Sugarcane grassy shoot phytoplasma
ಬ್ಯಾಕ್ಟೀರಿಯಾ
ಬೆಳೆ 3-4 ತಿಂಗಳು ಹಳೆಯದಾಗಿರುವ ಆರಂಭಿಕ ಹಂತದಲ್ಲೇ ಮೊದಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಳೆಯ ಎಲೆಗಳು ತಿಳಿ ಬಣ್ಣದಲ್ಲಿರುತ್ತವೆ ಮತ್ತು ತೆಳ್ಳಗೆ ಮತ್ತು ಕಿರಿದಾಗಿ ಕಾಣಿಸಿಕೊಳ್ಳುತ್ತವೆ. ರೋಗವು ಮುಂದುವರೆದಂತೆ, ಎಲ್ಲಾ ಹೊಸ ಟಿಲ್ಲರ್‌ಗಳು ಬಿಳಿ ಅಥವಾ ಹಳದಿ ಬಣ್ಣದಲ್ಲಿ ಬೆಳೆಯುತ್ತವೆ. ಇದು ಸಸ್ಯಕ್ಕೆ ಹುಲ್ಲಿನ ರೂಪವನ್ನು ನೀಡುತ್ತದೆ. ಪೀಡಿತ ಪೊದೆಗಳು ಪೂರಕ ಮೊಗ್ಗುಗಳ ಅಕಾಲಿಕ ಪ್ರಸರಣದಿಂದಾಗಿ ಕುಂಠಿತಗೊಳ್ಳುತ್ತವೆ. ಪೂರ್ಣ-ಬೆಳೆದ ಕಬ್ಬಿನ ಮೇಲೆ ದ್ವಿತೀಯಕ ಸೋಂಕು ಅಡ್ಡ ಮೊಳಕೆ ಮತ್ತು ಹಳದಿ ಬಣ್ಣವನ್ನು ತೋರಿಸುತ್ತದೆ. ಸಾಮಾನ್ಯವಾಗಿ, ಸೋಂಕಿತ ಜಲ್ಲೆಗಳಿಂದ ಬೆಳೆದ ರೋಗಪೀಡಿತ ಸಸ್ಯಗಳು ಗಾಣಕ್ಕೆ ಬಳಸಬಹುದಾದ ಕಬ್ಬನ್ನು ಉತ್ಪಾದಿಸುವುದಿಲ್ಲ ಮತ್ತು ಹಲವಾರು ಪೊದೆಗಳು ಸಾಮಾನ್ಯವಾಗಿ ಸುಗ್ಗಿಯ ನಂತರ ಮೊಳಕೆಯೊಡೆಯವಲ್ಲಿ ವಿಫಲವಾಗುತ್ತವೆ. ರಟೂನ್‌ಗಳಲ್ಲಿ ಅಂತರವನ್ನು ಉಂಟುಮಾಡುತ್ತವೆ. ಕಬ್ಬುಗಳು ರೂಪುಗೊಂಡರೂ, ಅವುಗಳ ಗೆಣ್ಣುಗಳ ನಡುವಿನ ಅಂತರ ಸಣ್ಣದಾಗಿದ್ದು, ತೆಳ್ಳಗೆ ಇರುತ್ತವೆ. ಕೆಳಗಿನ ಗೆಣ್ಣುಗಳು ನೆಲದ ಮೇಲಿನ ಬೇರುಗಳನ್ನು ಹೊಂದಿರುತ್ತವೆ. ಅಂತಹ ಕಬ್ಬಿನ ಮೇಲಿನ ಮೊಗ್ಗುಗಳು ಸಾಮಾನ್ಯವಾಗಿ ಕಾಗದದಂತೆ ಮತ್ತು ಅಸಹಜವಾಗಿ ಉದ್ದವಾಗಿರುತ್ತವೆ.
