ಟೊಮೆಟೊ

ಚಿಗಟ ಜೀರುಂಡೆ (ಫ್ಲೀ ಬೀಟಲ್)

Chrysomelidae

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಕೀಟ ಜಗಿಯುವುದರಿಂದ ಉಂಟಾಗುವ ಹಾನಿ.
  • ಸಣ್ಣ ಗುಂಡು ಹೊಡೆದಂತಹ ತೂತುಗಳು.
  • ತಿಂದು ಬಿಟ್ಟಿರುವ ಭಾಗಗಳ ಸುತ್ತಲೂ ಸ್ವಲ್ಪ ಮಟ್ಟಿನ ಹಳದಿ ಬಣ್ಣ.

ಇವುಗಳಲ್ಲಿ ಸಹ ಕಾಣಬಹುದು

25 ಬೆಳೆಗಳು
ಬಾಳೆಹಣ್ಣು
ಹುರುಳಿ
ಹಾಗಲಕಾಯಿ
ಎಲೆಕೋಸು
ಇನ್ನಷ್ಟು

ಟೊಮೆಟೊ

ರೋಗಲಕ್ಷಣಗಳು

ಪ್ರೌಢ ಕೀಟವು ಎಲೆಗಳನ್ನು ತಿನ್ನುತ್ತದೆ. ಈ ಹಾನಿ ಚದುರಿದ ಸಣ್ಣ ರಂಧ್ರಗಳು (1-2 ಮಿಮಿ) ಮತ್ತು ಸಣ್ಣ ಕುಳಿಗಳಂತೆ ಕಂಡುಬರುತ್ತದೆ. ಅದು ಎಲೆಯ ಎಸಳನ್ನು ಅಡ್ಡಲಾಗಿ ಕತ್ತರಿಸುವುದಿಲ್ಲ. ಹಾನಿಗೊಳಗಾದ ಅಂಗಾಂಶದ ಸುತ್ತಲೂ ಸ್ವಲ್ಪ ಹಳದಿಯಾಗಿರಬಹುದು. ದಾಳಿ ಮಾಡಿದ ಕೀಟದ ಜಾತಿಯನ್ನು ಅವಲಂಬಿಸಿ ಬೇರೆ ಬೇರೆ ಆಳದ, ನೇರವಾದ ಸುರಂಗಗಳು ಗಡ್ಡೆಗಳಲ್ಲಿ ಕಂಡು ಬರುತ್ತದೆ. ಸಣ್ಣ ಉಬ್ಬುಗಳು ಕೂಡ ಗಡ್ಡೆಯ ಮೇಲ್ಮೈಯಲ್ಲಿ ಕಾಣಿಸಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಲೇಸ್-ವಿಂಗ್ (ಕ್ರಿಸೋಪಾ ಎಸ್ಪಿಪಿ.), ಪ್ರೌಢ ಡ್ಯಾಮ್ಸೆಲ್ ಬಗ್ (ನಾಬಿಸ್ ಎಸ್ಪಿಪಿ.) ಮತ್ತು ಕೆಲವು ಪರಾವಲಂಬಿ ಕಣಜಗಳು ಚಿಗಟ ಜೀರುಂಡೆಗಳನ್ನು ತಿನ್ನುತ್ತವೆ ಅಥವಾ ಕೊಲ್ಲುತ್ತವೆ. ಕೆಲವು ನೆಮಟೋಡ್ ಜಾತಿಯ ಹುಳಗಳು ಮಣ್ಣಿನಲ್ಲಿ ವಾಸಿಸುವ ಲಾರ್ವಾಗಳನ್ನು ಸಹ ಕೊಲ್ಲುತ್ತವೆ. ಶಿಲೀಂಧ್ರ ರೋಗಕಾರಕಗಳು, ಕೀಟನಾಶಕ ಸಾಬೂನುಗಳು ಅಥವಾ ಬ್ಯಾಕ್ಟೀರಿಯಾ ಕೀಟನಾಶಕ ಸ್ಪಿನೊಸಡ್ ಅನ್ನು ಈ ಕೀಟಗಳ ಸಂಖ್ಯೆ ಕಡಿಮೆ ಮಾಡಲು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಸೋಂಕು ತಗುಲುವ ಸಂಭವವಿರುವ ಅವಧಿಯಲ್ಲಿ, ಎಂದರೆ ಜೀರುಂಡೆ ದಾಳಿಯ ಕುರುಹು ಎಲೆಗಳ ಮೇಲೆ ಕಾಣಿಸಿಕೊಳ್ಳುವ ಸಮಯದಲ್ಲಿ ಕೀಟನಾಶಕಗಳನ್ನು ಸಿಂಪಡಿಸಬೇಕು. ಅಸೆಟಾಮಿಪ್ರಿಡ್, ಕಾರ್ಬರಿಲ್, ಮ್ಯಾಲಥಿಯಾನ್ ಮತ್ತು ಪರ್ಮೆಥ್ರೈನ್ಗಳನ್ನು ಆಧರಿಸಿರುವ ಉತ್ಪನ್ನಗಳು ಕೀಟ ನಿಯಂತ್ರಣಕ್ಕೆ ಚೆನ್ನಾಗಿ ಕೆಲಸ ಮಾಡುತ್ತವೆ.

