ಹತ್ತಿ

ಹತ್ತಿಯ ದುಂಡಾಣು ಅಂಗಮಾರಿ/ಬ್ಯಾಕ್ಟೀರಿಯಲ್ ಬ್ಲೈಟ್

Xanthomonas citri subsp. malvacearum

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡಗಳು ಮತ್ತು ಬೀಜಗಳ ಮೇಲೆ, ಕೆಂಪು ಅಥವಾ ಕಂದು ಬಣ್ಣದ ಅಂಚು ಇರುವ ಮೇಣದಂತಹ, ನೀರಿನಲ್ಲಿ ನೆನೆಸಿದಂತಹ ಕಲೆಗಳು ಕಂಡುಬರುತ್ತವೆ.
  • ಕಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ.
  • ಕಾಂಡ ಮತ್ತು ರೆಂಬೆಗಳ ಮೇಲೆ ಕಪ್ಪು ಬಣ್ಣದ ಕ್ಯಾಂಕರ್ (ಒಂದು ಶಿಲೀಂಧ್ರ ರೋಗ) ಕಾಣಿಸಿಕೊಳ್ಳುತ್ತದೆ.
  • ಅಕಾಲಿಕವಾದ ಎಲೆಗಳಚುವಿಕೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಈ ರೋಗ ತಗುಲಿದ ಶುರುವಿನಲ್ಲಿ ಎಲೆಗಳ ಮೇಲೆ, ಕಾಂಡದಲ್ಲಿ ಮತ್ತು ಬೀಜಕೋಶಗಳಲ್ಲಿ ವಕ್ರವಾದ, ಮೇಣದಂತಹ ನೀರಲ್ಲಿ ನೆನೆಸಿದಂತಹ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಚುಕ್ಕೆಗಳಿಗೆ ಕೆಂಪು ಅಥವಾ ಕಂದು ಬಣ್ಣದ ಅಂಚು ಇರುತ್ತದೆ. ಹತ್ತಿ ಎಲೆಯ ಸೂಕ್ಷ್ಮವಾದ ನಾಳಗಳು ಅಡ್ಡ ಇರುವ ಕಾರಣ ಗಾಯಗಳು ವಕ್ರವಾಗಿರುವಂತೆ ಕಾಣುತ್ತವೆ. ಕೆಲವು ಸಲ ಎಲೆಯ ದಳಗಳ ಮೇಲಿರುವ ಕಲೆಗಳು ಎಲೆಯ ಮುಖ್ಯ ನಾಳಗಳ ಉದ್ದಕ್ಕೂ ಹರಡಬಹುದು. ರೋಗ ಉಲ್ಬಣಿಸಿದಂತೆ ಈ ಗಾಯಗಳು ಕ್ರಮೇಣ ಕಂದು ಬಣ್ಣದ ನಿರ್ಜೀವ ಪ್ರದೇಶಗಳಾಗಿ ಬದಲಾಗುತ್ತವೆ. ಕಾಂಡಗಳಿಗೆ ತಗುಲಿದ ಸೋಂಕಿನಿಂದಾಗಿ ನಾಳೀಯ ಅಂಗಾಂಶಗಳ ಸುತ್ತ ಕಪ್ಪು ಕ್ಯಾಂಕರ್ ಬೆಳೆಯುತ್ತದೆ. ಇದರಿಂದಾಗಿ ಕ್ಯಾಂಕರ್ ಬಂದಿರುವ ಸ್ಥಳದ ಮೇಲಿನ ಭಾಗಗಳು ಸಾಯುತ್ತವೆ ಮತ್ತು ಅಕಾಲಿಕವಾಗಿ ಎಲೆಗಳು ಉದುರುತ್ತವೆ. ಬ್ಯಾಕ್ಟೀರಿಯಾವನ್ನು ಹೊಂದಿರುವ ಬಿಳಿ ಮೇಣದಂಥ ಪದರ ಹಳೆಯ ಕಲೆಗಳು ಅಥವಾ ಕ್ಯಾಂಕರ್ಗಳ ಮೇಲೆ ಮೂಡಬಹುದು. ಬೀಜಕೋಶಗಳು ಹಾನಿಗೊಳಗಾಗಬಹುದು, ಅದರಿಂದ ಬೀಜಕೋಶ ಮತ್ತು ಬೀಜಗಳು ಕೊಳೆಯುವುದು, ಮತ್ತು ಹತ್ತಿ ನಾರು ಬಣ್ಣಗೆಡುವುದು. ಸೋಂಕಿಗೆ ಒಳಗಾದ ಬೀಜಕೋಶಗಳಲ್ಲಿ ಆರಂಭದಲ್ಲಿ ನೀರಿನಲ್ಲಿ ನೆನೆಸಿದಂತೆ ಕಾಣುವ ದುಂಡಗಿನ ಗಾಯಗಳನ್ನು ಕಾಣಬಹುದು. ಸೋಂಕು ಹೆಚ್ಚಿದಂತೆ, ಬೀಜಕೋಶಗಳ ಗಾಯಗಳು ಗುಳಿಬಿದ್ದು ಗಾಢ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೂಡೊಮೊನಸ್ ಫ್ಲೋರೊಸೆನ್ಸ್ ಮತ್ತು ಬ್ಯಾಸಿಲಸ್ ಸಬ್ಟಿಲೀಸ್ ಬ್ಯಾಕ್ಟೀರಿಯಾವನ್ನು ಹೊಂದಿರುವ ಟಾಲ್ಕ್ ಆಧಾರಿತ ಪುಡಿ ಉತ್ಪನ್ನಗಳು ಕ್ಸ್ಯಾಂಥೋಮೊನಾಸ್ ಮಾಲ್ವಸಿಯೆರಮ್ ವಿರುದ್ಧ ಸಮರ್ಥವಾಗಿದೆ. ಆಝಾಡಿರಕ್ಟ ಇಂಡಿಕಾ (ಬೇವಿನ ಸಾರ) ಸಹ ತೃಪ್ತಿದಾಯಕ ಫಲಿತಾಂಶ ಕೊಡುತ್ತದೆ. ಮಿತಿಮೀರಿದ ಬೆಳವಣಿಗೆಯನ್ನು ತಡೆಗಟ್ಟುವ ಬೆಳವಣಿಗೆ ನಿಯಂತ್ರಕಗಳು ಕೂಡ ದುಂಡಾಣು ಅಂಗಮಾರಿಯನ್ನು ತಪ್ಪಿಸುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಅಧೀಕೃತ ಆ್ಯಂಟಿ ಬಯಾಟಿಕ್ ಮತ್ತು ಕಾಪರ್ ಆಕ್ಸಿ ಕ್ಲೋರೈಡ್ ಬಳಸಿ ಬೀಜ ಸಂಸ್ಕರಣೆ ಮಾಡುವುದು ಹತ್ತಿಯ ದುಂಡಾಣು ಅಂಗಮಾರಿ ರೋಗಕ್ಕೆ ಕಾರಣವಾಗುವ ಬ್ಯಾಕ್ಚೀರಿಯಾ ವಿರುದ್ಧ ಬಹಳ ಪರಿಣಾಮಕಾರಿಯಾಗಿದೆ.

