ಸಿರಿಧಾನ್ಯ

ಕಾಂಡ ಕೊರಕ

Acigona ignefusalis

ಕೀಟ

ಸಂಕ್ಷಿಪ್ತವಾಗಿ

  • ಬೆಳೆಯುತ್ತಿರುವ ತುದಿಗಳು ಮತ್ತು ಎಲೆಗಳ ಮೇಲೆ ದಾಳಿ ಮಾಡುತ್ತವೆ.
  • ಹಾಗು ಕಾಂಡಗಳನ್ನು ಕೊರೆಯುತ್ತವೆ.
  • ಕೆಂಪು ಮಿಶ್ರಿತ ಕಂದು ಬಣ್ಣದ ತಲೆಯಿರುವ ಮತ್ತು ಬಿಳಿ ದೇಹದ 20 ಮಿಮೀ ಲಾರ್ವಾಗಳು ಮೊಟ್ಟೆಗಳನ್ನು ತಂಡ ತಂಡವಾಗಿ ಇಡುತ್ತವೆ.
  • ಮೊಟ್ಟೆಗಳು ಹಳದಿ ಬಣ್ಣವನ್ನು ಹೊಂದಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸಿರಿಧಾನ್ಯ

ರೋಗಲಕ್ಷಣಗಳು

ಕಾಂಡ ಕೊರಕದ ಲಾರ್ವಾಗಳು ಸಿರಿಧಾನ್ಯದ ಎಲೆಗಳು ಮತ್ತು ಎಲೆಗಳ ತುದಿಗಳನ್ನು ಆಕ್ರಮಿಸುತ್ತವೆ. ಮರಿಹುಳುಗಳು ಕಾಂಡದೊಳಗೆ ರಂಧ್ರಗಳನ್ನು ಮಾಡಿ ಅವುಗಳನ್ನು ಕೊರೆಯುತ್ತವೆ. ಇದು ಅಂತಿಮವಾಗಿ ಸಸ್ಯದ ಮರಣಕ್ಕೆ ಕಾರಣವಾಗುತ್ತದೆ. ಸಂಪೂರ್ಣವಾಗಿ ಬೆಳೆದ ಲಾರ್ವಾಗಳು ಸುಮಾರು 20 ಮಿಮೀ ಉದ್ದವಿರುತ್ತವೆ ಮತ್ತು ಕೆಂಪು-ಕಂದು ಬಣ್ಣದ ತಲೆ ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತವೆ. ಅವುಗಳ ಮೇಲೆ ಕಪ್ಪು ಚುಕ್ಕೆಗಳಿರಬಹುದು. ವಯಸ್ಕ ಚಿಟ್ಟೆಯ ಬಿಳಿ ರೆಕ್ಕೆಗಳು ಸುಮಾರು 8 ರಿಂದ 15 ಮಿಮೀ ಇರುತ್ತವೆ. ಕಾಂಡದ ಕೊರಕ ಮೊಟ್ಟೆಗಳನ್ನು ಎಲೆಗಳಲ್ಲಿ ತಂಡ ತಂಡವಾಗಿ ಇಡುತ್ತದೆ ಮತ್ತು ಈ ಮೊಟ್ಟೆಗಳು ಹಳದಿ ಬಣ್ಣವನ್ನು ಹೊಂದಿರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಫೆರೋಮೋನ್ ಬಲೆಗಳ ಸಹಾಯದಿಂದ ನೀವು ಕಾಂಡ ಕೊರಕದ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಬಲೆಗಳನ್ನು ಬೇಲಿಗಳ ಉದ್ದಕ್ಕೂ (ವಿಶೇಷವಾಗಿ ಅವು ಸಿರಿಧಾನ್ಯ ಅಥವಾ ಇತರ ಹುಲ್ಲುಗಳಿಂದ ಮಾಡಲ್ಪಟ್ಟಿದ್ದರೆ) ಮತ್ತು ಕಣಜಗಳ ಸುತ್ತ ಇರಿಸಬೇಕು. ಬೇವಿನೆಣ್ಣೆಯನ್ನು ಋತುವಿನ ಆರಂಭದಲ್ಲಿ ಸೋಂಕಿತ ಎಲೆಗಳ ಮೇಲೆ ಸಿಂಪಡಿಸಿದರೆ ಅದು ಕಾಂಡ ಕೊರಕದ ವಿರುದ್ಧ ಪರಿಣಾಮಕಾರಿಯಾಗಿರುತ್ತದೆ. 'ಪುಶ್-ಪುಲ್' ವಿಧಾನ ತುಂಬಾ ಪರಿಣಾಮಕಾರಿಯಾಗಬಹುದು: ಡೆಸ್ಮೋಡಿಯಮ್ ನಂತಹ ಬೆಳೆಗಳನ್ನು ಸಿರಿಧಾನ್ಯಗಳ ಮಧ್ಯೆ ಅಂತರ ಬೆಳೆಯಾಗಿ ಬೆಳೆಯಬಹುದು. ಡೆಸ್ಮೋಡಿಯಮ್ ಒಂದು ನಿವಾರಕದಂತೆ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಪತಂಗಗಳು ಸಿರಿಧಾನ್ಯಗಳಿಂದ ದೂರ 'ತಳ್ಳಲ್ಪಡುತ್ತವೆ. '. ನಿಮ್ಮ ತೋಟದ ಗಡಿಯಲ್ಲಿ ನಾಪಿಯರ್ ಅಥವಾ ಸುಡಾನ್ ಹುಲ್ಲುಗಳಂತಹ ಜಮೀನು ಬಲೆ ಬೆಳೆಗಳನ್ನು ನೀವು ನೆಡಬಹುದು. ಈ ಬೆಳೆಗಳು ಪತಂಗಗಳನ್ನು ಆಕರ್ಷಿಸುತ್ತವೆ, ಆದ್ದರಿಂದ ಅವು ಸಿರಿಧಾನ್ಯಗಳಿಂದ ದೂರಕ್ಕೆ 'ಸೆಳೆಯಲ್ಪಡುತ್ತವೆ'.

ರಾಸಾಯನಿಕ ನಿಯಂತ್ರಣ

ಕೀಟನಾಶಕಗಳು ಹೆಚ್ಚಾಗಿ ದುಬಾರಿ ಮತ್ತು ಬಳಸಲು ಕಷ್ಟ. ಡಿಮೀಥೋಯೇಟ್ ಅನ್ನು ಬಳಸಬಹುದು. ಆದರೆ ಅದು ವೆಚ್ಚಕ್ಕೆ ತಕ್ಕಷ್ಚು ಪರಿಣಾಮಕಾರಿಯಲ್ಲ.

ಅದಕ್ಕೆ ಏನು ಕಾರಣ

ಆರ್ದ್ರ ಪ್ರದೇಶಗಳಲ್ಲಿ ವರ್ಷಕ್ಕೆ ಲಾರ್ವಾಗಳ ಮೂರು ತಲೆಮಾರುಗಳು ಕಂಡುಬರುತ್ತವೆ. ಒಣ ಪ್ರದೇಶಗಳಲ್ಲಿ ಎರಡು ಜೀವನಚಕ್ರಗಳು ಮಾತ್ರ ಸಂಭವಿಸುತ್ತವೆ. ಕಾಂಡ ಕೊರಕವು ಕಾಂಡವನ್ನು ಕೊರೆದು ಹಾಕುತ್ತದೆ. ಹೀಗಾಗಿ ಬೇರುಗಳಿಂದ ಸಸ್ಯದ ಉಳಿದ ಭಾಗಗಳಿಗೆ ನೀರು ಮತ್ತು ಪೋಷಕಾಂಶಗಳ ಹರಿವಿಗೆ ಅಡ್ಡಿಯಾಗುತ್ತದೆ. ಕಾಂಡ ಕೊರಕದ ಲಾರ್ವಾ ಬೆಳೆಯ ಉಳಿಕೆಗಳಲ್ಲಿ ಉಳಿದುಕೊಂಡಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸ್ಥಳೀಯವಾಗಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬಳಸಿ.
  • ಸೋಂಕು ತಪ್ಪಿಸಲು ಬೆಳೆಗಳನ್ನು ಬೇಗನೆ ನೆಡಿ.
  • ಆಶ್ರಯದಾತ ಸಸ್ಯಗಳ ನಡುವೆ ಅಲಸಂದೆಯಂತಹ ಆಶ್ರಯದಾತವಲ್ಲದ ಬೆಳೆಗಳನ್ನು ಬೆಳೆಯಿರಿ.
  • ಜಮೀನಿನ ಸುತ್ತಲೂ ಹೂಬಿಡುವ ಸಸಿಗಳನ್ನು ನೆಡುವ ಮೂಲಕ ನೈಸರ್ಗಿಕ ಶತ್ರುಗಳ (ಪರಭಕ್ಷಕ ಕಣಜಗಳು) ಸಂಖ್ಯೆಯನ್ನು ಉತ್ತೇಜಿಸಿ.
  • ಹುಳಗಳು ಕಾಂಡಗಳನ್ನು ಬಳಸುತ್ತಿದ್ದರೆ ಅವುಗಳನ್ನು ಭಾಗಶಃ ಸುಟ್ಟು ಬಿಡಿ.
  • ಕೊಯ್ಲಿನ ಎಲ್ಲಾ ಉಳಿಕೆಗಳನ್ನು ತೆರವುಗೊಳಿಸಿ ಮತ್ತು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