Panonychus citri
ಹುಳು
ಮರದ ಪರಿಧಿಯಲ್ಲಿರುವ ಎಳೆಯ ಎಲೆಗಳ ಮೇಲೆ ಸಣ್ಣ ಬೂದು ಅಥವಾ ಬೆಳ್ಳಿ ಬಣ್ಣದ ಚುಕ್ಕೆಗಳು ಕಂಡುಬರುವುದು ಈ ಹಾನಿಯ ಗುರುತಾಗಿದೆ. ಈ ಪ್ರಕ್ರಿಯೆಯನ್ನು ಸ್ಟಿಪ್ಲಿಂಗ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ, ಹಣ್ಣುಗಳು ಮತ್ತು ಕೊಂಬೆಗಳ ಮೇಲೂ ಸಹ ಪರಿಣಾಮವಾಗಬಹುದು. ಸೋಂಕು ತೀವ್ರ ಮಟ್ಟದಲ್ಲಿದ್ದಾಗ, ಈ ಚುಕ್ಕೆಗಳು ಒಂದಾಗುತ್ತಾ ದೊಡ್ಡ ಕಲೆಗಳಾಗಿ ಬದಲಾಗುತ್ತವೆ ಮತ್ತು ಇದರಿಂದ ಎಲೆ ಅಥವಾ ಹಸಿರು ಹಣ್ಣಿನ ಮೇಲೆ ಬೆಳ್ಳಿ ಅಥವಾ ಕಂಚಿನ ಬಣ್ಣ ಕಂಡುಬರುತ್ತದೆ. ಎಲೆಯ ಅಂಗಾಂಶಗಳಿಗಾಗುವ ಹಾನಿಯಿಂದ ದ್ಯುತಿಸಂಶ್ಲೇಷಣೆಗೆ ಬಳಕೆಯಾಗುವ ಭಾಗ ಕಡಿಮೆಯಾಗುತ್ತದೆ ಮತ್ತು ಸೋಂಕಿತ ಅಂಗಾಂಶ ಕ್ರಮೇಣ ಕೊಳೆಯುತ್ತದೆ. ಎಲೆಯು ಅಕಾಲಿಕವಾಗಿ ಉದುರುತ್ತದೆ, ರೆಂಬೆಗಳು ಸಾಯುತ್ತವೆ, ಹಣ್ಣುಗಳ ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ಮರಗಳ ಚಟುವಟಿಕೆ ಕಡಿಮೆಯಾಗುತ್ತದೆ. ಇದು ನಿರ್ದಿಷ್ಟವಾಗಿ ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಲ್ಲಿ ಆಗುತ್ತದೆ, ಉದಾಹರಣೆಗೆ ಶುಷ್ಕ, ಬಿರುಗಾಳಿಯ ವಾತಾವರಣ. ಇದಕ್ಕೆ ತದ್ವಿರುದ್ಧವಾಗಿ, ನೀರಿನ ಸರಬರಾಜು ಸಾಕಷ್ಟಿದ್ದರೆ ಅದು ಈ ಕೀಟದ ಸಂಭವ ಮತ್ತು ಅದರಿಂದ ಉಂಟಾಗುವ ಹಾನಿಗಳನ್ನು ಕಡಿಮೆ ಮಾಡುತ್ತದೆ.
ಪಾನೊನಿಯಸ್ ಸಿಟ್ರಿಗೆ ಹೆಚ್ಚಿನ ಪ್ರಮಾಣದ ಪರಭಕ್ಷಕಗಳು ಮತ್ತು ಇತರ ನೈಸರ್ಗಿಕ ವೈರಿಗಳಿವೆ. ಇವು ಅದರ ಹರಡುವಿಕೆಯನ್ನು ನಿಯಂತ್ರಿಸಲು ಸಾಕಾಗುತ್ತವೆ. ಸಿಟ್ರಸ್ ಕೆಂಪು ಹುಳುವಿನ ಸಂಖ್ಯೆಯು ಕಡಿಮೆ ಇದ್ದಾಗಲೇ ಅವುಗಳ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಹಲವಾರು ದೇಶಗಳಲ್ಲಿ ಫೈಟೊಸೈಯಿಡ್ ಮಿಟೆಗಳನ್ನು (ಉದಾಹರಣೆಗೆ ಯೂಸಿಯಸ್ ಸ್ಟಿಪ್ಯುಲಟಸ್) ಬಳಸಲಾಗಿದೆ. ಸ್ಟೆಥಾರಸ್ ಜಾತಿಯ ಕೆಲವು ಲೇಡಿ ಬರ್ಡ್ ಗಳು ಕೀಟವನ್ನು ಚೆನ್ನಾಗಿ ತಿನ್ನುತ್ತವೆ. ಶಿಲೀಂಧ್ರಗಳು, ಮತ್ತು ನಿರ್ದಿಷ್ಟವಾಗಿ ವೈರಸ್ಗಳು, ಪಾನೊನಿಯಸ್ ಸಿಟ್ರಿ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ತಾಪಮಾನದಿಂದ ಪ್ರಭಾವಿತವಾಗಬಹುದು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವ್ಯಾಪಕ-ಶ್ರೇಣಿ ಕೀಟನಾಶಕಗಳು ಈ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದಾದ್ದರಿಂದ ಆಯ್ದ ಕೀಟನಾಶಕಗಳನ್ನು ಹೆಚ್ಚು ಸೂಚಿಸಲಾಗುತ್ತದೆ. ಉದಾಹರಣೆಗೆ, ಸಂಶ್ಲೇಷಿತ ಪೈರೆಥ್ರಾಯ್ಡ್ಗಳು ಈ ಹುಳುವನ್ನು ಏಕಾಏಕಿಯಾಗಿ ಹೆಚ್ಚಿಸುತ್ತವೆ. ಅನೇಕ ವಿಧದ ಅಕರೈಸೈಡ್ಗಳ ಬಳಕೆಯು ಪ್ರತಿರೋಧದ ಬೆಳವಣಿಗೆಯನ್ನು ತಪ್ಪಿಸುತ್ತದೆ.
