ಇತರೆ

ಬ್ಯಾಕ್ಟೀರಿಯಲ್ ಫ್ರೂಟ್ ಬ್ಲಾಚ್ (ಹಣ್ಣಿನ ಮೇಲೆ ಬೊಬ್ಬೆಗಳು)

Acidovorax citrulli

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಬೀಜದ ಎಲೆಗಳ ಕೆಳಭಾಗದಲ್ಲಿ ನೀರು-ತುಂಬಿದ ತೇಪೆಗಳು.
  • ಎಲೆಯ ಸಿರೆಗಳ ಉದ್ದಕ್ಕೂ ಗಾಢ ಅಥವಾ ಕೆಂಪು-ಕಂದು ಬಣ್ಣದ, ಕೋನೀಯ ಗಾಯಗಳು.
  • ಹಣ್ಣಿನ ಮೇಲೆ ಆಲಿವ್-ಬಣ್ಣದ, ಅನಿಯಮಿತ ಗಾಯಗಳು, ಅವು ಗಾಢ-ಹಸಿರು ಬಣ್ಣದ ಬೊಬ್ಬೆಗಳಾಗಿ ಬದಲಾಗುತ್ತವೆ.
  • ಅಂಗಾಂಶದಿಂದ ಅಂಬರ್-ಬಣ್ಣದ ರಸಸ್ರಾವವಾಗುವುದು.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಹಾಗಲಕಾಯಿ
ಸೌತೆಕಾಯಿ
ಕಲ್ಲಂಗಡಿ
ಕುಂಬಳಕಾಯಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಸಸಿಗಳ ಮೇಲೆ ನಾಟಿ ಮಾಡಿದ ನಂತರ ಐದರಿಂದ ಎಂಟು ದಿನಗಳೊಳಗೆ ರೋಗಲಕ್ಷಣಗಳನ್ನು ಗಮನಿಸಬಹುದು. ಈ ರೋಗಲಕ್ಷಣಗಳಾವುವೆಂದರೆ ಸಸಿ ಎಲೆಗಳ ಕೆಳಭಾಗದಲ್ಲಿ ನೀರು-ತುಂಬಿದ ತೇಪೆಗಳು ಮತ್ತು ಕೆಲವೊಮ್ಮೆ ಇವು ಸೊರಗಿಹೋಗುತ್ತವೆ. ಹಳೆಯ ಸಸ್ಯಗಳಲ್ಲಿ, ಎಲೆಯ ಸಿರೆಗಳ ಉದ್ದಕ್ಕೂ ಗಾಢ ಅಥವಾ ಕೆಂಪು-ಕಂದು ಬಣ್ಣದ, ಕೋನೀಯ ಗಾಯಗಳು. ಹಣ್ಣಿನ ಮೇಲಿನ ರೋಗಲಕ್ಷಣಗಳು ಸಾಮಾನ್ಯವಾಗಿ ಪರಿಪಕ್ವತೆಗೆ ಮುಂಚಿತವಾಗಿಯೇ ಬರುತ್ತವೆ ಮತ್ತು ಸಿಪ್ಪೆಯ ಮೇಲೆ ಆಲಿವ್-ಬಣ್ಣದ, ಅನಿಯಮಿತ ಗಾಯಗಳು ಮೊದಲು ಕಾಣಿಸುತ್ತವೆ. ಈ ಗಾಯಗಳು ಶೀಘ್ರವಾಗಿ ಅಗಲವಾಗುತ್ತವೆ ಮತ್ತು ಒಟ್ಟಿಗೆ ಬೆಳೆಯುತ್ತವೆ, ದೊಡ್ಡ ಗಾಢ-ಹಸಿರು ಬಣ್ಣದ ಬೊಬ್ಬೆಗಳಾಗಿ ಒಂದಾಗುತ್ತವೆ. ರೋಗವು ಹೆಚ್ಚಾದಂತೆ, ಗಾಯಗಳ ಭಾಗದಲ್ಲಿ ಬಿರುಕುಗಳು ಬರುತ್ತವೆ ಮತ್ತು ಅಂಬರ್ ಬಣ್ಣದ ದ್ರವವು ಅಂಗಾಂಶದಿಂದ ಹೊರಬರುತ್ತದೆ. ಅವಕಾಶವಾದಿ ರೋಗಕಾರಕಗಳು ಹಾನಿಗೊಳಗಾದ ಅಂಗಾಂಶಗಳನ್ನು ವಸಾಹತು ಮಾಡುತ್ತವೆ, ಇದರಿಂದ ಹಣ್ಣುಗಳು ಒಳಗಿನಿಂದ ಕೊಳೆತು ಹೋಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ರೋಗಾಣುಗಳನ್ನು ತೆಗೆದುಹಾಕಲು ಬೀಜವನ್ನು ಒಣ ಶಾಖದ ಚಿಕಿತ್ಸೆಯನ್ನು ಬಳಸಿಕೊಂಡು ಸ್ವಚ್ಛಗೊಳಿಸಬಹುದು. ರೋಗಕಾರಕವನ್ನು ತೆಗೆದುಹಾಕಲು 3-5 ದಿನಗಳವರೆಗೆ 85 °ಸಿ ನಲ್ಲಿ ಚಿಕಿತ್ಸೆ ಮಾಡಿದರೆ ಅದು ಪರಿಣಾಮಕಾರಿಯಾಗಿರುತ್ತದೆ. ರೋಗವು ಹರಡುವುದನ್ನು ನಿಧಾನಗೊಳಿಸಲು ಮತ್ತು ಸೋಂಕಿನಿಂದ ಹಣ್ಣುಗಳನ್ನು ರಕ್ಷಿಸಲು ತಾಮ್ರ ಆಧಾರಿತ ಬ್ಯಾಕ್ಟೀರಿಯಾನಾಶಕಗಳ ಸಾವಯವ ಸೂತ್ರೀಕರಣಗಳು ಲಭ್ಯವಿವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಹೊಲದಲ್ಲಿ ಈ ರೋಗ ಕಂಡುಬಂದರೆ, ಹೈಡ್ರೋಕ್ಸೈಡ್, ಕಾಪರ್ ಹೈಡ್ರೋಕ್ಸೊಸಲ್ಫೇಟ್, ಅಥವಾ ಕಾಪರ್ ಆಕ್ಸಿಕ್ಲೋರೈಡ್ ಮುಂತಾದ ತಾಮ್ರ-ಆಧಾರಿತ ಬ್ಯಾಕ್ಟೀರಿಯಾ ನಾಶಕಗಳನ್ನು ಬಳಸಿದರೆ ಅದರ ಹರಡುವಿಕೆಯನ್ನು ನಿಧಾನಗೊಳಿಸಬಹುದು ಮತ್ತು ಸೋಂಕಿನಿಂದ ಹಣ್ಣುಗಳನ್ನು ರಕ್ಷಿಸಬಹುದು. ಸಿಂಪಡಿಕೆಗಳನ್ನು ಹೂಬಿಡುವಾಗ ಅಥವಾ ಮೊದಲು ಪ್ರಾರಂಭಿಸಬೇಕು ಮತ್ತು ಹಣ್ಣುಗಳು ಪಕ್ವವಾಗುವವರೆಗೆ ಮುಂದುವರೆಸಬೇಕು.