ಅದಕ್ಕೆ ಏನು ಕಾರಣ

ಹತ್ತಿಯ ದುಂಡಾಣು ಅಂಗಮಾರಿ (ಬ್ಯಾಕ್ಟೀರಿಯಲ್ ಬ್ಲೈಟ್) ಕ್ಸ್ಯಾಂಥೋಮೊನಾಸ್ ಸಿಟ್ರಿಯ ಉಪಜಾತಿಯಾದ ಮಾಲ್ವಸಿಯೆರಮ್ ನಿಂದ ಉಂಟಾಗುತ್ತದೆ. ಇದು ಸೋಂಕು ತಗುಲಿದ ಗಿಡದ ಉಳಿಕೆಗಳಲ್ಲಿ ಹಾಗೂ ಬೀಜಗಳಲ್ಲಿ ಬೆಳೆಯುತ್ತದೆ. ಇದು ಹತ್ತಿಗೆ ತಗುಲುವ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ. ಗಮನಾರ್ಹವಾದ ಮಳೆ ಮತ್ತು ಹೆಚ್ಚಿನ ಆರ್ದ್ರತೆ, ಬೆಚ್ಚಗಿನ ಉಷ್ಣಾಂಶ ಇದ್ದಾಗ ರೋಗದ ಬೆಳವಣಿಗೆಗೆ ಅನುಕೂಲಕರ. ಎಲೆಗಳಲ್ಲಿರುವ ನೈಸರ್ಗಿಕ ರಂಧ್ರಗಳ (ಸ್ಟೊಮಾಟಾ) ಮೂಲಕ ಅಥವಾ ಯಾಂತ್ರಿಕ ಗಾಯಗಳ ಮೂಲಕ ಬ್ಯಾಕ್ಟೀರಿಯಾ ಎಲೆ ಅಂಗಾಂಶಗಳನ್ನು ಪ್ರವೇಶಿಸುತ್ತವೆ. ಬಿರುಗಾಳಿಯ ನಂತರ ಬರುವ ಭಾರೀ ಮಳೆ ಅಥವಾ ಆಲಿಕಲ್ಲು ಇದ್ದಾಗ ಈ ರೋಗ ಏಕೆ ತೀವ್ರವಾಗಿರುತ್ತದೆ ಎಂಬುದನ್ನು ಇದು ವಿವರಿಸುತ್ತದೆ. ಈ ಸೋಂಕು ಹರಡುವುದು ಬೀಜದ ಮೂಲಕವಾದ್ದರಿಂದ, ಆಸಿಡ್ ಸಂಸ್ಕರಣೆಯ ಮೂಲಕ ಡಿಲಿಂಟ್ (ಹತ್ತಿ ಬೀಜದ ಮೇಲ್ಮೈಯಲ್ಲಿರುವ ರೋಮವನ್ನು ತೆಗೆಯುವ ಪ್ರಕ್ರಿಯೆ) ಮಾಡಲಾಗಿರುವ ಬೀಜಗಳನ್ನು ಬಳಸುವುದರಿಂದ ಸೋಂಕಿತ ಬೀಜದಿಂದ ರೋಗ ಹಬ್ಬುವುದನ್ನು ತಡೆಯಬಹುದು. ತೋಟದಲ್ಲಿ ತಾವೇ ತಾವಾಗಿ ಬೆಳೆಯುವ ಸಸಿಗಳು ರೋಗದ ಪ್ರಾಥಮಿಕ ಸೋಂಕಿನ ಮೂಲವಾಗಿರಬಹುದು.


