Aphis
ಕೀಟ
ಇವು ಕಡಿಮೆ ಅಥವಾ ಸಾಧಾರಣ ಸಂಖ್ಯೆಯಲ್ಲಿದ್ದಾಗ ಸಾಮಾನ್ಯವಾಗಿ ಬೆಳೆಗೆ ಹಾನಿಕಾರಕವಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಮುತ್ತಿಕೊಂಡಾಗ ಎಲೆಗಳು ಮತ್ತು ಚಿಗುರುಗಳು ಸುರುಳಿಗಟ್ಟಿ, ಬಾಡಿಹೋಗಿ, ಹಳದಿ ಬಣ್ಣಕ್ಕೆ ತಿರುಗುತ್ತವೆ. ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಒಟ್ಟಾರೆಯಾಗಿ ಗಿಡದ ಚೈತನ್ಯ ಕುಸಿದದ್ದು ತಿಳಿಯುತ್ತದೆ. ಈ ಕೀಟಗಳು ಗಿಡದ ಅಂಗಾಂಶವನ್ನು ತಿನ್ನುತ್ತಾ ಸ್ರವಿಸುವ ಸಿಹಿ ಅಂಟು ಅವಕಾಶಕ್ಕಾಗಿ ಹೊಂಚುವ ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುವುದರಿಂದ ಇನ್ನೂ ಹಲವು ಸೋಂಕುಗಳಿಗೆ ಮೂಲವಾಗುತ್ತದೆ. ಎಲೆಗಳ ಮೇಲೆ ಶಿಲೀಂಧ್ರದ ಬೆಳೆವಣಿಗೆ ಇದನ್ನು ಸೂಚಿಸುತ್ತದೆ. ಕೀಟ ಸ್ರವಿಸುವ ಸಿಹಿ ಅಂಟು ಇರುವೆಗಳನ್ನು ಆಕರ್ಷಿಸುತ್ತದೆ. ಈ ಕೀಟಗಳು ಸಣ್ಣ ಸಂಖ್ಯೆಯಲ್ಲಿದ್ದಾಗಲೂ ಕೂಡ ಗಿಡದಿಂದ ಗಿಡಕ್ಕೆ ವೈರಾಣುಗಳನ್ನು ನಿರಂತರವಾಗಿ ಹರಡುತ್ತವೆ.
ಕೀಟಗಳು ಕಡಿಮೆ ಸಂಖ್ಯೆಯಲ್ಲಿದ್ದಲ್ಲಿ, ಗಿಡದ ಎಣ್ಣೆಯಿಂದ ತಯಾರಿಸಿದ ದ್ರಾವಣ ಉದಾಹರಣೆಗೆ ಬೇವಿನ ಎಣ್ಣೆ (3 ml/ಪ್ರತಿ ಲೀಟರ್ ಗೆ), ಅಥವಾ ಸೌಮ್ಯ ಕೀಟನಾಶಕ ಸೋಪುಗಳ ದ್ರಾವಣವನ್ನು ಬಳಸಿ. ತೇವಾಂಶ ಹೆಚ್ಚಿದ್ದಾಗ ಈ ಕೀಟಗಳು ಶಿಲೀಂಧ್ರಗಳ ರೋಗಗಳಿಗೆ ಕೂಡಾ ಒಳಗಾಗುತ್ತವೆ. ತೇವ ಇದ್ದಾಗ ಗಿಡಹೇನುಗಳು ಶಿಲೀಂಧ್ರ ರೋಗಗಳಿಗೆ ಕೂಡಾ ಒಳಗಾಗುತ್ತವೆ. ಬಾಧಿತ ಸಸ್ಯಗಳ ಮೇಲೆ ಸರಳವಾಗಿ ನೀರನ್ನು ಸಿಂಪಡಿಸಿದರೂ ಸಹ ಅವುಗಳನ್ನು ತೆಗೆದುಹಾಕಬಹುದು.
