Striga hermonthica
ಕಳೆ
ಪರ್ಪಲ್ ವಿಚ್ವೀಡ್ ಎಂದೂ ಕರೆಯಲ್ಪಡುವ ಈ ಸಸ್ಯದಲ್ಲಿ ಗಾಢ ಹಸಿರು ಬಣ್ಣದ ಕಾಂಡಗಳು ಮತ್ತು ಎಲೆಗಳು ಮತ್ತು ಸಣ್ಣ, ಗಾಢ, ಕೆನ್ನೇರಳೆ ಬಣ್ಣದ ಹೂವುಗಳಿರುತ್ತವೆ. ಈ ಸಸ್ಯವು ಬೆಳೆಗೆ ಪರಾವಲಂಬಿಯಾಗಿ ಬೆಳೆದು, ಆಶ್ರಯದಾತ ಸಸ್ಯಗಳಿಂದ ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಇದರಿಂದ ಬರುವ ರೋಗಲಕ್ಷಣಗಳು ಬರ / ಜಲಕ್ಷಾಮದ ಒತ್ತಡ ಅಥವಾ ಪೌಷ್ಟಿಕಾಂಶದ ಕೊರತೆಯಂತೆ ಕಾಣುತ್ತದೆ: ಕ್ಲೋರೋಸಿಸ್, ಎಲೆಗಳು ಬಾಡುವುದು ಮತ್ತು ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುವುದು. ಸಸ್ಯವು ಬೆಳೆಯುವ- ಮುನ್ನದ ಲಕ್ಷಣಗಳನ್ನು ನಿಖರವಾಗಿ ನಿರ್ಣಯ ಮಾಡುವುದು ಕಷ್ಟ. ಏಕೆಂದರೆ ಇದರ ರೋಗಲಕ್ಷಣಗಳು ಪೋಷಕಾಂಶಗಳ ಕೊರತೆಯನ್ನು ಹೋಲುತ್ತವೆ. ಸ್ಟ್ರಿಗಾ ಒಮ್ಮೆ ಬೆಳೆದುಬಿಟ್ಟರೆ, ಅದನ್ನು ಕಿತ್ತು ತೆಗೆದರೂ ಸಹಾ, ಅದರಿಂದಾಗುವ ಹಾನಿಯನ್ನು ಕಡಿಮೆ ಮಾಡುವುದು ಬಹಳ ಕಷ್ಟಕರ. ಇದು ಇಳುವರಿಯಲ್ಲಿ ಗಮನಾರ್ಹ ನಷ್ಟಕ್ಕೆ ಕಾರಣವಾಗಬಹುದು.
ವಿಚ್ವೀಡ್ ಎಂಬುದು ನಿಯಂತ್ರಣಕ್ಕೆ ನಿಲುಕದ ಕಠಿಣ ಪರಾವಲಂಬಿ ಗಿಡಗಳ ಪೈಕಿ ಒಂದಾಗಿದೆ, ಮುಖ್ಯವಾಗಿ ಅದು ಉತ್ಪಾದಿಸುವ ಹೆಚ್ಚಿನ ಪ್ರಮಾಣದ ಬೀಜಗಳು ಮತ್ತು ಅವುಗಳ ದೀರ್ಘಾಯುಷ್ಯದಿಂದಾಗಿ. ಸೋಂಕಿತ ಸಸ್ಯಗಳನ್ನು ಅವು ಹೂವು ಬಿಡುವ ಮೊದಲೇ ಬುಡದಿಂದ ಕಿತ್ತು ಹಾಕಬೇಕು ಮತ್ತು ಸುಟ್ಟು ಹಾಕಬೇಕು. ಫ್ಯುಸೇರಿಯಮ್ ಆಕ್ಸಿಸ್ಪೋರಮ್ ಶಿಲೀಂಧ್ರವನ್ನು ವಿಚ್ವೀಡ್ನ ಸಂಭವನೀಯ ಜೈವಿಕ ನಿಯಂತ್ರಣವಾಗಿ ಬಳಸಬಹುದಾಗಿದ್ದು, ಇದು ಸ್ಟ್ರಿಗಾ ಸಸ್ಯದ ಆರಂಭಿಕ ನಾಳೀಯ ಅಂಗಾಂಶಗಳಿಗೆ ಸೋಂಕು ಮಾಡುತ್ತದೆ ಮತ್ತು ಅದರ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವಿಚ್ವೀಡ್ ವಿರುದ್ಧದ ಸಸ್ಯನಾಶಕಗಳು ಲಭ್ಯವಿವೆ, ಅವುಗಳು ದುಬಾರಿಯಂತೂ ಹೌದು ಮತ್ತು ಅವುಗಳು ಬೆಳೆಗೂ ಸಹ ನೇರವಾಗಿ ಪರಿಣಾಮ ಬೀರುತ್ತವೆ. ಸಿಂಪರಿಕೆಗಳಿಗೆ ರಕ್ಷಣೆ ಅಗತ್ಯವಿರುತ್ತದೆ ಮತ್ತು ಕಳೆನಾಶಕಗಳು ಉಪಯುಕ್ತ ಸಸ್ಯಗಳನ್ನೂ ಸಹ ಕೊಲ್ಲುತ್ತವೆ. ರಾಗಿ ಮತ್ತು ಹುಲ್ಲುಜೋಳದಲ್ಲಿ ಬೀಜಗಳಿಗೆ ಕಳೆನಾಶಕಗಳನ್ನು ಯಶಸ್ವಿಯಾಗಿ ಹಾಕಿ, ಸೋಂಕನ್ನು ಸುಮಾರು 80% ರಷ್ಟು ಕಡಿಮೆ ಮಾಡಲಾಗಿದೆ. ಇದನ್ನು ಮಾಡಲು, ಕಳೆನಾಶಕ-ನಿರೋಧಕ ಬೀಜಗಳನ್ನು ಕಳೆನಾಶಕ ದ್ರಾವಣದಲ್ಲಿ ನೆನೆಸಬೇಕು.
ಈ ರೋಗಲಕ್ಷಣಗಳು ಪರಾವಲಂಬಿ ಸಸ್ಯ ಸ್ಟ್ರಿಗಾ ಹೆರ್ಮೊಂತಿಕಾದಿಂದ ಉಂಟಾಗುತ್ತವೆ. ಇದನ್ನು ಸಾಮಾನ್ಯವಾಗಿ ಪರ್ಪಲ್ ವಿಚ್ವೀಡ್ ಅಥವಾ ಜೈಂಟ್ ವಿಚ್ವೀಡ್ ಎಂದು ಕರೆಯಲಾಗುತ್ತದೆ. ಇದು ನಿರ್ದಿಷ್ಟವಾಗಿ ಉಪ-ಸಹಾರಾ ಆಫ್ರಿಕಾದಲ್ಲಿ ಸಮಸ್ಯಾತ್ಮಕವಾಗಿದೆ. ಇದು ಬೆಳೆ ಧಾನ್ಯಗಳು, ಹುಲ್ಲು ಮತ್ತು ದ್ವಿದಳ ಧಾನ್ಯಗಳು ಸೇರಿದಂತೆ ಅಕ್ಕಿ, ಮೆಕ್ಕೆ ಜೋಳ, ಮುತ್ತು ರಾಗಿ, ಹುಲ್ಲು ಜೋಳ, ಕಬ್ಬು, ಮತ್ತು ಅಲಸಂದೆ ಮೊದಲಾದವುಗಳಿಗೆ ಗಂಭೀರ ಸಮಸ್ಯೆಯಾಗಬಹುದು. ಪ್ರತಿ ಸಸ್ಯವು ಸುಮಾರು 90,000 ರಿಂದ 500,000 ಬೀಜಗಳನ್ನು ಉತ್ಪತ್ತಿ ಮಾಡುತ್ತದೆ. ಇವು 10 ವರ್ಷಗಳಿಗಿಂತ ಹೆಚ್ಚಿನ ಕಾಲ ಮಣ್ಣಿನಲ್ಲಿ ಬದುಕುತ್ತವೆ. ಈ ಬೀಜಗಳು ಗಾಳಿ, ನೀರು, ಪ್ರಾಣಿ, ಅಥವಾ ಮಾನವ ಯಂತ್ರಗಳಿಂದ ಹರಡಿದ ನಂತರ ಮಣ್ಣಿನಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾದಾಗ ಮತ್ತು ಅವು ಒಂದು ಆಶ್ರಯದಾತ ಸಸ್ಯದ ಬೇರಿನಿಂದ ಕೆಲವು ಸೆಂಟಿಮೀಟರ್ಗಳೊಳಗೆ ಇದ್ದಾಗ, ಕುಡಿಯೊಡೆಯಲು ಪ್ರಾರಂಭಿಸುತ್ತವೆ. ಬೇರಿಗೆ ಒಮ್ಮೆ ಸಂಪರ್ಕಹೊಂದಿದರೆ, ವಿಚ್ವೀಡ್ ಹೋಸ್ಟ್ ಸಸ್ಯಕ್ಕೆ ಅಂಟಿಕೊಳ್ಳುವಂತಹ ಒಂದು ವಸ್ತುವನ್ನು ಉತ್ಪತ್ತಿ ಮಾಡುತ್ತದೆ. ಹೀಗೆ ಪರಾವಲಂಬಿ ಸಂಬಂಧವನ್ನು ಸ್ಥಾಪಿಸುತ್ತದೆ. ಸಾರಜನಕ-ಭರಿತ ರಸಗೊಬ್ಬರಗಳು ಸಹ ವಿಚ್ವೀಡ್ ನಿಂದಾಗುವ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.