ಇತರೆ

ಚಳಿಗಾಲದ ಪತಂಗ

Operophtera brumata

ಕೀಟ

ಸಂಕ್ಷಿಪ್ತವಾಗಿ

  • ತೀವ್ರ ಮುತ್ತಿಕೊಳ್ಳುವಿಕೆಯ ಸಂದರ್ಭಗಳಲ್ಲಿ ಎಲೆಗಳ ಅಂಗಾಂಶಗಳಲ್ಲಿ ರಂಧ್ರಗಳು ಮತ್ತು ಅಸ್ಥಿಪಂಜರವಾದಂತಹ ಎಲೆಗಳು ಕಂಡುಬರುತ್ತವೆ.
  • ಇತ್ತೀಚೆಗೆ ತೆರೆದ ಎಲೆ ಮತ್ತು ಹೂವಿನ ಮೊಗ್ಗುಗಳಲ್ಲಿ ಮರಿಹುಳುಗಳು ಮತ್ತು ರಂಧ್ರಗಳು.
  • ಕೆಲವೊಮ್ಮೆ ಹಣ್ಣುಗಳ ಮೇಲೆ ಕೂಡ ಇರುತ್ತವೆ.
  • ತಿಳಿ ಹಸಿರು ಮರಿಹುಳುಗಳು ಹಳದಿ ಪಟ್ಟಿಗಳನ್ನು ಹೊಂದಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

