ಹಾಗಲಕಾಯಿ

ಎಲೆ ಭಕ್ಷಕ ಜೀರುಂಡೆ

Epilachna vigintioctopunctata

ಕೀಟ

ಸಂಕ್ಷಿಪ್ತವಾಗಿ

  • ಸಿರೆಗಳ ನಡುವೆ ಎಲೆ ತಿಂದಿರುವುದರಿಂದ ಆಗಿರುವ ಹಾನಿ.
  • ಎಲೆಗಳು ಅಸ್ಥಿಪಂಜರದಂತಾಗುತ್ತವೆ.
  • ಹಣ್ಣಿನ ಮೇಲೆ ಆಳವಿಲ್ಲದ ರಂಧ್ರಗಳು.
  • ಕುಂಠಿತಗೊಂಡ್ ಬೆಳವಣಿಗೆ.
  • ವಿಪರೀತ ಎಲೆಗಳಚುವಿಕೆ.
  • ವಯಸ್ಕ ಜೀರುಂಡೆಗೆ ಅಂಡಾಕಾರದ, ಮಂದ ಕಿತ್ತಳೆ ಬಣ್ಣವನ್ನು ಹೊಂದಿದ್ದು 28 ಕಪ್ಪು ಕಲೆಗಳು ಮತ್ತು ಹಿಂಭಾಗದಲ್ಲಿ ಸಣ್ಣ ಮೃದುವಾದ ಕೂದಲುಗಳಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