ಅದಕ್ಕೆ ಏನು ಕಾರಣ

ಆಸಿಡೋವೊರಾಕ್ಸ್ ಸಿಟ್ರುಲಿ ಎಂಬ ಬ್ಯಾಕ್ಟೀರಿಯಾಗಳಿಂದ ರೋಗಲಕ್ಷಣಗಳು ಉಂಟಾಗುತ್ತವೆ, ಇದು ಸೋಂಕಿತ ಹಣ್ಣುಗಳಿಂದ ಬಂದ ಬೀಜಗಳು, ಮಣ್ಣಿನಲ್ಲಿರುವ ಸಸ್ಯಗಳ ಉಳಿಕೆಗಳು ಮತ್ತು ಕುಕುರ್ಬಿಟ್ ಕುಟುಂಬದ ಕಳೆಗಳಂತಹ ಪರ್ಯಾಯ ರೋಗ ಬರುವ ಸಸ್ಯಗಳಲ್ಲಿ ಅಥವಾ ತಾನಾಗೇ ಬೆಳೆದ ಗಿಡಗಳಲ್ಲಿ ಬದುಕುತ್ತದೆ. ಎಲ್ಲಾ ಕುಕುರ್ಬಿಟ್ಗಳು ರೋಗಕ್ಕೆ ಸ್ವಲ್ಪ ಮಟ್ಟದವರೆಗೆ ಸೂಕ್ಷ್ಮವಾಗಿರುತ್ತವೆ ಆದರೆ ರೋಗಲಕ್ಷಣಗಳ ತೀವ್ರತೆಯಲ್ಲಿ ವ್ಯತ್ಯಾಸವಿರುತ್ತದೆ. ರೋಗದ ಪ್ರಾಥಮಿಕ ಪ್ರಸರಣದಲ್ಲಿ ಸೋಂಕಿತ ಬೀಜಗಳು ಅತ್ಯಂತ ಪ್ರಮುಖವಾದ ಅಂಶವೆಂದು ತಿಳಿದುಬಂದಿದೆ. ಎರಡನೆಯ ಸೋಂಕು ಸಸ್ಯದಿಂದ ಸಸ್ಯಕ್ಕೆ ನೀರಿನ ಎರಚಲು (ಮಳೆ ಅಥವಾ ಓವರ್ಹೆಡ್ ನೀರಾವರಿ), ಕಾರ್ಮಿಕರ ಕೈ ಮತ್ತು ಬಟ್ಟೆ ಮತ್ತು ಉಪಕರಣಗಳು ಮತ್ತು ಸಲಕರಣೆಗಳ ಮೂಲಕ ಆಗುತ್ತದೆ. ಸೋಂಕು ಮತ್ತು ರೋಗಕ್ಕೆ ಅಧಿಕ ಉಷ್ಣತೆ (32 °ಸಿ ಗಿಂತ ಹೆಚ್ಚು) ಮತ್ತು ಹೆಚ್ಚಿನ ಸಾಪೇಕ್ಷ ಆರ್ದ್ರತೆ (70% ಗಿಂತಲೂ ಹೆಚ್ಚು) ಅನುಕೂಲಕರ ಸ್ಥಿತಿಗಳು. ಹೂವುಗಳ ಪರಾಗಸ್ಪರ್ಶದ ಮೂಲಕ ಮತ್ತು ಹೂಬಿಟ್ಟ ನಂತರ 2-3 ವಾರಗಳೊಳಗೆ ಹಣ್ಣಿಗೆ ಸೋಂಕಾಗುತ್ತದೆ. ಆದರೆ ಹಣ್ಣು ಬೆಳೆದಂತೆ, ಅದರ ಸಿಪ್ಪೆಯ ಮೇಲೆ ಮೇಣದ ಪದರ ಬೆಳೆಯುತ್ತದೆ, ಅದು ಮತ್ತಷ್ಟು ಸೋಂಕನ್ನು ತಡೆಗಟ್ಟುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ದೇಶದಲ್ಲಿರಬಹುದಾದ ಸಂಪರ್ಕತಡೆಯನ್ನು ನಿಯಂತ್ರಿಸುವ ಬಗ್ಗೆ ತಿಳಿದಿರಲಿ.
  • ಪ್ರಮಾಣೀಕೃತ ಮೂಲಗಳಿಂದ ಪಡೆದ ಬೀಜಗಳನ್ನು ಮಾತ್ರ ಬಳಸಿ.
  • ಇಡೀ ಬೇಸಾಯ ಚಕ್ರದ ಉದ್ದಕ್ಕೂ ಉನ್ನತ ಗುಣಮಟ್ಟದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮರೆಯದಿರಿ.
  • ರೋಗದ ಲಕ್ಷಣಗಳನ್ನು ಗುರುತಿಸಲು ಬೆಳೆಯನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಸೋಂಕಿತ ಸಸ್ಯಗಳನ್ನು ತಕ್ಷಣವೇ ನಾಶಮಾಡಿ.
  • ಕುಕುರ್ಬಿಟ್ಸ್ ಕುಟುಂಬ ಮತ್ತು ಪರ್ಯಾಯ ರೋಗ ಬರುವ ಸಸ್ಯಗಳ ಕಳೆಗಳನ್ನು ದೂರವಿಡಬೇಕು.
  • ಕೊಯ್ಲಿನ ನಂತರ ಸಸ್ಯದ ಉಳಿಕೆಗಳನ್ನು ಮಣ್ಣಿನಲ್ಲಿ ಆಳವಾಗಿ ಹೂಳಬೇಕು.
  • ಬ್ಯಾಕ್ಟೀರಿಯಾವು ಹರಡುವುದನ್ನು ತಡೆಗಟ್ಟಲು 3 ವರ್ಷಗಳ ಸರದಿ ಬೆಳೆ ವ್ಯವಸ್ಥೆಯನ್ನು ಯೋಜನೆ ಮಾಡಿ.
  • ಸೋಂಕಿತ ಹೊಲದಲ್ಲಿ ಬಳಸಿದ ಯಾವುದೇ ಸಾಧನವನ್ನು ಮತ್ತೊಮ್ಮೆ ಬಳಸುವುದಕ್ಕಿಂತ ಮೊದಲು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