Phytoplasma asteris
ಬ್ಯಾಕ್ಟೀರಿಯಾ
ರೋಗಲಕ್ಷಣಗಳ ತೀವ್ರತೆ ಮೆಕ್ಕೆ ಜೋಳ ಸಸ್ಯದ ಪ್ರಭೇದ ಮತ್ತು ಸೋಂಕಿನ ಹಂತದ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ, ವರ್ತುಲ ಎಲೆಗಳ ಅಂಚುಗಳು ಹಳದಿಯಾಗುವುದು ಮತ್ತು ಹಳೆಯ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುವುದು ಮೆಕ್ಕೆ ಜೋಳದಲ್ಲಿ ಪಿ. ಆಸ್ಟರಿಸ್ ಸೋಂಕಿನ ಮೊದಲ ಚಿಹ್ನೆಗಳು. ರೋಗವು ಮುಂದುವರೆದಂತೆ ಈ ರೋಗಲಕ್ಷಣಗಳು ತೀವ್ರಗೊಳ್ಳುತ್ತವೆ ಮತ್ತು ಅಂತಿಮವಾಗಿ ಎಲೆಗಳ ಅಂಚು ಸಾಮಾನ್ಯವಾಗಿ ಹರಿದ ಅಥವಾ ಕೊಳೆತಂತಹ ರೂಪ ಪಡೆಯಬಹುದು. ಹೆಚ್ಚುವರಿ ತೆನೆ ಚಿಗುರುಗಳು ಮತ್ತು ಟಿಲ್ಲರ್ ಗಳು ಕಾಣಿಸಿಕೊಳ್ಳುವುದರಿಂದ ಸಸ್ಯವು ಪೊದೆಯಂತೆ ಕಾಣುತ್ತದೆ. ಗೆಣ್ಣುಗಳ ನಡುವೆ ಕಡಿಮೆ ಅಂತರ ಮತ್ತು ಕುಂಠಿತ ಬೆಳವಣಿಗೆ ಸ್ಪಷ್ಟವಾಗಿ ಕಾಣುತ್ತದೆ. ಪುರುಷ ಹೂಗೊಂಚಲುಗಳು ಸಾಮಾನ್ಯವಾಗಿ ರೂಪುಗೊಳ್ಳುವುದಿಲ್ಲ ಅಥವಾ ಬಂಜರಾಗಿರುತ್ತವೆ. ಸಸ್ಯಗಳು ತೆನೆ ಹೊಂದಿರುವುದಿಲ್ಲ ಅಥವಾ ತುಂಬಾ ತೆನೆಗಳನ್ನು ಹೊಂದಿರುತ್ತವೆ. ಆದರೆ, ಅವು ಸ್ವಲ್ಪ ಅಥವಾ ಯಾವುದೇ ಧಾನ್ಯಗಳನ್ನು ಉತ್ಪಾದಿಸುವುದಿಲ್ಲ.
ಮೆಟಾಹಾರ್ಜಿಯಾಮ್ ಅನಿಸೊಪ್ಲಿಯಾ, ಬೀವೆರಿಯ ಬಾಸ್ಸಿಯಾನಾ, ಪೆಸಿಲೊಮೈಸಸ್ ಫ್ಯೂಮೊಸೊರೋಸಿಯಸ್ ಮತ್ತು ವೆರ್ಟಿಸಿಲಿಯಮ್ ಲೆಕಾನಿಗಳಂತಹ ಪರಾವಲಂಬಿ ಶಿಲೀಂಧ್ರಗಳನ್ನು ಆಧರಿಸಿದ ಜೈವಿಕ ಕೀಟನಾಶಕಗಳನ್ನು ಜಿಗಿ ಹುಳುಗಳ ಸಂಖ್ಯೆಯನ್ನು ನಿಯಂತ್ರಿಸಲು ಬಳಸಬಹುದು. ಅನಾಗ್ರಸ್ ಅಟೊಮಸ್ ನಂತಹ ಪರಾವಲಂಬಿ ಕೀಟಗಳ ಜಾತಿಯನ್ನೂ ಈ ಉದ್ದೇಶಕ್ಕಾಗಿ ಬಳಸಬಹುದಾಗಿದೆ. ಲೇಡಿಬಗ್ ಗಳು ಮತ್ತು ಲೇಸ್ ವಿಂಗ್ ನಂತಹ ಪ್ರಯೋಜನಕಾರಿ ಕೀಟಗಳು ಮೊಟ್ಟೆ ಮತ್ತು ಲಾರ್ವಾ ಹಂತದಲ್ಲಿ ಕೀಟಗಳನ್ನು ವಿಪರೀತವಾಗಿ ತಿನ್ನುತ್ತವೆ.
ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸಂಪರ್ಕ ಕೀಟನಾಶಕ ಕಾರ್ಬರಿಲ್ ಅನ್ನು ಆಧರಿಸಿದ ಉತ್ಪನ್ನವು ಎಲೆ ಜಿಗಿ ಹುಳು ಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಹಳ ಪರಿಣಾಮಕಾರಿಯಾಗಿದೆ. ಮೆಕ್ಕೆ ಜೋಳದ ಸಸ್ಯಗಳು ಸಣ್ಣದಿರುವಾಗ ರೋಗದ ಸಂಭವನೀಯತೆಯನ್ನು ಇದು ಕಡಿಮೆಗೊಳಿಸುತ್ತದೆ. ಆದಾಗ್ಯೂ, ಬಹುತೇಕ ಮೆಕ್ಕೆ ಜೋಳ ಬೆಳೆಯುವ ಪ್ರದೇಶಗಳಲ್ಲಿ, ಈ ಅಭ್ಯಾಸವು ಸಾಮಾನ್ಯವಾಗಿ ಆರ್ಥಿಕವಾಗಿ ಕಾರ್ಯಸಾಧ್ಯವಾಗುವುದಿಲ್ಲ.
ಈ ರೋಗಲಕ್ಷಣಗಳು ಬ್ಯಾಕ್ಟೀರಿಯಂ ಫೈಟೋಪ್ಲಾಸ್ಮಾ ಆಸ್ಟರಿಸ್ ನಿಂದ ಉಂಟಾಗುತ್ತವೆ. ಇದು ಮೆಕ್ಕೆ ಜೋಳದ ರೋಗಕಾರಕವಾಗಿದ್ದು, ಮ್ಯಾಕ್ರೋಸ್ಟಲೀಸ್ ಕ್ವಾಡ್ರಿಲಿನೀಟಸ್ ಸೇರಿದಂತೆ ಹಲವಾರು ಎಲೆ ಜಿಗಿ ಹುಳುಗಳಿಂದ ಸ್ವಾಭಾವಿಕವಾಗಿ ಹರಡುತ್ತವೆ. ಇದು ಸೋಂಕಿತ ಸಸ್ಯ ವಸ್ತು (ಸಸಿ ಅಥವಾ ಕಸಿ) ಮೂಲಕ ಹರಡುತ್ತದೆ, ಆದರೆ ಬೀಜಗಳಿಂದ ಅಲ್ಲ. ಈ ಎಲೆ ಜಿಗಿಹುಳುಗಳು ಹಲವು ಆಶ್ರಯದಾತ ಸಸ್ಯಗಳಿಗೆ ರೋಗಕಾರಕಗಳನ್ನು ಹರಡಬಹುದು. ಅವುಗಳಲ್ಲಿ ಒಂದು ಪರಾವಲಂಬಿ "ಡಾಡರ್" (ಕಸ್ಕುಟಾ ಜಾತಿ). ಹೆಚ್ಚಿನ ತಾಪಮಾನವು ರೋಗಲಕ್ಷಣಗಳ ಹದಗೆಡುವಿಕೆಗೆ ಕಾರಣವಾಗುತ್ತದೆ. ಆದರೆ ತಂಪಾದ ವಾತಾವರಣವು ಸಾಮಾನ್ಯವಾಗಿ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅಥವಾ ಅತಿ ಕಡಿಮೆ ಪರಿಣಾಮ ಬೀರುತ್ತವೆ. ಆರಂಭಿಕ ಸೋಂಕುಗಳು, ರೋಗಲಕ್ಷಣಗಳ ಮತ್ತು ಇಳುವರಿಗಳ ಮೇಲೆ ಪರಿಣಾಮ ಬೀರುವ ವಿಷಯದಲ್ಲಿ ಅತೀ ಕೆಟ್ಟದಾಗಿರುತ್ತವೆ.