8 ಬೆಳೆಗಳು
ಹಾಗಲಕಾಯಿ
ಸೌತೆಕಾಯಿ
ಬದನೆ
ಕಲ್ಲಂಗಡಿ
ಇನ್ನಷ್ಟು

ಹಾಗಲಕಾಯಿ

ರೋಗಲಕ್ಷಣಗಳು

ಪ್ರೌಢ ಮತ್ತು ಲಾರ್ವಾಗಳೆರಡೂ ಎಲೆಗಳನ್ನು ತಿಂದು ತೀವ್ರ ಹಾನಿಯುಂಟುಮಾಡಬಹುದು. ಎಲೆಯ ನಾಳಗಳ ನಡುವಣ ಸ್ಥಳದಲ್ಲಿ ಹಸಿರು ಅಂಗಾಂಶಗಳನ್ನು ತಿಂದು ಕೀಟಗಳು ಮಾಡಿರುವ ಹಾನಿಯು ಆರಂಭಿಕ ಲಕ್ಷಣವಾಗಿದೆ. ನಂತರ, ಅಸ್ಥಿಪಂಜರೀಕರಣ ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಮಾದರಿಯ ಹಾನಿ ಉಂಟಾಗುತ್ತದೆ. ಇದರಲ್ಲಿ ಎಲೆಗಳ (ಮುಖ್ಯ ನಾಳಗಳು ಮತ್ತು ತೊಟ್ಟು) ಗಟ್ಟಿ ಭಾಗಗಳು ಮಾತ್ರ ಉಳಿಯುತ್ತವೆ. ಹಣ್ಣಿನ ಮೇಲ್ಮೈಗಳ ಮೇಲೆ ಆಳವಿಲ್ಲದ ರಂಧ್ರಗಳಿರಬಹುದು. ಹೊಸ ಸಸ್ಯಗಳು ನಾಶವಾಗಬಹುದು ಮತ್ತು ಬೆಳೆದ ಸಸ್ಯಗಳ ಬೆಳವಣಿಗೆ ಕುಂಠಿತವಾಗಬಹುದು. ಕೀಟವು ಎಲೆ ಉದುರುವಿಕೆಗೆ ಮತ್ತು ಹೆಚ್ಚಿನ ಇಳುವರಿಯ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ ಇದು ಅತ್ಯಂತ ಅಪಾಯಕಾರಿ ಬದನೆ ಕೀಟಗಳಲ್ಲಿ ಒಂದಾಗಿದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪೆಡಿಯೋಬಿಯಸ್ ಕುಟುಂಬದ ಪರಭಕ್ಷಕ ಕಣಜಗಳನ್ನು ಕೀಟ ನಿಯಂತ್ರಣಕ್ಕೆ ಬಳಸಬಹುದು. ಈ ಕಣಜಗಳು ಪ್ರಯೋಜನಕಾರಿಯಾದ ಲೇಡಿಬರ್ಡ್ ಗಳ ಮೇಲೂ ಸಹ ಆಕ್ರಮಣ ಮಾಡುತ್ತವೆ. ಆದ್ದರಿಂದ ಅವುಗಳನ್ನು ಬಳಸುವ ಮೊದಲು ಕೀಟಗಳನ್ನು ಎಚ್ಚರಿಕೆಯಿಂದ ಗುರುತಿಸುವುದು ಬಹಳ ಮುಖ್ಯ. ರೋಗಕಾರಕ ಸೂಕ್ಷ್ಮಾಣುಜೀವಿಗಳು ಎಲೆ ಭಕ್ಷಕ ಜೀರುಂಡೆಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಬ್ಯಾಕ್ಟೀರಿಯಮ್ ಬ್ಯಾಸಿಲಸ್ ತುರೆಂಜಿಯೆನ್ಸಿಸ್ ಅಥವಾ ಶಿಲೀಂಧ್ರ ಆಸ್ಪರ್ಜಿಲ್ಲಸ್ ಎಸ್ ಪಿ ಪಿಗಳನ್ನು ಹೊಂದಿರುವ ಜೈವಿಕ ಕೀಟನಾಶಕಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದು. ರಿಸಿನಸ್ ಕಮ್ಯೂನಿಸ್ (ಹರಳೆಣ್ಣೆ), ಕ್ಯಾಲೊಟ್ರೋಪಿಸ್ ಪ್ರೊಸೆರಾ ಮತ್ತು ದತೂರಾ ಇನಾಕ್ಸಿಯಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದಾಗಿದೆ. ಆರಂಭಿಕ ಹಂತಗಳಲ್ಲಿ ಬೂದಿ ಹಾಕುವುದರಿಂದಲೂ ಸೋಂಕನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಮೊದಲು ಸಂಯೋಜಿತ ವಿಧಾನವನ್ನು ಪರಿಗಣಿಸಿ. ಕೀಟನಾಶಕಗಳ ಅಗತ್ಯವಿದ್ದರೆ, ಡಿಮೆಥೊಯೇಟ್, ಫೆನ್ವೆಲರೇಟ್, ಕ್ವಿನಲ್ಫೋಸ್, ಕ್ಲೋರೊಪೈರಿಫೊಸ್, ಮ್ಯಾಲಾಥಿಯಾನ್, ಫೆನಿಟ್ರೋಥಿಯನ್ ಗಳನ್ನು ಹೊಂದಿರುವ ಉತ್ಪನ್ನಗಳನ್ನು ಎಲೆಗಳ ಮೇಲೆ ಸಿಂಪಡಿಸಿ.