ಮುಂಜಾಗ್ರತಾ ಕ್ರಮಗಳು

  • ಉತ್ತಮ ಗುಣಮಟ್ಟದ ರೋಗಮುಕ್ತ ಬೀಜಗಳನ್ನು ಅಥವಾ ಆಸಿಡ್ ಸಂಸ್ಕರಣೆಯ ಮೂಲಕ ಡಿಲಿಂಟ್ (ಹತ್ತಿ ಬೀಜದ ಮೇಲ್ಮೈಯಲ್ಲಿರುವ ರೋಮವನ್ನು ತೆಗೆಯುವ ಪ್ರಕ್ರಿಯೆ) ಮಾಡಲ್ಪಟ್ಟ ಬೀಜಗಳನ್ನು ಬಳಸಿ.
  • ರೋಗ ನಿರೋಧಕ ಪ್ರಭೇದಗಳನ್ನು ಬಳಸುವುದು, ರೋಗ ತಡೆಗಟ್ಟುವ ಅತ್ಯಂತ ಸಮರ್ಥ ವಿಧಾನ.
  • ತೋಟವನ್ನು ನಿಯಮಿತವಾಗಿ ಪರಿಶೀಲಿಸಿ ಸೋಂಕಿತ ಗಿಡಗಳನ್ನು ಗುರುತಿಸಿ ಅವುಗಳನ್ನು ತೆಗೆದುಹಾಕಿ.
  • ತೇವಾಂಶವನ್ನು ತಗ್ಗಿಸಲು ಮತ್ತು ಎಲೆಗಳು ಒಣಗುವುದನ್ನು ಉತ್ತೇಜಿಸಲು ಮೇಲಾವರಣವನ್ನು ಸಾಧ್ಯವಾದಷ್ಟು ಗಾಳಿಯಾಡುವಂತಿರಿಸಿ.
  • ಎಲೆಗಳು ಒದ್ದೆಯಿದ್ದಾಗ ತೋಟದ ಕೆಲಸ ಮಾಡಬೇಡಿ ಹಾಗೂ ಯಂತ್ರೋಪಕರಣಗಳನ್ನು ಜರುಗಿಸಬೇಡಿ.
  • ತುಂತುರು ನೀರಾವರಿ ಬಳಸಬೇಡಿ.
  • ಸೋಂಕಿತ ತೋಟವನ್ನು ಸಾಧ್ಯವಾದಷ್ಟು ಬೇಗ ಕೊಯ್ಲು ಮಾಡಿ ಹೆಚ್ಚು ನಷ್ಟವಾಗುವುದನ್ನು ತಡೆಯಿರಿ.
  • ಹೊಲದಿಂದ ಸಾಧ್ಯವಾದಷ್ಟು ಬೇಗ ಸಸ್ಯಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟು ಬಿಡಿ.
  • ವಿಘಟನೆಗೆ ಅನುಕೂಲವಾಗುವಂತೆ ಸೋಂಕಿತ ಸಸ್ಯ ಶೇಷಗಳನ್ನು ಮಣ್ಣಿನೊಳಗೆ ಆಳವಾಗಿ ಉಳುಮೆ ಮಾಡಿ.
  • ರೋಗಕ್ಕೆ ಒಳಗಾಗದ ಸಸ್ಯಗಳೊಂದಿಗೆ ಒಂದು ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