ಇತರೆ

ಉಣ್ಣೆಯ ಗಿಡಹೇನು

Eriosoma lanigerum

ಕೀಟ

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಚಿಗುರುಗಳು ಬಾಡುತ್ತವೆ ಮತ್ತು ಹಳದಿಯಾಗುತ್ತವೆ.
  • ತೊಗಟೆ, ಚಿಗುರುಗಳು ಮತ್ತು ಬೇರುಗಳ ಮೇಲೆ ಹುಣ್ಣು ಮತ್ತು ಊತ.
  • ಕೀಟ ತಿಂದ ತಾಣಗಳಲ್ಲಿ ಬಿಳಿ, ತುಪ್ಪುಳದಂತಿರುವ ಪದರ.
  • ಅವಕಾಶವಾದಿ ಶಿಲೀಂಧ್ರಗಳ ಧಾಳಿಗೆ ಗುರಿಯಾಗುತ್ತದೆ.
  • ಕುಂಠಿತ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು
ಸೇಬು
ಪೇರು ಹಣ್ಣು/ ಮರಸೇಬು
ಕಬ್ಬು

ಇತರೆ

ರೋಗಲಕ್ಷಣಗಳು

ಬಿಳಿ ಕೂದಲುಳ್ಳ ಕೀಟಗಳು. ಮೊಗ್ಗುಗಳು, ಕೊಂಬೆಗಳು, ಶಾಖೆಗಳು, ಚಿಗುರುಗಳು ಮತ್ತು ಬೇರುಗಳನ್ನು ತಿನ್ನುವುದನ್ನು ಕಾಣಬಹುದು. ವಿರೂಪಗೊಂಡ ಎಲೆಗಳು, ಹಳದಿ ಎಲೆಗಳು, ಕಳಪೆ ಬೆಳವಣಿಗೆ ಮತ್ತು ಶಾಖೆಯ ಡೈಬ್ಯಾಕ್ ಈ ಆಹಾರ ಚಟುವಟಿಕೆಯ ಪರಿಣಾಮವಾಗಿದೆ. ತಿಂದ ಸ್ಥಳಗಳ ಬಳಿ ಬಿಳಿ, ತುಪ್ಪುಳಿದಂತಿರುವ ಪದರ ಮತ್ತು ಹನಿಡ್ಯೂ ಕಾಣಿಸಿಕೊಳ್ಳುತ್ತದೆ. ತೊಗಟೆ ಮತ್ತು ಚಿಗುರುಗಳ ಮೇಲೆ, ಹಣ್ಣು ಮತ್ತು ಊತಗಳ ಬೆಳವಣಿಗೆಯೂ ವಿಶಿಷ್ಟವಾಗಿದೆ. ಗಿಡಹೇನಿನ ಭೂಗತ ರೂಪಗಳು ಬೇರುಗಳ ಮೇಲೆ ದಾಳಿ ಮಾಡುತ್ತವೆ ಮತ್ತು ಊದಿಕೊಂಡ ಸ್ಥಳಗಳು ಅಥವಾ ದೊಡ್ಡ ಗಂಟುಗಳ ರಚನೆಗೆ ಕಾರಣವಾಗುತ್ತವೆ. ನೀರು ಮತ್ತು ಪೋಷಕಾಂಶಗಳ ದುರ್ಬಲ ಸಾಗಣೆಯಿಂದಾಗಿ ಮರಗಳು ಹಳದಿಯಾಗುತ್ತವೆ. ಆಫಿಡ್ ಆಹಾರ ಚಟುವಟಿಕೆಯ ಪರಿಣಾಮವಾಗಿ ಈ ಗಂಟುಗಳು ವರ್ಷದಿಂದ ವರ್ಷಕ್ಕೆ ಗಾತ್ರದಲ್ಲಿ ಹೆಚ್ಚಾಗುತ್ತವೆ. ಕೀಟಗಳಿಂದ ಉಂಟಾಗುವ ಗಾಯಗಳು ಮತ್ತು ಹನಿಡ್ಯೂ ಇರುವಿಕೆಯು ಸೋಂಕಿತ ಅಂಗಾಂಶಗಳನ್ನು ಮಸಿ ಮೋಲ್ಡ್ ನಿಂದ ಆವರಿಸುವ ಅವಕಾಶವಾದಿ ಶಿಲೀಂಧ್ರಗಳನ್ನು ಸಹ ಆಕರ್ಷಿಸುತ್ತದೆ. ಮುತ್ತಿಗೆಗೆ ಒಳಗಾದ ಎಳೆಯ ಸಸ್ಯಗಳನ್ನು ಸುಲಭವಾಗಿ ಬೇರುಸಹಿತ ಕಿತ್ತುಹೋಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಿಂಪಡಿಸುವ ದ್ರಾವಣಗಳು ಗಿಡಹೇನುಗಳು