ಅದಕ್ಕೆ ಏನು ಕಾರಣ

ಪ್ರೌಢ ಕೀಟಗಳು ತೆಳು ಕಿತ್ತಳೆ ಬಣ್ಣದಲ್ಲಿದ್ದು ಅಂಡಾಕಾರವಾಗಿರುತ್ತವೆ ಮತ್ತು 28 ಕಪ್ಪು ಮಚ್ಚೆಗಳಿರುತ್ತವೆ. ಹಿಂಭಾಗದಲ್ಲಿ ಸಣ್ಣ ಮೃದು ಕೂದಲುಗಳಿರುತ್ತವೆ. ಹೆಣ್ಣು ಜೀರುಂಡೆಗಳು ಅಂಡಾಕಾರದ, ಹಳದಿ ಮೊಟ್ಟೆಗಳನ್ನು (0.4-1 ಮಿಮೀ) ಸಣ್ಣ ಗುಂಪುಗಳಲ್ಲಿ ಸಾಮಾನ್ಯವಾಗಿ ಎಲೆಗಳ ಕೆಳಭಾಗದಲ್ಲಿ ಇಡುತ್ತವೆ. ಸುಮಾರು 4 ದಿನಗಳ ನಂತರ ಹಿಂಭಾಗದಲ್ಲಿ ಉದ್ದವಾದ, ಕಪ್ಪಾದ, ತುದಿಯಲ್ಲಿ ಒಡೆದಿರುವ ಮೂಳೆ ಇರುವ ಹಳದಿಮಿಶ್ರಿತ ಬಿಳಿ ಬಣ್ಣದ ಮರಿಹುಳುಗಳು ಮೊಟ್ಟೆಯೊಡೆದು ಹೊರಬರುತ್ತವೆ. ಉಷ್ಣಾಂಶವನ್ನು ಅವಲಂಬಿಸಿ, ಮರಿಗಳು ಸುಮಾರು 18 ದಿನಗಳಲ್ಲಿ ಸುಮಾರು 6 ಮಿಮೀ ಬೆಳೆಯುತ್ತವೆ. ನಂತರ ಅವು ಎಲೆಗಳ ಹಿಂಭಾಗದಲ್ಲಿ ಕೋಶವಾಸ್ಥೆಗೆ ತೆರಳುತ್ತವೆ. ಸುಮಾರು 4 ದಿನಗಳ ನಂತರ, ಹೊಸ ಪೀಳಿಗೆಯ ಪ್ರೌಢ ಜೀರುಂಡೆಗಳು ಕೋಶ ಒಡೆದು ಹೊರಹೊಮ್ಮುತ್ತವೆ. ಸಂತಾನೋತ್ಪತ್ತಿ ಅವಧಿಯಲ್ಲಿ (ಮಾರ್ಚ್-ಅಕ್ಟೋಬರ್), ತಂಪಾದ ಹವಾಮಾನ ಇವುಗಳ ಜೀವನಚಕ್ರ ಮತ್ತು ಸಂಖ್ಯಾ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ಜೀರುಂಡೆಗಳು ಮಣ್ಣಿನಲ್ಲಿ ಮತ್ತು ಒಣ ಎಲೆಗಳ ರಾಶಿಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ಪ್ರಬಲವಾದ, ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ನೆಡಿ.
  • ಬದನೆಯನ್ನು ಸೋಂಕಿತ ಕ್ಷೇತ್ರಗಳ ಹತ್ತಿರ ನೆಡುವುದನ್ನು ತಪ್ಪಿಸಿ.
  • ನಿಮ್ಮ ಜಮೀನಿನ ಸಮೀಪದಲ್ಲಿ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ನೆಡುವುದನ್ನು ತಪ್ಪಿಸಿ.
  • ಹೆಚ್ಚುತ್ತಿರುವ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೀರಾವರಿಯನ್ನು ಚೆನ್ನಾಗಿ ಬಳಸಿ.
  • ಕೀಟದ ಯಾವುದೇ ಚಿಹ್ನೆಗಾಗಿ ನಿಮ್ಮ ಸಸ್ಯಗಳನ್ನು ಅಥವಾ ಜಮೀನನ್ನು ಪರಿಶೀಲಿಸಿ.
  • ಸಸಿ ಮಡಿಯಲ್ಲಿ ಅಥವಾ ಹೊಲದಲ್ಲಿ ಕಂಡುಬರುವ ಯಾವುದೇ ಲಾರ್ವಾ ಮತ್ತು ಪ್ರೌಢಕೀಟಗಳನ್ನು ಕೈಯಿಂದ ತೆಗೆದುಹಾಕಿ ಮತ್ತು ನಾಶಮಾಡಿ.
  • ಸೋಂಕಿತ ಸಸ್ಯ ಮತ್ತು ತ್ಯಾಜ್ಯಗಳನ್ನು ತೆಗೆದುಹಾಕಿ ಅಥವಾ ಸುಟ್ಟು ನಾಶ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