ಪ್ಯಾನೊನಿಚಸ್ ಸಿಟ್ರಿ ಎಂಬ ಸಿಟ್ರಸ್ ಕೆಂಪು ಹುಳುವಿನ, ಪ್ರೌಢ ಹುಳುಗಳು ಮತ್ತು ಮರಿಹುಳುಗಳ ಆಹಾರ ಚಟುವಟಿಕೆಯಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಅವುಗಳ ದೇಹ ಪಿಯರ್-ಆಕಾರವಾಗಿದ್ದು ಇಟ್ಟಿಗೆ-ಕೆಂಪು ಬಣ್ಣವಿರುತ್ತದೆ ಮತ್ತು ಅವುಗಳ ಹಿಂಭಾಗದಲ್ಲಿ ಮುಳ್ಳಿನ ಚುಕ್ಕೆಗಳಿಂದ ಗಟ್ಟಿಯಾದ ಬಿಳಿ ಕೂದಲು ಹೊರಬರುತ್ತವೆ. ಅವು ಸಿಟ್ರಸ್ ಮರಗಳಿಗೆ ಸೋಂಕು ಮಾಡುತ್ತವೆ ಮತ್ತು ಕೆಲವೊಮ್ಮೆ ಪಪ್ಪಾಯಿ, ಕಸ್ಸಾವ ಅಥವಾ ದ್ರಾಕ್ಷಿ ತೋಟದಂತಹ ಇತರ ಬೆಳೆಗಳಿಗೆ ಸಹ ಇದು ಸೋಂಕು ತಗುಲಿಸುತ್ತದೆ. ಇದು ಎಲೆಗಳ ಎರಡೂ ಬದಿಗಳಲ್ಲಿ ಕಂಡುಬರುತ್ತದೆ ಆದರೆ ಮೇಲ್ಭಾಗಗಳಲ್ಲಿ ಆಹಾರ ತಿನ್ನುವುದನ್ನು ಹೆಚ್ಚಾಗಿ ಕಾಣಬಹುದು. ಅವುಗಳು ಉತ್ಪಾದಿಸುವ ರೇಷ್ಮೆ ನೂಲಿನ ಕಾರಣದಿಂದ, ಅದನ್ನು ಸುಲಭವಾಗಿ ಇತರ ಮರಗಳಿಗೆ ಗಾಳಿ ಮೂಲಕ ಸಾಗಿಸಬಹುದು. ಕೀಟಗಳು ಮತ್ತು ಪಕ್ಷಿಗಳು ಇವುಗಳನ್ನು ಹರಡುವ ಇತರ ವಿಧಾನಗಳಾಗಿವೆ. ಸೋಂಕು ತಗುಲಿರುವ ಉಪಕರಣಗಳು ಮತ್ತು ಹೊಲದ ಕೆಲಸಗಳಲ್ಲಿ ಮಾಡುವ ತಪ್ಪುಗಳು ಸಹ ಕೀಟವನ್ನು ಇತರ ಹೊಲಗಳಿಗೆ ಹರಡುತ್ತವೆ. ಉತ್ತಮ ನೀರಾವರಿ ಯೋಜನೆಯ ಮೂಲಕ ಮರಗಳಿಗೆ ಸೂಕ್ತ ನೀರು ಸರಬರಾಜು ಮಾಡಿದರೆ ಅದು ಈ ಕೀಟದ ಸಂಭವ ಮತ್ತು ಇದರಿಂದ ಉಂಟಾದ ಹಾನಿಯನ್ನು ಬಹುವಾಗಿ ಕಡಿಮೆಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಕಡಿಮೆ ಅಥವಾ ಅಧಿಕ ಆರ್ದ್ರತೆ, ಅಧಿಕ ಗಾಳಿ, ಬರ / ಜಲಕ್ಷಾಮ, ಅಥವಾ ಸರಿಯಾಗಿ ಬೆಳೆಯದ ಬೇರಿನ ವ್ಯವಸ್ಥೆಯು ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸುತ್ತವೆ. ಸಿಟ್ರಸ್ ಕೆಂಪು ಹುಳುವಿಗೆ ಸೂಕ್ತ ಪರಿಸ್ಥಿತಿಗಳೆಂದರೆ 25 °C ಮತ್ತು 50-70% ಆರ್ದ್ರತೆ.