Phytoplasma
ಬ್ಯಾಕ್ಟೀರಿಯಾ
ಸೋಂಕಿತ ಸಸ್ಯಗಳು ತಿಳಿ ಹಳದಿ ಬಣ್ಣವನ್ನು ಹೊಂದಿರುವ ಸಣ್ಣ, ಮೃದುವಾದ, ತೆಳ್ಳಗಿನ ಮತ್ತು ವಿರೂಪಗೊಂಡ ಎಲೆಗಳನ್ನು ಹೊಂದಿರುತ್ತವೆ. ಮುಳ್ಳಿನ ಪ್ರಭೇದದ ಸಸ್ಯಗಳು ರೋಮರಹಿತವಾಗಿರುತ್ತವೆ ಮತ್ತು ಮುಳ್ಳುಗಳನ್ನು ಕಳೆದುಕೊಳ್ಳುತ್ತವೆ. ಸಸ್ಯಗಳು ಸಾಮಾನ್ಯವಾಗಿ ಕುಂಠಿತವಾಗಿರುತ್ತವೆ ಮತ್ತು ತೊಟ್ಟುಗಳ ನಡುವೆ ಅಂತರ ಕಡಿಮೆಯಾಗಿರುತ್ತದೆ ಮತ್ತು ತೊಟ್ಟುಗಳು ಸಣ್ಣದಾಗಿರುತ್ತದೆ. ಆರೋಗ್ಯಕರ ಸಸ್ಯಗಳಿಗಿಂತ ಅವು ಅಗಾಧ ಪ್ರಮಾಣದ ಶಾಖೆಗಳನ್ನು ಮತ್ತು ಬೇರುಗಳನ್ನು ಬೆಳೆಸಿಕೊಳ್ಳುತ್ತವೆ. ಇದು ಅವುಗಳಿಗೆ ಪೊದೆಯ ರೂಪ ನೀಡುತ್ತದೆ ಮತ್ತು ಆದ್ದರಿಂದಲೇ ಇದನ್ನು ವಿಚಸ್ ಬ್ರೂಮ್ ಎಂದೂ ಕರೆಯುತ್ತಾರೆ. ಹೂವಿನ ಭಾಗಗಳು (ಫಿಲೋಡಿ) ವಿರೂಪಗೊಂಡು ಹೆಚ್ಚಾಗಿ ಬರಡಾಗುತ್ತದೆ. ಬೆಳೆಯುತ್ತಿರುವ ಹಣ್ಣುಗಳು ಗಟ್ಟಿಯಾಗುತ್ತವೆ. ಕಠಿಣವಾಗುತ್ತವೆ ಮತ್ತು ಮಾಗುವಲ್ಲಿ ವಿಫಲವಾಗುತ್ತವೆ. ರೋಗವು ಮುಂದುವರೆದಂತೆ, ಹೊಸ ಬೆಳೆಯುವ ಎಲೆಗಳು ಅದರ ಮೂಲ ಗಾತ್ರದ 1/3 - 1/4 ಮಾತ್ರ ಬೆಳೆಯುತ್ತವೆ.
ಪ್ರಯೋಜನಕಾರಿ ಕೀಟಗಳಾದ ಲೇಸ್‌ವಿಂಗ್, ಡಮ್‌ಸೆಲ್ ಬಗ್, ಸಣ್ಣ ಪೈರೇಟ್ ಬಗ್ ಮುಂತಾದವು ಈ ಕೀಟಗಳನ್ನು ಮೊಟ್ಟೆ ಮತ್ತು ಲಾರ್ವಾ ಹಂತದಲ್ಲಿ ತಿನ್ನುತ್ತವೆ. .
ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕೀಟ ವಾಹಕಗಳನ್ನು ನಿಗ್ರಹಿಸಲು ಥಿಯಾಮೆಥಾಕ್ಸಮ್, ಅಸೆಟಾಮಿಪ್ರಿಡ್, ಥಿಯೋಸೈಕ್ಲಾಮ್ ಮತ್ತು ಮಾಲಾಥಿಯಾನ್ ಅನ್ನು ಬಳಸಬಹುದು.
ಫೈಟೊಪ್ಲಾಸ್ಮಾ ಎಂಬ ಬ್ಯಾಕ್ಟೀರಿಯಾದಂತಹ ಪರಾವಲಂಬಿಯಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಸಸ್ಯದಿಂದ ಸಸ್ಯಕ್ಕೆ ಹರಡುವಿಕೆಯು ಹೆಚ್ಚಾಗಿ ಕೀಟ ವಾಹಕಗಳ, ವಿವಿಧ ಜಾತಿಯ ಜಿಗಿ ಹುಳುಗಳ, ವಿಶೇಷವಾಗಿ ಹಿಶಿಮೋನಾಸ್ ಫೈಸಿಟಿಸ್ ಮೂಲಕ ಆಗುತ್ತದೆ. ಇದು ಎಲ್ಲಾ ಬೆಳವಣಿಗೆಯ ಹಂತಗಳಲ್ಲಿ ಸಸ್ಯಗಳ ಮೇಲೆ ಪರಿಣಾಮ ಬೀರುತ್ತದೆ.