ಸೋಯಾಬೀನ್

ಜೇಡ ಹುಳ

Tetranychidae

ಹುಳು

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ ಕಲೆಗಳು.
  • ಕಾಂಡ ಮತ್ತು ಎಲೆಯ ನಡುವೆ ಸಣ್ಣ ಜಾಲಗಳನ್ನು ಕಾಣಬಹುದು.
  • ಒಣಗಿದ ಎಲೆಗಳು.
  • ಸಣ್ಣ, ಮಸುಕಾದ ಹಸಿರು, ಅಂಡಾಕಾರದ ಹುಳಗಳು.

ಇವುಗಳಲ್ಲಿ ಸಹ ಕಾಣಬಹುದು

39 ಬೆಳೆಗಳು
ಬಾದಾಮಿ
ಸೇಬು
ಬಾಳೆಹಣ್ಣು
ಹುರುಳಿ
ಇನ್ನಷ್ಟು

ಸೋಯಾಬೀನ್

ರೋಗಲಕ್ಷಣಗಳು

ಜೇಡ ಹುಳಗಳು ತಿನ್ನುವುದರಿಂದ ಎಲೆಗಳ ಮೇಲ್ಮೈ ಮೇಲೆ ಬಿಳಿಯಿಂದ ಹಳದಿ ಬಣ್ಣದ ಚುಕ್ಕೆಗಳು ಉಂಟಾಗುತ್ತವೆ. ಸೋಂಕು ಹೆಚ್ಚು ತೀವ್ರವಾಗುತ್ತಿದ್ದಂತೆ, ಎಲೆಗಳು ಮೊದಲನೆಯದಾಗಿ ಕಂಚು ಅಥವಾ ಬೆಳ್ಳಿಯ ಬಣ್ಣಕ್ಕೆ ತಿರುಗುತ್ತವೆ. ನಂತರ ಬಿರುಸಾಗುತ್ತವೆ. ಎಲೆಗಳು ನಾಳಗಳ ನಡುವೆ ಬಿರಿದು ತೆರೆದುಕೊಳ್ಳುತ್ತವೆ ಮತ್ತು ಅಂತಿಮವಾಗಿ ಉದುರಿಹೋಗುತ್ತವೆ. ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗಳು ಅಂಟಿಕೊಂಡಿರುತ್ತವೆ. ಜೇಡು ಹುಳ ಸ್ವತಃ ಅಲ್ಲಿ ಇರುತ್ತದೆ. ಅದು ಕೋಶವನ್ನು ಹೋಲುವ ಬಲೆಯಂತಹ ಗೂಡಿನಲ್ಲಿರುತ್ತದೆ. ಹುಳುಗಳು ಸಸ್ಯದ ಮೇಲ್ಮೈಯನ್ನು ಆವರಿಸಬಲ್ಲ ಬಲೆಯನ್ನು ಹೆಣೆಯುತ್ತವೆ. ಚಿಗುರಿನ ತುದಿಗಳು ಬೋಳಾಗಬಹುದು ಮತ್ತು ಅಡ್ಡ ಚಿಗುರುಗಳು ಬೆಳೆಯಲು ಪ್ರಾರಂಭಿಸುತ್ತವೆ. ಭಾರೀ ಹಾನಿಯ ಸಂದರ್ಭಗಳಲ್ಲಿ, ಹಣ್ಣುಗಳ ಪ್ರಮಾಣ ಮತ್ತು ಗುಣಮಟ್ಟ ಎರಡೂ ಕಡಿಮೆಯಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೋಂಕು ಕಡಿಮೆ ಇದ್ದಲ್ಲಿ, ಹುಳಗಳನ್ನು ತೊಡೆದುಹಾಕಿ ಮತ್ತು ಬಾಧಿತ ಎಲೆಗಳನ್ನು ತೆಗೆದುಹಾಕಿ. ರಾಪ್ಸೀಡ್, ತುಳಸಿ, ಸೋಯಾಬೀನ್ ಮತ್ತು ಬೇವಿನ ಎಣ್ಣೆಗಳ ಆಧಾರದ ಮೇಲೆ ಸಿದ್ಧಪಡಿಸಲಾದ ದ್ರಾವಣಗಳನ್ನು ಎಲೆಗಳ ಮೇಲೆ ಸಿಂಪಡಿಸಲು ಬಳಸಿ. ಆ ಮೂಲಕ ಟಿ. ಯುರ್ಟಿಕೆಯ ಸಂಖ್ಯೆಯನ್ನು ಕಡಿಮೆ ಮಾಡಿ. ಜೊತೆಗೆ ಬೆಳ್ಳುಳ್ಳಿ ಸಾರ, ನೆಟ್ಟಲ್ ಸ್ಲರ್ರೀ ಅಥವಾ ಕೀಟನಾಶಕ ಸಾಬೂನಿನ ದ್ರಾವಣಗಳನ್ನು ಸಹ ಕೀಟಗಳ ಸಂಖ್ಯೆ ನಿಯಂತ್ರಿಸಲು ಬಳಸಬಹುದು. ಜಮೀನುಗಳಲ್ಲಿ, ಪರಭಕ್ಷಕ ಹುಳಗಳು (ಉದಾ. ಫೈಟೊಸಿಯುಲಸ್ ಪರ್ಸಿಮಿಲಿಸ್) ಅಥವಾ ಜೈವಿಕ ಕೀಟನಾಶಕ ಬಾಸಿಲಸ್ ತುರಿಂಜಿಯೆನ್ಸಿಸಿಸ್ ಗಳನ್ನು ಬಳಸಿ ಆಶ್ರಯದಾತ ಗಡಿಗಳಿಗೆ ನಿರ್ದಿಷ್ಟವಾದ ಜೈವಿಕ ನಿಯಂತ್ರಣವನ್ನು ಮಾಡಿ. ಆರಂಭಿಕ ಚಿಕಿತ್ಸೆಯ ನಂತರ 2 ರಿಂದ 3 ದಿನಗಳ ಬಳಿಕ ಎರಡನೆಯ ಸಿಂಪಡಣೆ ಅಗತ್ಯವಾಗಿರುತ್ತದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ವಿಧಾನ ಇದ್ದರೆ ಅದನ್ನು ಮೊದಲು ಪರಿಗಣಿಸಿ. ಜೇಡರಹುಳು ಮಿಟೆಯನ್ನು ಕೀಟನಾಶಕಗಳ (ಅಕೇರಿಸೈಡ್ ಗಳ) ಬಳಕೆ ಮೂಲಕ ನಿಯಂತ್ರಿಸುವುದು ತುಂಬಾ ಕಷ್ಟ. ಏಕೆಂದರೆ, ಕೆಲವು ವರ್ಷಗಳ ಬಳಕೆಯ ನಂತರ ಇವುಗಳು ಹೆಚ್ಚಾಗಿ ವಿವಿಧ ರಾಸಾಯನಿಕಗಳಿಗೆ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತವೆ. ಪರಭಕ್ಷಕಗಳಿಗೆ ಅಡ್ಡಿಪಡಿಸದಂತಹ ರಾಸಾಯನಿಕ ನಿಯಂತ್ರಣ ಏಜೆಂಟ್ ಗಳನ್ನು ಆಯ್ಕೆಮಾಡಿಕೊಳ್ಳಿ. ನೆನೆಯುವಂತಹ ಸಲ್ಫರ್ (3 ಗ್ರಾಂ/ಲೀ), ಸ್ಪಿರೋಮೈಫೆನ್ (1 ಮಿಲೀ/ಲೀ), ಡಿಕೊಫೊಲ್ (5 ಮಿಲೀ/ಲೀ) ಅಥವಾ ಅಬಮೆಕ್ಟಿನ್ ಅನ್ನು ಆಧರಿಸಿದ ಶಿಲೀಂಧ್ರನಾಶಕಗಳನ್ನು, ಉದಾಹರಣೆಗೆ (ನೀರಿನಲ್ಲಿ ದುರ್ಬಲಗೊಳಿಸುವ ಮೂಲಕ) ಬಳಸಬಹುದು. ಆರಂಭಿಕ ಚಿಕಿತ್ಸೆಯ ನಂತರ 2 ರಿಂದ 3 ದಿನಗಳ ಬಳಿಕ ಎರಡನೆಯ ಸಿಂಪಡಣೆ ಅಗತ್ಯವಾಗಿರುತ್ತದೆ.

