ಪ್ಲಮ್

ಗಾಲ್‌ ಹುಳ (ಎಲೆಗಂಟು ಕೀಟ)

Eriophyidae

ಹುಳು

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಗಂಟು ರಚನೆ ಮತ್ತು ದಪ್ಪನಾದ ಅಂಚುಗಳನ್ನು ರಚಿಸುತ್ತದೆ.
  • ಎಲೆಗಳ ಕೆಳಭಾಗದಲ್ಲಿ ಮೃದು ರೋಮವನ್ನು ಉಂಟುಮಾಡುತ್ತದೆ.
  • ಚಿಗುರುಗಳ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಮೊಗ್ಗುಗಳು ದೊಡ್ಡದಾಗುತ್ತದೆ.
  • ಹುಳುಗಳು ತಿನ್ನುವುದರಿಂದ ಎಲೆಗಳ ಮೇಲೆ ಕಂಚಿನ ಬಣ್ಣದ ರಚನೆ ಕಂಡುಬರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಸೇಬು
ಜಲ್ದರು ಹಣ್ಣು
ಚೆರ್ರಿ
ಪೀಚ್
ಇನ್ನಷ್ಟು

ಪ್ಲಮ್

ರೋಗಲಕ್ಷಣಗಳು

ಎಲೆಗಳ ಮೇಲೆ ಹೆಚ್ಚಿನ ಸಂಖ್ಯೆಯ ಗಂಟು ಬೆಳವಣಿಗೆಗಳು (ಗಾಲ್ಸ್ ಎಂದು ಕರೆಯಲ್ಪಡುವುದು) ಕಾಣಿಸಿಕೊಳ್ಳುತ್ತವೆ. ಗಾಲ್ ಹುಳದ ಜಾತಿಯ ಆಧಾರದ ಮೇಲೆ ಎಲೆಗಳ ಅಂಚುಗಳು ದಪ್ಪವಾಗಬಹುದು. ಕೂದಲಿನ ಅತಿಯಾದ ಬೆಳವಣಿಗೆ ಎಲೆಗಳ ಕೆಳಭಾಗದಲ್ಲಿ ಮೃದು ರೋಮದ ಪದರವನ್ನು ಉಂಟುಮಾಡುತ್ತದೆ. ಗಾಲ್‌ಗಳ ಬಣ್ಣಗಳು ಹಳದಿ ಬಣ್ಣದಿಂದ ಕೆಂಪು ಬಣ್ಣದವರೆಗೆ ವಿವಿಧ ಬಣ್ಣಗಳಲ್ಲಿ ಕಾಣಿಸಿಕೊಳ್ಳಬಹುದು. ಚಿಗುರುಗಳ ಬೆಳವಣಿಗೆ ಕುಂಠಿತವಾಗಬಹುದು ಮತ್ತು ಮೊಗ್ಗುಗಳು ದೊಡ್ಡದಾಗಬಹುದು. ಹುಳಗಳು ಎಲೆಯನ್ನು ತಿನ್ನುವುದರಿಂದ ಅದರ ಮೇಲ್ಮೈಯಲ್ಲಿ ಗಟ್ಟಿಯಾದ ರಚನೆಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಮರಗಳು "ಮಾಟಗಾತಿಯರ ಪೊರಕೆಗಳಂತೆ"(ವಿಚ್ಸ್ ಬ್ರೂಮ್ಸ್) ಕಾಣಿಸಿಕೊಳ್ಳುವ ಚಿಗುರುಗಳ ಹರಡುವಿಕೆಯನ್ನು ಹೊಂದಿರಬಹುದು. ಎಲೆಗಳು ಕಂಚು ಬಣ್ಣಕ್ಕೆ ತಿರುಗುವ ಸಾಧ್ಯತೆಯೂ ಇದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹೆಚ್ಚಿನ ಸಂದರ್ಭಗಳಲ್ಲಿ ಚಿಕಿತ್ಸೆಗಳ ಅಗತ್ಯವಿರುವುದಿಲ್ಲ. ಕೀಟಗಳ ಬಾಧೆ ತೀವ್ರವಾಗಿದ್ದರೆ, ಬಾಧಿತ ಮರದ ಭಾಗಗಳನ್ನು ತೆಗೆದುಹಾಕಬಹುದು. ಬಾಧೆಗೊಳಗಾದ ಸಸ್ಯ ಭಾಗಗಳನ್ನು ಕತ್ತರಿಸುವಿಕೆಯಿಂದ ಉಂಟಾಗುವ ಹಾನಿಯು ಹುಳಗಳ ಮುತ್ತಿಕೊಳ್ಳುವಿಕೆಯಿಂದ ಉಂಟಾಗುವ ಹಾನಿಗಿಂತ ಹೆಚ್ಚಿರಬಹುದೇ ಎಂಬುದನ್ನು ಮುಂಚಿತವಾಗಿ ಪರಿಗಣಿಸಬೇಕು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಬೇಕು. ಅಬಾಮೆಕ್ಟಿನ್ ಅಥವಾ ಬೈಫೆನ್ಥ್ರಿನ್ ಹೊಂದಿರುವ ಕೀಟನಾಶಕಗಳು/ಮೈಟಿಸೈಡ್‌ಗಳ ಸಿಂಪಡಣೆಗಳು ಮರಗಳನ್ನು ಹುಳುಗಳು ಮುತ್ತಿಕೊಳ್ಳುವುದರಿಂದ ರಕ್ಷಿಸಬಹುದು. ತೇವಗೊಳಿಸಬಹುದಾದ ಸಲ್ಫರ್‌ ನ ವ್ಯವಸ್ಥೆಗಳು ಸಹ ಸಹಾಯ ಮಾಡಬಹುದು. ಆದರೆ ಅವುಗಳು ಪ್ರಯೋಜನಕಾರಿ ಜೀವಿಗಳಿಗೂ ಹಾನಿಮಾಡಬಹುದು.

