ಮರಗೆಣಸು

ಮರಗೆಣಸು ಬ್ಯಾಕ್ಟೀರಿಯಲ್ ಬ್ಲೈಟ್ (ದುಂಡಾಣು ಅಂಗಮಾರಿ)

Xanthomonas axonopodis pv. manihotis

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಕೋನೀಯ ನೆಕ್ರೋಟಿಕ್ ಕಲೆಗಳು.
  • ಇವುಗಳು ಸಾಮಾನ್ಯವಾಗಿ ಕ್ಲೋರೋಟಿಕ್ ಹೊರವರ್ತುಲದಿಂದ ಸುತ್ತುವರಿಯಲ್ಪಟ್ಟಿರುತ್ತವೆ.
  • ಗಾಯಗಳು ಹೆಚ್ಚಾಗಬಹುದು ಮತ್ತು ಒಗ್ಗೂಡಿ ಅಂಟು ಸ್ರವಿಸಬಹುದು.
  • ಅಂಟು ಆರಂಭದಲ್ಲಿ ಚಿನ್ನದ ಬಣ್ಣದಲ್ಲಿದ್ದು, ನಂತರ ಹಳದಿ ಬಣ್ಣದ ಮುಚ್ಚುಗೆಯನ್ನು ರೂಪಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮರಗೆಣಸು

ಮರಗೆಣಸು

ರೋಗಲಕ್ಷಣಗಳು

ರೋಗಲಕ್ಷಣಗಳು ಕೊಳೆತ, ಕಳೆಗುಂದುವಿಕೆ, ಡೈಬ್ಯಾಕ್ ಮತ್ತು ನಾಳೀಯ ಅಂಗಾಂಶಗಳ ನೆಕ್ರೋಸಿಸ್ ಅನ್ನು ಒಳಗೊಂಡಿರುತ್ತದೆ. ಎಲೆಗಳ ಮೇಲೆ, ಕೋನೀಯ ನೆಕ್ರೋಟಿಕ್ ಕಲೆಗಳು ಗೋಚರಿಸುತ್ತವೆ. ಸಣ್ಣ ನಾಳಗಳಿಂದ ಸೀಮಿತವಾಗಿರುತ್ತವೆ ಮತ್ತು ಎಲೆಯ ಮೇಲ್ಭಾಗದಲ್ಲಿ ಅನಿಯಮಿತವಾಗಿ ಹರಡಿರುತ್ತದೆ. ಈ ಕಲೆಗಳು ಸಾಮಾನ್ಯವಾಗಿ ಕ್ಲೋರೋಟಿಕ್ ಹೊರವರ್ತುಲದಿಂದ ಸುತ್ತುವರಿದಿರುತ್ತದೆ. ಈ ಕಲೆಗಳು ಪ್ರತ್ಯೇಕವಾದ ತೇವಾಂಶವುಳ್ಳ, ಕಂದುಬಣ್ಣದ ಗಾಯಗಳಾಗಿದ್ದು ವಿಸ್ತರಿಸಿ ಒಗ್ಗೂಡುವವರೆಗೂ ಸಾಮಾನ್ಯವಾಗಿ ಸಸ್ಯದ ಕೆಳಭಾಗಕ್ಕೆ ಸೀಮಿತವಾಗುತ್ತವೆ. ವಿಸ್ತರಿಸಿದ ನಂತರ ಸಾಮಾನ್ಯವಾಗಿ ಇಡೀ ಎಲೆಯು ಸಾಯುತ್ತದೆ. ಗಾಯಗಳು ಮತ್ತು ಎಲೆಯ ಅಡ್ಡ ನಾಳಗಳ ಉದ್ದಕ್ಕೂ ಅಂಟು ಹೊರಸೂಸುತ್ತವೆ. ಈ ಪ್ರಕ್ರಿಯೆಯು ಚಿನ್ನದ ಬಣ್ಣದ ದ್ರವದಿಂದ ಆರಂಭವಾಗುತ್ತದೆ ಮತ್ತು ಅದು ನಂತರ ಹಳದಿ ಬಣ್ಣದಲ್ಲಿ ಮೇಲ್ಭಾಗದಲ್ಲಿ ರೂಪಗೊಂಡು ಗಟ್ಟಿಯಾಗುತ್ತದೆ. ಸೋಂಕಿನ ನಂತರ ಎಳೆಯ ಕಾಂಡಗಳು ಮತ್ತು ತೊಟ್ಟುಗಳು ಬಿರುಕು ಬಿಡಬಹುದು. ಅಂಟನ್ನು ಸ್ರವಿಸಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೋಂಕಿತ ಬೀಜಗಳನ್ನು ಬಿಸಿನೀರಿನಲ್ಲಿ 60°C ನಲ್ಲಿ 20 ನಿಮಿಷಗಳ ಕಾಲ ನೆನೆಸಿ, ನಂತರ 30°C ಅಥವಾ 50°C ನಲ್ಲಿ 4 ಗಂಟೆಗಳ ಕಾಲ ತೆಳು ಪದರಗಳಲ್ಲಿ ಒಣಗಿಸಿ. ಇದರಿಂದ ಬ್ಯಾಕ್ಟೀರಿಯಾಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ. ಬೀಜಗಳನ್ನು ನೀರಿನಲ್ಲಿ ಮುಳುಗಿಸಿ, ಮೈಕ್ರೊವೇವ್ ಓವನ್‌ನಲ್ಲಿ ನೀರಿನ ತಾಪಮಾನವು 73°C ತಲುಪುವವರೆಗೆ ಬಿಸಿಮಾಡಿ ನೀರನ್ನು ತಕ್ಷಣವೇ ಚೆಲ್ಲಬೇಕು

