ಬಾಳೆಹಣ್ಣು

ಬಾಳೆಯ ಕ್ಸ್ಯಾಥೋಮೊನಾಸ್ ಸೊರಗು ರೋಗ

Xanthomonas campestris pv. musacearum

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಸಸ್ಯದ ಅಂಗಗಳಿಂದ ಬ್ಯಾಕ್ಟೀರಿಯಾ ಸ್ರಾವವು ಹೊರಬರುತ್ತದೆ.
  • ಆಂತರಿಕವಾಗಿ ಹಣ್ಣು ಬಣ್ಣಗೆಡುತ್ತದೆ ಮತ್ತು ಅಕಾಲಿಕವಾಗಿ ಪಕ್ವವಾಗುತ್ತದೆ.
  • ಎಲೆಗಳು ಬಾಡುತ್ತವೆ ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತವೆ.
  • .

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಸಾಮಾನ್ಯವಾಗಿ ಸೋಂಕು ತಗಲಿದ 3 ವಾರಗಳ ನಂತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ರೋಗದ ತೀವ್ರತೆ ಮತ್ತು ಅದರ ಹರಡುವಿಕೆ ಹೆಚ್ಚಾಗಿ ಸಸ್ಯ ಪ್ರಭೇದ, ಬೆಳವಣಿಗೆಯ ಹಂತ ಮತ್ತು ಪರಿಸರ ಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಸೋಂಕಿಗೊಳಗಾದ ಸಸ್ಯಗಳು ಹೆಚ್ಚುವ ಹಳದಿ ಬಣ್ಣ ಮತ್ತು ಎಲೆಗಳ ಸೊರಗುವಿಕೆಯನ್ನು ತೋರಿಸುತ್ತದೆ. ಹಣ್ಣುಗಳ ಅಸಮ ಮತ್ತು ಅಕಾಲಿಕ ಪಕ್ವವಾಗುವಿಕೆಯನ್ನು ನೋಡಬಹುದು. ಆದರೆ, ಸಸ್ಯದ ಅಂಗಗಳಿಂದ ಹಳದಿ ಬ್ಯಾಕ್ಟೀರಿಯಾ ಸ್ರಾವ ವಿಸರ್ಜನೆಯು ಅತ್ಯಂತ ವಿಶಿಷ್ಟ ಲಕ್ಷಣವಾಗಿದೆ. ಸೋಂಕಿತ ಬಾಳೆಯ ಒಂದು ಅಡ್ಡ ಸೀಳು ನೋಟವು ನಾಳೀಯ ಅಂಗಾಂಶಗಳು ಹಳದಿ ಕಿತ್ತಳೆ ಬಣ್ಣಕ್ಕೆ ತಿರುಗಿರುವುದನ್ನು ಮತ್ತು ಅಂಗಾಂಶಗಳ ಮೇಲೆ ಗಾಢ ಕಂದು ಬಣ್ಣದ ಕಲೆಗಳನ್ನು ನೋಡಬಹುದು. ಹೂಗೊಂಚಲು ಮೇಲೆ ರೋಗಲಕ್ಷಣಗಳು ಕ್ರಮೇಣ ಸೊರಗುವಿಕೆ ಮತ್ತು ಪುರುಷ ಮೊಗ್ಗುಗಳ ಮುದುರುವಿಕೆಯನ್ನು ಒಳಗೊಂಡಿರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇದುವರೆಗೂ, ಈ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ನಿಯಂತ್ರಿಸಲು ಯಾವುದೇ ಜೈವಿಕ ಚಿಕಿತ್ಸೆ ತಿಳಿದಿಲ್ಲ. ನಿಮಗೆ ಯಾವುದಾದರೋ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿರಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ಮಾರ್ಗ ಇದ್ದರೆ ಮೊದಲು ಅದನ್ನು ಪರಿಗಣಿಸಿ. ಈ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಸ್ಯ ಕಾಯಿಲೆಗಳನ್ನು ನಿರ್ವಹಿಸಲು ಸಾಂಪ್ರದಾಯಿಕ ಪ್ರತಿಜೀವಕಗಳನ್ನು ಬಳಸಲಾಗುತ್ತದೆಯಾದರೂ ಅವುಗಳು ಆರ್ಥಿಕವಾಗಿ ಪರಿಣಾಮಕಾರಿಯಲ್ಲ. ಕೆಲವು ಸಂದರ್ಭಗಳಲ್ಲಿ, ಸೋಂಕಿತ ಬಾಳೆ ಬೆಳೆಯನ್ನು ನಾಶಮಾಡುವ ಮೂಲಕ ರೋಗದ ಹರಡುವಿಕೆ ತಪ್ಪಿಸಲು ಹೆಚ್ಚು ಆರ್ಥಿಕವಾಗಿ ಸಮರ್ಪಕವಾದ ಮತ್ತು ಪರಿಣಾಮಕಾರಿ ಮಾರ್ಗವಾಗಿ ಸಸ್ಯನಾಶಕಗಳನ್ನು ಶಿಫಾರಸ್ಸು ಮಾಡಲಾಗುತ್ತದೆ.

