Xanthomonas spp. & Pseudomonas syringae pv. tomato
ಬ್ಯಾಕ್ಟೀರಿಯಾ
ಈ ಬ್ಯಾಕ್ಟೀರಿಯಾಗಳು ಟೊಮೆಟೊದ ಎಲೆಗಳು, ಕಾಂಡಗಳು ಮತ್ತು ಹಣ್ಣುಗಳ ಮೇಲೆ ದಾಳಿ ಮಾಡುತ್ತವೆ. ಬ್ಯಾಕ್ಟೀರಿಯಾ ಸ್ಪಾಟ್‌ನ ಮೊದಲ ಲಕ್ಷಣಗಳೆಂದರೆ ಎಳೆಯ ಎಲೆಗಳ ಮೇಲೆ ಸಣ್ಣ ಹಳದಿ-ಹಸಿರು ಗಾಯಗಳು. ಆದರೆ ಬ್ಯಾಕ್ಟೀರಿಯಲ್ ಸ್ಪೆಕ್ ಕಿರಿದಾದ ಹಳದಿ ಪ್ರಭಾವಲಯವಿರುವ ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ. ಎಲೆ ಅಂಚುಗಳು ಅಥವಾ ಸುಳಿವುಗಳಲ್ಲಿ ಅವು ಸಾಮಾನ್ಯವಾಗಿ ಹೆಚ್ಚು ಸಂಖ್ಯೆಯಲ್ಲಿರುತ್ತವೆ. ಇವು ವಿರೂಪಗೊಂಡು ಮತ್ತು ತಿರುಚಿದಂತೆ ಕಾಣಿಸಬಹುದು. ಗಂಭೀರ ಪ್ರಕರಣಗಳಲ್ಲಿ ಬ್ಯಾಕ್ಟೀರಿಯಾದ ಸ್ಪೆಕ್‌ನ ಕಲೆಗಳು ಒಂದಾಗಬಹುದು ಅಥವಾ ಒಂದರ ಮೇಲೊಂದು ಸೇರಿಕೊಳ್ಳಬಹುದು. ಇದರ ಪರಿಣಾಮವಾಗಿ ದೊಡ್ಡ ಮತ್ತು ಅನಿಯಮಿತ ಗಾಯಗಳು ಉಂಟಾಗುತ್ತವೆ. ಬ್ಯಾಕ್ಟೀರಿಯಾದ ಸ್ಪಾಟ್ ಗಾಯಗಳು 0.25 ರಿಂದ 0.5 ಸೆಂ.ಮೀ ವರೆಗೆ ವಿಸ್ತರಿಸಬಹುದು ಮತ್ತು ಕಂದು-ಕೆಂಪು ಬಣ್ಣದಲ್ಲಿರಬಹುದು. ಇದರ ಕೇಂದ್ರಭಾಗ ಒಣಗಿದಾಗ ಇದು ಅಂತಿಮವಾಗಿ ಶಾಟ್ ಹೋಲ್ ಗಳಂತೆ ಕಾಣಿಸುತ್ತದೆ. ಬ್ಯಾಕ್ಟೀರಿಯಾ ಸ್ಪಾಟ್ ಎಲೆಗಳಂತೆಯೇ ಹಣ್ಣುಗಳ ಮೇಲೂ ಗಾಯಗಳನ್ನು ಉಂಟುಮಾಡುತ್ತದೆ ಮತ್ತು ಅಂತಿಮವಾಗಿ ಒರಟಾಗಿ, ಕಂದು ಬಣ್ಣದ ಹುರುಪಿನಂತಾಗುತ್ತದೆ. ಆದರೆ, ಬ್ಯಾಕ್ಟೀರಿಯಲ್ ಸ್ಪೆಕ್ ಸಣ್ಣ, ಸ್ವಲ್ಪ ಉಬ್ಬಿದ ಕಪ್ಪು ಸ್ಪೆಕ್‌ಗಳನ್ನು ಉಂಟುಮಾಡುತ್ತದೆ. ವಿಶೇಷವಾಗಿ ಆರಂಭಿಕ ಹಂತದಲ್ಲಿ ಈ ಎರಡು ಕಾಯಿಲೆಗಳನ್ನು ಪ್ರತ್ಯೇಕಿಸುವುದು ಕಷ್ಟ.
