ಮೆಕ್ಕೆ ಜೋಳ

ಮೆಕ್ಕೆ ಜೋಳದ ಕುಂಠಿತ ಬೆಳೆವಣಿಗೆ

Spiroplasma kunkelii

ಬ್ಯಾಕ್ಟೀರಿಯಾ

ಸಂಕ್ಷಿಪ್ತವಾಗಿ

  • ಎಲೆಗಳ ಬಾಡುವಿಕೆ ಮತ್ತು ಅವುಗಳ ಅಂಚುಗಳು ಹಳದಿಯಾಗುವುದು, ನಂತರ ತುದಿ ಕೆಂಪಾಗುತ್ತದೆ.
  • ಎಳೆಯ ಎಲೆಗಳ ತಳದಲ್ಲಿ ಸಣ್ಣ ಕ್ಲೋರೋಟಿಕ್ ಚುಕ್ಕೆಗಳು ನಂತರ ಪಟ್ಟೆಗಳಾಗಿ ಬದಲಾಗುತ್ತವೆ.
  • ಸಸ್ಯಗಳು ತೀವ್ರವಾಗಿ ಕುಂಠಿತಗೊಳ್ಳುತ್ತವೆ.
  • ಗೆಣ್ಣುಗಳ ನಡುವಿನ ಅಂತರ ಅತೀ ಕಡಿಮೆ, ಹಲವು ತೆನೆ ಚಿಗುರುಗಳು ಮತ್ತು ದಟ್ಟವಾದ ಪೊದೆಯಂತಹ ರೂಪವನ್ನು ಹೊಂದಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಎಸ್. ಕುಂಕೆಲಿ ಸೋಂಕಿನ ಮೊದಲ ಗಮನಾರ್ಹ ಚಿಹ್ನೆ ಎಂದರೆ ಎಲೆಗಳು ಬಾಡುವುದು ಮತ್ತು ಅವುಗಳ ಅಂಚುಗಳು ಹಳದಿ ಬಣ್ಣಕ್ಕೆ ತಿರುಗುವುದು. ಇದರ ನಂತರ ಹಳೆಯ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ತುದಿಯಿಂದ ಪ್ರಾರಂಭವಾಗಿ ನಂತರ ಅಂಗಾಂಶದ ಉಳಿದ ಭಾಗಕ್ಕೆ ವಿಸ್ತರಿಸುತ್ತದೆ. ಈ ರೋಗಲಕ್ಷಣಗಳು ಕಾಣಿಸಿಕೊಂಡ 2-4 ದಿನಗಳ ನಂತರ, ಸಣ್ಣ ಕ್ಲೋರೊಟಿಕ್ ಚುಕ್ಕೆಗಳು ಎಳೆಯ ಬೆಳೆಯುತ್ತಿರುವ ಎಲೆಗಳ ತಳದಲ್ಲಿ ಕಂಡುಬರುತ್ತವೆ. ಅವು ಬೆಳೆಯುತ್ತಿದ್ದಂತೆ, ಈ ಕಲೆಗಳು ಒಟ್ಟಿಗೆ ಸೇರಿ ನಾಳಗಳ ಉದ್ದಕ್ಕೂ ಸಾಗುವ ಪಟ್ಟೆಗಳಾಗಿ ಬದಲಾಗುತ್ತವೆ. ಸಾಮಾನ್ಯವಾಗಿ ತುದಿಯವರೆಗೂ ಇರುತ್ತದೆ. ಮೊದಲಿನ ಹಂತಗಳಲ್ಲಿ ಸೋಂಕಿತವಾದ ಸಸ್ಯಗಳು ತೀವ್ರವಾಗಿ ಕುಂಠಿತಗೊಂಡು, ತಿರುಚಿದ ಮತ್ತು ಸುರುಳಿಯಾದ ಎಲೆಗಳು ಮತ್ತು ಗೆಣ್ಣುಗಳ ನಡುವೆ ಅತೀ ಕಡಿಮೆ ಅಂತರವನ್ನು ಹೊಂದಿರುತ್ತವೆ. ಹಲವು ತೆನೆ ಚಿಗುರುಗಳು ಮತ್ತು ಹೊಸ ಟಿಲ್ಲರ್ ಗಳು ಒಂದು ಸಸ್ಯದ ಮೇಲೆ ಕೆಲವೊಮ್ಮೆ 6-7 ರವರೆಗೂ ಬೆಳೆಯುತ್ತವೆ. ಇದು ಗಿಡಕ್ಕೆ ಪೊದೆಯ ನೋಟವನ್ನು ನೀಡುತ್ತದೆ. ತೆನೆಗಳು ಸಾಮಾನ್ಯಕ್ಕಿಂತ ಸಣ್ಣದಾಗಿರುತ್ತವೆ ಮತ್ತು ಸರಿಯಾಗಿ ಭರ್ತಿಯಾಗಿರುವುದಿಲ್ಲ. ಸಾಮಾನ್ಯವಾಗಿ ಸಡಿಲವಾದ ಧಾನ್ಯಗಳಿರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಎಸ್. ಕುಂಕೆಲಿ ಯನ್ನು ನಿಯಂತ್ರಿಸಲು ನೇರ ಜೈವಿಕ ಚಿಕಿತ್ಸೆ ಇಲ್ಲ. ಮೆಟಾಹಾರ್ಜಿಯಾಮ್ ಅನಿಸೊಪ್ಲಿಯೆ, ಬ್ಯುವೆರಿಯಾ ಬಾಸ್ಸಿಯಾನ, ಪಿಸಿಲೊಮೈಸಸ್ ಫ್ಯೂಮೊಸೊರೊಸಿಯಸ್ ಮತ್ತು ವೆರ್ಟಿಸಿಲಿಯಮ್ ಲೆಕಾನಿಗಳಂತಹ ಪರಾವಲಂಬಿ ಶಿಲೀಂಧ್ರಗಳನ್ನು ಹೊಂದಿರುವ ಕೆಲವು ಜೈವಿಕ ನಿರೋಧಕಗಳನ್ನು ಜಿಗಿ ಹುಳುಗಳ ತೀವ್ರವಾದ ಮುತ್ತುವಿಕೆ ನಿಯಂತ್ರಿಸಲು ಬಳಸಬಹುದಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ , ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನವನ್ನು ಯಾವಾಗಲೂ ಯೋಜಿಸಿ. ಈ ರೋಗವನ್ನು ನಿಯಂತ್ರಿಸಲು ರಾಸಾಯನಿಕ ಚಿಕಿತ್ಸೆ ಇಲ್ಲ. ಎಲೆ ಜಿಗಿ ಹುಳುಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಕೀಟನಾಶಕ ಚಿಕಿತ್ಸೆಗಳನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುವುದಿಲ್ಲ. ಆದ್ದರಿಂದ, ಎಲೆ ಜಿಗಿ ಹುಳು ಮತ್ತು ಮೆಕ್ಕೆ ಜೋಳದ ಕುಂಠಿತ ಬೆಳೆವಣಿಗೆ ಎರಡನ್ನೂ ತಪ್ಪಿಸಲು ತಡೆಗಟ್ಟುವ ಕ್ರಮಗಳು ಪ್ರಮುಖವಾಗಿವೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಮೆಕ್ಕೆ ಜೋಳದ ಪ್ರಭೇದ ಮತ್ತು ಪ್ರದೇಶದ ಎತ್ತರವನ್ನು ಅವಲಂಬಿಸಿರುತ್ತದೆ. ಇವು ಮೆಕ್ಕೆ ಜೋಳದ ಸಸ್ಯಗಳಲ್ಲಿ ಮಾತ್ರ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾ-ತರಹದ ಜೀವಿಯಾದ ಸ್ಪೈರೋಪ್ಲಾಸ್ಮಾ ಕುಂಕೆಲಿಯಿಂದ ಉಂಟಾಗುತ್ತದೆ. ಹಲವಾರು ಎಲೆ ಜಿಗಿ ಹುಳುಗಳು, ಉದಾ. ಡಲ್ಬುಲಸ್ ಮೈಡಿಸ್, ಡಿ. ಎಲಿಮಿನಾಟಸ್, ಎಕ್ಸ್ಟಿಯಾನಸ್ ಎಕ್ಸ್ಟಿಯೋಸಸ್, ಗ್ರ್ಯಾಮಿನೆಲೆ ನಿಗ್ರಿಫೊನ್ಸ್ ಮತ್ತು ಸ್ಟಿರೆಲ್ಲಸ್ ಬೈಕಲರ್ ಈ ರೋಗಕಾರಕವನ್ನು ತಮ್ಮ ಸುಪ್ತಾವಸ್ಥೆಯಲ್ಲಿ ಹೊತ್ತಿರಬಹುದು. ವಸಂತಕಾಲದ ಆರಂಭದಲ್ಲಿ ಅವು ಹೊರಹೊಮ್ಮಿದಾಗ ಮತ್ತು ಅವುಗಳು ಸಸ್ಯಗಳನ್ನು ತಿನ್ನಲು ಆರಂಭಿಸಿದಾಗ ಈ ರೋಗಕಾರಕವನ್ನು ಹರಡುತ್ತವೆ. ಮೆಕ್ಕೆ ಜೋಳದ ಸಸ್ಯವು ಮೊದಲು ಸೋಂಕಿಗೆ ಒಳಗಾದ 3 ವಾರಗಳ ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಲೆ ಜಿಗಿ ಹುಳುಗಳ ಸಂಖ್ಯೆಯು ಬಹಳ ಹೆಚ್ಚಾಗಿರುವ, ಬೇಸಿಗೆಯಲ್ಲೇ ಈ ರೋಗವು ಹೆಚ್ಚು ತೀವ್ರವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಆದಾಗ್ಯೂ, ವಸಂತಕಾಲದಲ್ಲಿ ಬೆಳೆದ ಮೆಕ್ಕೆಜೋಳದಲ್ಲೂ ಇದು ಸಂಭವಿಸಬಹುದು.