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆ ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮರಗೆಣಸಿನ ಬ್ಯಾಕ್ಟೀರಿಯಾದ ರೋಗಕ್ಕೆ ಯಾವುದೇ ನೇರ ರಾಸಾಯನಿಕ ನಿಯಂತ್ರಣ ಸದ್ಯಕ್ಕೆ ಲಭ್ಯವಿಲ್ಲ. ನಿಮಗೆ ಯಾವುದಾದರೂ ತಿಳಿದಿದ್ದರೆ ನಮಗೆ ತಿಳಿಸಿ. ರೋಗಕಾರಕದ ಇರುವಿಕೆಯನ್ನು ಕ್ವಾರಂಟೈನ್ ಅಧಿಕಾರಿಗಳಿಗೆ ತಿಳಿಸಿ.

ಅದಕ್ಕೆ ಏನು ಕಾರಣ

ಕ್ಸಾಂಥೊಮೊನಾಸ್ ಆಕ್ಸೊನೊಪೊಡಿಸ್ ಎಂಬ ಬ್ಯಾಕ್ಟೀರಿಯಂ ತಳಿಯಿಂದಾಗಿ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮರಗೆಣಸು ಸಸ್ಯಗಳಿಗೆ ಸುಲಭವಾಗಿ ಸೋಂಕು ತರುತ್ತದೆ. ಬೆಳೆ (ಅಥವಾ ಹೊಲಗಳ) ಒಳಗೆ, ಬ್ಯಾಕ್ಟೀರಿಯಾಗಳು ಗಾಳಿ ಅಥವಾ ಮಳೆ ತುಂತುರುಗಳಿಂದ ಹರಡುತ್ತವೆ. ಕಲುಷಿತ ಉಪಕರಣಗಳು ಸಹ ರೋಗ ಹರಡುವ ಒಂದು ಪ್ರಮುಖ ಸಾಧನವಾಗಿವೆ. ವಿಶೇಷವಾಗಿ ಮಳೆಯ ಸಮಯದಲ್ಲಿ ಅಥವಾ ನಂತರ ತೋಟಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಚಲಿಸಿದಾಗಲೂ ಈ ಸೋಂಕು ಹರಡುತ್ತದೆ. ಆದಾಗ್ಯೂ, ಈ ರೋಗಕಾರಕದ ಮುಖ್ಯ ಸಮಸ್ಯೆಯೆಂದರೆ ವಿಶೇಷವಾಗಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಲಕ್ಷಣರಹಿತವಾದ ನೆಡುವ ವಸ್ತು, ಕಟಿಂಗ್ ಮತ್ತು ಬೀಜಗಳ ಮೂಲಕ ಹೆಚ್ಚಿನ ದೂರದವರೆಗೆ ಇದು ಹರಡುತ್ತದೆ. ಸೋಂಕಿನ ಪ್ರಕ್ರಿಯೆ ಮತ್ತು ರೋಗದ ಬೆಳವಣಿಗೆಗೆ 12 ಗಂಟೆಗಳ 90-100% ಸಾಪೇಕ್ಷ ಆರ್ದ್ರತೆ 22-30°C ನ ಸೂಕ್ತ ತಾಪಮಾನದ ಅಗತ್ಯವಿದೆ. ಬ್ಯಾಕ್ಟೀರಿಯಾಗಳು ಹಲವು ತಿಂಗಳುಗಳವರೆಗೆ ಕಾಂಡಗಳು ಮತ್ತು ಅಂಟಿನಲ್ಲಿ ಜೀವಂತವಾಗಿ ಇರಬಲ್ಲವು. ಆರ್ದ್ರ ಅವಧಿಯಲ್ಲಿ ತಮ್ಮ ಚಟುವಟಿಕೆಯನ್ನು ಮತ್ತೆ ಆರಂಭಿಸುತ್ತವೆ. ಈ ಬ್ಯಾಕ್ಟೀರಿಯಾದ ಏಕೈಕ ಗಮನಾರ್ಹ ಆಶ್ರಯದಾತ ಸಸ್ಯವೆಂದರೆ ಅಲಂಕಾರಿಕ ಸಸ್ಯ ಯುಫೋರ್ಬಿಯಾ ಪುಲ್ಚೆರಿಮಾ (ಪೊಯೆನ್ಸೆಟಿಯಾ).