4 ಬೆಳೆಗಳು
ಸೇಬು
ಚೆರ್ರಿ
ಕರ್ರಂಟ್
ಪೇರು ಹಣ್ಣು/ ಮರಸೇಬು

ಇತರೆ

ರೋಗಲಕ್ಷಣಗಳು

ವಸಂತಕಾಲದಲ್ಲಿ ಚಿಗುರುತ್ತಿರುವ ಎಲೆಗಳ ಮೇಲೆ ಕಂಡುಬರುವ ಹಾನಿಯ ಲಕ್ಷಣಗಳ ಮೂಲಕ, ಚಳಿಗಾಲದ ಪತಂಗಗಳ ಮರಿಹುಳುಗಳ ದಾಳಿಯನ್ನು ಮೊದಲು ಗಮನಿಸಬಹುದು. ಇದು ಸಾಮಾನ್ಯವಾಗಿ ಎಲೆಗಳು ಸಂಪೂರ್ಣವಾಗಿ ವಿಸ್ತರಿಸಿದಾಗ ಬೇಸಿಗೆಯ ಮಧ್ಯದಲ್ಲಿ ಹೆಚ್ಚು ಗೋಚರಿಸುತ್ತದೆ. ಆ ಹೊತ್ತಿಗೆ, ಮರಿಹುಳುಗಳು ಮರವನ್ನು ತೊರೆದಿರುತ್ತವೆ. ಆದರೆ ವಸಂತಕಾಲದಲ್ಲಿ ಮಾಡಿದ ಸಣ್ಣ ರಂಧ್ರಗಳು ಎಲೆಗಳ ಸಾಮಾನ್ಯ ಬೆಳವಣಿಗೆಯಿಂದಾಗಿ ಎಲೆಯ ಮೇಲ್ಮೈನ ಹೆಚ್ಚಿನ ಪ್ರದೇಶವನ್ನು ಆವರಿಸುತ್ತವೆ. ಮರಿಹುಳುಗಳು ಹೂವಿನ ಮೊಗ್ಗುಗಳು ಮತ್ತು ಬೆಳೆಯುತ್ತಿರುವ ಹಣ್ಣುಗಳನ್ನು ಸಹ ತಿನ್ನುತ್ತವೆ. ಒಂದು ಮೊಗ್ಗು ಹಾನಿಗೊಳಗಾದ ನಂತರ, ಅವುಗಳು ಇತರ ಮೊಗ್ಗುಗಳಿಗೆ ವಲಸೆ ಹೋಗುತ್ತವೆ ಮತ್ತು ಪ್ರಕ್ರಿಯೆಯನ್ನು ಪುನರಾವರ್ತಿಸುತ್ತವೆ. ಎಳೆಯ ಹಣ್ಣುಗಳ ಮೇಲಿನ ಆರಂಭಿಕ ಹಾನಿಯು ಬೇಸಿಗೆಯ ಕೊನೆಯಲ್ಲಿ ಪೂರ್ಣ ಗಾತ್ರವನ್ನು ತಲುಪುವ ಹೊತ್ತಿಗೆ ಚರ್ಮದ ಮೇಲೆ ಆಳವಾದ ಸೀಳಾಗಿ ಬೆಳೆಯುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಶರತ್ಕಾಲದಲ್ಲಿ, ಅಳಿವಿನಂಚಿನಲ್ಲಿರುವ ಮರಗಳಿಗೆ ಅಂಟು ಉಂಗುರಗಳನ್ನು ಅಳವಡಿಸಬಹುದಾಗಿದೆ. ಇವುಗಳನ್ನು ಅಗತ್ಯಬಿದ್ದರೆ ಆಧಾರಸ್ಥಂಭಗಳ ಮೂಲಕ ಕಾಂಡಕ್ಕೆ ದೃಢವಾಗಿ ಜೋಡಿಸಬಹುದು. ಇದು ಮಣ್ಣಿನಿಂದ ಮೇಲೆ ತಮ್ಮ ಪ್ರಯಾಣ ಬೆಳೆಸಿದ ಹೆಣ್ಣು ಪತಂಗಗಳನ್ನು ತಡೆದು ನಿಲ್ಲಿಸುತ್ತದೆ. ಅಂಟು ಉಂಗುರದ ಮೇಲೆ ಇಡಲಾದ ಮೊಟ್ಟೆಗಳನ್ನು ಬ್ರಷ್‌ನಿಂದ ತೆಗೆಯಬೇಕಾಗುತ್ತದೆ. ಮರಿಹುಳುಗಳನ್ನು ನಿವಾರಿಸಲು ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಆಧಾರಿತ ಉತ್ಪನ್ನಗಳನ್ನು ಸಹ ಸಿಂಪಡಿಸಬಹುದು. ಬೇವಿನ ಸಾರಗಳನ್ನು (ಅಜಾಡಿರಾಕ್ಟಾ ಇಂಡಿಕಾ) ಹೊಂದಿರುವ ವಸ್ತುಗಳು ಸಹ ಪರಿಣಾಮಕಾರಿ. ಎಲೆಗಳು ಸಂಪೂರ್ಣವಾಗಿ ಬೆಳೆದಾಗ, ಲಾರ್ವಾಗಳನ್ನು ಗುರಿಯಾಗಿಸಿಕೊಂಡು ಸ್ಪಿನೋಸ್ಯಾಡ್ ಫಾರ್ಮುಲಾಗಳನ್ನು ಸಿಂಪಡಿಸಬಹುದು. ಸ್ಪಿನೋಸ್ಯಾಡ್ ಜೇನುನೊಣಗಳಿಗೆ ಹಾನಿಕಾರಕವಾಗಿದೆ ಮತ್ತು ಪೂರ್ಣ ಹೂಬಿಡುವ ಸಮಯದಲ್ಲಿ ಬಳಸಬಾರದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಬೇಕು. ಮೊಗ್ಗುಗಳ ಒಳಗೆ ಇರುವಾಗ ಮರಿಹುಳುಗಳು ಕೀಟನಾಶಕಗಳಿಂದ ರಕ್ಷಿಸಲ್ಪಡುತ್ತವೆ ಎಂಬುದನ್ನು ಗಮನಿಸಬೇಕು. ಡಿಫ್ಲುಬೆನ್ಜುರಾನ್ ಆಧಾರಿತ ಉತ್ಪನ್ನಗಳನ್ನು ಸಮಗ್ರ ಸಸ್ಯ ಸಂರಕ್ಷಣಾ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಕೀಟಗಳ ಬೆಳವಣಿಗೆಯ ನಿಯಂತ್ರಕ ಟೆಬುಫೆನೊಜೈಡ್ ಚಳಿಗಾಲದ ಪತಂಗಗಳ ವಿರುದ್ಧ ಬಹಳ ಪರಿಣಾಮಕಾರಿಯಾಗಿದೆ. ಅವುಗಳು ಪೊರೆಗಳನ್ನು ಕಳಚಿಕೊಳ್ಳುವುದನ್ನು ತಡೆಯುವ ಮೂಲಕ ಪತಂಗಗಳನ್ನು ಕೊಲ್ಲುತ್ತವೆ.