ಈ ರೋಗದ ನೇರ ಚಿಕಿತ್ಸೆ ಸಾಧ್ಯವಿಲ್ಲ. ಆದಾಗ್ಯೂ, ಕಬ್ಬಿನ ಹುಲ್ಲು ಚಿಗುರಿನ ರೋಗದ ಮುಖ್ಯ ವಾಹಕ ಆಗಿರುವ ಗಿಡಹೇನುಗಳನ್ನು ನಿಯಂತ್ರಿಸಬಹುದು. ಲಘು ಮುತ್ತುವಿಕೆಯ ಸಂದರ್ಭದಲ್ಲಿ, ಸರಳವಾದ ಮತ್ತು ಸೌಮ್ಯವಾದ ಕೀಟನಾಶಕ ಸೋಪಿನ ದ್ರಾವಣ ಅಥವಾ ಸಸ್ಯದ ಎಣ್ಣೆಗಳನ್ನು ಆಧರಿಸದ ದ್ರಾವಣಗಳನ್ನು ಬಳಸಿ.
ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರೋಗವನ್ನು ನೇರವಾಗಿ ಎದುರಿಸಲು ಯಾವುದೇ ರಾಸಾಯನಿಕ ನಿಯಂತ್ರಣವಿಲ್ಲ. ಆದರೆ ಅಧಿಕ ಸಂಖ್ಯೆಯ ಗಿಡಹೇನುಗಳು ಅಥವಾ ಎಲೆ ಜಿಗಿಹುಳುಗಳು ಕಂಡುಬಂದರೆ ಕೀಟನಾಶಕಗಳನ್ನು ಬಳಸಬಹುದು. ಡೈಮೆಥೊಯೇಟ್ (@ 1 ಮಿಲಿ / ಲೀ ನೀರು) ಅಥವಾ ಮೀಥೈಲ್-ಡೆಮೆಟನ್ (@ 2 ಮಿಲಿ /1 ಲೀ ನೀರು) (ಗಿಡಹೇನುಗಳು) ಆಧಾರಿತ ಉತ್ಪನ್ನಗಳನ್ನು ತಿಂಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬಹುದು.
ಫೈಟೊಪ್ಲಾಸ್ಮಾ ಎಂಬ ಬ್ಯಾಕ್ಟೀರಿಯಾ ತರಹದ ಜೀವಿಗಳಿಂದ ಈ ರೋಗ ಉಂಟಾಗುತ್ತದೆ. ಫೈಟೊಪ್ಲಾಸ್ಮಾದ ಪ್ರಾಥಮಿಕ ಪ್ರಸರಣವು ಸೋಂಕಿತ ಬೀಜ ಸಾಮಗ್ರಿಗಳ ಮೂಲಕ (ಸೆಟ್‌ಗಳು) ಆಗುತ್ತದೆ. ದ್ವಿತೀಯಕ ಪ್ರಸರಣವು ಫ್ಲೋಯೆಮ್- ತಿನ್ನುವ ಕೀಟಗಳ ಮೂಲಕ ಸಂಭವಿಸುತ್ತದೆ. ವಿಶೇಷವಾಗಿ ಎಲೆ ಜಿಗಿಹುಳು ಮತ್ತು ಗಿಡಹೇನುಗಳು ಮತ್ತು ಬೇರಿನ ಪರಾವಲಂಬಿಯಾದ ಡಾಡರ್ ನಿಂದ ಬರುತ್ತದೆ.. ಕತ್ತರಿಸುವ ಚಾಕುಗಳ ಮೂಲಕ ಕೂಡ ಇದು ಯಾಂತ್ರಿಕವಾಗಿ ಹರಡಬಹುದು. ಹುಲ್ಲು ಜೋಳ ಮತ್ತು ಮೆಕ್ಕೆಜೋಳ ರೋಗಕ್ಕೆ ಪರ್ಯಾಯ ಆಶ್ರಯದಾತ ಸಸ್ಯಗಳು. ರೋಗಲಕ್ಷಣಗಳು ಕಬ್ಬಿಣದ ಕೊರತೆಯೊಂದಿಗೆ ಸಾಮ್ಯತೆ ಹೊಂದಿವೆ. ಆದರೆ ನಿಮ್ಮ ಹೊಲದಲ್ಲಿ ಅಲ್ಲಲ್ಲಿ, ಬೇರೆ ಬೇರೆ ಪ್ರತ್ಯೇಕಿತ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತವೆ.