Pseudomonas syringae pv. tabaci
ಬ್ಯಾಕ್ಟೀರಿಯಾ
ರೋಗಲಕ್ಷಣಗಳು ಬೇಗನೇ ಕಾಣಿಸಿಕೊಳ್ಳಬಹುದು. ಕಲೆಗಳು ಮುಖ್ಯವಾಗಿ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ ಆದರೆ ಕಾಂಡಗಳು, ಹೂವುಗಳು ಮತ್ತು ತಂಬಾಕು ಹಣ್ಣಿನ ಕ್ಯಾಪ್ಸುಲ್ಗಳಲ್ಲಿಯೂ ಸಹ ಕಂಡುಬರಬಹುದು. ಕಲೆಗಳ ಮೇಲೆ ಸಾಮಾನ್ಯವಾಗಿ ಹಳದಿ ವರ್ತುಲವಿರುತ್ತದೆ. ಕಲೆಗಳು ಸಣ್ಣ, ತೆಳು-ಹಸಿರು ವೃತ್ತಾಕಾರದ ಗಾಯಗಳಾಗಿ ಪ್ರಾರಂಭವಾಗುತ್ತವೆ. ಆ ಗಾಯ ಅಂಗಾಂಶಗಳು ಸಾಯುವುದರಿಂದ ಮಧ್ಯದಲ್ಲಿ ಕಂದು ಬಣ್ಣಕ್ಕೆ ತಿರುಗುತ್ತದೆ. ಕಲೆಗಳೆಲ್ಲವೂ ಒಂದಾಗಿ ದೊಡ್ಡದಾಗಬಹುದು. ಗಂಭೀರ ಪರಿಸ್ಥಿತಿಗಳಲ್ಲಿ, ಎಲೆಗಳ ಹಾನಿಗೊಳಗಾದ ಭಾಗಗಳು ಉದುರುತ್ತವೆ ಮತ್ತು ಎಲೆಯ ಸಿರೆಗಳು ಮಾತ್ರ ಉಳಿಯುತ್ತವೆ. ನರ್ಸರಿಯಲ್ಲಿನ ಸಸಿಗಳೂ ಸೇರಿದಂತೆ ಬೆಳವಣಿಗೆಯ ಯಾವುದೇ ಹಂತದಲ್ಲಿ ವೈಲ್ಡ್‌ಫೈರ್ ಬೆಳೆಗಳ ಮೇಲೆ ಪರಿಣಾಮ ಬೀರಬಹುದು.
ವೈಲ್ಡ್‌ಫೈರ್ ನಿಯಂತ್ರಣಕ್ಕೆ ಪರ್ಯಾಯ ಆಯ್ಕೆಗಳೆಂದರೆ ಮುಂಜಾಗ್ರತಾ ಕ್ರಮಗಳು ಮತ್ತು ಉತ್ತಮ ಕೃಷಿಭೂಮಿ ಅಭ್ಯಾಸಗಳು.
