Aleyrodidae
ಕೀಟ
ಬಯಲು ಪ್ರದೇಶಗಳು ಮತ್ತು ಹಸಿರುಮನೆಗಳಲ್ಲಿ ಬೆಳೆಯುವ ವಿವಿಧ ಬೆಳೆಗಳಲ್ಲಿ ಬಿಳಿನೊಣಗಳು ಸಾಮಾನ್ಯವಾಗಿರುತ್ತವೆ. ಪ್ರೌಢ ಮತ್ತು ಮರಿಹುಳುಗಳೆರಡೂ ಸಸ್ಯದ ರಸವನ್ನು ಹೀರಿಕೊಳ್ಳುತ್ತವೆ ಮತ್ತು ಎಲೆಗಳು, ಕಾಂಡಗಳು ಮತ್ತು ಹಣ್ಣುಗಳ ಮೇಲೆ ಸಿಹಿ ಅಂಟನ್ನು ಹೊರಹಾಕುತ್ತವೆ. ಸೋಂಕಿತ ಅಂಗಾಂಶಗಳ ಮೇಲೆ ಕ್ಲೋರೊಟಿಕ್ ಚುಕ್ಕೆಗಳು ಮತ್ತು ಕಂದುಬಣ್ಣದ ಬೂಸ್ಟುಗಳು ಬೆಳೆಯುತ್ತವೆ. ಸೋಂಕು ತೀವ್ರವಾದ ಸಮಯದಲ್ಲಿ, ಈ ಕಲೆಗಳು ಒಂದಕ್ಕೊಂದು ಸೇರಿಕೊಂಡು, ನಾಳಗಳ ಸುತ್ತಲಿನ ಪ್ರದೇಶವನ್ನು ಹೊರತುಪಡಿಸಿ ಇಡೀ ಎಲೆಗಳ ಮೇಲೆ ಹರಡಬಹುದು. ಎಲೆಗಳು ನಂತರ ವಿರೂಪವಾಗುತ್ತವೆ, ಸುರುಳಿಯಾಗುತ್ತವೆ ಅಥವಾ ಬಟ್ಟಲಿನ ಆಕಾರವನ್ನು ತೆಗೆದುಕೊಳ್ಳುತ್ತವೆ. ಕೆಲವು ಬಿಳಿನೊಣಗಳು ಟೊಮೆಟೊ ಹಳದಿ ಎಲೆ ಸುರುಳಿ ವೈರಸ್ ಅಥವಾ ಕಸ್ಸಾವಾ ಬ್ರೌನ್ ಸ್ಟ್ರೀಕ್ ವೈರಸ್ ನಂತಹ ವೈರಸ್ ಗಳನ್ನು ಹರಡುತ್ತವೆ.
ಜೈವಿಕ ಪರಿಹಾರಗಳು ಬಿಳಿ ನೊಣದ ನಿರ್ದಿಷ್ಟ ಪ್ರಭೇದಗಳು ಮತ್ತು ಬೆಳೆಯ ವಿಧಕ್ಕೆ ಅನುಗುಣವಾಗಿ ಬದಲಾಗುತ್ತದೆ. ಸಕ್ಕರೆ-ಸೇಬು ತೈಲ (ಅನ್ನೊನಾ ಸ್ಕ್ಮಾಮೋಸಾ), ಪೈರೆಥ್ರಿನ್ ಗಳು, ಕೀಟನಾಶಕ ಸಾಬೂನುಗಳು, ಬೇವಿನ ಬೀಜದ ಕಾಳುಗಳ ಸಾರ (NSKE 5%), ಬೇವಿನ ಎಣ್ಣೆ (5 ಮಿಲೀ / ಲೀ ನೀರು) ಅನ್ನು ಆಧರಿಸಿ ನೈಸರ್ಗಿಕ ಕೀಟನಾಶಕಗಳನ್ನು ಶಿಫಾರಸು ಮಾಡಲಾಗುತ್ತದೆ. ರೋಗಕಾರಕ ಶಿಲೀಂಧ್ರಗಳೆಂದರೆ ಬ್ಯೂವರ್ರಿಯಾ ಬಾಸಿಯಾನಾ, ಇಸೇರಿಯಾ ಫ್ಯೂಮೋಸೊರೋಸಿ, ವೆರ್ಟಿಸಿಲಿಯಮ್ ಲೆಕಾನಿ ಮತ್ತು ಪಿಸಿಲೊಮೈಸಸ್ ಫ್ಯೂಮೊಸೋರೋಸಿಯಸ್.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಬಿಳಿ ನೊಣಗಳು ಎಲ್ಲಾ ಕೀಟನಾಶಕಗಳಿಗೆ ಬೇಗನೆ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತವೆ. ಆದ್ದರಿಂದ ವಿಭಿನ್ನ ಉತ್ಪನ್ನಗಳನ್ನು ಸರದಿಯಾಗಿ ಬಳಸುವುದನ್ನು ಶಿಫಾರಸು ಮಾಡಲಾಗಿದೆ. ಕೀಟಗಳನ್ನು ನಿಯಂತ್ರಿಸಲು ಬೈಫೆಂಥ್ರಿನ್, ಬುಪ್ರೊಫೆಜಿನ್, ಫೆನೋಕ್ಸಿಕಾರ್ಬ್, ಡೆಲ್ಟಾಮೆಥ್ರಿನ್, ಅಜಡಿರಾಚ್ಟಿನ್, ಡೆಲ್ಟಾಮೆಥ್ರಿನ್, ಲ್ಯಾಂಬಾ-ಸೈಹಲೋಥ್ರಿನ್, ಸೈಪರ್ಮೀಥರಿನ್, ಪೈರೆಥ್ರಾಯಿಡ್ಸ್ ಪಿಮೆಟ್ರೋಜೈನ್ ಅಥವಾ ಸ್ಪಿರೋಮೆಸ್ಫಿನ್ ಆಧರಿಸಿರುವ ಅಥವಾ ಅವುಗಳ ಸಂಯೋಜನೆಯ ಉತ್ಪನ್ನಗಳನ್ನು ಬಳಸಿ. ಕೀಟದ ಸಂಖ್ಯೆಯನ್ನು ನಿರುಪದ್ರವ ಮಟ್ಟಕ್ಕೆ ಕಡಿಮೆ ಮಾಡಲು ಮುಂಜಾಗ್ರತಾ ಕ್ರಮಗಳೇ ಸಾಕು ಎಂಬುದು ತಿಳಿದಿರಲಿ.
ಬಿಳಿ ನೊಣಗಳು 0.8 - 1 ಮಿಮೀ ಉದ್ದವಿರುತ್ತವೆ ಮತ್ತು ಬಿಳಿ ಮತ್ತು ಹಳದಿ ಬಣ್ಣದ ಪುಡಿ, ಮೇಣದ ರಸಸ್ರಾವದಿಂದ ಮುಚ್ಚಲ್ಪಟ್ಟ ದೇಹ ಮತ್ತು ಎರಡು ಜೋಡಿ ರೆಕ್ಕೆಗಳನ್ನು ಹೊಂದಿರುತ್ತವೆ. ಅವುಗಳು ಸಾಮಾನ್ಯವಾಗಿ ಎಲೆಗಳ ಕೆಳಭಾಗದಲ್ಲಿ ಕಂಡುಬರುತ್ತವೆ, ಮತ್ತು ಅದನ್ನು ಅಲ್ಲಾಡಿಸಿದಾಗ, ನೊಣಗಳು ಒಂದು ಮೋಡದಂತೆ ಒಟ್ಟಿಗೆ ಹೊರಹೊಮ್ಮುತ್ತವೆ. ಅವು ಬೆಚ್ಚಗಿನ, ಒಣ ಪರಿಸ್ಥಿತಿಯಲ್ಲಿ ಬೆಳೆಯುತ್ತವೆ. ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗಳನ್ನು ಇಡಲಾಗುತ್ತದೆ. ಮರಿಹುಳುಗಳು ಬಿಳಿ ಅಥವಾ ಹಳದಿ ಬಣ್ಣದಲ್ಲಿದ್ದು, ಚಪ್ಪಟೆಯಾಗಿ, ಅಂಡಾಕಾರದಲ್ಲಿರುತ್ತವೆ ಮತ್ತು ತಿಳಿ ಹಸಿರು ಬಣ್ಣದಲ್ಲಿರುತ್ತವೆ. ಪ್ರೌಢ ಬಿಳಿ ನೊಣಗಳು ಕೆಲವು ದಿನಗಳು ಮಾತ್ರ ತನಗೆ ಆಶ್ರಯ ನೀಡುವ ಸಸ್ಯಗಳನ್ನು ತಿನ್ನದೆ ಬದುಕಬಲ್ಲವು, ಹೆಚ್ಚಿನ ದಿನಗಳವರೆಗೆ ಸಾಧ್ಯವಿಲ್ಲ. ಈ ಕಾರಣದಿಂದ ಕಳೆ-ನಿರ್ವಹಣೆಯು ಒಂದು ಪ್ರಮುಖ ಕೀಟ ಸಂಖ್ಯಾ ನಿಯಂತ್ರಣ ಕ್ರಮವಾಗಿದೆ.