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಸೋಂಕಿತ ಹೊಲದ ಹತ್ತಿರ ಅಥವಾ ಕೆಳಗೆ ಗಿಡ ನೆಡಬೇಡಿ.
  • ಕೆಲವು ಸಸ್ಯಗಳು ರೋಗಲಕ್ಷಣಗಳನ್ನು ತೋರಿಸಿದರೆ ಸೋಂಕಿತ ಸಸ್ಯಗಳನ್ನು ಕತ್ತರಿಸಿ ಹಾಕಿ.
  • ಬ್ಯಾಕ್ಟೀರಿಯಾನಾಶಕ ಬಳಸಿ ಉಪಕರಣಗಳನ್ನು ನಿಯಮಿತವಾಗಿ ಸೋಂಕುರಹಿತಗೊಳಿಸಬೇಕು.
  • ಕನಿಷ್ಠ ಒಂದು ಮಳೆಗಾಲದ ಅವಧಿಗೆ ಬೆಳೆ ಸರದಿ ಮತ್ತು ಹೊಲ ಖಾಲಿ ಬಿಡುವುದನ್ನು ಅಭ್ಯಾಸ ಮಾಡಿ.
  • ರೋಗಕಾರಕಕ್ಕೆ ಬದುಕಲು ಸಹಾಯ ಮಾಡಬಲ್ಲ ಎಲ್ಲಾ ಸೋಂಕಿತ ಸಸ್ಯದ ಅವಶೇಷಗಳು ಮತ್ತು ಕಳೆಗಳನ್ನು ತೆಗೆದುಹಾಕಬೇಕು ಮತ್ತು ಸುಡಬೇಕು ಅಥವಾ ಆಳವಾಗಿ ಹೂಳಬೇಕು.
  • ಬೆಳೆಯುವ ಅವಧಿಯಲ್ಲಿ ರೋಗದ ಬೆಳವಣಿಗೆಯನ್ನು ವಿಳಂಬಗೊಳಿಸಲು ಮಳೆಗಾಲದ ಅಂತ್ಯದ ವೇಳೆಗೆ ಮರಗೆಣಸನ್ನು ನೆಡಬೇಕು.
  • ಮೆಕ್ಕೆಜೋಳ ಅಥವಾ ಕಲ್ಲಂಗಡಿಯೊಂದಿಗೆ ಅಂತರ್ ಬೆಳೆ ಮಾಡುವುದು ಮರಗೆಣಸಿಗೆ ಪ್ರಯೋಜನಕಾರಿಯಾಗಿದೆ.
  • ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಗೊಬ್ಬರ ನೀಡುವ ಮೂಲಕ ಮಣ್ಣಿನ ಪೊಟ್ಯಾಸಿಯಮ್ ಅಂಶವನ್ನು ಹೆಚ್ಚಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