ಅದಕ್ಕೆ ಏನು ಕಾರಣ

ಅತೀ ಸಣ್ಣ ಹುಳಗಳಿಂದ ಈ ಹಾನಿಯು ಉಂಟಾಗುತ್ತದೆ. ಸಾಮಾನ್ಯವಾಗಿ 0.2ಮಿಮೀ ಗಿಂತ ಕಡಿಮೆ ಗಾತ್ರದಲ್ಲಿ ಇರುತ್ತವೆ. ಇವು ಮುಖ್ಯವಾಗಿ ಹಣ್ಣುಗಳನ್ನು ಮುತ್ತಿಕೊಳ್ಳುತ್ತವೆ ಆದರೆ ಹಣ್ಣಿನ ಮರಗಳು ಅಥವಾ ವಾಲ್‌ನಟ್‌ ಮರಗಳ ಮೇಲೂ ಪರಿಣಾಮ ಬೀರುತ್ತವೆ. ಈ ನಿರ್ದಿಷ್ಟ ಹುಳಗಳು ಉದ್ದವಾದ ದೇಹವನ್ನು ಹೊಂದಿರುತ್ತವೆ ಮತ್ತು ನಾಲ್ಕು ಕಾಲುಗಳನ್ನು ಹೊಂದಿರುವ ಇತರ ಹುಳಗಳಿಗಿಂತ ಭಿನ್ನವಾಗಿ ಇವು ಕೇವಲ ಎರಡು ಕಾಲುಗಳನ್ನು ಹೊಂದಿರುತ್ತವೆ. ಅವು ತೊಗಟೆಯಲ್ಲಿ ಅಥವಾ ಮೊಗ್ಗುಗಳ ಕೆಳಗೆ ಚಳಿಗಾಲವನ್ನು ಕಳೆಯುತ್ತವೆ ಮತ್ತು ವಸಂತಕಾಲದಲ್ಲಿ ಆಹಾರ ತಿನ್ನಲು ಮತ್ತು ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತವೆ. ಅವುಗಳು ರಸವನ್ನು ಹೀರುವ ಮೂಲಕ ಎಲೆಗಳ ಅಂಗಾಂಶಗಳನ್ನು ತಿನ್ನುತ್ತವೆ ಮತ್ತು ಹಾಗೆ ಮಾಡುವಾಗ, ಅವು ಸಸ್ಯ ಅಂಗಾಂಶದೊಳಗೆ ರಾಸಾಯನಿಕಗಳನ್ನು ಸ್ರವಿಸುತ್ತದೆ. ಇದು ವಿಶಿಷ್ಟವಾದ ಗಂಟುಗಳ (ಗಾಲ್ಸ್‌) ರಚನೆಗೆ ಕಾರಣವಾಗುತ್ತದೆ. ಹುಳಗಳು ಈ ಗಂಟುಗಳನ್ನು ಹೀರುತ್ತಲೇ ಇರುತ್ತವೆ. ಅವುಗಳು ವಾಸ್ತವವಾಗಿ ಪೌಷ್ಟಿಕ ಸಸ್ಯದ ರಸದಿಂದ ತುಂಬಿರುತ್ತವೆ. ಅವುಗಳು ಸಾಮಾನ್ಯವಾಗಿ ಆಶ್ರಯದಾತ ಸಸ್ಯಗಳಿಗೆ ಗಂಭೀರ ಹಾನಿಯನ್ನುಂಟುಮಾಡುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ಗಾಲ್ ಹುಳಗಳ ರೋಗಲಕ್ಷಣಗಳಿಗಾಗಿ ನಿಯಮಿತವಾಗಿ ಹಣ್ಣಿನ ತೋಟದ ಮೇಲೆ ನಿಗಾ ಇಡಬೇಕು.
  • ಲಭ್ಯವಿದ್ದಲ್ಲಿ, ಹುಳ ನಿರೋಧಕ ಅಥವಾ ಕೀಟನಿರೋಧಕ ಮರದ ಪ್ರಭೇದಗಳನ್ನು ಆಯ್ಕೆಮಾಡಬೇಕು.
  • ಕೀಟಗಳಿಂದ ಬಾಧಿತವಾದ ಸಸ್ಯ ಭಾಗಗಳನ್ನು ಕತ್ತರಿಸಬೇಕು ಮತ್ತು ಮತ್ತಷ್ಟು ರೋಗ ಹರಡುವುದನ್ನು ತಪ್ಪಿಸಲು ಅದನ್ನು ಸುಟ್ಟು ಅಥವಾ ಹೂತುಹಾಕಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