Erwinia tracheiphila
ಬ್ಯಾಕ್ಟೀರಿಯಾ
ಸೌತೆಕಾಯಿಗಳಲ್ಲಿನ ಬ್ಯಾಕ್ಟೀರಿಯಾದ ವಿಲ್ಟ್ ಸಾಮಾನ್ಯವಾಗಿ ಮೇಲಿನ ಎಲೆಗಳಿಂದ ಪ್ರಾರಂಭವಾಗುತ್ತದೆ. ಈ ಎಲೆಗಳ ಬಣ್ಣ ಕುಂದುತ್ತದೆ ಮತ್ತು ರೋಗವು ಉಲ್ಬಣಗೊಳ್ಳುತ್ತಿದ್ದಂತೆ ಕಂದು ಅಂಚುಗಳನ್ನು ಪಡೆಯಬಹುದು. ಪೀಡಿತ ಸಸ್ಯಗಳು ಹಗಲಿನಲ್ಲಿ ಒಣಗುತ್ತವೆ ಆದರೆ ರಾತ್ರಿಯಲ್ಲಿ ಚೇತರಿಸಿಕೊಳ್ಳಬಹುದು. ಇದು ಬ್ಯಾಕ್ಟೀರಿಯಾದ ವಿಲ್ಟ್ ಎಂದು ಪರೀಕ್ಷಿಸಲು, ಅದನ್ನು ಹರಡುವ ಕೀಟಗಳನ್ನು ನೋಡಿ: ಅಂದರೆ ಪಟ್ಟೆ ಮತ್ತು ಮಚ್ಚೆಯುಳ್ಳ ಸೌತೆಕಾಯಿ ಜೀರುಂಡೆಗಳು. ಅಲ್ಲದೆ, ನೀವು ಒಣಗಿದ ಎಲೆಯಿಂದ ಕತ್ತರಿಸಿದ ತೊಟ್ಟನ್ನು ನಿಧಾನವಾಗಿ ಎಳೆದರೆ, ನೀವು ಬ್ಯಾಕ್ಟೀರಿಯಾದಿಂದ ಲೋಳೆಯ ಎಳೆಗಳನ್ನು ನೋಡಬಹುದು. ಆದಾಗ್ಯೂ, ಈ ಲೋಳೆ ಇಲ್ಲ ಅಂದ ಮಾತ್ರಕ್ಕೆ ಸಸ್ಯಕ್ಕೆ ಸೋಂಕಾಗಿಲ್ಲ ಎಂದರ್ಥವಲ್ಲ, ಆದರೆ ಅದರ ಉಪಸ್ಥಿತಿಯು ಬಲವಾದ ಸಾಕ್ಷಿಯಾಗಿದೆ.
ಕೆಲವು ಸಸ್ಯಗಳು ರೋಗದ ಲಕ್ಷಣಗಳನ್ನು ತೋರಿಸಿದಾಗ, ರೋಗ ಹರಡುವುದನ್ನು ತಡೆಯಲು ಅವುಗಳನ್ನು ತೆಗೆದುಹಾಕಬೇಕು ಮತ್ತು ಹೂಳಬೇಕು. ನೀವು ಬಲೆ ಬೆಳೆಗಳನ್ನು ಸಹ ನೆಡಬಹುದು. ಇವುಗಳು ಕುಕುರ್ಬಿಟ್ ಸಸ್ಯಗಳ ವಿಧಗಳಾಗಿದ್ದು, ಕೀಟಗಳನ್ನು ಬಹಳವಾಗಿ ಆಕರ್ಷಿಸುತ್ತವೆ. ಈ ಬಲೆ ಬೆಳೆಗಳು ನೀವು ಕೊಯ್ಲು ಮಾಡಲು ಉದ್ದೇಶಿಸಿರುವ ಸಸ್ಯಗಳಿಂದ ಕೀಟಗಳನ್ನು ಬೇರೆಡೆಗೆ ತಿರುಗಿಸಬಹುದು.