ಸ್ರವಿಸುವ ಉಣ್ಣೆಯ ಪದರವನ್ನು ಭೇದಿಸಿ ಅವುಗಳನ್ನು ಕೊಲ್ಲಲು ಶಕ್ತವಾಗಿರಬೇಕು. ದುರ್ಬಲಗೊಳಿಸಿದ ಆಲ್ಕೋಹಾಲ್ ದ್ರಾವಣಗಳು ಅಥವಾ ಕೀಟನಾಶಕ ಸಾಬೂನುಗಳನ್ನು ಉಣ್ಣೆಯಿರುವ ತಾಣಗಳ ಮೇಲೆ ಚಿಮುಕಿಸಿ ಅವುಗಳಿಗೆ ತೊಂದರೆ ಉಂಟು ಮಾಡಬಹುದು. ಪರಿಸರಸ್ನೇಹಿ ತೈಲಗಳು ಅಥವಾ ಬೇವಿನ ಸಾರವನ್ನು (2-3 ಮಿಲಿ / ಲೀ ನೀರಿಗೆ) ಮರಗಳ ಮೇಲೆ ಸಿಂಪಡಿಸಬಹುದು. ಉತ್ತಮ ವ್ಯಾಪ್ತಿ ಸಾಧಿಸುವುದು ಮತ್ತು ಮೊದಲ ಬಳಕೆಯ 7 ದಿನಗಳ ನಂತರ ಮತ್ತೊಮ್ಮೆ ಸ್ಪ್ರೇ ಮಾಡುವುದು ಅತ್ಯಗತ್ಯ. ಪರಾವಲಂಬಿಗಳು ಅಥವಾ ಪರಭಕ್ಷಕಗಳಾದ ಲೇಸ್‌ವಿಂಗ್ಸ್, ಲೇಡಿಬಗ್ಸ್ (ಎಕ್ಸೊಕೊಮಸ್ ಕ್ವಾಡ್ರಿಪುಸ್ಟುಲಟಸ್), ಹೋವರ್‌ಫ್ಲೈಸ್ ಲಾರ್ವಾಗಳು ಮತ್ತು ಪರಾವಲಂಬಿ ಕಣಜಗಳು (ಅಫೆಲಿನಸ್ ಮಾಲಿ) ಕೀಟ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಕೃತಕ ಆಶ್ರಯತಾಣಗಳು ಪರಭಕ್ಷಕ ಇಯರ್‌ವಿಗ್‌ಗಳ ಸಂಖ್ಯೆಯನ್ನು ಬೆಳೆಸುತ್ತದೆ, ಉದಾಹರಣೆಗೆ ಫಾರ್ಫಿಕುಲಾ ಆರಿಕ್ಯುಲೇರಿಯಾ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರಾಸಾಯನಿಕ ನಿಯಂತ್ರಣಗಳನ್ನು ತಡೆಗಟ್ಟುವ ಸಲುವಾಗಿ ಅಥವಾ ಕೀಟ ಪತ್ತೆಯಾದ ನಂತರವೂ ಬಳಸಬಹುದು. ಸಂಸ್ಕರಿಸಿದ ಸಸ್ಯಗಳನ್ನು ಗಿಡಹೇನುಗಳು ತಿನ್ನದಂತೆ ತಡೆಯಲು ವ್ಯವಸ್ಥಿತ ಚಿಕಿತ್ಸೆಗಳು ಉಪಯುಕ್ತವಾಗಿವೆ. ದುರದೃಷ್ಟವಶಾತ್ ಅವು ಪ್ರಯೋಜನಕಾರಿ ಕೀಟಗಳಿಗೂ ಹಾನಿಕಾರಕವಾಗಬಹುದು. ಪ್ರತಿಕ್ರಿಯಾತ್ಮಕ ದ್ರವೌಷಧಗಳಲ್ಲಿ ಡೆಲ್ಟಾಮೆಥ್ರಿನ್, ಲ್ಯಾಂಬ್ಡಾ-ಸಿಹಲೋಥ್ರಿನ್ ಮತ್ತು ಅಸೆಟಾಮಿಪ್ರಿಡ್ ಆಧಾರಿತ ಸೂತ್ರೀಕರಣಗಳು ಸೇರಿವೆ. ಕಾರ್ಬಮೇಟ್‌ಗಳು ಮತ್ತು ಪೈರೆಥ್ರಾಯ್ಡ್‌ಗಳು ಪರಾವಲಂಬಿಗಳು ಮತ್ತು ಪರಭಕ್ಷಕಗಳನ್ನು ಕೊಲ್ಲುವ ಮೂಲಕ ಗಿಡಹೇನುಗಳ ಸಂಖ್ಯೆಯನ್ನು ಉತ್ತೇಜಿಸುವ ಕಾರಣ ಅವುಗಳನ್ನು ತಪ್ಪಿಸಬೇಕು. ಪರಾಗಸ್ಪರ್ಶ ಕೀಟಗಳಿಗೆ ಅಪಾಯ ಉಂಟುಮಾಡುವುದನ್ನು ತಪ್ಪಿಸಲು ಹೂ ಬಿಡುತ್ತಿರುವ ಮರಗಳಿಗೆ ಸಿಂಪಡಿಸಬಾರದು.

