ಸಿರಿಧಾನ್ಯ

ಹೆಡ್ ಮೈನರ್

Heliocheilus albipunctella

ಕೀಟ

ಸಂಕ್ಷಿಪ್ತವಾಗಿ

  • ಮರಿಹುಳುಗಳು ಸಿರಿಧಾನ್ಯಗಳ ತೆನೆಯ ಮೇಲ್ಬಾಗದಲ್ಲಿ ಬೆಳೆಯುವ ಧಾನ್ಯಗಳನ್ನು ತಿನ್ನುತ್ತವೆ.
  • ತೆನೆಯ ಮೇಲ್ಮೈ ಮೇಲೆ ಸುರುಳಿಯಾಕಾರದ ಗುರುತುಗಳು ಕಾಣಿಸಿಕೊಂಡು ಬೀಜವು ಉದುರಿಹೋಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸಿರಿಧಾನ್ಯ

ರೋಗಲಕ್ಷಣಗಳು

ಹೆಡ್ ಮೈನರ್ಸ್ ಜೀವನ ಚಕ್ರವು ಸಿರಿಧಾನ್ಯಗಳ ಸಸ್ಯಗಳ ಬೆಳವಣಿಗೆಯೊಂದಿಗೆ ಗಟ್ಟಿಯಾದ ಸಂಬಂಧ ಹೊಂದಿದೆ. ಮೊಟ್ಟೆಯೊಡೆದು ಹೊರಬಂದ ನಂತರ, ಮರಿಹುಳುಗಳು ತಮ್ಮ ಲಾರ್ವ ಬೆಳವಣಿಗೆಯನ್ನು ಗೊಂಚಲಿನ ಒಳಗೆ ಪೂರೈಸುತ್ತವೆ. ಅವುಗಳನ್ನೇ ತಿನ್ನುತ್ತವೆ. ತೆನೆಯು ಅಭಿವೃದ್ಧಿಯಾದಂತೆ, ಸಣ್ಣ ಲಾರ್ವಾಗಳು ಕಾಳಿನ ಹೊಟ್ಟುಗಳನ್ನು ಕೊರೆದು ಹೂವುಗಳನ್ನು ತಿನ್ನುತ್ತವೆ. ಬೆಳೆದ ಲಾರ್ವಾಗಳು ಹೂವಿನ ಗೊಂಚಲನ್ನು ಕತ್ತರಿಸುವ ಮೂಲಕ ಧಾನ್ಯ ರಚನೆಯಮ್ಮಿ ತಡೆಗಟ್ಟುತ್ತವೆ ಮತ್ತು ಬೆಳೆದ ಧಾನ್ಯಗಳು ಉದುರಿಹೋಗುವಂತೆ ಮಾಡುತ್ತವೆ. ಅಕ್ಷದಿಂಡು ಮತ್ತು ಹೂಗಳು ನಡುವೆ ಮರಿಹುಳುಗಳು ತಿನ್ನುವುದರಿಂದ, ಅವು ಬೆಳೆಯುತ್ತಿರುವ ಧಾನ್ಯವನ್ನು ಮತ್ತು ಹಾಳಾದ ಹೂವನ್ನು ಮೇಲಕ್ಕೆ ಎತ್ತುತ್ತವೆ. ಇದು ಒಂದು ವಿಶಿಷ್ಟ ಸುರುಳಿಯಾಕಾರದ ಗುರುತನ್ನು ತೆನೆಗಳ ಮೇಲೆ ಉಳಿಸುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹ್ಯಾಬ್ರೋಬ್ರಕಾನ್ ಹೆಬೆಟರ್, ಹೆಡ್ ಮೈನರ್ಸ್ ನ ವಿರುದ್ಧ ಒಂದು ನೈಸರ್ಗಿಕ ಪ್ಯಾರಾಸಿಟಾಯಿಡ್ ಆಗಿದೆ. ಮತ್ತು ಕೆಲವು ಆಫ್ರಿಕನ್ ದೇಶಗಳಲ್ಲಿ ಸೋಂಕಿತ ಸಿರಿಧಾನ್ಯದ ಜಮೀನುಗಳಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಯಶಸ್ವಿಯಾಗಿ 97% ರೋಗ ನಾಶವಾಗಿ, ಧಾನ್ಯ ಉತ್ಪಾದನೆ ಗಮನಾರ್ಹವಾದ ರೀತಿಯಲ್ಲಿ ಹೆಚ್ಚಿದೆ.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನ ಲಭ್ಯವಿದ್ದರೆ ಯಾವಾಗಲೂ ಅದನ್ನು ಮೊದಲು ಪರಿಗಣಿಸಿ. ಹೆಲಿಯೊಚೈಲಸ್ ಅಲ್ಬಿಪುನ್ಕ್ಟೆಲ್ಲಾ ದ ವಿರುದ್ಧ ಪರಿಣಾಮಕಾರಿ ನಿಯಂತ್ರಣವನ್ನು ಒದಗಿಸುವ ಯಾವುದೇ ರಾಸಾಯನಿಕ ನಿಯಂತ್ರಣಗಳು ಇದುವರೆಗೆ ಲಭ್ಯವಿಲ್ಲ.

