ಇತರೆ

ಹಣ್ಣಿನ ಮರದ ತೊಗಟೆ ಜೀರುಂಡೆ

Scolytus mali

ಕೀಟ

ಸಂಕ್ಷಿಪ್ತವಾಗಿ

  • ಒಣಗಿದ ಮರಗಳ ಕಾಂಡ ಅಥವಾ ಕೊಂಬೆಗಳ ಮೇಲೆ ರಂಧ್ರಗಳು ಮತ್ತು ಮರಿಹುಳುಗಳ ಹಿಕ್ಕೆ ಕಂಡು ಬರುತ್ತವೆ.
  • ತೊಗಟೆಯನ್ನು ಕತ್ತರಿಸಿ ತೆಗೆದರೆ, ಸುರಂಗಗಳಂತಹ ಜೋಡಣೆಯನ್ನು ನೇರವಾಗಿ ಸ್ಯಾಪ್ ವುಡ್ ನಲ್ಲಿ ಕಾಣಬಹುದು.
  • ಈ ವಿಶಿಷ್ಟವಾದ ಸುರಂಗವು ಮಾಯನ್ ಕ್ವಿಪುವನ್ನು ಹೋಲುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಸೇಬು
ಜಲ್ದರು ಹಣ್ಣು
ಚೆರ್ರಿ
ಪೀಚ್
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಹೆಣ್ಣು ಜೀರುಂಡೆಗಳು ಸಾಮಾನ್ಯವಾಗಿ ತಮ್ಮ ಮೊಟ್ಟೆಗಳನ್ನು ಇಡಲು ಒಣಗಿದ ಅಥವಾ ಹೊಸ ಮರಗಳನ್ನು ಆಯ್ಕೆಮಾಡಿಕೊಳ್ಳುತ್ತವೆ. ತೊಗಟೆ ಹೆಚ್ಚು ದೃಢವಾಗಿರುವುದರಿಂದ, ಬೆಳೆದ, ಆರೋಗ್ಯಕರ ಮರಗಳು ಬಾಧೆಗೆ ಒಳಗಾಗುವ ಸಾಧ್ಯತೆ ಕಡಿಮೆ. ಕಾಂಡ ಅಥವಾ ಕೊಂಬೆಗಳಲ್ಲಿ ಮರಿಹುಳುಗಳ ಹಿಕ್ಕೆಗಳೊಂದಿಗೆ ನಿರ್ಗಮನ ಅಥವಾ ಪ್ರವೇಶ ರಂಧ್ರಗಳು ಕಂಡು ಬರುತ್ತವೆ. ತೊಗಟೆಯನ್ನು ಕತ್ತರಿಸಿ ತೆಗೆದರೆ, ಸುರಂಗಗಳ ಜೋಡಣೆಯಂತಹ ವ್ಯವಸ್ಥೆಯನ್ನು ನೇರವಾಗಿ ಸ್ಯಾಪ್ ವುಡ್ ನಲ್ಲಿ ಕಾಣಬಹುದು. ಹೆಣ್ಣು ಜೀರುಂಡೆಗಳು ಸುಮಾರು 5-6 ಸೆಂ.ಮೀ ಉದ್ದದ (10 ಸೆಂ.ಮೀ.ವರೆಗೆ), ಮತ್ತು 2 ಮಿ.ಮೀ ಅಗಲದ ಉದ್ದದ ತಾಯಿಯ ಗ್ಯಾಲರಿಯನ್ನು ಕಡಿದು ನಿರ್ಮಿಸುತ್ತವೆ. ಹಾಗೆ ಮಾಡುವಾಗ, ಈ ಸುರಂಗದ ಬದಿಗಳಲ್ಲಿ ಸಣ್ಣ ಕುಳಿಗಳ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯೊಡೆದ ನಂತರ, ಲಾರ್ವಾಗಳು ತೊಗಟೆಯ ಕೆಳಗೆ ಸ್ವಲ್ಪ ಚಿಕ್ಕದಾದ ಮತ್ತು ಕಿರಿದಾದ ಗ್ಯಾಲರಿಗಳನ್ನು ಕೊರೆಯುತ್ತವೆ. ಇವು ತಾಯಿ ಸುರಂಗದಿಂದ ಪ್ರಾರಂಭವಾಗುತ್ತವೆ ಮತ್ತು ಅದಕ್ಕೆ ಬಹುತೇಕ ಲಂಬವಾಗಿರುತ್ತವೆ. ಈ ವಿಶಿಷ್ಟವಾದ ಸುರಂಗವು ಮಾಯನ್ ಕ್ವಿಪುವನ್ನು ಹೋಲುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸ್ಕೋಲಿಟಸ್ ಮಾಲಿ ಹೆಚ್ಚಿನ ಸಂಖ್ಯೆಯ ಪರಭಕ್ಷಕಗಳನ್ನು ಹೊಂದಿದೆ. ಆದರೆ ಕೆಲವೇ ಕೆಲವು ಅಧ್ಯಯನಗಳು ಮಾತ್ರ ಜಮೀನಿನಲ್ಲಿ ಜೈವಿಕ ನಿಯಂತ್ರಣವಾಗಿ ಅವುಗಳ ಸಂಭವನೀಯ ಬಳಕೆಯ ಬಗ್ಗೆ ಅಧ್ಯಯನ ಮಾಡಿವೆ. ಅನೇಕ ಜಾತಿಯ ಪಕ್ಷಿಗಳು ಸ್ಕೋಲಿಟಸ್ ಮಾಲಿಯ ಲಾರ್ವಾಗಳ ಪರಭಕ್ಷಕಗಳಾಗಿವೆ. ಸ್ಪಾಥಿಯಸ್ ಬ್ರೆವಿಕಾಡಿಸ್ ಜಾತಿಯ ಬ್ರಕೊನಿಡ್ ಪ್ಯಾರಾಸಿಟಾಯ್ಡ್ ಕಣಜಗಳು ಸಹ ಜೀರುಂಡೆಗಳ ಸಂಖ್ಯೆಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಬಹುದು. ಚಾಲ್ಸಿಡ್ ಪ್ರಕಾರದ ಇತರ ಕಣಜಗಳನ್ನು ಸಹ ಬಳಸಬಹುದು (ಚೀರೋಪಾಚಿಸ್ ಕೊಲೊನ್ ಅಥವಾ ಡೈನೋಟಿಸ್ಕಸ್ ಅಪೋನಿಯಸ್, ಇತ್ಯಾದಿ).

