Raoiella indica
ಹುಳು
ಕೆಂಪು ಪಾಮ್ ಮೈಟುಗಳನ್ನು ದೊಡ್ಡ ಸಂಖ್ಯೆಯಲ್ಲಿ ಸಾಮಾನ್ಯವಾಗಿ ಎಲೆಗಳ ಕೆಳಭಾಗದಲ್ಲಿ (100-300 ಹುಳುಗಳು) ಕಾಣಬಹುದು ಮತ್ತು ಅವು ಬರಿಗಣ್ಣಿಗೆ ಸಹ ಕಾಣಿಸುತ್ತವೆ. ಅವುಗಳ ಎಲ್ಲಾ ಜೀವನದ ಹಂತಗಳು ಪ್ರಧಾನವಾಗಿ ಕೆಂಪು ಬಣ್ಣದ್ದಾಗಿದ್ದು, ಪ್ರೌಢ ಹೆಣ್ಣು ಮೈಟುಗಳ ದೇಹದ ಮೇಲೆ ಗಾಢ ಬಣ್ಣದ ಕಲೆಗಳಿರುತ್ತವೆ (ಭೂತಗನ್ನಡಿಯಿಂದ ನೋಡಬಹುದು). ಜೀವಂತ ಹುಳಗಳ ಮಧ್ಯ ಬೆಳೆಯುತ್ತಿರುವ ಪ್ರೌಢ ಹುಳುಗಳು ಬಿಡುವ ಹಲವಾರು ಬಿಳಿ ಚರ್ಮಗಳು ಸಹ ಕಂಡುಬರುತ್ತವೆ. ಚಿಗುರೆಲೆಗಳು ಅಥವಾ ಎಲೆಗಳ ಮೇಲೆ ಅವುಗಳು ಇರುವುದರಿಂದ ಆರಂಭದಲ್ಲಿ ಎಲೆಗಳ ಅಂಚುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ, ಇದು ನಂತರ ದೊಡ್ಡ ಕ್ಲೋರೊಟಿಕ್ ಕಲೆಗಳಂತೆ ಎಲೆಗಳ ಸಿರೆಗಳ ಉದ್ದಕ್ಕೂ ಸಮಾನಾಂತರವಾಗಿ ಹರಡಬಹುದು. ಕಾಲಾನಂತರದಲ್ಲಿ, ಹಳದಿ ಬಣ್ಣದ ಅಂಗಾಂಶಗಳ ಬದಲು ನೆಕ್ರೋಟಿಕ್ ಗಾಯಗಳು ಹುಟ್ಟುತ್ತವೆ. ಕೊಂಬೆಗಳ ಕೆಳಗಿನ ಚಿಗುರೆಲೆಗಳ ಮೇಲೆ ಹೆಚ್ಚು ಪರಿಣಾಮವಾಗುತ್ತದೆ. ಬಾಳೆಹಣ್ಣು ಮತ್ತು ಬಾಳೆ ಗಿಡಗಳ ಮೇಲೆ ಸೋಂಕು ತೀವ್ರವಾದರೆ ಎಳೆ ಸಸ್ಯಗಳು ಸಾಯುತ್ತವೆ.
ಪರಭಕ್ಷಕ ಮೈಟಾದ ಅಂಬಿಲೈಸಿಯಸ್ ಲಾರ್ಗೊಎನ್ಸಿಸ್ ಅನ್ನು ತೋಟದಲ್ಲಿ ಪರಿಚಯಿಸಬಹುದು ಮತ್ತು ಅದು ರೆಡ್ ಪಾಮ್ ಮೈಟುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಇತರ ಪರಭಕ್ಷಕ ಮೈಟುಗಳು ಮತ್ತು ಜೀರುಂಡೆಗಳು ಕೂಡ ಆರ್. ಇಂಡಿಕಾವನ್ನು ತಿನ್ನುತ್ತವೆ. ಆದ್ದರಿಂದ ವ್ಯಾಪಕ- ಶ್ರೇಣಿಯ ಕ್ರಿಮಿನಾಶಕಗಳ ದುರ್ಬಳಕೆಯಿಂದ ಈ ಪರಭಕ್ಷಕಗಳ ನೈಸರ್ಗಿಕ ಸಂಖ್ಯೆಗೆ ಅಡ್ಡಿಪಡಿಸದಿರುವುದು ಮುಖ್ಯವಾದುದು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಪೋರ್ಟೊ ರಿಕೊ ಜಾಗದಲ್ಲಿ ತೆಂಗಿನಕಾಯಿ ಸಸ್ಯದಲ್ಲಿದ್ದ ಆರ್.ಇಂಡಿಕಾದ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಸ್ಪೈಮೊಮೈಫೆನ್, ಡಿಕೋಫಲ್ ಮತ್ತು ಏಸ್ಕ್ವಿನೊಸೈಲ್ಗಳ ಸೂತ್ರೀಕರಣಗಳು ಪರಿಣಾಮಕಾರಿಯಾಗಿದ್ದವು. ಇಟೊಕ್ಸಾನೊಲ್, ಅಬಮೆಕ್ಟಿನ್, ಪೈರಿಡಬೆನ್, ಮಿಲ್ಬೆಮೆಕ್ಟಿನ್ ಮತ್ತು ಸಲ್ಫರ್ ಹೊಂದಿರುವ ಉತ್ಪನ್ನಗಳೊಂದಿಗೆ ಸಿಂಪರಿಕೆ ಸಂಸ್ಕರಣೆಗಳು ಫ್ಲೋರಿಡಾದಲ್ಲಿ ಮೈಟು ನಿಯಂತ್ರಣಕ್ಕೆ ಸಹಾಯ ಮಾಡಿವೆ. ಇದರ ಜೊತೆಯಲ್ಲಿ, ಬಾಳೆಹಣ್ಣಿನ ಮೇಲೆ ಮಾಡಿದ ಪ್ರಯೋಗಗಳಲ್ಲಿ ಅಕರೈಸೈಡ್ಸ್ ಏಸ್ಕ್ವಿನೊಸೈಲ್ ಮತ್ತು ಸ್ಪೈಮೊಮೈಫೆನ್ ಅನ್ನು ಆರ್.ಇಂಡಿಕಾದ ವಿರುದ್ಧ ಉಪಯೋಗಿಸಿದಾಗ ಫಲಿತಾಂಶ ಕಂಡುಬಂದಿದೆ.