ಅದಕ್ಕೆ ಏನು ಕಾರಣ

ಉಣ್ಣೆಯ ಗಿಡಹೇನು ಎರಿಯೊಸೊಮಾ ಲ್ಯಾನಿಗರಮ್ ನ ಆಹಾರ ಚಟುವಟಿಕೆಯಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇತರ ಹೆಚ್ಚಿನ ಗಿಡಹೇನುಗಳಿಗಿಂತ ಭಿನ್ನವಾಗಿ, ಇದು ಎಲೆಗೊಂಚಲುಗಳಿಗಿಂತ ಹೆಚ್ಚಾಗಿ ಮರದ ಕಾಂಡಗಳು ಮತ್ತು ಚಿಗುರುಗಳಿಂದ ಸಾರವನ್ನು ಹೀರಿಕೊಳ್ಳುತ್ತದೆ. ಈ ಕೀಟದ ವೈಶಿಷ್ಟ್ಯವೆಂದರೆ ಅದರ ಬಿಳಿ, ದಪ್ಪ, ತುಪ್ಪುಳಿನಂತಿರುವ ಮೇಣದ ಹೊದಿಕೆ. ಇದು ತನ್ನ ಆಶ್ರಯದಾತ ಸಸ್ಯಗಳ ತೊಗಟೆಯ ಬಿರುಕುಗಳಲ್ಲಿ ಅಥವಾ ಹಳೆಯ ಕೀಟ ತಿಂದ ತಾಣಗಳ ಸುತ್ತಲಿನ ಗಾಯಗಳ ಮೇಲೆ ಚಳಿಗಾಲವನ್ನು ಕಳೆಯುತ್ತದೆ. ವಸಂತ ಋತುವಿನಲ್ಲಿ ತಾಪಮಾನ ಹೆಚ್ಚಾದಂತೆ, ಗಿಡಹೇನುಗಳು ಮತ್ತೆ ಸಕ್ರಿಯವಾಗುತ್ತವೆ ಮತ್ತು ದುರ್ಬಲ ತಾಣಗಳ (ತೆಳುವಾದ ತೊಗಟೆ ಇರುವ ಪ್ರದೇಶಗಳು) ಹುಡುಕಾಟದಲ್ಲಿ ಸಕ್ಕರ್ ಗಳ ಮೇಲೆ, ಕಿರಿಯ ಚಿಗುರುಗಳ ಮೇಲೆ ಮತ್ತು ಕೊಂಬೆಗಳ ಮೇಲೆ ಏರುತ್ತವೆ. ಅಲ್ಲಿ, ಅದು ಗಿಡಗಳ ಭಾಗಗಳನ್ನು ಸಮೃದ್ಧವಾಗಿ ತಿನ್ನುತ್ತವೆ. ತೊಗಟೆಯ ಕೆಳಗಿನಿಂದ ಸಾರವನ್ನು ಹೀರಿಕೊಳ್ಳುತ್ತದೆ ಮತ್ತು ಅಂತಿಮವಾಗಿ ಪದರವನ್ನು ರೂಪಿಸುವ ತುಪ್ಪುಳಿದಂತಿರುವ ಕೂದಲುಗಳನ್ನು ಸ್ರವಿಸಲು ಪ್ರಾರಂಭಿಸುತ್ತದೆ. ಅವಕಾಶವಾದಿ ರೋಗಕಾರಕಗಳು ನಂತರ ಈ ತೆರೆದ ಗಾಯಗಳನ್ನು ಆಕ್ರಮಿಸಬಹುದು. ಬೇಸಿಗೆಯಲ್ಲಿ, ವಯಸ್ಕ ಕೀಟಗಳು ರೆಕ್ಕೆಗಳನ್ನು