Pseudomonas syringae pv. syringae
ಬ್ಯಾಕ್ಟೀರಿಯಾ
ಈ ರೋಗದ ರೋಗಲಕ್ಷಣಗಳೆಂದರೆ ಎಲೆಯ ಬ್ಲೇಡ್ ನ ತಳದಲ್ಲಿ ನೀರು-ತುಂಬಿದ ಗಾಯಗಳು ಮತ್ತು ಎಲೆಯ ತೊಟ್ಟಿನ ಮೇಲೆ ಕಪ್ಪು ಕಲೆಗಳು. ನಂತರ, ಈ ಗಾಯಗಳು ಎಲೆಗಳ ನಡುದಿಂಡು ಮತ್ತು ತೊಟ್ಟಿನ ತಳಭಾಗದ ಸುತ್ತಲಿನ ಕೊಂಬೆಗಳಿಗೆ ಹರಡುತ್ತದೆ. ನಂತರ, ಎಲೆಗಳು ಒಣಗಿ ಸುರುಳಿಯಾಗುತ್ತವೆ, ಆದರೆ ಶಾಖೆಗೆ ದೃಢವಾಗಿ ಅಂಟಿಕೊಂಡಿರುತ್ತವೆ. ಅಂತಿಮವಾಗಿ ಅವು ತೊಟ್ಟುಗಳು ಇಲ್ಲದೆಯೇ ಉದುರುತ್ತವೆ. ಕೊಂಬೆಗಳ ಮೇಲಿನ ಕೊಳೆತ ಭಾಗಗಳು ಮತ್ತಷ್ಟು ಹರಡುತ್ತವೆ ಮತ್ತು ಅವುಗಳು ಸಂಪೂರ್ಣವಾಗಿ ಮುತ್ತಿಕೊಂಡಾಗ 20-30 ದಿನಗಳಲ್ಲಿ ಕೊಂಬೆಗಳನ್ನು ಕೊಲ್ಲಬಹುದು. ನರ್ಸರಿ ಸ್ಟಾಕ್ಗಳು ಕೆಲವೇ ದಿನಗಳಲ್ಲಿ ರೋಗಪೀಡಿತವಾಗಬಹುದು ಮತ್ತು ಈ ರೋಗಲಕ್ಷಣಗಳು ಫಿಟೊಫ್ಥೊರಾ ಸೋಂಕಿನಿಂದ ಉಂಟಾದ ಲಕ್ಷಣಗಳನ್ನು ಸ್ವಲ್ಪಮಟ್ಟಿಗೆ ಹೋಲುತ್ತವೆ. ರೋಗಲಕ್ಷಣಗಳ ತೀವ್ರತೆ ಕಡಿಮೆಯಿರುತ್ತವೆ ಅಥವಾ ಬೆಚ್ಚಗಿನ ಅಥವಾ ಶುಷ್ಕ ವಾತಾವರಣದಲ್ಲಿ ಅವು ಮರಳಬಹುದು. ಕಿತ್ತಳೆ ಹಣ್ಣಿನಲ್ಲಿ ಬರುವ ಸೋಂಕು ಅವುಗಳ ಸಿಪ್ಪೆಯ ಮೇಲೆ ಸಣ್ಣ ಕಪ್ಪು ಗುಳಿಯ ರೂಪದಲ್ಲಿ ಕಂಡುಬರುತ್ತವೆ. ಕಿತ್ತಳೆ, ನಿಂಬೆ ಮತ್ತು ಮ್ಯಾಂಡರಿನ್ ಮರಗಳಲ್ಲಿ ಅತ್ಯಂತ ಕೆಟ್ಟ ರೋಗಲಕ್ಷಣಗಳು ಕಂಡುಬರುತ್ತವೆ.