ರಾವಿಯೆಲ್ಲ ಇಂಡಿಕಾ ಎಂಬ ರೆಡ್ ಪಾಮ್ ಮೈಟಿನಿಂದ ಈ ಹಾನಿ ಉಂಟಾಗುತ್ತದೆ. ಅವುಗಳು "ಕೃತಕ ಜೇಡ ಮೈಟುಗಳು" ಎಂದು ಕರೆಯಲ್ಪಡುವ ಗುಂಪಿಗೆ ಸೇರಿವೆ, ಇವುಗಳ ದೇಹ ಚಪ್ಪಟೆಯಾಗಿರುತ್ತದೆ ಮತ್ತು ಹಲವಾರು ಇತರ ಜೇಡ ಮೈಟುಗಳಂತೆ ಇವುಗಳಿಗೆ ಜೇಡನ ಬಲೆ ಕಟ್ಟುವ ಸಾಮರ್ಥ್ಯ ಇರುವುದಿಲ್ಲ. ಇವು ಸಸ್ಯಗಳ ಅಂಗಾಂಶಕ್ಕೆ ತಮ್ಮ ಸ್ಟೈಲೆಟ್-ತರಹದ ಭಾಗವನ್ನು ಅಳವಡಿಸಿ ಜೀವಕೋಶದ ಸತ್ವವನ್ನು ತೆಗೆದುಹಾಕುವ ಮೂಲಕ ಸಸ್ಯಗಳನ್ನು ತಿನ್ನುತ್ತವೆ. ಈ ಮೈಟು ಗಾಳಿಯ ಹರಿವಿನ ಮೂಲಕ ಅಥವಾ ಸೋಂಕಿತ ಸಸ್ಯಗಳ ನರ್ಸರಿ ಸ್ಟಾಕುಗಳ ಮತ್ತು ಸಸ್ಯಗಳ ಕತ್ತರಿಸಿದ ಕೊಂಬೆಗಳ ಮೂಲಕ ಸುಲಭವಾಗಿ ಹರಡುತ್ತದೆ. ಮಳೆ ಮತ್ತು ಹೆಚ್ಚಿನ ಸಾಪೇಕ್ಷ ಆರ್ದ್ರತೆಗಳಿಂದ ಈ ಕೀಟಗಳ ಸಂಖ್ಯೆಯ ಮೇಲೆ ನಕಾರಾತ್ಮಕ ಪ್ರಭಾವವಾಗುತ್ತದೆ ಮತ್ತು ಉಷ್ಣ, ಬಿಸಿಲು ಮತ್ತು ಶುಷ್ಕ ವಾತಾವರಣದಲ್ಲಿ ಇದು ಇನ್ನೂ ಹೆಚ್ಚಿರುತ್ತದೆ. ಬಾಳೆಹಣ್ಣು ಮಾತ್ರವಲ್ಲದೆ, ತೆಂಗಿನಕಾಯಿ, ಖರ್ಜೂರ ಮತ್ತು ಅಡಿಕೆ ಮತ್ತು ಆಲಂಕಾರಿಕ ತಾಳೆ ಗಿಡಗಳಂತಹ ಅನೇಕ ತಾಳೆ ಜಾತಿಯ ಹಣ್ಣು ಉತ್ಪಾದಿಸುವ ಮರಗಳ ಮೇಲೆ ಕೆಂಪು ಕೀಟವು ಸೋಂಕು ಮಾಡುತ್ತದೆ. ಕೆಲವು ಆಲಂಕಾರಿಕ ತಾಳೆ ಗಿಡಗಳು ಹೋಸ್ಟ್ ಗಳ ಪಟ್ಟಿಯನ್ನು ಪೂರ್ಣಗೊಳಿಸುತ್ತವೆ.