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಬೇಕು. ಜೀರುಂಡೆಗಳ ಸಂಖ್ಯೆ ಬಾಧಿತ ಮಟ್ಟವನ್ನು ತಲುಪಿದರೆ ಮತ್ತು ವಯಸ್ಕ ಜೀರುಂಡೆಗಳು ಹಾರಾಟದ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದರೆ ಕ್ರಿಮಿನಾಶಕ ಚಿಕಿತ್ಸೆಗಳು ಅವಶ್ಯಕ. ಹಣ್ಣಿನ ಮರದ ತೊಗಟೆ ಜೀರುಂಡೆಯನ್ನು ನಿಯಂತ್ರಿಸಲು ಯಾವುದೇ ಕೀಟನಾಶಕಗಳು ಪ್ರಸ್ತುತ ಲಭ್ಯವಿಲ್ಲ.

ಅದಕ್ಕೆ ಏನು ಕಾರಣ

ಹಣ್ಣಿನ ಮರಗಳ ಮೇಲೆ ಕಂಡುಬರುವ ರೋಗಲಕ್ಷಣಗಳು ಸ್ಕೊಲಿಟಸ್ ಮಾಲಿ ಎಂಬ ಜೀರುಂಡೆಯಿಂದ ಉಂಟಾಗುತ್ತವೆ. ಈ ಕೀಟಗಳ ಲಾರ್ವಾಗಳು ಕ್ಸೈಲೋಫಾಗಸ್ ಆಗಿರುತ್ತವೆ. ಅಂದರೆ ಅವು ತೊಗಟೆಯ ಕೆಳಗಿನ ಸ್ಯಾಪ್ ವುಡ್ ನಿಂದ ಆಹಾರವನ್ನು ಪಡೆಯುತ್ತವೆ. ವಯಸ್ಕ ಜೀರುಂಡೆಗಳು ಕೆಂಪು-ಕಂದು ಬಣ್ಣದಲ್ಲಿ ಹೊಳೆಯುತ್ತಿರುತ್ತದೆ, ಕಪ್ಪು ಬಣ್ಣದ ತಲೆ ಮತ್ತು ಸುಮಾರು 2.5-4.5 ಮಿಮೀ ಉದ್ದವಿರುತ್ತದೆ. ಹೆಣ್ಣು ಜೀರುಂಡೆಗಳು ಸಾಮಾನ್ಯವಾಗಿ ಒಣಗಿದ ಮರಗಳನ್ನು ಆರಿಸಿಕೊಳ್ಳುತ್ತವೆ. ತೊಗಟೆಯ ಮೂಲಕ ರಂಧ್ರವನ್ನು ಮಾಡುತ್ತದೆ ಮತ್ತು ಸ್ಯಾಪ್ ವುಡ್ ನಲ್ಲಿ ಸುರಂಗವನ್ನು ಕೊರೆಯುತ್ತವೆ. ಈ ತಾಯಿಯ ಗ್ಯಾಲರಿಯ ಉದ್ದಕ್ಕೂ ಮೊಟ್ಟೆಗಳನ್ನು ಇಡಲಾಗುತ್ತದೆ. ಇದು 10 ಸೆಂ.