ಇಂದಿನವರೆಗೂ, ಈ ರೋಗದ ಪ್ರಮಾಣ ಅಥವಾ ತೀವ್ರತೆಯನ್ನು ನಿಯಂತ್ರಿಸಲು ಯಾವುದೇ ಜೈವಿಕ ಚಿಕಿತ್ಸೆಯ ಬಗ್ಗೆ ತಿಳಿದುಬಂದಿಲ್ಲ. ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ಬೋರ್ಡೆಕ್ಸ್ ಮಿಶ್ರಣಗಳಂತಹ ತಾಮ್ರದ ಸೂತ್ರೀಕರಣಗಳ ದ್ರವೌಷಧಗಳು ಸ್ವೀಕಾರಾರ್ಹವಾಗಿದೆ ಮತ್ತು ಜೈವಿಕವಾಗಿ ನಿರ್ವಹಿಸುವ ಸಿಟ್ರಸ್ ತೋಪುಗಳಲ್ಲಿ ಸಹ ಇದನ್ನು ಬಳಸಬಹುದು
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಬೋರ್ಡೆಕ್ಸ್ ಮಿಶ್ರಣಗಳಂತಹ ತಾಮ್ರದ ಸೂತ್ರೀಕರಣಗಳ ದ್ರವೌಷಧಗಳು ಸ್ವೀಕಾರಾರ್ಹವಾಗಿದೆ ಮತ್ತು ಜೈವಿಕವಾಗಿ ನಿರ್ವಹಿಸುವ ಸಿಟ್ರಸ್ ತೋಪುಗಳಲ್ಲಿ ಸಹ ಇದನ್ನು ಬಳಸಬಹುದು. ತಂಪಾದ, ತೇವ ವಾತಾವರಣದ ಆರಂಭದಲ್ಲಿ ಪ್ರತಿ ವರ್ಷ ಈ ಚಿಕಿತ್ಸೆಯನ್ನು ಬಳಸಿ. ಫೆರಿಕ್ ಕ್ಲೋರೈಡ್ ಅಥವಾ ಮ್ಯಾಂಕೊಜೆಬ್ ಅನ್ನು ಕಪ್ರಿಕ್ ಹೈಡ್ರಾಕ್ಸೈಡ್ಗೆ ಸೇರಿಸುವುದರಿಂದ ಕಾಲಾಂತರದಲ್ಲಿ ಪ್ರತಿರೋಧವನ್ನು ಬೆಳೆಸಿಕೊಂಡಿರುವ ತಳಿಗಳ ವಿರುದ್ಧ ಉತ್ತಮ ನಿಯಂತ್ರಣವನ್ನು ಪಡೆಯಬಹುದು.
ಸ್ಯೂಡೋಮೊನಸ್ ಸಿರಿಂಗೈ (pv. ಸಿರಿಂಗೈ) ಎಂಬ ಬ್ಯಾಕ್ಟೀರಿಯಾದಿಂದ ಸಿಟ್ರಸ್ ಬ್ಲಾಸ್ಟ್ ಉಂಟಾಗುತ್ತದೆ, ಇದು ಅನೇಕ ಸಿಟ್ರಸ್ ಪ್ರಭೇದಗಳಿಗೆ ಸೋಂಕು ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಎಲೆಗಳ ಮೇಲ್ಭಾಗದಲ್ಲಿ ವಾಸಿಸುತ್ತವೆ ಮತ್ತು ದೀರ್ಘಕಾಲದವರೆಗೆ ತೇವದ ವಾತಾವರಣವಿದ್ದರೆ ಅವು ರೋಗಕಾರಕವಾಗುತ್ತವೆ. ಇದು ಎಲೆಗಳ ನೈಸರ್ಗಿಕ ರಂಧ್ರಗಳು ಅಥವಾ ಎಲೆಗಳ ಚರ್ಮದ ಮೂಲಕ ಅಥವಾ ಕಾಂಡಗಳಲ್ಲಿರುವ ಗಾಯಗಳ ಮೂಲಕ ಸಸ್ಯ ಅಂಗಾಂಶಗಳಿಗೆ ಪ್ರವೇಶಿಸುತ್ತದೆ. ಅಂಗಾಂಶಗಳಿಗಾಗುವ ಗಾಯಗಳು, ಉದಾಹರಣೆಗೆ ಗಾಳಿ, ಜೋರಾದ ಮಳೆ, ಸ್ಯಾಂಡ್ ಬ್ಲಾಸ್ಟಿಂಗ್ ಮತ್ತು ಮಂಜುಗಡ್ಡೆ, ಇತ್ಯಾದಿಗಳು ಬ್ಯಾಕ್ಟೀರಿಯಾವನ್ನು ಸಸ್ಯಕ್ಕೆ ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತವೆ. ಎಲೆಗಳು ದೀರ್ಘಕಾಲದವರೆಗೆ ತೇವವಾಗಿರುವುದು ಸೋಂಕು ಬರುವುದಕ್ಕೆ ಅವಶ್ಯಕವಾಗಿರುತ್ತದೆ. ಚಳಿಗಾಲದಲ್ಲಿ ಮುಂಚಿತವಾಗಿ ಸಂಪೂರ್ಣವಾಗಿ ಬೆಳೆಯದ ಅಥವಾ ಗಟ್ಟಿಯಾಗದ ಸಣ್ಣ ಎಲೆಗಳು ರೋಗಕ್ಕೆ ಸೂಕ್ಷ್ಮವಾಗಿರುತ್ತವೆ.