Polyphagotarsonemus latus
ಹುಳು
ಹಾನಿಯು ಸಾಮಾನ್ಯವಾಗಿ ಸಸ್ಯನಾಶಕಗಳ ಅತಿಯಾದ ಉಪಯೋಗದಿಂದ ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗುವ ಹಾನಿಯನ್ನು ಹೋಲುತ್ತದೆ. ಎಲೆಗಳು ಸುರುಳಿಯಾಗಿ, ದಪ್ಪವಾಗುತ್ತವೆ ಮತ್ತು ಕಂದು ಬಣ್ಣಕ್ಕೆ ತಿರುಗುತ್ತವೆ. ಗಡುಸಾದ ಕಂದು ಬಣ್ಣದ ಪ್ರದೇಶಗಳು ಎಲೆಗಳ ಕೆಳಭಾಗದಲ್ಲಿನ ಮುಖ್ಯ ನಾಳಗಳ ನಡುವೆ ಕಂಡುಬರುತ್ತವೆ. ಹೂವುಗಳು ಅರಳುವುದಿಲ್ಲ ಮತ್ತು ಚಿಗುರು ಎಲೆಗಳು ಸಾಮಾನ್ಯವಾಗಿ ವಿರೂಪಗೊಂಡಿರುತ್ತವೆ. ಇವುಗಳ ಸಂಖ್ಯಾ ಸಾಂದ್ರತೆಯು ಅಧಿಕವಾಗಿದ್ದಾಗ ಕುಂಠಿತಗೊಂಡ ಬೆಳವಣಿಗೆ ಮತ್ತು ಚಿಗುರುಗಳ ಡೈ ಬ್ಯಾಕ್ ಗಮನಿಸಬಹುದು. ಮಿಟೆಗಳು ಮಾಡುವ ಹಾನಿಯಿಂದ ಹಣ್ಣುಗಳು ಬೆಳ್ಳಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಗಡುಸಾದ ಕಂದು ಪ್ರದೇಶಗಳು ಕಂಡುಬರುತ್ತವೆ.
ಸೋಂಕಾದ ನಂತರ ರೋಗವನ್ನು ನಿಯಂತ್ರಿಸಲು ನಿಯೋಸಿಯುಲಸ್ ಕ್ಯುಕುಮೆರಿಸ್ ಮತ್ತು ಅಂಬಿಲೈಸಿಯಸ್ ಮೊಂಟ್ಡೋರೆನ್ಸಿಸ್ನಂತಹ ಅಗಲ ಮಿಟೆಯ ನೈಸರ್ಗಿಕ ಪರಭಕ್ಷಕಗಳನ್ನು ಬಳಸಿ. ಬೆಳ್ಳುಳ್ಳಿ ಸ್ಪ್ರೇ ಮತ್ತು ಕೀಟನಾಶಕ ಸಾಬೂನುಗಳನ್ನು ಸಹ ಪ್ರಯತ್ನಿಸಿ. ಸಣ್ಣ ಗಿಡಗಳ ಮೇಲೆ ಬಿಸಿ ನೀರಿನ ಚಿಕಿತ್ಸೆಗಳು (43 °C ನಿಂದ 49 °C ಯಲ್ಲಿ 15 ನಿಮಿಷಗಳವರೆಗೆ) ಸಹ ಮಿಟೆ ಸೋಂಕನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಹೆಚ್ಚಿನ ಕೀಟ ಒತ್ತಡದ ಸಂದರ್ಭದಲ್ಲಿ ಮಾತ್ರ ರಾಸಾಯನಿಕಗಳನ್ನು ಬಳಸಿ. ಮಿಟೆ ಕೀಟಗಳನ್ನು ರಾಸಾಯನಿಕ ಚಿಕಿತ್ಸೆಗಳ ಮೂಲಕ ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ. ಏಕೆಂದರೆ ಮಿಟೆ ತನ್ನ ಸಣ್ಣ ಜೀವನ ಚಕ್ರದ ಕಾರಣದಿಂದ ಪ್ರತಿರೋಧವನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ. ಮಿಟೆನಾಶಕಗಳು ನಿಜವಾಗಿಯೂ ಅವಶ್ಯಕವಾಗಿದ್ದರೆ, ಅಬಮೆಕ್ಟಿನ್, ಸ್ಪೈರೋಮೆಸಿಫೆನ್ ಅಥವಾ ಪಿರಿಡಿನ್ ಹೊಂದಿರುವ ಉತ್ಪನ್ನಗಳನ್ನು ಸಿಂಪಡಿಸಿ.
ಅಗಲ ಮಿಟೆಗಳು ಎಳೆಯ ಎಲೆಗಳು ಮತ್ತು ಮೊಗ್ಗುಗಳನ್ನು ಚುಚ್ಚಿ ಆ ಗಾಯದಿಂದ ಹೊರಬರುವ ರಸವನ್ನು ಹೀರಿಕೊಳ್ಳುತ್ತವೆ. ಅವುಗಳ ಲಾಲಾರಸದಲ್ಲಿ ಅಂಗಾಂಶ-ವಿರೂಪತೆಗಳನ್ನು ಉಂಟುಮಾಡುವ ಸಸ್ಯ-ಹಾರ್ಮೋನ್-ರೀತಿಯ ವಸ್ತುಗಳಿರುತ್ತವೆ. ಈ ಮಿಟೆಗಳನ್ನು ಕೈ ಮಸೂರವಿಲ್ಲದೆಯೇ ನೋಡುವುದು ಬಹಳ ಕಷ್ಟ, ಇವುಗಳು ತುಂಬಾ ಚಿಕ್ಕದಾಗಿರುತ್ತವೆ. ಪ್ರೌಢ ಹುಳಗಳು ಸುಮಾರು 0.2 ಮಿಮೀ ಉದ್ದವಿರುತ್ತವೆ ಮತ್ತು ಅಂಡಾಕಾರದಲ್ಲಿರುತ್ತವೆ. ಬಣ್ಣ ಹಳದಿ ಮತ್ತು ಹಸಿರಿನ ನಡುವೆ ಬದಲಾಗುತ್ತದೆ. ಪ್ರೌಢ ಹೆಣ್ಣು ಹುಳುಗಳು ದಿನಕ್ಕೆ ಐದು ಮೊಟ್ಟೆಗಳನ್ನು ಎಲೆಗಳ ಕೆಳಭಾಗದಲ್ಲಿ ಅಥವಾ ಹಣ್ಣುಗಳ ಕುಳಿಗಳಲ್ಲಿ ಇಡುತ್ತವೆ. ಎರಡು ಅಥವಾ ಮೂರು ದಿನಗಳಲ್ಲಿ ಲಾರ್ವಾ ಮೊಟ್ಟೆಯೊಡೆದು ಹೊರಬರುತ್ತವೆ. ಕೀಟವನ್ನು ವಾಹಕದಂತೆ ಬಳಸದಿದ್ದರೆ ಅಥವಾ ಗಾಳಿಯ ಮೂಲಕ ಹರಡದಿದ್ದರೆ ಮಿಟೆಗಳ ಹರಡುವಿಕೆ ಬಹಳ ನಿಧಾನವಾಗಿರುತ್ತದೆ. ಹಸಿರುಮನೆಗಳಲ್ಲಿರುವಂತಹ ಬೆಚ್ಚಗಿನ ಆರ್ದ್ರ ಸ್ಥಿತಿಯಲ್ಲಿ ಈ ಜಾತಿಗಳು ಚೆನ್ನಾಗಿ ಬೆಳೆಯುತ್ತವೆ.