ಅದಕ್ಕೆ ಏನು ಕಾರಣ

ವಿವಿಧ ಗಿಡಗಳ ಮೇಲೆ ಪ್ರಭಾವ ಬೀರುವ ಹಲವು ಜಾತಿಯ ಚಿಗಟ ಜೀರುಂಡೆಗಳು ಇವೆ. ಹೆಚ್ಚಿನ ಪ್ರೌಢ ಕೀಟಗಳು ಸಣ್ಣದಾಗಿರುತ್ತವೆ (ಸುಮಾರು 4 ಮಿಮಿ). ಕೀಟದ ದೇಹ ಗಾಢ ಬಣ್ಣದ್ದಾಗಿರುತ್ತದೆ, ಕೆಲವೊಮ್ಮೆ ಮೈಗೆ ಹೊಳಪಿರುತ್ತದೆ ಅಥವಾ ಲೋಹದ ತೋರ್ಕೆಯಿರುತ್ತದೆ. ಅಂಡಾಕಾರದ ದೇಹ ಮತ್ತು ನೆಗೆಯಲು ಅನುಕೂಲವಾಗುವಂತೆ ದೊಡ್ಡ ಹಿಂಗಾಲುಗಳು ಇರುತ್ತವೆ. ಮರಿಹುಳುಗಳು ಮಣ್ಣಿನಲ್ಲಿ ವಾಸಿಸುತ್ತವೆ ಮತ್ತು ಬೇರುಗಳು ಅಥವಾ ಗಡ್ಡೆಗಳನ್ನು ತಿನ್ನುತ್ತವೆ, ಆದರೆ ಪ್ರೌಢ ಕೀಟಗಳು ಎಳೆ ಗಿಡಗಳನ್ನು ತಿನ್ನುತ್ತವೆ. ಹೆಚ್ಚಿನ ಜೀರುಂಡೆಗಳು ಗಿಡದ ಉಳಿಕೆಗಳ ಅಡಿಯಲ್ಲಿ, ಮಣ್ಣಿನಲ್ಲಿ ಅಥವಾ ತೋಟದ ಸುತ್ತಲಿನ ಕಳೆಗಳಲ್ಲಿ ಕೋಶಾವಸ್ಥೆಯಲ್ಲಿರುತ್ತವೆ. ಅವು ವಸಂತಕಾಲದಲ್ಲಿ ಮತ್ತೆ ಸಕ್ರಿಯವಾಗುತ್ತವೆ. ಕೀಟದ ಜಾತಿ ಮತ್ತು ಹವಾಮಾನವನ್ನು ಆಧರಿಸಿ 1 ರಿಂದ 4 ತಲೆಮಾರುಗಳು ಪ್ರತಿ ವರ್ಷವೂ ಬೆಳೆಯುತ್ತವೆ. ಚಿಗಟ ಜೀರುಂಡೆಗಳು ಬೆಚ್ಚಗಿನ, ಒಣ ವಾತಾವರಣವನ್ನು ಬಯಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ಗಿಡ ನೆಡುವ ಸಮಯವನ್ನು ಬದಲಿಸಿ (ಮುಂಚಿತವಾಗಿ ಅಥವಾ ನಿಧಾನವಾಗಿ) ಜೀರುಂಡೆಯ ಚಟುವಟಿಕೆ ಹೆಚ್ಚಿರುವ ಸಮಯವನ್ನು ತಪ್ಪಿಸಿ.
  • ಈ ಜೀರುಂಡೆಗಳನ್ನು ಆಕರ್ಷಿಸಿ ಪ್ರಧಾನ ಬೆಳೆಗೆ ದಾಳಿಯಾಗುವುದನ್ನು ತಪ್ಪಿಸುವ ಇತರ ಗಿಡಗಳನ್ನು ಬೆಳೆಸಿ.
  • ಕೀಟಗಳನ್ನು ಹಿಮ್ಮೆಟ್ಟಿಸುವ ಅಥವಾ ನಿರ್ಬಂಧಿಸುವ, ಈ ಕೀಟದ ಸೋಂಕು ತಗುಲದಂತಹ ಗಿಡಗಳನ್ನು ಬೆಳೆಸಿ.
  • ಗಿಡದ ಸುತ್ತಲೂ ಹಸಿ ಎಲೆ ಹರಡುವುದರಿಂದ ಮೊಟ್ಟೆಯಿಡಲು ಮತ್ತು ಮರಿಹುಳುಗಳಿಗೆ ಲಾರ್ವಾ ಹಂತದಲ್ಲಿ ಬೆಳೆಯಲು ಅಡ್ಡಿಯಾಗುತ್ತದೆ.
  • ಗಿಡಗಳನ್ನು ಸೋಂಕಿಗಾಗಿ ಪರಿಶೀಲಿಸಿ, ವಸಂತಕಾಲದಲ್ಲಿ ಇನ್ನೂ ಹೆಚ್ಚು ಜಾಗರೂಕರಾಗಿರಿ.
  • ಕಳೆ ಅಥವಾ ಇತರ ಆಶ್ರಯದಾತ ಗಿಡಗಳನ್ನು ತೆಗೆದುಹಾಕಿ.
  • ಕೊಯ್ಲಿನ ಬಳಿಕ ಬಾಕಿಯುಳಿದ ಗಿಡದ ಭಾಗಗಳನ್ನು ನೆಲದ ಉಳುಮೆ ಮೂಲಕ ನಾಶಮಾಡಿ, ಆಶ್ರಯ ತಾಣಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