ಮೀ ಉದ್ದವಿರಬಹುದು. ಮೊಟ್ಟೆಯೊಡೆದ ನಂತರ, ಲಾರ್ವಾಗಳು ತೊಗಟೆಯ ಕೆಳಗೆ ಸ್ವಲ್ಪ ಚಿಕ್ಕದಾದ ಮತ್ತು ಕಿರಿದಾದ ಗ್ಯಾಲರಿಗಳನ್ನು ಕೊರೆಯುತ್ತವೆ. ಇವು ತಾಯಿ ಸುರಂಗದಿಂದ ಪ್ರಾರಂಭವಾಗುತ್ತವೆ ಮತ್ತು ಅದಕ್ಕೆ ಬಹುತೇಕ ಲಂಬವಾಗಿರುತ್ತವೆ. ವಸಂತಕಾಲದಲ್ಲಿ, ಲಾರ್ವಾಗಳು ಅಲ್ಲಿ ಗೂಡಿನಲ್ಲಿ ಕೋಶಾವಸ್ಥೆ ಪ್ರವೇಶಿಸುತ್ತವೆ. ನಿರಂತರ ಬೆಚ್ಚಗಿನ ತಾಪಮಾನದಲ್ಲಿ (18-20 ° C), ವಯಸ್ಕ ಜೀರುಂಡೆಗಳು ಮೊಟ್ಟೆಯೊಡೆದು, ತೊಗಟೆಯ ಮೂಲಕ ಸುರಂಗವನ್ನು ಕೊರೆದು ಹೊಸ ಚಕ್ರವನ್ನು ಪ್ರಾರಂಭಿಸಲು ಇತರ ಸೂಕ್ತವಾದ ಮರಗಳಿಗೆ ಹಾರುತ್ತವೆ. ಮುತ್ತಿಕೊಳ್ಳುವಿಕೆಯು ಮರಗಳ ದುರ್ಬಲತೆಯ ಸಂಕೇತವಾಗಿದೆ - ಶಿಲೀಂಧ್ರಗಳ ಸೋಂಕಿನಿಂದ ಅಥವಾ ಪ್ರತಿಕೂಲವಾದ ಮಣ್ಣಿನ ಪರಿಸ್ಥಿತಿಗಳಿಂದಾಗಿ ದುರ್ಬಲವಾಗಿರಬಹುದು.


ಮುಂಜಾಗ್ರತಾ ಕ್ರಮಗಳು

  • ಮರಗಳಿಗೆ ಸಮತೋಲಿತ ಪೋಷಣೆ ಸಿಗುವುದನ್ನು ಖಚಿತಪಡಿಸಿಕೊಳ್ಳಬೇಕು.
  • ಸಾಕಷ್ಟು ನೀರು ಸಿಗುವಂತೆ ನೋಡಿಕೊಳ್ಳಬೇಕು.
  • ಆದರೆ ಹೆಚ್ಚು ನೀರು ಹಾಕಬಾರದು.
  • ಹಣ್ಣಿನ ಮರಗಳ ಹತ್ತಿರ ಉರುವಲು ಸಂಗ್ರಹಿಸಬಾರದು.
  • ಜೀರುಂಡೆಯ ಸಂಖ್ಯೆಯ ಮೇಲೆ ನಿಗಾ ಇಡಲು ಫೆರೋಮೋನ್ ಬಲೆಗಳನ್ನು ಬಳಸಿ.
  • ಮರಗಳಿಗೆ ಅಥವಾ ಕೊಂಬೆಗಳಿಗೆ ಬಲೆ ಹಾಕುವುದು ಸಹ ಉತ್ತಮವಾಗಿ ಪರಿಣಾಮಕಾರಿಯಾಗಬಲ್ಲದು.
  • ಬಾಧಿತ ಕೊಂಬೆಗಳು ಅಥವಾ ಮರಗಳನ್ನು ಕತ್ತರಿಸಿ ಸುಟ್ಟುಹಾಕಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