ಹೂಕೋಸು

ಬ್ಯಾಕ್ಟೀರಿಯಾದ ಮೃದುಕೊಳೆ ರೋಗ

Pectobacterium carotovorum subsp. carotovorum

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಕುಗ್ಗಿದ, ಮೃದು ಚುಕ್ಕೆಗಳು.
  • ಮೆತ್ತನೆಯ ಬಣ್ಣ ಕಳೆದುಕೊಂಡ ಗಿಡದ ಅಂಗಾಂಶ.
  • ಎಲೆಗಳು, ಕಾಂಡಗಳು ಮತ್ತು ಬೇರುಗಳನ್ನ ಬಾಧಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಎಲೆಕೋಸು
ಹೂಕೋಸು

ಹೂಕೋಸು

ರೋಗಲಕ್ಷಣಗಳು

ಮೊದಲಲ್ಲಿ ನೀರುನೀರಾದ ಚುಕ್ಕೆಗಳು ಉಂಟಾಗುತ್ತವೆ. ಅವುಗಳು ದೊಡ್ಡವಾಗಿ, ಕುಗ್ಗಿ ಮೆತ್ತಗಾಗುತ್ತವೆ. ಚುಕ್ಕೆಗಳ ಕೆಳಗಿನ ಗಿಡದ ಅಂಗಾಂಶ ಕೆನೆಯಿಂದ ಕಪ್ಪು ಬಣ್ಣಕ್ಕೆ ಬಣ್ಣ ಕಳೆದುಕೊಂಡು ಲೋಳೆಯಾಗುತ್ತದೆ. ಸೋಂಕು ತೀವ್ರವಾಗಿದ್ದಲ್ಲಿ ಎಲೆಗಳು, ಕಾಂಡಗಳು ಮತ್ತು ಬೇರುಗಳು ಸಂಪೂರ್ಣವಾಗಿ ಕೊಳೆತು ಹೋಗಬಹುದು. ಕಟು ವಾಸನೆ ಕಂಡುಬರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ರೋಗದ ತಡೆಗೆ ಇಲ್ಲಿಯವರೆಗೆ ಯಾವುದೇ ಜೈವಿಕ ನಿಯಂತ್ರಣ ವಿಧಾನ ಕಂಡುಬಂದಿಲ್ಲ‌. ನಿಮಗೆ ಈ ರೋಗದ ಸಂದರ್ಭಗಳನ್ನು ಅಥವಾ ರೋಗಲಕ್ಷಣಗಳ ತೀವ್ರತೆಯನ್ನು ತಗ್ಗಿಸಬಲ್ಲ ಯಾವುದೇ ಯಶಸ್ವಿ ವಿಧಾನ ಗೊತ್ತಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಒಳಗೊಂಡ ಸಮಗ್ರ ಮಾರ್ಗವನ್ನು ಆಯ್ದುಕೊಳ್ಳಿ. ಬ್ಯಾಕ್ಟೀರಿಯಾವನ್ನು ಗುಣಪಡಿಸುವ ದಾರಿಗಳು ಇಲ್ಲದ್ದರಿಂದ ನಿಯಂತ್ರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬ್ಯಾಕ್ಟೀರಿಯಾ ರೋಗಕಾರಕಗಳನ್ನ ತಡೆದು ಹತೋಟಿಗೆ ತರಲು ತಾಮ್ರ ಮೂಲದ ಶಿಲೀಂಧ್ರ ನಾಶಕಗಳನ್ನು ಬಳಸಿ. ಈ ರೋಗದ ತಡೆಗೆ ಸಿಪ್ರೊಫ್ಲೋಕ್ಸಾಸಿನ್ ಕೂಡಾ ಉತ್ತಮ.

