರ್ಗನೋಫಾಸ್ಫೇಟ್ಗಳು, ಕಾರ್ಬಾಮೇಟ್ಗಳು ಮತ್ತು ಪೈರೆಥ್ರಾಯ್ಡ್ ಕುಟುಂಬಗಳವಿಶಾಲ- ರೋಹಿತ ಕೀಟನಾಶಕಗಳು ಪ್ರೌಢ ನುಸಿ ಮೊಟ್ಟೆಯಿಡದಂತೆ ತಡೆದರೂ ಮರಿಹುಳುಗಳನ್ನು ಕೊಲ್ಲುವುದಿಲ್ಲ. ಇದಲ್ಲದೆ, ಅವು ನೈಸರ್ಗಿಕ ಶತ್ರುಗಳ ಇಳಿಕೆಗೆ ಕಾರಣವಾಗಬಹುದು ಮತ್ತು ನುಸಿಯಲ್ಲಿ ಪ್ರತಿರೋಧದ ಬೆಳವಣಿಗೆಗೆ ಕಾರಣವಾಗಬಹುದು, ಕೆಲವು ಸಂದರ್ಭಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಬಹುದು. ಅಬಾಮೆಕ್ಟಿನ್, ಕ್ಲೋರಾಂಟ್ರಾನಿಲಿಪ್ರೊಲ್, ಅಸೆಟಮಿಪ್ರಿಡ್, ಸ್ಪಿನೆಟೊರಾಮ್ ಅಥವಾ ಸ್ಪಿನೋಸಾಡ್ ನಂತಹ ಉತ್ಪನ್ನಗಳನ್ನು ಪ್ರತಿರೋಧದ ಬೆಳವಣಿಗೆಯನ್ನು ತಪ್ಪಿಸಲು ಸರದಿಯಂತೆ ಬಳಸಬಹುದು.
ಅಗ್ರೊಮೈಝಿಡೇ ಕುಟುಂಬಕ್ಕೆ ಸೇರಿದ ಹಲವಾರು ನೊಣಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ, ಈ ಎಲೆಕೊರಕವು ವಿಶ್ವದಾದ್ಯಂತ ಹಲವು ಸಾವಿರ ವಿವಿಧ ಜಾತಿಗಳಿರುವ ನುಸಿ. ವಸಂತಕಾಲದಲ್ಲಿ ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗಳನ್ನಿಡುತ್ತದೆ, ಸಮಾನ್ಯವಾಗಿ ಅಂಚಿನಲ್ಲಿ. ಮೇಲಿನ ಮತ್ತು ಕೆಳ ಮೇಲ್ಮೈ ನಡುವಿನ ಭಾಗವನ್ನು ಮರಿಹುಳವು ಆಹಾರ ಮಾಡಿಕೊಳ್ಳುತ್ತದೆ. ಮರಿಹುಳು ಎಲೆಯನ್ನು ತಿನ್ನುತ್ತಾ ಹೋದಂತೆ ಅಂಕುಡೊಂಕು ಜಾಡಿನ ಕಿರಿದಾದ ಬಿಳಿಯ ಸುರಂಗಗಳು ಎಲೆಯ ಮೇಲೆ ರೂಪುಗೊಳ್ಳುತ್ತವೆ. ಈ ಜಾಡಿನ ಉದ್ದಕ್ಕೂ ಮರಿಹುಳುವಿನ ಮಲದಿಂದಾಗಿ ಕಪ್ಪು ಬಣ್ಣದ ತೆಳುಗೆರೆ ಕಂಡುಬರುತ್ತದೆ. ಅವು ಪ್ರೌಢಾವಸ್ಥೆಗೆ ತಲುಪಿದ ನಂತರ, ಮರಿಹುಳುಗಳು ಎಲೆಯ ತಳಭಾಗದಲ್ಲಿ ರಂಧ್ರವೊಂದನ್ನು ತೆರೆದು ನೆಲದ ಮೆಳೆ ಬೀಳುತ್ತವೆ, ಮತ್ತು ಅಲ್ಲಿ ಕೋಶಾವಸ್ಥೆಗೆ ಜಾರುತ್ತದೆ. ಗಿಡದ ಅವಶೇಷ ಅಥವಾ ಆಶ್ರಯದಾತ ಗಿಡದ ಬಳಿ ಬಿದ್ದ ಎಲೆಗಳು ಕೋಶಾವಸ್ಥೆಗೆ ಹೋಗುವಂತಹ ಪರ್ಯಾಯ ಜಾಗಗಳು. ಹಳದಿ ಬಣ್ಣವೆಂದರೆ ಎಲೆಕೊರಕಗಳಿಗೆ ಆಕರ್ಷಣೆ.