ಉದ್ದಿನ ಬೇಳೆ & ಹೆಸರು ಬೇಳೆ

ಥ್ರಿಪ್ಸ್ ನುಸಿ

Thysanoptera

ಕೀಟ

ಸಂಕ್ಷಿಪ್ತವಾಗಿ

  • ಮೇಲಿನ ಎಲೆಯ ಮೇಲೆ ಸಣ್ಣ ಬೆಳ್ಳಿ ತೇಪೆಗಳು.
  • ಎಲೆಗಳು ಹಳದಿಗಟ್ಟುವುದು.
  • ಎಲೆಗಳು, ಹೂಗಳು ಮತ್ತು ಹಣ್ಣುಗಳು ವಿರೂಪಗೊಳ್ಳುವುದು.

ಇವುಗಳಲ್ಲಿ ಸಹ ಕಾಣಬಹುದು

41 ಬೆಳೆಗಳು
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಬಾರ್ಲಿ
ಇನ್ನಷ್ಟು

ಉದ್ದಿನ ಬೇಳೆ & ಹೆಸರು ಬೇಳೆ

ರೋಗಲಕ್ಷಣಗಳು

ಎಲೆಯ ದಳಗಳ ಮೇಲ್ಭಾಗದಲ್ಲಿ ಬೆಳ್ಳಿ ಬಣ್ಣದ ಸಣ್ಣ ಕಲೆಗಳು ಕಂಡು ಬರುತ್ತವೆ. ಇದನ್ನು ಇಂಗ್ಲಿಷಿನಲ್ಲಿ "ಸಿಲ್ವರಿಂಗ್" (silvering) ಎಂದು ಕರೆಯಲಾಗುತ್ತದೆ. ವರ್ಣದ್ರವ್ಯ (pigment) ತೆಗೆಯಲ್ಪಟ್ಟ ಹೂವಿನ ದಳಗಳ ಮೇಲೆ ಇದೇ ರೀತಿಯ ಕಲೆಗಳಿರುತ್ತವೆ. ಎಲೆಗಳ ಕೆಳಭಾಗದಲ್ಲಿ, ನುಸಿಯು ಮತ್ತು ಮರಿಹುಳುಗಳು (ಲಾರ್ವಾ) ಗುಂಪಿನಲ್ಲಿರುತ್ತವೆ. ಪಕ್ಕದಲ್ಲೇ ನುಸಿಯ ಮಲದಿಂದಾಗಿ ಕಪ್ಪು ಬಣ್ಣದ ಚುಕ್ಕೆಗಳಿರುತ್ತವೆ. ಬಾಧಿತ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಸೊರಗಿ ವಿರೂಪಗೊಳ್ಳತ್ತದೆ. ಮೊಗ್ಗು ಅಥವಾ ಹೂವಿನ ಬೆಳವಣಿಗೆಯ ಸಮಯದಲ್ಲಿ ನುಸಿಯ ದಾಳಿಯಾದರೆ ಮುಂದೆ ಹೂವು ಮತ್ತು ಹಣ್ಣು ಗಾಯಗೊಳ್ಳುತ್ತದೆ. ಪೂರ್ಣ ಗಾತ್ರಕ್ಕೆ ಬೆಳೆಯದ ಹೂವುಗಳೂ, ವಿರೂಪಗೊಂಡ ಹಣ್ಣುಗಳು, ಮತ್ತು ಕಡಿಮೆ ಇಳುವರಿ ಈ ರೋಗದಿಂದಾಗುವ ಹಾನಿ.