ಅದಕ್ಕೆ ಏನು ಕಾರಣ

ಈ ತೊಂದರೆಗೆ ಕಾರಣ ಮಣ್ಣಿನಲ್ಲಿ ಮತ್ತು ಬೆಳೆಯ ಕಸಕಡ್ಡಿಯಲ್ಲಿ ಬದುಕುಳಿಯುವ ಪೆಕ್ಟೋಬ್ಯಾಕ್ಟೀರಿಯಂ ಕ್ಯಾರೋಟೊವೊರಂ ಎಂಬ ಬ್ಯಾಕ್ಟೀರಿಯಾ. ಸಲಕರಣೆಗಳು, ಕೀಟಗಳು, ಆಲಿಕಲ್ಲುಗಳಿಂದ ಆದ ಗಾಯಗಳಿಂದ ಅಥವಾ ಸ್ವಾಭಾವಿಕ ತೆರೆದ ಜಾಗಗಳಿಂದ ಗಿಡವನ್ನ ಸೇರುತ್ತದೆ. ಈ ರೋಗಕಾರಕ ಕೀಟಗಳಿಂದ, ಸಲಕರಣೆಗಳಿಂದ, ಸೋಂಕಿತ ಸಾಮಾಗ್ರಿಗಳಿಂದ, ಮಣ್ಣಿನಿಂದ ಅಥವಾ ಸೋಂಕಿತ ನೀರಿನಿಂದ ಹರಡುತ್ತದೆ. ಹಸಿ ವಾತಾವರಣದಲ್ಲಿ ಮತ್ತು 25-30° ಉಷ್ಣಾಂಶದಲ್ಲಿ ಇದು ದೊಡ್ಡ ತೊಂದರೆಗೀಡು ಮಾಡುತ್ತದೆ‌‌. ಗಿಡಗಳಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ ಹಾನಿ ಹೆಚ್ಚಾಗುತ್ತದೆ. ಹೊಲಗಳಲ್ಲಿ ಉಂಟಾಗುವ ಇದು ದಾಸ್ತಾನಿನಲ್ಲೂ ಉಂಟಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದಲ್ಲಿ ಪ್ರತಿರೋಧಕ ಪ್ರಭೇದಗಳನ್ನ ನೆಡಿ.
  • ನೀರು ಚೆನ್ನಾಗಿ ಬಸಿಯುವಂತ ಸಾಲುಗಳಲ್ಲಿ ರೋಗಮುಕ್ತ ಮತ್ತು ಆರೋಗ್ಯಕರ ಬಿತ್ತನೆ ಸಾಮಗ್ರಿಗಳನ್ನು ಬಳಸಿ.
  • ಗಿಡಗಳಿಗೆ ಆಗುವ ಗಾಯಗಳನ್ನು ಕಡಿಮೆ ಮಾಡಲು ಗಿಡಗಳನ್ನು ಜೋಪಾನವಾಗಿ ನೋಡಿಕೊಳ್ಳಿ.
  • ನಿಮ್ಮ ಸಲಕರಣೆಗಳನ್ನು ಶುಚಿಯಾಗಿಸಿ ಸೋಂಕು ಮುಕ್ತಗೊಳಿಸಿ.
  • ತುಂತುರು ನೀರಾವರಿಯನ್ನ ದೂರವಿಡಿ.
  • ಸೋಂಕಿತ ಗಿಡಗಳನ್ನ ಕಿತ್ತು ನಾಶಪಡಿಸಿ.
  • ಒಣ ವಾತಾವರಣದಲ್ಲಿ ಮಾತ್ರ ಕೊಯ್ಲು ಮಾಡಿ.
  • ಕೊಯ್ಲನ್ನು ದಾಸ್ತಾನು ಮಾಡುವ ಮುಂಚೆ ಪರಿಶೀಲಿಸಿ.
  • ಶೇಖರಣೆಯ ಜಾಗವನ್ನು ತಾಮ್ರ ಮೂಲದ ದ್ರವ್ಯಗಳಿಂದ ಶುಚಿಗೊಳಿಸಿ.
  • ತಲೆಭಾಗಕ್ಕೆ ಗಾಯಗಳಾಗುವುದನ್ನು ತಡೆಯಲು ಹುಲ್ಲು ಅಥವಾ ಕಾಗದವನ್ನು ಅಡ್ಡವಸ್ತುಗಳಂತೆ ಬಳಸಿ.
  • ಕೊಯ್ಲಿನ ನಂತರ ಬೆಳೆಯ ಕಸಕಡ್ಡಿಗಳನ್ನು ತೆಗೆದು ನಾಶಪಡಿಸಿ.
  • ಮೂರು ವರ್ಷಗಳ ಕಾಲ ಈ ರೋಗಕ್ಕೆ ಆಶ್ರಯವಲ್ಲದ ಬೆಳಗಳನ್ನು ಬೆಳೆಯುವುದರ ಮೂಲಕ ಬೆಳೆ ಬದಲಾವಣೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