Aceria sheldoni
ಹುಳು
ಈ ಕೀಟಗಳ ಹೆಸರೇ ಸೂಚಿಸುವಂತೆ, ಇವು ಎಲೆ ಮತ್ತು ಹೂವಿನ ಮೊಗ್ಗುಗಳನ್ನು ಅಧಿಕವಾಗಿ ಆಕ್ರಮಿಸುತ್ತವೆ. ಕೊಂಬೆಗಳು ಮತ್ತು ಹೂಗೊಂಚಲುಗಳ ಮೇಲಿರುವ ಬೆಳೆಯುತ್ತಿರುವ ಭಾಗಗಳಿಗೆ ಹಾನಿಯಾಗುವುದರಿಂದ ಎಲೆಗಳು, ಹೂವುಗಳು ಮತ್ತು ಎಳೆ ಚಿಗುರುಗಳು ವಿಕೃತವಾಗುತ್ತವೆ. ಶಾಖೆಗಳಲ್ಲಿ ರೋಸೆಟ್ ತರಹದಲ್ಲಿ ಎಲೆಗಳು ರೂಪಗೊಳ್ಳುವುದು ಕಂಡುಬರುತ್ತದೆ. ಮರದ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಹಣ್ಣುಗಳ ರಚನೆ ಕಡಿಮೆಯಾಗುತ್ತದೆ. ಸೋಂಕಿತ ಹಣ್ಣುಗಳು ತೀವ್ರವಾಗಿ ವಿರೂಪಗೊಳ್ಳುತ್ತವೆ ಮತ್ತು ಬೆಳ್ಳಿ ಬಣ್ಣ ಅಥವಾ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಗಾಯದ ಚುಕ್ಕೆಗಳ ಮೂಲಕ ಶಿಲೀಂದ್ರಗಳ ಸೋಂಕು ಹರಡುತ್ತದೆ. ಅವು ಬೆಳವಣಿಗೆಯ ಆರಂಭಿಕ ಹಂತಗಳಲ್ಲೇ ಉದುರಬಹುದು. ಪರಿಪಕ್ವತೆಯನ್ನು ತಲುಪುವ ಹಣ್ಣುಗಳ ಮಾರುಕಟ್ಟೆ ಮೌಲ್ಯ ಕಡಿಮೆಯಿರಬಹುದು. ಏಕೆಂದರೆ ಅವು ಕಡಿಮೆ ರಸವನ್ನು ಉತ್ಪಾದಿಸುತ್ತವೆ ಮತ್ತು ಅವುಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಈ ಹುಳಗಳು ಎಲ್ಲಾ ಸಿಟ್ರಸ್ ಜಾತಿಗಳ ಮೇಲೆ ದಾಳಿ ಮಾಡುತ್ತವೆ. ಆದರೆ ಸಾಮಾನ್ಯವಾಗಿ ನಿಂಬೆಹಣ್ಣುಗಳಲ್ಲಿ ಈ ಹಾನಿ ಅಧಿಕವಾಗಿರುತ್ತದೆ.
ಆದರೆ ಮಿಟೆಗಳನ್ನು ಸಾಮಾನ್ಯವಾಗಿ ನೈಸರ್ಗಿಕ ಶತ್ರುಗಳಿಂದ ನಿಯಂತ್ರಿಸಲಾಗುವುದಿಲ್ಲ. ಮೊಗ್ಗು ಮಿಟೆಗಳನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿಟ್ಟುಕೊಳ್ಳಲು ಪರಭಕ್ಷಕ ಮಿಟೆಗಳನ್ನು ಬಳಸಬಹುದು. ಸೋಂಕನ್ನು ನಿರ್ವಹಿಸಲು ಜೈವಿಕ ಕೀಟನಾಶಕಗಳು ಅತ್ಯುತ್ತಮ ಮಾರ್ಗವಾಗಿದೆ. ಸೋಂಕು ಕಡಿಮೆಯಿರುವಾಗ 2% ಸಾಂದ್ರತೆಯ ಸಲ್ಫರ್ ಹೊಂದಿರುವ ದ್ರಾವಣಗಳನ್ನು ಬಳಸಿ ಮೊಗ್ಗು ಮಿಟೆಗಳನ್ನು ನಿಯಂತ್ರಿಸಬಹುದು. ಈ ಸಂಸ್ಕರಣೆಯನ್ನು 30 °C ಗಿಂತ ಹೆಚ್ಚಿನ ತಾಪಮಾನದಲ್ಲಿ ಹಾಕಬಾರದು ಮತ್ತು ಸಂಸ್ಕರಣೆಗಳ ನಡುವೆ 4 ವಾರದ ಅಂತರವನ್ನು ಇರಿಸಬೇಕು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಈ ಮೈಟುಗಳಿಂದ ಮೊಗ್ಗುಗಳ ಮೇಲೆ ಆಗುವ ಹಾನಿಯನ್ನು ಎಲೆಗಳ ಮೇಲೆ ಫೈಟೊಟಾಕ್ಸಿಕ್ ಕಿರುವ್ಯಾಪ್ತಿ ತೈಲಗಳನ್ನು ಸಿಂಪಡಿಸುವ ಮೂಲಕ ಸರಿಪಡಿಸಬಹುದು. ಹೆಚ್ಚಿನ ಪರಿಣಾಮಕ್ಕಾಗಿ ಅಬ್ಮೆಕ್ಟಿನ್, ಫೆನ್ಬುಟಟಿನ್ ಆಕ್ಸೈಡ್, ಕ್ಲೋರಿಪಿರಿಫೊಸ್, ಸ್ಪಿರೋಟೆಟ್ರಾಮ್ಯಾಟ್ , ಫೆನ್ಪಿರೋಕ್ಸಿಮೆಟ್ ಅಥವಾ ಅವುಗಳ ಸಂಯೋಜನೆಗಳ ಮೇಲೆ ಆಧರಿಸಿದ ಉತ್ಪನ್ನಗಳನ್ನು ತೈಲಗಳೊಂದಿಗೆ ಬಳಸಬಹುದು.