ಅದಕ್ಕೆ ಏನು ಕಾರಣ

ಕ್ಸ್ಯಾತೋಮೋನಸ್ ಕಾಂಪೆಸ್ಚ್ರಿಸ್ ಪಿ.ವಿ ಮುಸಸೀರಂ ನಿಂದಾಗಿ ಈ ಲಕ್ಷಣಗಳು ಉಂಟಾಗುತ್ತವೆ. ಇವು ಬಾಳೆ ತೋಟಗಳಲ್ಲಿ ಗಣನೀಯ ಹಾನಿಯನ್ನು ಉಂಟುಮಾಡುವಂತಹ ನಿರ್ದಿಷ್ಟ ಬ್ಯಾಕ್ಟೀರಿಯವಾಗಿದೆ. ಇದರ ಹರಡುವಿಕೆಯು ಸೋಂಕಿಗೊಳಗಾದ ಸಸ್ಯ, ಕಲುಷಿತವಾದ ಉಪಕರಣಗಳು, ತೆರೆದಿರುವ ಗಂಡು ಹೂವುಗಳ ಮೂಲಕ ವಾಯುಗಾಮಿಯಾಗಿ ಈ ರೋಗ ಸಂಭವಿಸುತ್ತದೆ. ಬ್ಯಾಕ್ಟೀರಿಯಾವು 4 ತಿಂಗಳವರೆಗೆ ಮಣ್ಣನ್ನು ಕಲುಷಿತಗೊಳಿಸಬಹುದು ಮತ್ತು ಇದು ಇನಾಕ್ಯುಲಂನ ಪ್ರಮುಖ ಮೂಲವಾಗಿದೆ. ಆರ್ದ್ರತೆಯ ಮಟ್ಟಗಳು ಬದುಕುಳಿಯುವಿಕೆಯ ಮೇಲೆ ಪ್ರಭಾವ ಬೀರುತ್ತವೆ. ಇವು ಒಣ ಮಣ್ಣುಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ವಾಯುಗಾಮಿ ವಾಹಕಗಳು ಕೊಂಡಿರಹಿತ ನೊಣಗಳು(ಗಿಡಹೇನು) ಹಣ್ಣಿನ ನೊಣ(ಡ್ರೊಸೊಫಿಲಿಡೇ) ಮತ್ತು ಹುಲ್ಲಿನ ನೊಣ (ಕ್ಲೋರೋಪಿಡೆ) ಮುಂತಾದ ಕೀಟ ಕುಟಂಬಗಳನ್ನು ಒಳಗೊಂಡಿರುತ್ತದೆ. ಗಂಡು ಹೂವುಗಳಿಂದ ಉತ್ಪತ್ತಿಯಾಗುವ ಸೋಂಕಿತ ಮಕರಂದಕ್ಕೆ ಆಕರ್ಷಿತವಾಗಿ ಇವುಗಳು ಬಾಳೆಯಿಂದ ಬಾಳೆಗೆ ಈ ರೋಗವನ್ನು ಹರಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಸ್ಯ ಸಾಮಗ್ರಿಯನ್ನು ಆಮದು ಮಾಡಿಕೊಳ್ಳುವಾಗ ಸಂಪರ್ಕ ತಡೆ ನಿಯಮಗಳನ್ನು ಪರಿಗಣಿಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆಯ್ಕೆ ಮಾಡಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ತೋಟದ ಮೇಲ್ವಿಚಾರಣೆ ಮಾಡಿ.
  • ತೋಟದಿಂದ ಸೋಂಕಿತ ಸಸ್ಯಗಳು ಮತ್ತು ಅವಶೇಷಗಳನ್ನು ತ್ವರಿತವಾಗಿ ತೆಗೆದುಹಾಕಿ.
  • ಸ್ವಚ್ಛ ಮತ್ತು ಸೋಂಕು ರಹಿತ ಉಪಕರಣಗಳನ್ನು ಬಳಸಲು ಮರೆಯದಿರಿ.
  • ವಾಹಕಗಳ ಪ್ರಸರಣವನ್ನು ತಡೆಯಲು ಗಂಡು ಹೂವುಗಳನ್ನು ತೆಗೆದುಹಾಕಿ.
  • ತೋಟಗಳ ನಡುವೆ ಯಾವುದೇ ಸೋಂಕಿತ ಸಸ್ಯ ವಸ್ತುಗಳನ್ನು ಸಾಗಿಸಲು ಹೋಗಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