ಶಿಫಾರಸುಗಳು

ಜೈವಿಕ ನಿಯಂತ್ರಣ

ನಿರ್ದಿಷ್ಟ ನುಸಿಗಳಿಗೆ ಕೆಲವು ಸಾವಯವ ನಿಯಂತ್ರಣ ಕ್ರಮಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಾಮಾನ್ಯವಾಗಿ ಸ್ಪಿನೊಸಾಡ್ ಯಾವುದೇ ರಾಸಾಯನಿಕ ಅಥವಾ ಇನ್ಯಾವುದೇ ಜೈವಿಕ ಸಂಯೋಜಕಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇದು 1 ವಾರ ಅಥವಾ ಹೆಚ್ಚು ಸಮಯ ಉಳಿಯುತ್ತದೆ ಹಾಗೂ ಸಿಂಪಡಿಸಿದ ಭಾಗದ ಅಂಗಾಂಶದೊಳಗೆ ಹೆಚ್ಚು ದೂರ ಹೋಗುವುದಿಲ್ಲ. ಆದರೆ ಇದು ಕೆಲವು ನೈಸರ್ಗಿಕ ಶತ್ರುಗಳಿಗೆ (ಉದಾಹರಣೆಗೆ, ಪರಭಕ್ಷಕ ಹುಳಗಳು, ಸಿರ್ಫಿಡ್ ಫ್ಲೈ ಲಾರ್ವಾಗಳು) ಮತ್ತು ಜೇನುನೊಣಗಳಿಗೆ ವಿಷಕಾರಿಯಾಗಿದೆ. ಹೀಗಾಗಿ, ಹೂಬಿಡುವ ಗಿಡಗಳಿಗೆ ಸ್ಪಿನೊಸಾಡ್ ಬಳಸಬೇಡಿ. ಹೂಬಿಡುವ ಗಿಡಗಳಿಗೆ ನುಸಿ ಮುತ್ತುವುದನ್ನು ತಡೆಯಲು ಕೆಲವು ಪರಭಕ್ಷಕ ಹುಳಗಳು ಅಥವಾ ಹಸಿರು ಲೇಸ್-ವಿಂಗ್ ಲಾರ್ವಾಗಳನ್ನು ಬಳಸಬಹುದಾಗಿದೆ. ಕೆಲವು ಕೀಟನಾಶಕಗಳೊಂದಿಗೆ ಬೆಳ್ಳುಳ್ಳಿ ಸಾರಗಳ ಸಂಯೋಜನೆಯು ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಕಂಡುಬಂದಿದೆ. ಎಲೆಗಳು ಮತ್ತು ಹೂವಿನ ಮೇಲೆ ದಾಳಿಮಾಡುವ ಕೀಟ ಪ್ರಭೇದಕ್ಕೆ ಎದುರಾಗಿ ಬೇವಿನೆಣ್ಣೆಯನ್ನು ಬಳಸಿ; ಅದರಲ್ಲೂ ಎಲೆಗಳ ಕೆಳಭಾಗಕ್ಕೆ ಸಿಂಪಡಿಸಿ ನೋಡಿ. ಹೆಚ್ಚು ಪ್ರತಿಫಲಿಸುವ ಅಲ್ಟ್ರಾವಯಲೆಟ್ ಹೊದಿಕೆಯನ್ನು (ಮೆಟಲೈಜ್ಡ್ ರಿಫ್ಲೆಕ್ಟೀವ್ ಮಲ್ಚ್) ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಅಧಿಕ ಸಂತಾನೋತ್ಪತ್ತಿ ಮಟ್ಟ ಮತ್ತು ಅವುಗಳ ಜೀವನ ಚಕ್ರಗಳ ಕಾರಣದಿಂದಾಗಿ ಈ ನುಸಿಗಳು ವಿವಿಧ ವರ್ಗಗಳು ಕೀಟನಾಶಕಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡಿವೆ. ಪರಿಣಾಮಕಾರಿ ಸಂಪರ್ಕ ಕೀಟನಾಶಕಗಳೆಂದರೆ ಫೈಪ್ರೋನಿಲ್, ಇಮಿಡಾಕ್ಲೋಪ್ರಿಡ್, ಅಥವಾ ಅಸೆಟಾಮಿಪ್ರಿಡ್, ಇವುಗಳು ಅನೇಕ ಉತ್ಪನ್ನಗಳಲ್ಲಿ ಪೈಪರೋನಿಲ್ ಬ್ಯುಟೊಕ್ಸೈಡ್ನೊಂದಿಗೆ ಅವುಗಳ ಪರಿಣಾಮವನ್ನು ವರ್ಧಿಸುತ್ತವೆ.