ಲಭ್ಯವಿದ್ದರೆ ತಡೆಗಟ್ಟುವ ವಿಧದೊಂದಿಗೆ ಜೈವಿಕ ವಿಧಾನಗಳನ್ನು ಸೇರಿಸಿದ ಸಮಗ್ರ ವಿಧಾನವನ್ನು ಪರಿಗಣಿಸಿ. ಗಿಡಹೇನುಗಳು ರಾಸಾಯನಿಕ ಕ್ರಿಮಿನಾಶಕಗಳ ಬಳಕೆಗೆ ಪ್ರತಿರೋಧವನ್ನು ಬೆಳೆಸಿಕೊಳ್ಳಬಹುದು ಎಂಬುದು ತಿಳಿದಿರಲಿ. 1:20 ಅನುಪಾತದಲ್ಲಿ ಕಾಂಡದ ಮೇಲೆ ಫ್ಲೋನಿಕಾಮಿಡ್ ಮತ್ತು ನೀರಿನ ಬಳಕೆಯನ್ನು ಬಿತ್ತನೆ ಮಾಡಿದ (ಡಿಎಎಸ್) 30, 45, 60 ದಿನಗಳ ನಂತರ ಯೋಜಿಸಬಹುದು. ಫೈಪ್ರೋನಿಲ್ 2 ಮಿಲೀ ಅಥವಾ ಥೈಯಾಮಿಥಾಕ್ಸಮ್ @ 0.2 ಗ್ರಾಂ ಅಥವಾ ಫ್ಲೋನಿಕಾಮಿಡ್ 0.3 ಗ್ರಾಂ ಅಥವಾ ಅಸೆಟಾಮಿಪ್ರಿಡ್ @ 0.2 ಗ್ರಾಂ (ಪ್ರತಿ ಒಂದು ಲೀಟರ್ ನೀರು)ಗಳನ್ನೂ ಸಹ ಬಳಸಬಹುದು. ಆದಾಗ್ಯೂ, ಈ ರಾಸಾಯನಿಕಗಳು ಪರಭಕ್ಷಕ, ಪ್ಯಾರಾಸಿಸಿಡ್ಗಳು, ಮತ್ತು ಪರಾಗಸ್ಪರ್ಶಕಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ.
ಈ ಕೀಟಗಳು ಚಿಕ್ಕದಾದ, ಉದ್ದವಾದ ಕಾಲುಗಳು ಮತ್ತು ಆಂಟೆನಾಗಳೊಂದಿಗೆ ಮೃದುವಾದ ದೇಹಗಳನ್ನು ಹೊಂದಿರುತ್ತವೆ. ಅವುಗಳ ಗಾತ್ರ 0.5 ರಿಂದ 2 ಮಿ.ಮೀ. ವರೆಗೆ ಇರುತ್ತದೆ ಹಾಗೂ ಅವುಗಳ ಜಾತಿಯನ್ನು ಅವಲಂಬಿಸಿ ಹಳದಿ, ಕಂದು, ಕೆಂಪು ಅಥವಾ ಕಪ್ಪು ಬಣ್ಣದಲ್ಲಿರುತ್ತವೆ. ರೆಕ್ಕೆಯಿಲ್ಲದ ಜಾತಿಯ ಕೀಟ ಹೆಚ್ಚಾಗಿ ಕಂಡು ಬಂದರೂ, ರೆಕ್ಕೆಯಿರುವ, ಮೇಣದಂತೆ ಅಂಟಂಟಾಗಿರುವ, ಮೈಯೆಲ್ಲ ಕೂದಲಿರುವ ಉಣ್ಣೆಯ ಮುದ್ದೆಯಂತೆ ಕಾಣುವ - ಹೀಗೆ ಹಲವು ರೂಪಗಳಲ್ಲಿ ಇರುತ್ತವೆ. ಸಾಮಾನ್ಯವಾಗಿ ಪೋಷಕಾಂಶ ಚೆನ್ನಾಗಿ ಲಭಿಸಿದ ಎಳೆಯ ಎಲೆಗಳ ಕೆಳಭಾಗದಲ್ಲಿ ಅಥವಾ ಚಿಗುರುಗಳ ತುದಿಯಲ್ಲಿ ಗುಂಪಾಗಿ ನೆಲೆಸುತ್ತವೆ. ತಮ್ಮ ಉದ್ದವಾದ ಬಾಯಿಯ ಭಾಗದಿಂದ ಮೃದುವಾದ ಸಸ್ಯ ಅಂಗಾಂಶಗಳನ್ನು ಚುಚ್ಚಿ ದ್ರವವನ್ನು ಹೀರಿ ತೆಗೆಯುತ್ತವೆ. ಇವು ಕಡಿಮೆ ಅಥವಾ ಸಾಧಾರಣ ಸಂಖ್ಯೆಯಲ್ಲಿದ್ದಾಗ ಸಾಮಾನ್ಯವಾಗಿ ಬೆಳೆಗಳಿಗೆ ಹಾನಿಕಾರಕವಲ್ಲ. ವಸಂತ ಋತುವಿನ ಕೊನೆಯಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ ಆರಂಭಿಕ ಆಕ್ರಮಣದ ನಂತರ, ನೈಸರ್ಗಿಕ ವೈರಿಗಳ ಕಾರಣದಿಂದ ಈ ಕೀಟದ ಸಂಖ್ಯೆಯು ಸಹಜವಾಗಿ ಕಡಿಮೆಯಾಗುತ್ತದೆ. ಈ ಕೀಟದ ಹಲವು ಜಾತಿಗಳು ಸಸ್ಯ ವೈರಾಣುಗಳನ್ನು ಹೊತ್ತು ಇತರ ರೋಗಗಳಿಗೆ ಕಾರಣವಾಗಬಹುದು