ಮುಂಜಾಗ್ರತಾ ಕ್ರಮಗಳು

  • ಜಿಗಿ ಹುಳುಗಳ ಗರಿಷ್ಠ ಸಂಖ್ಯೆಯನ್ನು ತಪ್ಪಿಸಲು ಬೇಗ ನೆಡಿ.
  • ಋತುವಲ್ಲದ ಸಮಯದಲ್ಲಿ ತಾವಾಗೇ ಹುಟ್ಟಿದ ಸಸ್ಯಗಳನ್ನು ತೆಗೆದುಹಾಕಿ.
  • ವಯಸ್ಕ ಜಿಗಿ ಹುಳುಗಳನ್ನು ಹಿಮ್ಮೆಟ್ಟಿಸಲು ಪ್ರತಿಫಲಿತ ಪ್ಲಾಸ್ಟಿಕ್ ಮಲ್ಚ್ ಬಳಸಿ.
  • ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ.
  • ಇದು ಪ್ರಯೋಜನಕಾರಿ ಕೀಟಗಳ ಮೇಲೆ ಪರಿಣಾಮ ಬೀರಬಹುದು.
  • ಚಳಿಗಾಲದ ತಿಂಗಳುಗಳಲ್ಲಿ ಜೋಳ ಮುಕ್ತ ಅವಧಿಯನ್ನು ಪಾಲಿಸಿ.
  • ರೋಗಕ್ಕೆ ಒಳಗಾಗದ ಬೆಳೆಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ (ಇದು ಕೀಟಗಳ ಜೀವನ ಚಕ್ರವನ್ನು ಮುರಿಯುತ್ತದೆ).

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