ಆಲಿವ್

ಆಲಿವ್ ಮೊಗ್ಗಿನ ಹುಳು

Oxycenus maxwelli

ಹುಳು

ಸಂಕ್ಷಿಪ್ತವಾಗಿ

  • ವಸಂತಕಾಲದಲ್ಲಿ ಕುಡಗೋಲು-ಆಕಾರದ ಎಲೆಗಳು ಮತ್ತು ಸಸ್ಯಕ ಮೊಗ್ಗುಗಳು.
  • ಹೂವಿನ ಮೊಗ್ಗುಗಳ ಬಣ್ಣಗೆಡುವಿಕೆ, ಬ್ಲಾಸಂ ಬ್ಲಾಸ್ಟಿಂಗ್, ಹೂಗೊಂಚಲ ಉದುರುವಿಕೆ, ಮತ್ತು ಚಿಗುರಿನ ಬೆಳವಣಿಗೆಯಲ್ಲಿ ಕಡಿತ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಆಲಿವ್

ಆಲಿವ್

ರೋಗಲಕ್ಷಣಗಳು

ಆಲಿವ್ ಹುಳಗಳು ರಸಭರಿತವಾದ ಕಾಂಡಗಳು, ಮೊಗ್ಗುಗಳು ಮತ್ತು ಎಲೆಗಳ ಮೇಲಿನ ಮೇಲ್ಮೈಯಲ್ಲಿ ತಿನ್ನುತ್ತವೆ, ಬೆಳೆಯುತ್ತಿರುವ ಅಂಗಾಂಶಗಳನ್ನು ಹಾನಿಗೊಳಿಸುತ್ತವೆ. ಈ ಹುಳಗಳ ದಾಳಿಯ ಲಕ್ಷಣಗಳೆಂದರೆ ಎಲೆಗಳ ಮೇಲೆ ಚುಕ್ಕೆಗಳ ಉಪಸ್ಥಿತಿ, ಎಲೆಗಳ ಬಣ್ಣ ಮತ್ತು ಮಧ್ಯಭಾಗದಲ್ಲಿ ಸುರುಳಿಯಾಕಾರ. ಮುತ್ತಿಕೊಳ್ಳುವಿಕೆಯ ಇತರ ಚಿಹ್ನೆಗಳು ವಸಂತಕಾಲದಲ್ಲಿ ಸಾಯುವ ಸಸ್ಯಕ ಮೊಗ್ಗುಗಳು, ಹೂವಿನ ಮೊಗ್ಗುಗಳ ಬಣ್ಣಗೆಡುವಿಕೆ, ಬ್ಲಾಸಮ್ ಬ್ಲಾಸ್ಚಿಂಗ್ ಮತ್ತು ಉದುರುವುಕೆ, ಮತ್ತು ಚಿಗುರಿನ ಬೆಳವಣಿಗೆಯಲ್ಲಿ ಕಡಿತ. ಎಳೆಯ ಎಲೆಗಳ ಇಂಟರ್ನೋಡ್‌ಗಳು ಅಸಮರ್ಪಕವಾಗಿ ರೂಪುಗೊಂಡಿದ್ದು ದೂರದಿಂದ ಗಮನಿಸಿದಾಗ 'ಮಾಟಗಾತಿಯ ಪೊರಕೆ'ಯ ಆಕಾರ ಕಾಣುತ್ತದೆ. ಈ ಕೀಟವು ಸಾಮಾನ್ಯವಾಗಿ ದೊಡ್ಡ ಸಮಸ್ಯೆಯಲ್ಲ. ಏಕೆಂದರೆ ಆಲಿವ್ ಮರಕ್ಕೆ ಸೋಂಕನ್ನು ತಡೆದುಕೊಳ್ಳುವ ಮತ್ತು ತಾನಾಗಿಯೇ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದಾಗ್ಯೂ, ಅತ್ಯಂತ ಚಿಕ್ಕ ಆಲಿವ್ ಮರಗಳಲ್ಲಿ, ತೀವ್ರವಾದ ಮುತ್ತಿಕೊಳ್ಳುವಿಕೆಯು ಸಸ್ಯದ ಬೆಳವಣಿಗೆಯನ್ನು ಗಂಭೀರವಾಗಿ ಕುಂಠಿತಗೊಳಿಸುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಲೇಡಿ ಜೀರುಂಡೆಗಳು ಮತ್ತು ಕೆಲವು ವಿಧದ ಪರಭಕ್ಷಕ ಹುಳಗಳು ಒ. ಮ್ಯಾಕ್ಸ್ವೆಲ್ಲಿಯನ್ನು ತಿನ್ನುತ್ತವೆ ಮತ್ತು ಅವುಗಳನ್ನು ತೋಟಗಳಲ್ಲಿ ಬಿಡಬಹುದು . ವಿಶಾಲ ಶ್ರೇಣಿಯ ಕೀಟನಾಶಕಗಳ ಬಳಕೆಯಿಂದ ಅವುಗಳು ಸಾಯದಂತೆ ನೋಡಿಕೊಳ್ಳಿ. ತೋಟಗಾರಿಕಾ ಬೇಸಿಗೆ ತೈಲಗಳನ್ನು ಬಳಸಬಹುದು, ಇವು ನೈಸರ್ಗಿಕ ಶತ್ರುಗಳಿಗೆ ವೆಟ್ಟೆಬಲ್ ಸಲ್ಫರ್ ಆಧಾರಿತ ಉತ್ಪನ್ನಗಳಿಗಿಂತ ಕಡಿಮೆ ಹಾನಿಕಾರಕವಾಗಿವೆ. ಏಕೆಂದರೆ ಅವುಗಳು ಕಡಿಮೆ ಕಾಲ ಉಳಿಯುತ್ತವೆ. ತಾಪಮಾನವು ತಂಪಾಗಿರುವಾಗ ಚೆನ್ನಾಗಿ ನೀರು ಹಾಕಿರುವ ಆಲಿವ್ ಮರಗಳಿಗೆ ಈ ತೈಲಗಳನ್ನು ಬಳಸಬೇಕು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ದೊಡ್ಡ ಸಂಖ್ಯೆಯಲ್ಲಿ ಕಂಡುಬಂದರೆ, ಮೊಗ್ಗುಗಳು ಅರಳುವ ಮೊದಲು ಆಲಿವ್ ಮರಗಳಿಗೆ ಚಿಕಿತ್ಸೆ ನೀಡಬೇಕು. ವೆಟ್ಟೆಬಲ್ ಗಂಧಕವು ಪರಿಣಾಮಕಾರಿ ಎಂದು ಸಾಬೀತಾಗಿದೆ. ಆದರೆ 32 °C ಗಿಂತ ಹೆಚ್ಚಿನ ತಾಪಮಾನದಲ್ಲಿ ಮರಕ್ಕೆ ಹಾನಿ ಸಂಭವಿಸಬಹುದು. ಹೆಚ್ಚಿನ ತಾಪಮಾನದಲ್ಲಿ, ವೆಟ್ಟೆಬಲ್ ಗಂಧಕಕ್ಕಿಂತ ಗಂಧಕದ ಹುಡಿ ಬಳಸಲು ಸುರಕ್ಷಿತವಾಗಿದೆ. ಸಲ್ಫರ್ ಅನ್ನು ಸಿಂಪಡಿಸುವುದು ಮತ್ತೊಂದು ಆಯ್ಕೆಯಾಗಿದೆ.