ಅದಕ್ಕೆ ಏನು ಕಾರಣ

ಟೆಟ್ರಾನಿಕಸ್ ಜಾತಿಯ ಜೇಡ ಹುಳಗಳಿಂದ ಈ ಹಾನಿ ಉಂಟಾಗುತ್ತದೆ, ಮುಖ್ಯವಾಗಿ ಟಿ. ಉರ್ಟಿಕೆ ಮತ್ತು ಟಿ. ಸಿನ್ನಬಾಬರಸ್. ಪ್ರೌಢ ಹೆಣ್ಣು ಹುಳವು 0.6 ಎಂ ಎಂ ಉದ್ದವಿದ್ದು, ಅದರ ತಿಳಿ ಹಸಿರು ಬಣ್ಣದ ಅಂಡಾಕಾರದ ದೇಹದಲ್ಲಿ ಎರಡು ಗಾಢ ಬಣ್ಣದ ತೇಪೆಗಳಿರುತ್ತವೆ. ಮತ್ತು ಹಿಂಭಾಗದಲ್ಲಿ ಉದ್ದ ಕೂದಲಿರುತ್ತದೆ. ಸುಪ್ತಾವಸ್ಥೆಯಲ್ಲಿರುವ ಹೆಣ್ಣು ಹುಳುವು ಕೆಂಪು ಬಣ್ಣದ್ದಾಗಿರುತ್ತದೆ. ವಸಂತಕಾಲದಲ್ಲಿ, ಹೆಣ್ಣು ಹುಳುಗಳು ಎಲೆಗಳ ಕೆಳಭಾಗದಲ್ಲಿ ಗೋಳಾಕಾರದ ಮತ್ತು ಅರೆಪಾರದರ್ಶಕವಾದ ಮೊಟ್ಟೆಗಳನ್ನು ಇಡುತ್ತವೆ. ಮರಿಹುಳುಗಳು ತೆಳು ಹಸಿರು ಬಣ್ಣದಲ್ಲಿರುತ್ತವೆ ಮತ್ತು ಬೆನ್ನಿನ ಭಾಗದಲ್ಲಿ ಗಾಢವಾದ ಕಲೆಗಳಿರುತ್ತವೆ. ಎಲೆಗಳ ಕೆಳಭಾಗದಲ್ಲಿ ಜೇಡಗಳು ಕೋಶಗಳ ಸಹಾಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಜೇಡರ ಹುಳಗಳು ಶುಷ್ಕ ಮತ್ತು ಸೆಕೆಯ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ ಮತ್ತು ಇಂತಹ ಪರಿಸ್ಥಿತಿಯಿದ್ದರೆ ವರ್ಷದಲ್ಲಿ 7 ತಲೆಮಾರುಗಳವರೆಗೂ ಸಂತಾನೋತ್ಪತ್ತಿ ಮಾಡುತ್ತವೆ. ಇದಕ್ಕೆ ಕಳೆಗಳೂ ಸೇರಿದಂತೆ ಹಲವಾರು ಪರ್ಯಾಯ ಆಶ್ರಯದಾತ ಸಸ್ಯಗಳಿವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿರುವ ನಿರೋಧಕ ಪ್ರಭೇದಗಳನ್ನು ನೆಡಿ.
  • ನಿಯಮಿತವಾಗಿ ನಿಮ್ಮ ಹೊಲಗಳನ್ನು ಮೇಲ್ವಿಚಾರಣೆ ಮಾಡಿ ಮತ್ತು ಎಲೆಗಳ ಕೆಳಭಾಗವನ್ನು ಪರಿಶೀಲಿಸಿ.
  • ಪರ್ಯಾಯವಾಗಿ, ಕೆಲವು ಕೀಟಗಳನ್ನು ಎಲೆಯ ಮೇಲ್ಮೈಯಿಂದ ಬಿಳಿಯ ಕಾಗದದ ಮೇಲೆ ಅಲ್ಲಾಡಿಸಿ ಬೀಳಿಸಿ.
  • ಬಾಧಿತ ಎಲೆಗಳು ಅಥವಾ ಸಸ್ಯಗಳನ್ನು ತೆಗೆದುಹಾಕಿ.
  • ಹೊಲಗಳಿಂದ ನೆಟ್ಟಲ್ ಗಳು ಮತ್ತು ಇತರ ಕಳೆಗಳನ್ನು ತೆಗೆದುಹಾಕಿ.
  • ಹೊಲದಲ್ಲಿನ ಧೂಳಾಗದಂತೆ ನೋಡಿಕೊಳ್ಳಲು ನಿಯಮಿತ ಮಧ್ಯಂತರಗಳಲ್ಲಿ ಓಣಿಗಳು ಮತ್ತು ಇತರ ಧೂಳಿನ ಪ್ರದೇಶಗಳಿಗೆ ನೀರನ್ನು ಹಾಕಿ.
  • ಒತ್ತಡಕ್ಕೊಳಗಾದ ಮರಗಳು ಮತ್ತು ಗಿಡಗಳು ಜೇಡ ಮಿಟೆಯ ಹಾನಿಗೆ ಕಡಿಮೆ ಸಹಿಷ್ಣುವಾಗಿರುವುದರಿಂದ ನಿಮ್ಮ ಬೆಳೆಗೆ ನಿಯಮಿತವಾಗಿ ನೀರನ್ನು ಹಾಕಿ.
  • ಪ್ರಯೋಜನಕಾರಿ ಕೀಟಗಳು ಹುಲುಸಾಗಿ ಬೆಳೆಯಲು ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