ಅದಕ್ಕೆ ಏನು ಕಾರಣ

ಚಳಿಗಾಲದ ಚಿಟ್ಟೆ ಒಪೆರೋಫ್ಟೆರಾ ಬ್ರೂಮಾಟಾದ ಮರಿಹುಳುಗಳಿಂದ ಹಾನಿ ಉಂಟಾಗುತ್ತದೆ. ಸಂಯೋಗದ ನಂತರ, ಹೆಣ್ಣು ಪತಂಗಗಳು ತೊಗಟೆಯ ಮೇಲೆ, ತೊಗಟೆಯ ಬಿರುಕುಗಳಲ್ಲಿ ಅಥವಾ ತೊಗಟೆಯ ಅಡಿಯಲ್ಲಿ ಚಳಿಗಾಲದ ಮೊಟ್ಟೆಗಳನ್ನು ಇಡುತ್ತವೆ. ತಾಪಮಾನವು ಸರಾಸರಿ 12-13ºC ಆಗಿರುವಾಗ ಈ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ. ಹೊಸದಾಗಿ ಮೊಟ್ಟೆಯೊಡೆದ ಮರಿಹುಳುಗಳು ಮರದ ಕಾಂಡಗಳ ಮೇಲೆಗೆ ವಲಸೆ ಹೋಗುತ್ತವೆ ಮತ್ತು ಹೊಸದಾಗಿ ಹೊರಹೊಮ್ಮುವ ಮೊಗ್ಗುಗಳ ನಡುವೆ ಸುತ್ತುತ್ತವೆ. ಅವು ಮುಚ್ಚಿದ ಮೊಗ್ಗು ಕವಚಗಳ ಮೂಲಕ ಕೊರೆಯಲು ಸಾಧ್ಯವಿಲ್ಲ. ಆದರೆ ಇವುಗಳು ತೆರೆದಂತೆ, ಮರಿಹುಳುಗಳು ಕೆಳಗಿರುವ ಮೃದುವಾದ ಎಲೆಯ ಅಂಗಾಂಶದಲ್ಲಿ ಕೆರೆಯಲು ಪ್ರಾರಂಭಿಸುತ್ತವೆ. ಆರ್ದ್ರ ಬೇಸಿಗೆಗಳು, ಮತ್ತು ಸೌಮ್ಯವಾದ ಮತ್ತು ತೇವಾಂಶವುಳ್ಳ ಶರತ್ಕಾಲದಲ್ಲಿ ಈ ಕೀಟದ ಜೀವನ ಚಕ್ರ ಸುಗುಮವಾಗಿ ಸಾಗುತ್ತದೆ. ಪ್ರೌಢ ಮರಿಹುಳುಗಳು ಕೋಶಾವಸ್ಥೆಗಾಗಿ ಮಣ್ಣಿಗೆ ಬೀಳುತ್ತವೆ. ಹೋಸ್ಟ್‌ ಸಸ್ಯಗಳಲ್ಲಿ ಏಪ್ರಿಕಾಟ್, ಚೆರ್ರಿ, ಸೇಬು, ಪ್ಲಮ್, ಕರ್ರಂಟ್ ಮತ್ತು ಕೆಲವು ಅರಣ್ಯ ಮರಗಳು ಸೇರಿವೆ.


ಮುಂಜಾಗ್ರತಾ ಕ್ರಮಗಳು

  • ರೋಗಕಾರಕದ ಲಕ್ಷಣಗಳಿಗಾಗಿ ನಿಯಮಿತವಾಗಿ ಹಣ್ಣಿನ ತೋಟದ ಮೇಲೆ ನಿಗಾ ಇಡಬೇಕು.
  • ಹಣ್ಣಿನ ತೋಟದ ಬಳಿ ದುರ್ಬಲ ಸಸ್ಯಗಳನ್ನು ನೆಡುವುದನ್ನು ತಪ್ಪಿಸಬೇಕು.
  • ಕಳೆಗಳನ್ನು ತೆಗೆದುಹಾಕಬೇಕು ಇಲ್ಲವಾದರೆ ಅವು ಪರ್ಯಾಯ ಹೋಸ್ಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.
  • ಸಾಧ್ಯವಾದಷ್ಟು ಬೇಗ ಮರದ ಅವಶೇಷಗಳನ್ನು ತೆಗೆದುಹಾಕಬೇಕು ಮತ್ತು ಅವುಗಳನ್ನು ಆಳವಾಗಿ ಹೂತುಹಾಕುವ ಮೂಲಕ ಅಥವಾ ಸುಡುವ ಮೂಲಕ ಅವುಗಳನ್ನು ತೋಟಕ್ಕಿಂತ ದೂರದಲ್ಲಿ ನಾಶಪಡಿಸಬೇಕು.
  • ಕೊಯ್ಲು ಮಾಡಿದ ನಂತರ ಹೊಲವನ್ನು ಉಳುಮೆ ಮಾಡಿ ಕೋಶಗಳನ್ನು ಪರಭಕ್ಷಕಗಳು ಮತ್ತು ಶೀತ ತಾಪಮಾನಕ್ಕೆ ಒಡ್ಡಬೇಕು.
  • ಮಣ್ಣಿನಿಂದ ಮರದ ಮೇಲೆ ಹೆಣ್ಣು ಪತಂಗಗಳು ಪ್ರಯಾಣಿಸುವುದನ್ನು ತಡೆಯಲು ಕಾಂಡಗಳ ಮೇಲೆ ಅಂಟು ಉಂಗುರಗಳನ್ನು ಬಳಸಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