ಅದಕ್ಕೆ ಏನು ಕಾರಣ

ಆಲಿವ್ ಮೊಗ್ಗು ಹುಳು, ಆಕ್ಸಿಸೆನಸ್ ಮ್ಯಾಕ್ಸ್‌ವೆಲ್ಲಿಯ ಆಹಾರ ಚಟುವಟಿಕೆಯಿಂದಾಗಿ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಒಂದು ಸೂಕ್ಷ್ಮ ಜೀವಿಯಾಗಿದ್ದು (0.1-0.2 ಮಿಮೀ), ಇದು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಇದು ಹಳದಿ ಬಣ್ಣದಿಂದ ಗಾಢ ಕಂದು ಬಣ್ಣ ಹೊಂದಿರುತ್ತದೆ. ನಿಧಾನವಾಗಿ ಚಲಿಸುತ್ತದೆ ಮತ್ತು ಬೆಣೆಯಾಕಾರದ, ಚಪ್ಪಟೆಯಾದ ದೇಹವನ್ನು ಹೊಂದಿದ್ದು, ಇದು ಈ ಕುಟುಂಬದ ಅನೇಕ ಜಾತಿಗಳ ವಿಶಿಷ್ಟತೆಯಾಗಿದೆ. ಇವು ಆಲಿವ್ ತೋಟಗಳನ್ನೇ ಆಹಾರವಾಗಿ ಹೊಂದಿರುವುದರಿಂದ, ಇವುಗಳ ಜೀವನ ಚಕ್ರವು ಆಲಿವ್ ಮರದೊಂದಿಗೆ ನಿಕಟ ಸಂಬಂಧ ಹೊಂದಿದೆ. ವಸಂತ ಋತುವಿನಲ್ಲಿ, ಅವು ಸಂತಾನೋತ್ಪತ್ತಿ ಮಾಡಲು ಹೊಸ ಎಲೆಗಳು ಮತ್ತು ಮೊಗ್ಗುಗಳತ್ತ ತೆರಳುತ್ತವೆ ಮತ್ತು ಹೆಣ್ಣು ಸುಮಾರು 50 ಮೊಟ್ಟೆಗಳನ್ನು ಇಡುತ್ತವೆ. ಹೊಸ ಲಾರ್ವಾಗಳು ಮತ್ತು ಮರಿಹುಳುಗಳು ಹಲವಾರು ಹೂವುಗಳನ್ನು ತಿನ್ನುತ್ತವೆ ಮತ್ತು ಕಾಂಡಗಳನ್ನು ಕಡಿಯಬಹುದು, ಇದರಿಂದಾಗಿ ಅವು ಅಕಾಲಿಕವಾಗಿ ಉದುರುತ್ತವೆ. ನಂತರ, ಹುಳಗಳು ಎಳೆಯ ಹಣ್ಣುಗಳ ಮೇಲೆ ದಾಳಿ ಮಾಡಬಹುದು ಮತ್ತು ತಿನ್ನುವ ಸ್ಥಳಗಳ ಸುತ್ತಲಿನ ಅಂಗಾಂಶಗಳ ಬಣ್ಣ ಮತ್ತು ಕುಗ್ಗುವಿಕೆಗೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಆಲಿವ್ ಮೊಗ್ಗು ಹುಳಗಳ ರೋಗಲಕ್ಷಣಗಳಿಗಾಗಿ ನಿಯಮಿತವಾಗಿ ತೋಟವನ್ನು ಮೇಲ್ವಿಚಾರಣೆ ಮಾಡಿ.
  • ಆಲಿವ್ ಮೊಗ್ಗು ಹುಳಗಳ ಪರಭಕ್ಷಕ ಜೀವಿಗಳ ಮೇಲೆ ಪರಿಣಾಮ ಬೀರದಂತೆ ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