ರೋಗಕಾರಕವನ್ನು ನಿಯಂತ್ರಿಸಲು, ಸಸ್ಯದ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಬೋರ್ಡೆಕ್ಸ್ ಮಿಶ್ರಣದಂತಹ ತಾಮ್ರ-ಆಧಾರಿತ ರಾಸಾಯನಿಕಗಳನ್ನು ಬಳಸಬಹುದು. ಕೃಷಿ ಬಳಕೆಯನ್ನು ಅನುಮೋದಿಸಿದ ಪ್ರದೇಶಗಳಲ್ಲಿ, ಪ್ರತಿಜೀವಕ ಸ್ಟ್ರೆಪ್ಟೊಮೈಸಿನ್ ಅನ್ನು ಪರ್ಯಾಯವಾಗಿ ಪರಿಗಣಿಸಬಹುದು. ಆದಾಗ್ಯೂ, ಸ್ಟ್ರೆಪ್ಟೊಮೈಸಿನ್‌ನ ಪರಿಣಾಮಕಾರಿತ್ವವು ಹೆಚ್ಚು ಇಲ್ಲದಿರಬಹುದು. ಏಕೆಂದರೆ ಬ್ಯಾಕ್ಟೀರಿಯಾವು ಅದಕ್ಕೆ ಪ್ರತಿರೋಧವನ್ನು ಬೇಗನೇ ಪಡೆದುಕೊಳ್ಳುತ್ತದೆ. ಕೀಟನಾಶಕಗಳು ಅಥವಾ ಯಾವುದೇ ರಾಸಾಯನಿಕ ಉತ್ಪನ್ನವನ್ನು ಬಳಸುವಾಗ, ರಕ್ಷಣಾತ್ಮಕ ಉಡುಪುಗಳನ್ನು ಧರಿಸುವುದು ಮತ್ತು ಲೇಬಲ್ ಸೂಚನೆಗಳನ್ನು ಎಚ್ಚರಿಕೆಯಿಂದ ಓದುವುದು ಮುಖ್ಯ. ನಿಯಮಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ. ಆದ್ದರಿಂದ ನಿಮ್ಮ ಪ್ರದೇಶಕ್ಕೆ ನಿರ್ದಿಷ್ಟವಾದ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಮರೆಯದಿರಿ. ಇದು ಸುರಕ್ಷತೆಯನ್ನು ಖಾತರಿಪಡಿಸುತ್ತದೆ ಮತ್ತು ಯಶಸ್ವಿ ಬಳಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಂ ಬೆಚ್ಚಗಿನ ಮತ್ತು ಒದ್ದೆ ಸ್ಥಿತಿಯಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ಮಳೆಯ ನಂತರ ಹರಡುತ್ತದೆ. ರೋಗವು ಹೇಗೆ ಮತ್ತು ಎಲ್ಲಿ ಹರಡುತ್ತದೆ ಎಂಬುದರಲ್ಲಿ ಗಾಳಿಯು ದೊಡ್ಡ ಪಾತ್ರವಹಿಸುತ್ತದೆ. ಸ್ಪ್ರಿಂಕ್ಲರ್‌ಗಳೊಂದಿಗೆ ಸಸ್ಯಗಳಿಗೆ ನೀರುಹಾಯಿಸುವುದೂ ಸಹ ಬ್ಯಾಕ್ಟೀರಿಯಾವನ್ನು ಹರಡಬಹುದು. ಬ್ಯಾಕ್ಟೀರಿಯಾವು ತಂಬಾಕು ಸಸ್ಯದ ತೆರೆದ ಭಾಗ ಅಥವಾ ಕೀಟಗಳಿಂದಾದ ಗಾಯಗಳ ಮೂಲಕ ಒಳಗೆ ಪ್ರವೇಶಿಸಬಹುದು. ಒಳಗೆ ನುಗ್ಗಿದರೆ, ಬ್ಯಾಕ್ಟೀರಿಯಂ ಬೆಳೆಯುತ್ತದೆ ಮತ್ತು ಸಸ್ಯದ ಒಳಗೆ ಹರಡುತ್ತದೆ. ಸಸ್ಯವು ಕೊಳೆತು ಸಾಯಲು ಪ್ರಾರಂಭಿಸಿದಾಗ, ಬ್ಯಾಕ್ಟೀರಿಯಂ ಮತ್ತೆ ಪರಿಸರಕ್ಕೆ ಬಿಡುಗಡೆಯಾಗುತ್ತದೆ. ಅಲ್ಲಿ ಅದು ಇತರ ಸಸ್ಯಗಳಿಗೆ ತಗುಲಬಹುದು ಅಥವಾ ಎರಡು ವರ್ಷಗಳವರೆಗೆ ಮಣ್ಣಿನಲ್ಲಿ ಉಳಿಯಬಹುದು. ಬಾಧಿತ ಸಸ್ಯ ತ್ಯಾಜ್ಯ, ಮಣ್ಣು ಅಥವಾ ಕೃಷಿ ಉಪಕರಣಗಳ ಮೂಲಕ ಬ್ಯಾಕ್ಟೀರಿಯಂ ಹೊಸ ಪ್ರದೇಶಗಳಿಗೆ ಹರಡಬಹುದು.