ಅಸೆರಿಯಾ ಶೆಲ್ಡೋನಿ ಎಂಬ ಸಿಟ್ರಸ್ ಬಡ್ ಮೈಟ್ ಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಅವು ಬರಿಗಣ್ಣಿಗೆ ಕಾಣುವುದಿಲ್ಲ. ಆದರೆ ಸಿಟ್ರಸ್ ತೋಟಗಳಿಗೆ ಅವು ಗಮನಾರ್ಹ ಹಾನಿ ಉಂಟುಮಾಡಬಹುದು ಮತ್ತು ಇಳುವರಿಯನ್ನು ಒಂದೇ ಸಮನೆ ಕಡಿಮೆ ಮಾಡಬಹುದು. ಭೂತಗನ್ನಡಿಯಿಂದ ನೋಡಿದಾಗ ಸಣ್ಣ, ಕ್ರಿಮಿ-ಆಕಾರದ, ವಿಶಿಷ್ಟವಾಗಿ ಕೆನೆ ಬಿಳಿ ಅಥವಾ ಅರೆಪಾರದರ್ಶಕ ಹುಳಗಳನ್ನು ಮೊಗ್ಗುಗಳಲ್ಲಿ ಕಾಣಬಹುದು. ಚಳಿಗಾಲದ ತಿಂಗಳುಗಳಲ್ಲಿ, ಮೊಗ್ಗುಗಳ ಪತ್ರಕಗಳ ಅಡಿಯಲ್ಲಿ ರಕ್ಷಣೆ ಪಡೆಯುತ್ತವೆ. ವಸಂತಕಾಲದಲ್ಲಿ, ಪರಿಸ್ಥಿತಿಗಳು ಅನುಕೂಲಕರವಾದಾಗ, ಹೆಣ್ಣು ಹುಳುಗಳು ಹೊರಬಂದು ಹೊಸದಾಗಿ ಬೆಳೆದ ಭಾಗಗಳ ಮೊಗ್ಗಿನ ಸ್ಕೇಲ್ ಗಳಲ್ಲಿ ತಮ್ಮ ಮೊಟ್ಟೆಗಳನ್ನು ಇಡುತ್ತವೆ. ಮರಿಹುಳುಗಳು ಕೊಂಬೆಗಳು ಮತ್ತು ಹೂಗೊಂಚಲುಗಳ ಬೆಳೆಯುತ್ತಿರುವ ಭಾಗಗಳ ಮೇಲೆ ದಾಳಿ ಮಾಡುತ್ತವೆ, ಇದು ಸಣ್ಣ ಎಲೆಗಳು, ಹೂವಿನ ಮೊಗ್ಗುಗಳು ಮತ್ತು ಚಿಗುರುಗಳನ್ನು ವಿರೂಪಗೊಳಿಸುತ್ತದೆ. ಇದರ ಪರಿಣಾಮವಾಗಿ, ಮರಗಳ ಬೆಳವಣಿಗೆ ಕುಂಠಿತವಾಗುತ್ತದೆ. ಹಣ್ಣಿನ ರಚನೆ ಕೂಡ ಕುಂಠಿತವಾಗಬಹುದು ಮತ್ತು ಹಣ್ಣುಗಳು ತೀವ್ರವಾಗಿ ವಿರೂಪವಾಗಬಹುದು. ಇವುಗಳ ಸಂಖ್ಯೆ ಬೆಚ್ಚಗಿನ, ಶುಷ್ಕ ಹವಾಮಾನದ ಪರಿಸ್ಥಿತಿಯಲ್ಲಿ ತ್ವರಿತವಾಗಿ ಹೆಚ್ಚಾಗಬಹುದು ಮತ್ತು ಆ ಪರಿಸ್ಥಿತಿಗಳಲ್ಲಿ ಸ್ವಲ್ಪ ಸೋಂಕಾದರೂ ಸಹ ಅದು ಗಂಭೀರ ಹಾನಿಯನ್ನು ಉಂಟುಮಾಡಬಹುದು.