ಬೆಳೆಸಿಕೊಂಡು, ಹೊಸ ಆಶ್ರಯದಾತ ಸಸ್ಯಗಳನ್ನು ಹುಡುಕುತ್ತವೆ. ತೋಟಗಳ ಸುತ್ತಮುತ್ತಲಿನ ಎಲ್ಮ್ ಮರಗಳು ಸೇಬಿನ ತೋಟಗಳಿಗೆ ಗಿಡಹೇನಿನ ವಲಸೆಯನ್ನು ಹೆಚ್ಚಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆರಿಸಿ.
  • ಕಡಿಮೆ ಮುತ್ತುವಿಕೆಯ ಸಂದರ್ಭದಲ್ಲಿ, ಕೀಟವನ್ನು ನಿಯಂತ್ರಿಸಬಹುದು ಮತ್ತು ಬ್ರಷ್‌ನಿಂದ ಉಜ್ಜಬಹುದು.
  • ಸಸ್ಯಗಳನ್ನು ಬಲಪಡಿಸಲು ಫೋರ್ಟಿಫೈಯರ್ ಅಥವಾ ಸಮತೋಲಿತ ರಸಗೊಬ್ಬರ ಬಳಸಿ.
  • ಕೀಟನಾಶಕಗಳ ಅತಿಯಾದ ಬಳಕೆಯನ್ನು ತಪ್ಪಿಸಿ ಏಕೆಂದರೆ ಅವು ಪ್ರಯೋಜನಕಾರಿ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
  • ಅಭಿವೃದ್ಧಿ ಹೊಂದುತ್ತಿರುವ ಕೀಟ ವಸಾಹತುಗಳನ್ನು ತೆಗೆದುಹಾಕಲು ಬೇಸಿಗೆಯ ಕೊನೆಯಲ್ಲಿ ಬೇಸಿಗೆ ಸಮರಿಕೆ ಕೈಗೊಳ್ಳಿ.
  • ಪೀಡಿತ ಎಳೆಯ ಚಿಗುರುಗಳು ಮತ್ತು ಕೊಂಬೆಗಳನ್ನು ತೆಗೆದುಹಾಕಿ.
  • ಗಿಡಹೇನುಗಳಿಗೆ ಕಡಿಮೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಲು ಸಸ್ಯದ ಬುಡದಲ್ಲಿನ ಸಕ್ಕರ್ಗಳನ್ನು ತೆಗೆದುಹಾಕಿ.
  • ಆಫಿಡ್ ವಸಾಹತುಗಳನ್ನು ನಿಯಂತ್ರಿಸಲು ವಾಣಿಜ್ಯ ಸಮರುವಿಕೆ ಬಣ್ಣಗಳನ್ನು ದೊಡ್ಡ ಸಮರುವಿಕೆ ಗಾಯಗಳಿಗೆ ಹಚ್ಚಿ.
  • ಸೇಬು ಮರದ ತೋಟಗಳ ಹತ್ತಿರ ಎಲ್ಮ್ ಮರಗಳನ್ನು ನೆಡಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