ನೆನಪಿಡಿ, ಒಮ್ಮೆ ಬ್ಯಾಕ್ಟೀರಿಯಾದ ವಿಲ್ಟ್ ಸೋಂಕು ಸಸ್ಯಕ್ಕೆ ತಗುಲಿದರೆ, ರೋಗವನ್ನು ನೇರವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ ಜೀರುಂಡೆ ನಿರ್ವಹಣೆಯ ಮೂಲಕ ಮುಂಜಾಗ್ರತೆ ಪ್ರಮುಖವಾಗಿದೆ. ಆರಂಭಿಕ ಹಂತದಲ್ಲಿ ಕಾಲು ಭಾಗದ ಸಸ್ಯಗಳಲ್ಲಿ ಕನಿಷ್ಠ ಎರಡು ಸೌತೆಕಾಯಿ ಜೀರುಂಡೆಗಳು ಕಂಡುಬಂದರೆ ನೀವು ಕೀಟನಾಶಕವನ್ನು ಬಳಸುವುದನ್ನು ಪರಿಗಣಿಸಬೇಕು. ಸಸ್ಯಗಳು ಹಳೆಯದಾದಾಗ, ಈ ಮಿತಿಯು ಸಸ್ಯಗಳ ಪ್ರತೀ ಕಾಲು ಭಾಗದಲ್ಲಿ ಎಂಟು ಜೀರುಂಡೆಗಳಿಗೆ ಏರುತ್ತದೆ. ಜೀರುಂಡೆಗಳು ಆರೋಗ್ಯಕರ ಸಸ್ಯಗಳಿಗೆ ಸೋಂಕು ತಗುಲುವುದನ್ನು ತಡೆಯಲು ಬ್ಯಾಕ್ಟೀರಿಯಾದ ವಿಲ್ಟ್ ಲಕ್ಷಣಗಳನ್ನು ತೋರಿಸುವ ಯಾವುದೇ ಸಸ್ಯಗಳನ್ನು ತೆಗೆದುಹಾಕುವುದು ಮುಖ್ಯವಾಗಿದೆ. ಇಡೀ ಸಸ್ಯದ ಮೇಲೆ ಕೀಟನಾಶಕದ ತೆಳುವಾದ, ಏಕರೂಪದ ಲೇಪನವನ್ನು ಮಾಡುವುದನ್ನು ಮರೆಯದಿರಿ. ಕಾಂಡವು ಮಣ್ಣಿನಿಂದ ಹೊರಬರುವ ಸ್ಥಳ ಮತ್ತು ಎಲೆಗಳ ಕೆಳಭಾಗದಲ್ಲಿ ಜೀರುಂಡೆಗಳು ಅಡಗಿಕೊಳ್ಳುವಲ್ಲಿ ಹೆಚ್ಚಿನ ಗಮನವನ್ನು ನೀಡಿ.
ವಿಶೇಷವಾಗಿ ಸೌತೆಕಾಯಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬ್ಯಾಕ್ಟೀರಿಯಾದ ವಿಲ್ಟ್, ನಿರ್ದಿಷ್ಟ ಕೀಟಗಳಿಂದ - ಪಟ್ಟೆ ಮತ್ತು ಮಚ್ಚೆಯುಳ್ಳ ಸೌತೆಕಾಯಿ ಜೀರುಂಡೆಗಳು - ಹರಡುವ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಜೀರುಂಡೆಗಳು ಚಳಿಗಾಲದಲ್ಲಿ ತಮ್ಮ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾವನ್ನು ಸಾಗಿಸುತ್ತವೆ. ಬಾಧಿತ ಸಸ್ಯಗಳನ್ನು ತಿನ್ನುವ ಮೂಲಕ ಅವು ಸೋಂಕಿಗೆ ಒಳಗಾಗುತ್ತವೆ. ನಂತರ ಅವುಗಳು ಕಚ್ಚಿದಾಗ ಆರೋಗ್ಯಕರ ಸಸ್ಯಗಳಿಗೂ ಬ್ಯಾಕ್ಟೀರಿಯಾ ರವಾನೆಯಾಗುತ್ತದೆ. ಬ್ಯಾಕ್ಟೀರಿಯಾವು ಸಸ್ಯವನ್ನು ಪ್ರವೇಶಿಸಿದ ನಂತರ, ವೇಗವಾಗಿ ಬೆಳೆಯುತ್ತವೆ ಮತ್ತು ಸಸ್ಯದ ನಾಳೀಯ ವ್ಯವಸ್ಥೆಯನ್ನು ನಿರ್ಬಂಧಿಸುತ್ತವೆ. ಇದರಿಂದಾಗಿ ಸಸ್ಯವು ಒಣಗುತ್ತದೆ. ಈ ಬ್ಯಾಕ್ಟೀರಿಯಂ ಬೀಜಗಳ ಮೂಲಕ ಹರಡಲು ಸಾಧ್ಯವಿಲ್ಲ, ಮಣ್ಣಿನಲ್ಲಿ ವಾಸಿಸುವುದಿಲ್ಲ ಮತ್ತು ಸತ್ತ ಸಸ್ಯ ವಸ್ತುಗಳಲ್ಲಿ ಸ್ವಲ್ಪ ಸಮಯದವರೆಗೆ ಇರುತ್ತದೆ.