ಅದಕ್ಕೆ ಏನು ಕಾರಣ

ನುಸಿಯು 1-2 ಮಿಮೀ ಉದ್ದವಿದ್ದು. ಹಳದಿ, ಕಪ್ಪು ಅಥವಾ ಬಣ್ಣಗಳ ವಿಚಿತ್ರ ಮಿಶ್ರಣದಂತೆ ಕಾಣುವ ಕೀಟಗಳು. ಕೆಲವು ಪ್ರಭೇದಗಳಲ್ಲಿ ಎರಡು ಜೊತೆ ರೆಕ್ಕೆಗಳಿರುತ್ತವೆ, ಕೆಲವಲ್ಲಿ ರೆಕ್ಕೆಗಳೇ ಇರುವುದಿಲ್ಲ. ಅವುಗಳು ಸಸ್ಯದ ಉಳಿಕೆಗಳಲ್ಲಿ ಅಥವಾ ಮಣ್ಣಿನಲ್ಲಿ ಅಥವಾ ಇತರೆ ಆಶ್ರಯದಾತ ಸಸ್ಯಗಳಲ್ಲಿ ಸುಪ್ತವಾಗಿರುತ್ತವೆ. ಅವು ವ್ಯಾಪಕ ಶ್ರೇಣಿಯ ವೈರಲ್ ರೋಗಗಳನ್ನು ಹರಡುತ್ತವೆ. ಥ್ರಿಪ್ಸ್ ವೈವಿಧ್ಯಮಯ ಸಸ್ಯಗಳನ್ನು ಮುತ್ತಿಕೊಳ್ಳುತ್ತವೆ. ಶುಷ್ಕ ಮತ್ತು ಬೆಚ್ಚಗಿನ ಹವಾಮಾನ ಪರಿಸ್ಥಿತಿಗಳಲ್ಲಿ ನುಸಿಯ ಸಂಖ್ಯೆ ಹೆಚ್ಚಿರುತ್ತದೆ. ತೇವಾಂಶ ಹೆಚ್ಚಿದರೆ ನುಸಿಯ ಸಂಖ್ಯೆ ಕಡಿಮೆಯಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ನೆಡಿ.
  • ಥ್ರಿಪ್ಸ್ ನ ಸಂಭವ ಮತ್ತು ಪ್ರಗತಿಯನ್ನು ಕಡಿಮೆ ಮಾಡಲು ಸಾಲುಗಳ ಜೊತೆ ಪ್ಲಾಸ್ಟಿಕ್ ಮಲ್ಚ್ ಅಥವಾ ಸಾವಯವ ಹಸಿಗೊಬ್ಬರವನ್ನು ಹಾಕಿ.
  • ಕಳೆಗಳಿರುವ ಜಾಗದಲ್ಲಿ ರೋಗಕ್ಕೆ ಸೂಕ್ಷ್ಮವಾಗಿರುವ ಸಸ್ಯಗಳನ್ನು ನೆಡಬೇಡಿ.
  • ವೈರಸ್ ಮತ್ತು ಥ್ರಿಪ್ಸ್-ಮುಕ್ತ ಕಸಿ ಸಸಿಯನ್ನು ಪ್ರಮಾಣೀಕೃತ ಗ್ರೀನ್-ಹೌಸ್ ಗಳು ಮತ್ತು ನರ್ಸರಿಗಳಿಂದ ಪಡೆಯಿರಿ.
  • ಹೊಲಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ದೊಡ್ಡ ಪ್ರದೇಶದ ಮೇಲೆ ಜಿಗುಟಾದ ಬಲೆಗಳನ್ನು ಬಳಸಿ ನುಸಿಗಳನ್ನು ಗುಂಪಲ್ಲಿ ಹಿಡಿದು ಹಾಕಿ.
  • ರೋಗಕ್ಕೆ ತುತ್ತಾಗಬಹುದಾದ ಇತರ ಗಿಡಗಳ ಬಳಿ ನೆಡುವುದನ್ನು ತಪ್ಪಿಸಿ.
  • ಸಸ್ಯದ ತುದಿ ಭಾಗಗಳನ್ನು ಕತ್ತರಿಸುವುದಕ್ಕಿಂತ ಬದಲಾಗಿ ಶಾಖೆಯ ಸ್ವಲ್ಪ ಮೇಲ್ಭಾಗದಲ್ಲಿ ಸಸ್ಯಗಳನ್ನು ಕತ್ತರಿಸುವುದು ಉತ್ತಮ.
  • ರೋಗಪೀಡಿತ ಗಿಡ ಮತ್ತು ಗಿಡದ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಅದನ್ನು ನಾಶಮಾಡಿ.
  • ಗಿಡದ ನೀರಾವರಿ ಚೆನ್ನಾಗಿ ಮಾಡಿ.
  • ಸಾರಜನಕ ಗೊಬ್ಬರವನ್ನು ವಿಪರೀತವಾಗಿ ಉಪಯೋಗಿಸುವುದನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