ದಂಡಾಣು ಚುಕ್ಕೆ ರೋಗವು ತುಂಬಾ ಕಷ್ಟಕರವಾದುದು ಮತ್ತು ಚಿಕಿತ್ಸೆಯಲ್ಲಿ ದುಬಾರಿಯಾದುದು. ಋತುವಿನ ಆರಂಭದಲ್ಲಿ ರೋಗವು ತಗುಲಿದರೆ, ಸಂಪೂರ್ಣ ಬೆಳೆಯನ್ನು ನಾಶಮಾಡುವ ಆಯ್ಕೆಯನ್ನು ಪರಿಗಣಿಸಿ. ಎರಡೂ ಬ್ಯಾಕ್ಚೀರಿಯಾಗಳ ವಿರುದ್ಧ ತಾಮ್ರ ಆಧಾರಿತ ಬ್ಯಾಕ್ಟೀರಿಯಾನಾಶಕಗಳು ಎಲೆಗಳು ಮತ್ತು ಹಣ್ಣಿನ ಮೇಲೆ ರಕ್ಷಾಕವಚವನ್ನು ನೀಡುತ್ತವೆ. ಬ್ಯಾಕ್ಟೀರಿಯಲ್ ಸ್ಪಾಟ್ ಗೆ ನಿರ್ದಿಷ್ಟವಾಗಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಬ್ಯಾಕ್ಟೀರಿಯಾ ವೈರಸ್ಗಳು (ಬ್ಯಾಕ್ಟೀರಿಯೊಫೇಜಸ್) ಲಭ್ಯವಿವೆ. 1.3% ಸೋಡಿಯಂ ಹೈಪೋಕ್ಲೋರೈಟ್ ನಲ್ಲಿ ಸುಮಾರು ಒಂದು ನಿಮಿಷಗಳವರೆಗೆ ಅಥವಾ ಬಿಸಿ ನೀರಿನಲ್ಲಿ (50°ಸಿ) 25 ನಿಮಿಷಗಳ ಕಾಲ ಬೀಜಗಳನ್ನು ಮುಳುಗಿಸಿಡುವುದರಿಂದ ಅದು ರೋಗದ ಸಂಭವವನ್ನು ಕಡಿಮೆ ಮಾಡುತ್ತದೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ತಾಮ್ರ ಹೊಂದಿರುವ ಬ್ಯಾಕ್ಟೀರಿಯಾನಾಶಕಗಳನ್ನು ರಕ್ಷಕದಂತೆ ಬಳಸಬಹುದು ಮತ್ತು ಭಾಗಶಃ ರೋಗ ನಿಯಂತ್ರಣವನ್ನು ಮಾಡಬಹುದು. ರೋಗದ ಚಿಹ್ನೆಯು ಮೊದಲ ಬಾರಿಗೆ ಕಂಡುಬಂದಾಗ ಮತ್ತು ಬೆಚ್ಚಗಿನ(ಸ್ಪಾಟ್)/ ತಣ್ಣನೆಯ (ಸ್ಪೆಕ್ ), ತೇವಾಂಶವುಳ್ಳ ಪರಿಸ್ಥಿತಿಗಳು ಉಂಟಾದಾಗ 10 ರಿಂದ 14 ದಿನದ ಅಂತರದಲ್ಲಿ ಇದನ್ನು ಸಿಂಪಡಿಸಬೇಕು. ತಾಮ್ರಕ್ಕೆ ಪ್ರತಿರೋಧ ಬೆಳೆಸಿಕೊಳ್ಳುವುದು ಸಾಮಾನ್ಯವಾದ್ದರಿಂದ, ಮ್ಯಾಂಕೊಜೆಬ್ನೊಂದಿಗೆ ತಾಮ್ರ-ಆಧಾರಿತ ಬ್ಯಾಕ್ಟೀರಿಯಾನಾಶಕಗಳ ಸಂಯೋಜನೆಯನ್ನು ಸಹ ಶಿಫಾರಸು ಮಾಡಲಾಗಿದೆ.
ದಂಡಾಣು ಚುಕ್ಕೆ ರೋಗವು ಕ್ಸಾಂಥೋಮೋನಸ್ ತಳಿಯ ಹಲವಾರು ಜಾತಿಗಳ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ವಿಶ್ವಾದ್ಯಂತ ಸಂಭವಿಸುತ್ತದೆ ಮತ್ತು ಬೆಚ್ಚಗಿನ, ಆರ್ದ್ರ ಪರಿಸರದಲ್ಲಿ ಬೆಳೆದ ಟೊಮೆಟೊಗಳ ಮೇಲೆ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ. ರೋಗಕಾರಕವು ಬೀಜಗಳ ಒಳಗೆ ಅಥವಾ ಬೀಜಗಳ ಮೇಲೆ, ಸಸ್ಯಾವಶೇಷಗಳ ಮೇಲೆ ಮತ್ತು ನಿರ್ದಿಷ್ಟ ಕಳೆಗಳ ಮೇಲೆ ಬದುಕಬಲ್ಲವು. ಇದಕ್ಕೆ ಮಣ್ಣಿನಲ್ಲಿ ಕೆಲವು ದಿನಗಳಿಂದ ಹಿಡಿದು ವಾರಗಳವರೆಗೆ ಬಹಳ ಸೀಮಿತ ಬದುಕುಳಿಯುವ ಅವಧಿಯಿರುತ್ತದೆ. ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ, ಇದು ಆರೋಗ್ಯಕರ ಸಸ್ಯಗಳಿಗೆ ಮಳೆ ಅಥವಾ ತುಂತುರು ನೀರಾವರಿ ಮೂಲಕ ಹರಡುತ್ತದೆ. ಇದು ಎಲೆಯ ರಂಧ್ರಗಳು ಮತ್ತು ಗಾಯಗಳ ಮೂಲಕ ಸಸ್ಯ ಅಂಗಾಂಶಗಳಿಗೆ ಪ್ರವೇಶಿಸುತ್ತದೆ. ಸೂಕ್ತ ತಾಪಮಾನವು 25 ರಿಂದ 30 ° ಸಿ ವರೆಗಿರುತ್ತದೆ. ಬೆಳೆಗೆ ಒಮ್ಮೆ ಸೋಂಕಾದರೆ, ರೋಗವನ್ನು ನಿಯಂತ್ರಿಸುವುದು ತುಂಬಾ ಕಷ್ಟ ಮತ್ತು ಒಟ್ಟು ಬೆಳೆ ನಷ್ಟಕ್ಕೆ ಕಾರಣವಾಗಬಹುದು.