ಅದಕ್ಕೆ ಏನು ಕಾರಣ

ಹೆಲಿಯೊಚೈಲಸ್ ಅಲ್ಬಿಪುನ್ಕ್ಟೆಲ್ಲಾ ಎಂಬ ಮಿಲ್ಲೆಟ್ ಹೆಡ್ ಮೈನರ್ ನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ವಯಸ್ಕ ಚಿಟ್ಟೆಯ ಹಾರಾಟದ ಅವಧಿ ಸಿರಿಧಾನ್ಯದ ಹೂಗೊಂಚಲು ಹೊರಹೊಮ್ಮುವಿಕೆ ಮತ್ತು ಹೂಬಿಡುವಿಕೆಯೊಂದಿಗೆ ಹೊಂದಿಕೆಯಾಗುತ್ತದೆ. ಹೆಣ್ಣು ಪತಂಗಗಳು ತೆನೆಯ ಆರಂಭಿಕ ಬೆಳವಣಿಗೆಯ ಸಂದರ್ಭದಲ್ಲಿ ಪ್ರತ್ಯೇಕವಾಗಿ ಅಥವಾ ಚಿಕ್ಕ ಗುಂಪುಗಳಲ್ಲಿ ಅಕ್ಷದಿಂಡುವಿನ ಮೇಲೆ ಅಂಟಿಕೊಂಡಂತೆ ಅಥವಾ ಹೂವುಗಳ ಬುಡದಲ್ಲಿ ಅಥವಾ ಮುಖ್ಯದಂಟುವಿನ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯೊಡೆದು ಹೊರಬಂದ ನಂತರ ಮರಿ ಲಾರ್ವಾಗಳು ಗೊಂಚಲನ್ನು ತಿನ್ನುತ್ತವೆ. ಮತ್ತು ಬೆಳೆದ ಲಾರ್ವಾಗಳು ವಿಶಿಷ್ಟ ಸುರುಳಿಯಾಕಾರದ ಸುರಂಗಗಳನ್ನು ಉಂಟುಮಾಡುತ್ತವೆ. ಪೂರ್ಣ ಬೆಳೆದ ಲಾರ್ವಾಗಳು ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿ ನೆಲದ ಮೇಲೆ ಬೀಳುತ್ತವೆ. ಅಲ್ಲಿ ಅದು ಮಣ್ಣನ್ನು ಪ್ರವೇಶಿಸಿ ಕೋಶಾವಸ್ಥೆಗೆ ತೆರಳುತ್ತದೆ. ನೆಲದ ಮೇಲೆ, ಅವು ಇಡೀ ಶುಷ್ಕ ಋತುವನ್ನು ಕಳೆದು ನಂತರದ ಮಳೆಗಾಲದಲ್ಲಿ ಪ್ರೌಢಕೀಟಗಳಾಗಿ ಹೊರಹೊಮ್ಮುತ್ತವೆ. ಈ ಕೀಟ ಪಶ್ಚಿಮ ಆಫ್ರಿಕಾದ ಸೇಹೇಲಿಯನ್ ಪ್ರದೇಶದಲ್ಲಿ ಬಾಜ್ರದ ಹೂಗೊಂಚಲನ್ನು ಹಾಳುಗೆಡಹುವ ಅತ್ಯಂತ ಹಾನಿಕಾರಕ ಕೀಟ ಎಂದು ಪರಿಗಣಿತವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಲಾರ್ವಾಗಳನ್ನು ಗುರುತಿಸಲು ನಿಯಮಿತವಾಗಿ ಗೊಂಚಲು ಮತ್ತು ನೆಲದ ಪರಿಶೀಲನೆ ಮಾಡಿ.
  • ಸೋಂಕಿತ ಗೊಂಚಲುಗಳನ್ನು ತೆಗೆದುಹಾಕಿ ಮತ್ತು ಜಮೀನಿಗೆ ದೂರದಲ್ಲಿ ಹೂತು ಹಾಕುವ ಅಥವಾ ಸುಡುವ ಮೂಲಕ ಅವುಗಳನ್ನು ನಾಶಮಾಡಿ.
  • ಕಡಿಮೆ ಬೆಳವಣಿಗೆ ಅವಧಿ ಹೊಂದಿರುವ ಸಿರಿಧಾನ್ಯ ಪ್ರಭೇದಗಳನ್ನು (ಬೆಳೆಯಲು 75 ದಿನಗಳು) ನೆಡುವಾಗ ಎರಡು ವಾರಗಳಷ್ಟು ತಡ ಮಾಡುವ ಮೂಲಕ ಬೆಳೆ ಗರಿಷ್ಟ ಸೋಂಕಿಗೆ ಒಳಗಾಗುವ ಹಂತವನ್ನು ತಪ್ಪಿಸಬಹುದು.
  • ಲಾರ್ವಾ ಮತ್ತು ಕೋಶವನ್ನು ಬಿಸಿಲಿಗೆ ಒಡ್ಡಲು ಸುಗ್ಗಿಯ ನಂತರ ಆಳವಾಗಿ ಉಳುಮೆ ಮಾಡುವುದನ್ನು ಮರೆಯಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